HOME » NEWS » State » POCSO ACT RAISES IN KODAGU AFTER LOCKDOWN SESR RSK

ಕೊಡಗಿನಲ್ಲಿ ಹೆಚ್ಚುತ್ತಿವೆ ಪೋಕ್ಸೋ ಪ್ರಕರಣ; ಲಾಕ್ ಡೌನ್​​​ನಲ್ಲಿ ಹೆಚ್ಚಿದ ಸಂಖ್ಯೆ

49 ಪ್ರಕರಣಗಳ ಪೈಕಿ 36 ಪ್ರಕರಣಗಳು ಲಾಕ್ ಡೌನ್ ಆದ ಬಳಿಕವೇ ದಾಖಲಾಗಿವೆ  ಎಂದಿದ್ದಾರೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಅರುಂಧತಿ. 

news18-kannada
Updated:October 21, 2020, 7:12 AM IST
ಕೊಡಗಿನಲ್ಲಿ ಹೆಚ್ಚುತ್ತಿವೆ ಪೋಕ್ಸೋ ಪ್ರಕರಣ; ಲಾಕ್ ಡೌನ್​​​ನಲ್ಲಿ ಹೆಚ್ಚಿದ ಸಂಖ್ಯೆ
ಕೊಡಗಿನ ಕಚೇರಿ
  • Share this:
ಕೊಡಗು (ಅಕ್ಟೋಬರ್​.21): ಕೊರೋನಾ ಮಹಾಮಾರಿ ಇಡೀ ಆರ್ಥಿಕತೆಗೆ ಕೊಡಲಿಪೆಟ್ಟು ನೀಡಿದ್ದು, ಎಲ್ಲಾ ಸ್ತರದ ಜನರ ಬದುಕು ತತ್ತರಿಸಿ ಹೋಗಿದೆ. ಈ ನಡುವೆ ಜಿಲ್ಲೆಯಲ್ಲಿ ಬಾಲ್ಯವಿವಾಹ ಮತ್ತು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚಾಗಿವೆ ಎನ್ನುವ ಆತಂಕಕಾರಿ ವಿಷಯವೊಂದು ಹೊರ ಬಿದ್ದಿದೆ. ಪೊಲೀಸ್​ ಇಲಾಖೆ ಮಾಹಿತಿ ಪ್ರಕಾರ ಲಾಕ್​ಡೌನ್​ ಆದ ಬಳಿಕ ಜಿಲ್ಲೆಯಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ಪ್ರಕರಣಗಳು ಹೆಚ್ಚಾಗಿವೆ.  2020 ರ ಜನವರಿಯಿಂದ ಸೆಪ್ಟೆಂಬರ್ ಅಂತ್ಯದವರೆಗೆ ಕೊಡಗು ಜಿಲ್ಲೆಯಲ್ಲಿ ಒಟ್ಟು 49 ಮಹಿಳೆಯರು ಮತ್ತು ಮಕ್ಕಳ ಮೇಲಿನ ಲೈಂಗಿಕ ಕಿರುಕುಳ ಮತ್ತು ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ

ಮಹಿಳಾ ಪೊಲೀಸ್​ ಠಾಣೆಯಲ್ಲಿ ದಾಖಲಾಗಿರುವ ಈ  49 ಪ್ರಕರಣಗಳ ಪೈಕಿ 36 ಪ್ರಕರಣಗಳು ಲಾಕ್ ಡೌನ್ ಆದ ಬಳಿಕವೇ ದಾಖಲಾಗಿವೆ  ಎಂದಿದ್ದಾರೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಅರುಂಧತಿ.

ಈ ಕುರಿತು ಮಾಹಿತಿ ನೀಡಿದ ಅವರು, ಕಳೆದ ವರ್ಷ 33 ಪೋಕ್ಸೋ ಪ್ರಕರಣಗಳು ದಾಖಲಾಗಿದ್ದವು. ಆದರೆ ಈ ಬಾರಿ ಒಂಭತ್ತು ತಿಂಗಳಲ್ಲೇ ಬರೋಬ್ಬರಿ 37 ಪ್ರಕರಣಗಳು ದಾಖಲಾಗಿವೆ. ಅದರಲ್ಲಿ 3 ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣಗಳು ದಾಖಲಾಗಿದ್ದು, ಒಂದು ಸಾಮೂಹಿಕ ಅತ್ಯಾಚಾರ ಪ್ರಕರಣ ಕೂಡ ದಾಖಲಾಗಿದೆ.

ಈ ಕುರಿತು ಬಾಲ ನ್ಯಾಯ ಮಂಡಳಿ ಸಮಿತಿಯನ್ನು ವಿಚಾರಿಸಿದರೆ, ಕೊಡಗಿನಲ್ಲಿ ಇದುವರೆಗೆ ದಾಖಲಾಗಿರುವ ಪೋಕ್ಸೋ ಕಾಯ್ದೆಗಳು ಪ್ರತೀವರ್ಷದಂತೆ ಇವೆ. ಆದರೆ ಕಳೆದ ವರ್ಷ ದಾಖಲಾಗಿದ್ದ ಪ್ರಕರಣಗಳಿಗಿಂತ ಮೂರು ಹೆಚ್ಚುವರಿ ಪ್ರಕರಣಗಳು ದಾಖಲಾಗಿವೆ. ಎರಡು ಬಾಲ್ಯವಿವಾಹ ಕೇಸುಗಳು ದಾಖಲಾಗಿವೆ. ಪೋಕ್ಸೋ ಪ್ರಕರಣಗಳೆಲ್ಲವೂ ಆದಿವಾಸಿ ಸಮುದಾಯಗಳಲ್ಲೇ ನಡೆದಿವೆ. ಬಾಲ್ಯವಿವಾಹ ಅವರ ಜೀವನ ಪದ್ಧತಿಯ ಭಾಗವಾಗಿ ಆಗಿವೆ. ಇದರಿಂದ ಈ ಪ್ರಕರಣಗಳಿಗೆ ತಡೆಯಾಗುತ್ತಿಲ್ಲ. ಈ ಬಗ್ಗೆ ನಾವು ಕೂಡ ಹದ್ದಿನ ಕಣ್ಣಿಟ್ಟಿದ್ದು, ಅಂತಹ ಪ್ರಕರಣ ದಾಖಲಾಗುತ್ತಿದ್ದಂತೆ ನಿಲ್ಲಿಸುವ ಪ್ರಯತ್ನ ನಡೆಸುತ್ತಿದ್ದೇವೆ ಎನ್ನುತ್ತಾರೆ ಬಾಲ ನ್ಯಾಯ ಮಂಡಳಿ ಸದಸ್ಯ ಅಬ್ದುಲ್ ಲತೀಫ್.

ಇದನ್ನು ಓದಿ: ಸೆಲೆಬ್ರಿಟಿ ಮಕ್ಕಳಿಗೆ ಅತ್ಯಾಚಾರದ ಬೆದರಿಕೆ; ಸಮಾಜದ ಮನಸ್ಥಿತಿಯ ಬಗ್ಗೆ ಮೂಡುತ್ತಿರುವ ಪ್ರಶ್ನೆಗಳು

ಈ ಪ್ರಕರಣಗಳು ದಾಖಲಾಗಲು ಮುಖ್ಯವಾಗಿ ಅವರಿಗೆ ಅರಿವಿನ ಕೊರತೆ ಇದೆ. ಹಿಂದೆ ಸಾಕಷ್ಟು ಅರಿವು ಮೂಡಿಸಲಾಗುತ್ತಿತ್ತು. ಮಹಿಳಾ ಠಾಣೆಯಿಂದ ಎರಡು ತಿಂಗಳಲ್ಲೇ 75 ಜಾಗೃತಿ ಕಾರ್ಯಕ್ರಮಗಳನ್ನು ಮಾಡಲಾಗಿದೆ. ಆದರೆ ಲಾಕ್ ಡೌನ್ ಆದ ಬಳಿಕ ಜಾಗೃತಿ ಕಾರ್ಯಕ್ರಮಗಳು ನಡೆಯುತ್ತಿಲ್ಲ. ಹೀಗಾಗಿ ಈ ಪ್ರಕರಣಗಳು ಹೆಚ್ಚುತ್ತಿವೆ ಎನ್ನೋದು ಬಾಲ ನ್ಯಾಯ ಮಂಡಳಿಯ ಅಭಿಮತ.
Published by: Seema R
First published: October 21, 2020, 7:12 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories