ಬೆಂಗಳೂರು(ಡಿ.05): ಶಾಲೆಗಳ ಉನ್ನತೀಕರಣಕ್ಕಾಗಿ ನೆರವಾಗುವ ಪಿಎಂ ಶ್ರೀ ಶಾಲೆಗಳು (PM SHRi Schools) ಎಂಬ ಹೊಸ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಶಿಕ್ಷಕರ ದಿನದಂದು ಚಾಲನೆ ನೀಡಿದ್ದರು ಸದ್ಯ ಈ `ಯೋಜನೆಯಡಿ ಶಾಲೆಗಳನ್ನು ಆರಂಭಿಸಲು ಕೇಂದ್ರ ಸರ್ಕಾರದಿಂದ (Central Govt) ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಲಾಗಿದೆ. ಇದರ ಅನ್ವಯ ರಾಜ್ಯದ ಪ್ರತಿ ತಾಲೂಕಿನಲ್ಲಿ ಎರಡರಂತೆ ಪಿಎಂ ಶ್ರೀ ಶಾಲೆಗಳು ಆರಂಭಗೊಳ್ಳಲಿವೆ. ಈ ವಿಚಾರವಾಗಿ ಸಮಗ್ರ ಶಿಕ್ಷಣ ಕರ್ನಾಟಕದ ರಾಜ್ಯ ಯೋಜನಾ ನಿರ್ದೇಶಕರು, ಪಂಚಾಯತ್ ರಾಜ್ ಇಲಾಖೆಯ ಆಯುಕ್ತರಿಗೆ ಪತ್ರ ಬರೆದಿದ್ದಾರೆ.
ಪ್ರಧಾನ ಮಂತ್ರಿ ಸ್ಕೂಲ್ ಫಾರ್ ರೈಸಿಂಗ್ ಇಂಡಿಯಾ
ಹೌದು ಕೇಂದ್ರ ಸಚಿವ ಸಂಪುಟವು ಕೇಂದ್ರ ಪ್ರಾಯೋಜಿತ ಹೊಸ ಯೋಜನೆಯಾದ PM SHRi- PM School For Rising India ಗೆ ಸಂಪುಟದ ಅನುಮೋದನೆ ದೊರೆತಿದೆ. ದೇಶಾದ್ಯಂತ ಎನ್ಪಿಇ 2020ರ ಎಲ್ಲಾ ಘಟಕಗಳನ್ನು ಅನುಷ್ಠಾನಗೊಳಿಸಲಾಗುತ್ತದೆ. ಪ್ರಧಾನ ಮಂತ್ರಿ ಸ್ಕೂಲ್ ಫಾರ್ ರೈಸಿಂಗ್ ಇಂಡಿಯಾ ಯೋಜನೆಯಡಿ ದೇಶದಾದ್ಯಂತ 14,500 ಕ್ಕೂ ಹೆಚ್ಚು ಶಾಲೆಗಳನ್ನು ಅಭಿವೃದ್ಧಿ ಪಡಿಸುವ ಮೂಲಕ ಮೇಲ್ಧರ್ಜೆಗೇರಿಸುವುದು ಈ ಯೋಜನೆಯ ಗುರಿಯಾಗದೆ. ಇವುಗಳು ಮಾದರಿ ಶಾಲೆಗಳಾಗಲಿದ್ದು, ಸುತ್ತಮುತ್ತಲಿರುವ ಶಾಲೆಗಳಿಗೆ ಮಾರ್ಗದರ್ಶನ ಒದಗಿಸಲಿವೆ. ಪ್ರಯೋಗಾಲಯಗಳು, ಸ್ಮಾರ್ಟ್ ಕ್ಲಾಸ್ ರೂಂ, ಗ್ರಂಥಾಲಯಗಳು, ಕ್ರೀಡಾ ಸಲಕರಣೆಗಳು, ಕಲಾ ಕೊಠಡಿ ಮುಂತಾದವುಗಳು ಪಿಎಂ ಶಾಲೆಗಳಲ್ಲಿ ಇರಲಿವೆ.
ಇದನ್ನೂ ಓದಿ: UPSC CSE ಪರೀಕ್ಷೆಗಳ ವೇಳಾಪಟ್ಟಿ ಇಲ್ಲಿದೆ ನೋಡಿ! ಫೆಬ್ರವರಿ 1 ರಿಂದ ಪ್ರಿಲಿಮ್ಸ್ ಪರೀಕ್ಷೆಗೆ ನೋಂದಾಯಿಸಿ
ಅತ್ಯಾಧುನಿಕ ಶಿಕ್ಷಣವನ್ನು ಒದಗಿಸುವ ನಿಟ್ಟಿನಲ್ಲಿ ಸಮಗ್ರ ವಿಧಾನ
ಇದಲ್ಲದೆ ಪಿಎಂ ಶ್ರೀ ಶಾಲೆಗಳಲ್ಲಿ ಅತ್ಯಾಧುನಿಕ ಶಿಕ್ಷಣವನ್ನು ಒದಗಿಸುವ ನಿಟ್ಟಿನಲ್ಲಿ ಸಮಗ್ರ ವಿಧಾನಗಳನ್ನು ಒಳಗೊಂಡಿರುತ್ತದೆ. ಅನ್ವೇಷಣೆ ಕೇಂದ್ರಿತ ಕಲಿಕಾ ವಿಧಾನವನ್ನು ಅಳವಡಿಸಿಕೊಳ್ಳಲಾಗುವುದು. ಈ ಶಾಲೆಗಳಲ್ಲಿ ಆಧುನಿಕ ತಂತ್ರಜ್ಞಾನ, ಸ್ಮಾರ್ಟ್ ತರಗತಿಗಳು, ಕ್ರೀಡೆ ಹಾಗೂ ಪಠ್ಯೇತರ ಚಟುವಟಿಕೆಗಳಿಗೆ ಮೂಲಸೌಕರ್ಯಗಳು ಇರಲಿವೆ.
ಕೇಂದ್ರ ಸರ್ಕಾರದ ಅನುದಾನದಡಿಯಲ್ಲಿ ಜಾರಿ
ಕೇಂದ್ರ ಸರ್ಕಾರದ ಅನುದಾನದಡಿಯಲ್ಲಿ ಜಾರಿಗೊಳ್ಳಲಿರುವ ಈ ಯೋಜನೆಯು, ಕೇಂದ್ರ ಸರ್ಕಾರದಿಂದ ನಿರ್ವಹಿಸಲ್ಪಡುವ ಶಾಲೆ, ರಾಜ್ಯ, ಕೇಂದ್ರಾಡಳಿತ ಪ್ರದೇಶ ಮತ್ತು ಸ್ಥಳೀಯ ಸಂಸ್ಥೆಗಳಿಂದ ನಿರ್ವಹಿಸಲ್ಪಡುವ ಶಾಲೆಗಳನ್ನು ಅಭಿವೃದ್ಧಿಪಡಿಸುವ ಮತ್ತು ಮೇಲ್ದರ್ಜೆಗೇರಿಸುವ ಗುರಿ ಹೊಂದಿದೆ. ಈ ಶಾಲೆಗಳು ತಾವು ಅಭಿವೃದ್ಧಿಗೊಳ್ಳುವ ಜೊತೆಗೆ ನೆರೆ ಹೊರೆಯ ಇತರೆ ಶಾಲೆಗಳಿಗೆ ಮಾದರಿಯಾಗಲಿವೆ.
ಯು-ಡೈಸ್ ಕೋಡ್ ಹೊಂದಿರುವ ಸಮಗ್ರ ಶಿಕ್ಷಣ ಕರ್ನಾಟಕ ಅಡಿಯಲ್ಲಿ ಬರುವ ಸರ್ಕಾರಿ ಪ್ರಾಥಮಿಕ ಶಾಲೆಗಳು (1-5 ಹಾಗೂ 1-8ನೇ ತರಗತಿ ) ಹಾಗೂ ಮಾಧ್ಯಮಿಕ, ಹಿರಿಯ ಮಾಧ್ಯಮಿಕ ಶಾಲೆಗಳನ್ನು (1-10, 1-12, 6-10, 6-12ನೇ ತರಗತಿ) ಈ ಯೋಜನೆಯಡಿ ಆಯ್ಕೆಗೆ ಪರಿಗಣಿಸಲಾಗುತ್ತದೆ. ಈ ಹಿನ್ನಲೆಯಲ್ಲಿ ಕರ್ನಾಟಕದಲ್ಲಿ ಪ್ರತಿ ತಾಲೂಕಿಗೆ ಎರಡರಂತೆ Challenge Mode ನಲ್ಲಿ PM SHRI ಶಾಲೆಗಳನ್ನು ಆರಂಭಿಸಲು ಉದ್ದೇಶಿಸಲಾಗಿದೆ.
ಇದನ್ನೂ ಓದಿ: ಫೇಲ್ ಆದ್ರೂ ಡಿಗ್ರಿ, ಮಾಸ್ಟರ್ ಡಿಗ್ರಿ ಪಡೆಯೋಕೆ ಸಖತ್ ಚಾನ್ಸ್!
ಈ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಗೊಳಿಸಲು, ಆಯ್ಕೆಗೊಂಡ ಶಾಲೆಗಳಿಗೆ ಆಯಾ ಗ್ರಾಮ ಪಂಚಾಯ್ತಿಯಿಂದ ಒಪ್ಪಿಗೆ ಪತ್ರ ನೀಡಬೇಕಿದೆ.
PMSHRI ಶಾಲೆ ಎಂದರೇನು..? ವಿಶೇಷತೆ ಏನು?
* ಉನ್ನತೀಕರಿಸಿದ ಗುಣಮಟ್ಟದ ಶಿಕ್ಷಣಮ ನಡಲಾಗುತ್ತದೆ.
* ನವೀನ ಬೋಧನಾ ಶಾಸ್ತ್ರ ಮತ್ತು ತಂತ್ರಜ್ಞಾನವಿರಲಿದೆ.
* 21 ನೇ ಶತಮಾನ ಆಧುನಿಕ ಕೌಶಲ್ಯಕ್ಕೆ ಆದ್ಯತೆ.
* ವಿದ್ಯಾರ್ಥಿಗಳ ಪರಿಪೂರ್ಣ ವ್ಯಕಿತ್ವ ರೂಪಿಸಲು, ಕೌಶಲ್ಯ ಅಭಿವೃದ್ಧಿ ಪಡಿಸುವ ಗುರಿ.
* ಸರ್ಕಾರಿ ಶಾಲೆಗಳಲ್ಲಿ ಉನ್ನತ ಗುಣಮಟ್ಟದ ಮೂಲಭೂತ ಸೌಕರ್ಯಗಳು
* ಪರಿಸರ ಸ್ನೇಹಿ ವ್ಯವಸ್ಥೆ ಹಾಗೂ ಇಂಧನ ಕ್ಷಮತೆ ಮೂಲಸೌಕರ್ಯ ಇರಲಿದೆ.
* ವಿಶಾಲ ಮತ್ತು ಅತ್ಯಾಧುನಿಕ ಗ್ರಂಥಾಲಯಗಳು, ಎಲ್ಲಾ ಮಾದರಿ ಕ್ರೀಡಾ ಸಲಕರಣೆಗಳು, ಕಲಾ ಕೊಠಡಿ ಹಾಗೂ ಅನ್ವೇಷಣೆ ಕೇಂದ್ರಿತ ಕಲಿಕೆ ಇರಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ