ಇಂದು ರಾಜ್ಯದ ಸಚಿವರೊಂದಿಗೆ ಪ್ರಧಾನಿ ಮೋದಿ ವಿಡಿಯೋ ಕಾನ್ಫರೆನ್ಸ್ 

ಸದ್ಯದ ಕಂದಾಯ ಇಲಾಖೆ ಮಾಹಿತಿ ಪ್ರಕಾರ, ರಾಜ್ಯದಲ್ಲಿ ಮಳೆ ಹಾನಿಯಿಂದ ಉಡುಪಿ, ಚಿಕ್ಕಮಗಳೂರು ಕೊಡಗು, ದ.ಕನ್ನಡ, ಧಾರವಾಡ, ಹಾಸನ, ಕೊಡಗುಬೆಳಗಾವಿ, ಮೈಸೂರು, ಚಾಮರಾಜನಗರ, ಹಾವೇರಿ, ಶಿವಮೊಗ್ಗ ಈ 12 ಜಿಲ್ಲೆಗಳಲ್ಲಿಒಟ್ಟು ಮಳೆಯಿಂದ ಸಾವಿಗೀಡಾದವರ ಸಂಖ್ಯೆ 13 ಆಗಿದೆ. ಕೊಡಗಿನಲ್ಲಿ 5 ಜನ ಕಾಣೆಯಾಗಿದ್ದಾರೆ. ಒಟ್ಟು 23 ಜಾನುವಾರುಗಳು ಸತ್ತಿವೆ.

news18-kannada
Updated:August 10, 2020, 8:37 AM IST
ಇಂದು ರಾಜ್ಯದ ಸಚಿವರೊಂದಿಗೆ ಪ್ರಧಾನಿ ಮೋದಿ ವಿಡಿಯೋ ಕಾನ್ಫರೆನ್ಸ್ 
ಪ್ರಧಾನಿ ನರೇಂದ್ರ ಮೋದಿ
  • Share this:
ಬೆಂಗಳೂರು(ಆ.10): ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ ರಾಜ್ಯದ ಸಚಿವರೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಲಿದ್ದಾರೆ. ಕಂದಾಯ ಸಚಿವ ಆರ್ ಅಶೋಕ ಹಾಗೂ ಗೃಹ ಸಚಿವ ಬಸವರಾಜ ಬೊಮ್ಮಾಯಿ ಜೊತೆ ಪ್ರಧಾನಿ ಮೋದಿ ವಿಡಿಯೋ ಕಾನ್ಫರೆನ್ಸ್ ನಲ್ಲಿ ಪಾಲ್ಗೊಳ್ಳಲಿದ್ದಾರೆ. ರಾಜ್ಯದಲ್ಲಿ ಮಳೆ ಹಾಗೂ ಪ್ರವಾಹಕ್ಕೆ ಉಂಟಾದ ಹಾನಿ ಬಗ್ಗೆ ಹಾಗೂ ಕರ್ನಾಟಕ ಸರ್ಕಾರ ಕೈಗೊಂಡ ಪರಿಹಾರ ಕಾಮಗಾರಿಗಳ ಬಗ್ಗೆ ಪ್ರಧಾನಿ ಮೋದಿ ಅವರಿಗೆ ರಾಜ್ಯದ ಸಚಿವರು ಮಾಹಿತಿ ನೀಡಲಿದ್ದಾರೆ.

ರಾಜ್ಯದಲ್ಲಿ ನೆರೆಯಿಂದ ಹಾನಿ ಉಂಟಾದ ಭಾಗಗಳಲ್ಲಿ ಪರಿಹಾರ ಕಾಮಗಾರಿಯನ್ನ ಯಾವ ಪ್ರಕಾರವಾಗಿ ಕೈಗೊಳ್ಳಲಾಗಿದೆ. ಹೀಗೆ ಕೆಲದಿನಗಳ ಕಾಲ ಮಳೆ ಮುಂದುವರೆದರೆ ಮತ್ತಷ್ಟು ಪರಿಹಾರ ಕಾಮಗಾರಿಳನ್ನ  ಹಾಗೂ ಮುಂಜಾಗ್ರತಾ ಕ್ರಮಗಳನ್ನ ಕೈಗೊಳ್ಳುವ ಬಗ್ಗೆ ಪ್ರಧಾನಿ ಮೊದಿಯವರು ಕೂಡ ರಾಜ್ಯ ಸಚಿವರಿಗೆ ಸೂಚನೆ ನೀಡುವ ಸಾಧ್ಯತೆ ಇದೆ.

ಈಗಾಗಲೇ ಕಂದಾಯ ಸಚಿವ ಆರ್ ಅಶೋಕ್ ಮಳೆ ಪೀಡಿತ ಭಾಗಗಳಿಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ. ಅಧಿಕಾರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ನಡೆಸಿದ್ದಾರೆ. ಗೃಹ ಸಚಿವರ ಜೊತೆ ಸೇರಿ ಅಧಿಕಾರಿಗಳ ಜೊತೆ ಸಭೆಗಳನ್ನು ಮಾಡಿ ಸೂಚನೆ ನೀಡುವ ಜೊತೆಗೆ ಜಿಲ್ಲೆಗಳಲ್ಲಿನ ಸ್ಥಿತಿಗತಿ ಬಗ್ಗೆ ಮಾಹಿತಿ ಪಡೆದಿದ್ದಾರೆ.

ಮಾಜಿಗಳಾದ ಮೇಲೆ ಕೋಲಾರ ಜಿಲ್ಲೆಯತ್ತ ಮುಖಮಾಡದೆ ದೂರ ಉಳಿದ ನಾಯಕರು?

ಇದರ ಜೊತೆಗೆ ಅಗ್ನಿಶಾಮಕ ದಳ, ರಾಜ್ಯ ತುರ್ತು ನಿಗಾ ಘಟಕ ಏನೆಲ್ಲಾ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ  ಹಾಗೂ ಈಗಾಗಲೇ ಕೈಗೊಂಡಿರೋ ಕ್ರಮದ ಬಗ್ಗೆ ಗೃಹ ಸಚಿವ ಬೊಮ್ಮಾಯಿ ಮಾಹಿತಿ ಕಲೆ ಹಾಕಿದ್ದಾರೆ.

ಒಟ್ಟಿನಲ್ಲಿ  ರಾಜ್ಯದಲ್ಲಿನ ಮಳೆ ಹಾನಿಗೆ ಸಂಬಂಧಪಟ್ಟಂತೆ ಪ್ರಧಾನಿಗೆ ಮೋದಿ ಅವರಿಗೆ ಸಮಗ್ರ ಮಾಹಿತಿ ನೀಡಲು ರಾಜ್ಯ ಸರ್ಕಾರ ಸಜ್ಜಾಗಿದೆ. ಸದ್ಯದ ಕಂದಾಯ ಇಲಾಖೆ ಮಾಹಿತಿ ಪ್ರಕಾರ, ರಾಜ್ಯದಲ್ಲಿ ಮಳೆ ಹಾನಿಯಿಂದ ಉಡುಪಿ, ಚಿಕ್ಕಮಗಳೂರು ಕೊಡಗು, ದ.ಕನ್ನಡ, ಧಾರವಾಡ, ಹಾಸನ, ಕೊಡಗುಬೆಳಗಾವಿ, ಮೈಸೂರು, ಚಾಮರಾಜನಗರ, ಹಾವೇರಿ, ಶಿವಮೊಗ್ಗ ಈ 12 ಜಿಲ್ಲೆಗಳಲ್ಲಿಒಟ್ಟು ಮಳೆಯಿಂದ ಸಾವಿಗೀಡಾದವರ ಸಂಖ್ಯೆ 13 ಆಗಿದೆ. ಕೊಡಗಿನಲ್ಲಿ 5 ಜನ ಕಾಣೆಯಾಗಿದ್ದಾರೆ. ಒಟ್ಟು 23 ಜಾನುವಾರುಗಳು ಸತ್ತಿವೆ.
ಇನ್ನು, ಕೃಷಿ ಭೂಮಿ 31541.45 ಹೆಕ್ಟೇರ್ ನಲ್ಲಿ ಬೆಳೆದ ಬೆಳೆ ನಾಶವಾಗಿದೆ. ತೋಟಗಾರಿಕಾ ಕೃಷಿಯಲ್ಲೇ  34530.55 ಹೆಕ್ಟೇರ್ ಬೆಳೆ ಹಾಳಾಗಿದೆ ಎಂದು ಕಂದಾಯ ಇಲಾಖೆ ಮಾಹಿತಿ ನೀಡಿದೆ. ಇದುವರೆಗೂ ಒಟ್ಟು ಮಳೆಗೆ ಭಾಗಶಃ 2339 ಮನೆಗಳಿಗೆ ಹಾನಿಯಾಗಿದೆ. ಕೊಡಗು ಮತ್ತು  ಬೆಳಗಾವಿಯಲ್ಲಿ ಹೆಚ್ಚಿನ ಹಾನಿ ಉಂಟಾಗಿದೆ.ಕೊಡಗಿನಲ್ಲಿ 693 ಮನೆಗಳಿಗೆ ಹಾನಿಯಾಗಿದ್ದರೆ, ಬೆಳಗಾವಿಯಲ್ಲಿ 328 ಮನೆಗಳೂ ಹಾನಿಯಾಗಿವೆ.
Published by: Latha CG
First published: August 10, 2020, 8:37 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading