PM Modi On Bengaluru Roads: ಕಿತ್ತುಹೋದ ಬೆಂಗಳೂರು ರಸ್ತೆ, ಸ್ವತಃ ವರದಿ ಕೇಳಿದ ಪ್ರಧಾನಿ ಕಚೇರಿ

ಹೀಗಾಗಿ ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್ ಒಂದೇ ದಿನದಲ್ಲಿ ಕಿತ್ತುಹೋದ ರಸ್ತೆಯ ಕುರಿತು ವರದಿ ತಯಾರಿಸಲು ಸೂಚನೆ ನೀಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ

ಪ್ರಧಾನಿ ನರೇಂದ್ರ ಮೋದಿ

 • Share this:
  ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಬೆಂಗಳೂರು ಭೇಟಿಗೆ (PM Modi Bengaluru Visit) ಎಂದು ರಿಪೇರಿ ಮಾಡಲಾಗಿದ್ದ ರಸ್ತೆ ಒಂದೇ ದಿನದಲ್ಲಿ ಕಿತ್ತುಹೋದ ಕುರಿತು ಸ್ವತಃ ಪ್ರಧಾನಿ ಕಚೇರಿಯೇ ವರದಿ ಕೇಳಿದೆ. ಪ್ರಧಾನಿ ನರೇಂದ್ರ ಮೋದಿ ಆಗಮನದ ನಂತರ ಒಂದೇ ದಿನದಲ್ಲಿ ಕಿತ್ತುಹೋಗಿದ್ದ ರಸ್ತೆ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವ್ಯಂಗ್ಯಕ್ಕೆ ಗುರಿಯಾಗಿತ್ತು. ಒಂದೇ ದಿನದಲ್ಲಿ ಕಿತ್ತುಹೋದ ರಸ್ತೆಯ ಕುರಿತು ತಕ್ಷಣ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಸ್ವತಃ ಪ್ರಧಾನಮಂತ್ರಿ ಕಚೇರಿಯೇ ಸೂಚನೆ (PM Modi On Bengaluru Roads)  ನೀಡಿದೆ. ಹೀಗಾಗಿ ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್ ಒಂದೇ ದಿನದಲ್ಲಿ ಕಿತ್ತುಹೋದ ರಸ್ತೆಯ ಕುರಿತು ವರದಿ ತಯಾರಿಸಲು ಸೂಚನೆ ನೀಡಿದ್ದಾರೆ.

  ಜ್ಞಾನಭಾರತಿ ಕ್ಯಾಂಪಸ್ ಬಳಿ ರಸ್ತೆ ಟಾರು ಕಿತ್ತು ಬಂದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಕಚೇರಿಯಿಂದ ರಾಜ್ಯಕ್ಕೆ‌ ವರದಿ ಕೇಳಿದ ವಿಚಾರವಾಗಿ  ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಉತ್ತರಿಸಲು ನಿರಾಕರಿಸಿದ್ದಾರೆ. ನಾನು ಈ ಬಗ್ಗೆ ಮಾತನಾಡುವುದಿಲ್ಲ, ರಸ್ತೆ ಮೂಲಸೌಕರ್ಯ ವಿಭಾಗದಿಂದ ವರದಿ ಕೇಳಿದ್ದೇನೆ. ಆ ವರದಿ ಬಂದ ಬಳಿಕ ಈ ಬಗ್ಗೆ ಮಾತನಾಡುತ್ತೇನೆ ಎಂದು ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

  40 ತಿಂಗಳಲ್ಲಿ ಬೆಂಗಳೂರು ಟ್ರಾಫಿಕ್ ಸಮಸ್ಯೆ ಪರಿಹರಿಸಿ!
  ಕೆಂಗೇರಿಯಿಂದ ಕೊಮ್ಮಘಟ್ಟ (7 ಕಿಮೀ), ಮೈಸೂರು ರಸ್ತೆ (0.15 ಕಿಮೀ), ಹೆಬ್ಬಾಳ ಮೇಲ್ಸೇತುವೆ (2.4 ಕಿಮೀ) ನಂತರದ ವಿಸ್ತರಣೆ (2.4 ಕಿಮೀ) , ತುಮಕೂರು ರಸ್ತೆ (0.90 ಕಿಮೀ) ಮತ್ತು ಬೆಂಗಳೂರು ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿರುವ ರಸ್ತೆಗಳು (3.6 ಕಿಮೀ) ಸುಧಾರಣೆ ಮಾಡಲಾಗಿತ್ತು. ಆದರೆ ಈ ಹೊಸದಾಗಿ ಡಾಂಬರು ಹಾಕಲಾದ ರಸ್ತೆಗಳು ಈಗಾಗಲೇ ಹಾಳಾಗುತ್ತಿವೆ.

  ಬೆಂಗಳೂರಿನ ಸಂಚಾರ ದಟ್ಟಣೆಯನ್ನು ನಿವಾರಿಸಬೇಕು. ಬೆಂಗಳೂರಿನ ಟ್ರಾಫಿಕ್ ಅಡಚಣೆಯನ್ನು ಕಡಿಮೆ ಮಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರ್ನಾಟಕ ಸರ್ಕಾರಕ್ಕೆ (Karnataka Traffic) ಗುರಿ ನೀಡಿದ್ದಾರೆ. ಅಲ್ಲದೇ ಬೆಂಗಳೂರಿನ ಟ್ರಾಫಿಕ್ ಸಮಸ್ಯೆಯನ್ನು (Bengaluru Traffic) ನಿವಾರಿಸಲು ಪ್ರಧಾನಿ ನರೇಂದ್ರ ಮೋದಿ ಕರ್ನಾಟಕ ಸರ್ಕಾರಕ್ಕೆ 40 ತಿಂಗಳ ಗಡುವನ್ನು ನಿಗದಿಪಡಿಸಿದ್ದಾರೆ. ಈಕುರಿತು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

  ಇದನ್ನೂ ಓದಿ: Electric Car Fire: ಎಲೆಕ್ಟ್ರಿಕ್ ಕಾರಿಗೂ ಬಿತ್ತು ಬೆಂಕಿ! ಯಾವ ಕಾರದು? ನೋಡಿ ವಿಡಿಯೋ

  ಕರ್ನಾಟಕ ಸರ್ಕಾರಕ್ಕೆ ಪ್ರಧಾನಿ ಮೋದಿ ಗುರಿ
  ಈ ಮೂಲಕ ಬೆಂಗಳೂರು-ಮೈಸೂರು ಭೇಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಕರ್ನಾಟಕ ಸರ್ಕಾರಕ್ಕೆ ಗುರಿ ನಿಗದಿಪಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಭೇಟಿಯಿಂದ ಕರ್ನಾಟಕ (PM Narendra Modi Karnataka Visit) ಸರ್ಕಾರಕ್ಕೆ ಏನು ಸಿಕ್ಕಿದೆ ಎಂದು ಲೆಕ್ಕ ಹಾಕುತ್ತಿರುವವರಿಗೆ ಕರ್ನಾಟಕ ಸರ್ಕಾರಕ್ಕೆ ಪ್ರಧಾನಿ ನೀಡಿರುವ ಗುರಿಯಿಂದ ಆದರೂ ಅಭಿವೃದ್ಧಿ ಆಗುವುದೇ ಎಂಬ ಲೆಕ್ಕಾಚಾರ ಶುರುವಾಗಿದೆ.

  ಕೊಮ್ಮಘಟ್ಟದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಸಬ್ ಅರ್ಬನ್ ರೈಲ್ವೆ ಯೋಜನೆಯ ಅಂಚೆ ಚೀಟಿ ಬಿಡುಗಡೆ ಮಾಡಿದ್ದಾರೆ.

  ಇದನ್ನೂ ಓದಿ: Maharashtra Political Crisis: ಮಾಲ್ಡೀವ್ಸ್​ಗೆ ಹಾರಿದ ಪ್ರಿಯಾಂಕಾ ಗಾಂಧಿ! ಮಹಾ ಸರ್ಕಾರ ಪತನ ಸನ್ನಿಹಿತ

  ಬೆಂಗಳೂರು ಸಬ್ ಅರ್ಬನ್ ರೈಲ್ವೆ ಯೋಜನೆಗಳು ಮತ್ತು ರಾಷ್ಟ್ರೀಯ ಹೆದ್ದಾರಿಗಳ ಯೋಜನೆಗಳ ಪ್ರದರ್ಶನವನ್ನು ವೀಕ್ಷಿಸಿ, ಬೆಂಗಳೂರಿನ ಸರ್. ಎಂ.ವಿಶ್ವೇಶ್ವರಯ್ಯ ರೈಲ್ವೆ ಟರ್ಮಿನಲ್, ಯಲಹಂಕ- ಪೆನುಕೊಂಡ ಮತ್ತು ಅರಸೀಕೆರೆ-ತುಮಕೂರು ಜೋಡಿ ರೈಲು ಮಾರ್ಗ ಹಾಗೂ 100% ವಿದ್ಯುದೀಕರಣಗೊಂಡ ಕೊಂಕಣ ರೈಲು ಮಾರ್ಗವನ್ನು ರಾಷ್ಟ್ರಕ್ಕೆ ಸಮರ್ಪಿಸಿದ್ದಾರೆ. ಇದೇ ವೇಳೆ ಕನ್ನಡದಲ್ಲೇ ಭಾಷಣ ಆರಂಭಿಸಿದ ಮೋದಿ ಬೆಂಗಳೂರಿನ ಸಾರ್ವಜನಿಕರನ್ನು ಹಾಡಿ ಹೊಗಳಿದ್ದಾರೆ.
  Published by:guruganesh bhat
  First published: