• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Sree Sivakumara Swamiji: ಲಿಂಗೈಕ್ಯ ಶಿವಕುಮಾರ ಶ್ರೀ ಜಯಂತಿ; ಪ್ರಧಾನಿ, ಸಿಎಂರಿಂದ ಗೌರವ ನಮನ

Sree Sivakumara Swamiji: ಲಿಂಗೈಕ್ಯ ಶಿವಕುಮಾರ ಶ್ರೀ ಜಯಂತಿ; ಪ್ರಧಾನಿ, ಸಿಎಂರಿಂದ ಗೌರವ ನಮನ

ಶಿವಕುಮಾರ ಶ್ರೀಗಳೊಂದಿಗೆ ಪ್ರಧಾನಿ ಮೋದಿ

ಶಿವಕುಮಾರ ಶ್ರೀಗಳೊಂದಿಗೆ ಪ್ರಧಾನಿ ಮೋದಿ

ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಅವರು ಶ್ರೀಗಳನ್ನು ಸ್ಮರಿಸಿದ್ದು, ಅವರಿಗೆ ಪ್ರಣಾಮಗಳನ್ನು ಸಲ್ಲಿಸಿದ್ದಾರೆ.

  • Share this:

ನಡೆದಾಡುವ ದೇವರು, ತ್ರಿವಿಧ ದಾಸೋಹಿ ಲಿಂಗೈಕ್ಯ ಡಾ. ಶಿವಕುಮಾರ ಸ್ವಾಮೀಜಿಗಳ ಶ್ರೀಗಳ ಜಯಂತಿ ಇಂದು . ಈ ಹಿನ್ನಲೆ ಪ್ರಧಾನಿ ನರೇಂದ್ರ ಮೋದಿ ಸ್ವಾಮೀಜಿಗಳ ಸ್ಮರಣೆ ಮಾಡಿ, ಅವರಿಗೆ ಗೌರವ ವಂದನೆ ಸಲ್ಲಿಸಿದ್ದಾರೆ. ಡಾ. ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮಿಗಳ ಜಯಂತಿಯಂದು ಅವರಿಗೆ ಬಾಗಿ ನಮಸ್ಕರಿಸುತ್ತೇನೆ. ಸಮಾಜ ಸೇವೆ ಮತ್ತು ಬಡವರ ಆರೈಕೆಗಾಗಿ ಅವರು ಮಾಡಿದ ಅಸಂಖ್ಯಾತ ಪ್ರಯತ್ನಗಳು ಚಿರಕಾಲ ನೆನೆಪಿನರಲ್ಲಿರುತ್ತವೆ. ನಿಮ್ಮ ಉದಾತ್ತ ಆಲೋಚನೆಗಳು ಮತ್ತು ಆದರ್ಶಗಳಿಂದ ನಾವು ಪ್ರೇರೆಪಿತವಾಗಿದ್ದೇವೆ ಎಂದು ಅವರು ಟ್ವೀಟ್​ ಮೂಲಕ ಶ್ರೀಗಳನ್ನು ಸ್ಮರಿಸಿದ್ದಾರೆ.ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಅವರು ಶ್ರೀಗಳನ್ನು ಸ್ಮರಿಸಿದ್ದು, ಅವರಿಗೆ ಪ್ರಣಾಮಗಳನ್ನು ಸಲ್ಲಿಸಿದ್ದಾರೆ.ಶ್ರೀಗಳ ಜಯಂತೋತ್ಸವ ಹಿನ್ನಲೆ ಇಂದು ಮಠದಲ್ಲಿ ಕೂಡ ವಿಶೇಷ ಪೂಜೆ ಪುನಸ್ಕಾರ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ. ಸಿದ್ಧಗಂಗಾ ಮಠದ ಆವರಣದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮೈಸೂರು ರಾಜವಂಶಸ್ಥ ಯದುವೀರ್, ಸುತ್ತೂರು ಮಹಾಸಂಸ್ಥಾನದ ದೇಶೀಕೇಂದ್ರ ಸ್ವಾಮೀಜಿ, ಉಜ್ಜಯಿನಿ ಪೀಠದ 1008 ಜಗದ್ಗುರು ಸಿದ್ದಲಿಂಗರಾಜ ದೇಶೀಕೇಂದ್ರ ಶಿವಾಚಾರ್ಯ ಸ್ವಾಮೀಜಿ​ ಸೇರಿದಂತೆ ಹಲವು ಗಣ್ಯರು ಭಾಗಿಯಾಗಲಿದ್ದಾರೆ.

ಶಿಕ್ಷಣ, ಕಾಯಕ, ದಾಸೋಹದ ಮೂಲಕ ಶಿವಕುಮಾರ ಸ್ವಾಮೀಜಿಗಳು ನಡೆದಾಡುವ ದೇವರು ಎಂದೇ ಹೆಸರಾಗಿದ್ದರು. ನೂರ ಹನ್ನೊಂದು ವರ್ಷಗಳ ಕಾಲ ಬದುಕಿದ್ದ ಅವರು 2019ರಲ್ಲಿ ಲಿಂಗೈಕ್ಯರಾಗಿದ್ದರು.

top videos
    First published: