Yoga Day: ವಿಶ್ವ ಯೋಗ ದಿನದಂದು ಮೈಸೂರಿಗೆ ಮೋದಿ; ಅರಮನೆ ಆವರಣದಲ್ಲಿ ಕಾರ್ಯಕ್ರಮ

ಯೋಗ ದಿನಾಚರಣೆಯ ಸಿದ್ಧತೆಗಳ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಡಿಯೋ ಕಾನ್ಫೆರೆನ್ಸ್ ಮೂಲಕ ನರೇಂದ್ರ ಮೋದಿ ಅವರಿಗೆ ವಿವರಿಸಿದ್ದಾರೆ. ಸಾಂಸ್ಕ್ರತಿಕ ನಗರಿ ಮೈಸೂರಿಗೆ ಯೋಗ ಪ್ರದರ್ಶನದಲ್ಲಿ ಯೋಗ ಕೂಡಿ ಬಂದಿದೆ.

ಮೈಸೂರು ಅರಮನೆ

ಮೈಸೂರು ಅರಮನೆ

  • Share this:
    ಮೈಸೂರು (ಮೇ 30): ವಿಶ್ವ ಯೋಗ ದಿನಕ್ಕೆ ಮೈಸೂರು ಸಕಲ ರೀತಿಯಲ್ಲಿ ಸಿದ್ದವಾಗುತ್ತಿದೆ. ಇದರ ಮದ್ಯೆ ದೇಶದ ಪ್ರಧಾನಿ ಮೈಸೂರು ನಗರಕ್ಕೆ ಬರುವುದು ಖಚಿತವಾಗಿದೆ‌.  ಮೈಸೂರು ನಗರದಲ್ಲಿ  ಪ್ರಧಾನಮಂತ್ರಿ ನರೇಂದ್ರ ಮೋದಿ (PM Narendra Modi) ಪಾಲ್ಗೊಳ್ಳುವ ವಿಶ್ವ ಯೋಗ ದಿನಾಚರಣೆಗೆ (International Yoga Day) ವಿಶ್ವ ವಿಖ್ಯಾತ ಮೈಸೂರು ಅರಮನೆಯನ್ನು (Mysuru Palace) ಆಯ್ಕೆ ಮಾಡಲಾಗಿದೆ. ಪ್ರಧಾನಮಂತ್ರಿಗಳ ಕಾರ್ಯಾಲಯ ಮೈಸೂರು ಅರಮನೆಯನ್ನು ಆಯ್ಕೆ ಮಾಡಿ ಇಂದು ಅಧಿಕೃತಗೊಳಿಸಿದೆ.

    ಮೈಸೂರಿಗೆ ಬರಲಿದ್ದಾರೆ ಪ್ರಧಾನಿ ಮೋದಿ

    ಇನ್ನು ಯೋಗ ದಿನಾಚರಣೆಯ ಸಿದ್ಧತೆಗಳ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಡಿಯೋ ಕಾನ್ಫೆರೆನ್ಸ್ ಮೂಲಕ ನರೇಂದ್ರ ಮೋದಿ ಅವರಿಗೆ ವಿವರಿಸಿದ್ದಾರೆ. ಸಾಂಸ್ಕ್ರತಿಕ ನಗರಿ ಮೈಸೂರಿಗೆ ಯೋಗ ಪ್ರದರ್ಶನದಲ್ಲಿ ಯೋಗ ಕೂಡಿ ಬಂದಿದೆ. ಕಳೆದ ಹಲವು ವರ್ಷಗಳ ಪ್ರಯತ್ನ ಬಳಿಕ ಯೋಗ ದಿನದಂದು ಮೈಸೂರಿಗೆ ಬರಲು ಪ್ರಧಾನಿಗಳು ಒಪ್ಪಿಗೆ ಸೂಚಿಸಿದ್ದಾರೆ.

    ಯೋಗ ಪ್ರದರ್ಶನಕ್ಕೆ ಮೈಸೂರಿನಲ್ಲಿ ಸ್ಥಳ ಆಯ್ಕೆ

    ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಪಾಲ್ಗೊಳ್ಳುವ ವಿಶ್ವ ಯೋಗ ದಿನಾಚರಣೆಯ ಯೋಗ ಪ್ರದರ್ಶನಕ್ಕೆ ಮೈಸೂರಿನಲ್ಲಿ ಸ್ಥಳವನ್ನು ಆಯ್ಕೆ ಮಾಡಲಾಗಿದೆ. ಮೈಸೂರಿನ ರೇಸ್ ಕೋರ್ಸ್ ಹಾಗೂ ವಿಶ್ವ ಪ್ರಸಿದ್ಧ ಮೈಸೂರು ಅರಮನೆಯನ್ನು ಆಯ್ಕೆ ಮಾಡಲಾಗಿತ್ತು. ಆದರೆ ಸೆಕ್ಯೂರಿಟಿ ಸೇರಿದಂತೆ ಇತರೆ ಕಾರಣಗಳ ಹಿನ್ನೆಲೆ ಪ್ರಧಾನಮಂತ್ರಿಗಳ ಕಾರ್ಯಾಲಯವು ಪ್ರಧಾನಮಂತ್ರಿಗಳು ಪಾಲ್ಗೊಳ್ಳುವ ಯೋಗ ಪ್ರದರ್ಶನಕ್ಕೆ ವಿಶ್ವ ವಿಖ್ಯಾತ ಅಂಬಾ ವಿಲಾಸದ  ಅರಮನೆ ಬಳಿ (ಮುಂಭಾಗದ ಆವರಣ) ಸ್ಥಳ ಆಯ್ಕೆ ಮಾಡಿದೆ.

    ಪ್ರಧಾನಿ ಜೊತೆ ಸಿಎಂ ಬೊಮ್ಮಾಯಿ ವಿಡಿಯೋ ಕಾನ್ಫೆರೆನ್ಸ್​

    ಜೂನ್ 21 ರಂದು ಮೈಸೂರು ಅರಮನೆಯಲ್ಲಿ ನಡೆಯುವ ವಿಶ್ವ ಯೋಗ ದಿನಾಚರಣೆಯಂದು ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳಲಿದ್ದಾರೆ. ಯೋಗ ಪ್ರದರ್ಶನದಲ್ಲಿ ಪ್ರಧಾನಮಂತ್ರಿಗಳು ಪಾಲ್ಗೊಳ್ಳುವ ಕುರಿತು ಸಿದ್ಧತೆಗಳ ಬಗ್ಗೆ ವಿವರಿಸಲು ಇಂದು ವಿಡಿಯೋ ಕಾನ್ಫ್ರೆನ್ಸ್ ನಡೆಯಿತು. ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೆ ವಿಡಿಯೋ ಕಾನ್ಫ್ರೆನ್ಸ್ ನಲ್ಲಿ ಭಾಗಿಯಾಗಿ ನರೇಂದ್ರ ಮೋದಿ ಅವರಿಗೆ ಯೋಗ ದಿನಾಚರಣೆಯ ಸಿದ್ಧತೆಗಳೇನಾಗಿದೆ ಎಂಬ ಬಗ್ಗೆ ವಿವರಿಸಿದರು.

    ಇದನ್ನೂ ಓದಿ: Hijab Row: ಹಿಜಾಬ್ ಧರಿಸಲು ಅನುಮತಿ ಕೋರಿ ಡಿಸಿ ಕಚೇರಿ ಮೆಟ್ಟಿಲೇರಿದ ವಿದ್ಯಾರ್ಥಿನಿಯರು

    ಮತ್ತೊಂದು ದಾಖಲೆ ನಿರ್ಮಾಣ ಮಾಡುವ ಸಾಧ್ಯತೆ

    ಹಾಗೆಯೇ ವಿಶ್ವ ಯೋಗ ದಿನಾಚರಣೆ ಬಗ್ಗೆ ಇಡೀ ವಿಶ್ವದಲ್ಲಿ ಪ್ರಚಾರ ಕೈಗೊಳ್ಳುವ ಕುರಿತಂತೆ ಕೂಡ ವಿವರಣೆ ನೀಡಿದರು. ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ನಡೆಯುವ ವಿಶ್ವ ಯೋಗ ದಿನದ ಅದ್ದೂರಿ ಆಚರಣೆಗೆ ಇಡೀ ಭಾರತದಲ್ಲಿ ಸಾಂಸ್ಕ್ರತಿಕ ನಗರಿ ಮೈಸೂರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಕಳೆದ ವರ್ಷ ಅತಿ ಹೆಚ್ಚು ಯೋಗ ಪಟುಗಳು ಭಾಗಿಯಾಗಿರುವುದಕ್ಕೆ ಮೈಸೂರು ಗಿನ್ನೆಸ್ ದಾಖಲೆ ನಿರ್ಮಾಣ ಮಾಡಿತ್ತು. ಈ ಬಾರಿ ಕಳೆದ ವರ್ಷಕ್ಕಿಂತ ಹೆಚ್ಚು ಯೋಗ ಪಟುಗಳು ಭಾಗಿಯಾಗಿ ಮತ್ತೊಂದು ದಾಖಲೆ ನಿರ್ಮಾಣ ಮಾಡುವ ಸಾಧ್ಯತೆ ಇದೆ.

    ಇನ್ನು ಇದಕ್ಕಾಗಿ ಅನೇಕ ಸಂಘ ಸಂಸ್ಥೆಗಳು ಕೈ ಜೋಡಿಸಿವೆ. ಈ ಬಾರಿ ಒಂದು ಲಕ್ಷಕ್ಕೂ ಅಧಿಕ ಮಂದಿಯನ್ನ ಸೇರಿಸಿ ವಿಶ್ವ ದಾಖಲೆ ನಿರ್ಮಾಣ ಮಾಡುವ ಗುರಿ ಇಟ್ಟುಕೊಳ್ಳಲಾಗಿದೆ. ಅದೇನೆ ಹಾಗಲಿ ವಿಶ್ವ ಯೋಗ ದಿನಕ್ಕೆ ದೇಶದ ಪ್ರಧಾನಿಗಳು ಮೈಸೂರಿಗೆ ಆಗಮಿಸುತ್ತಿರುವುದು ಮಾತ್ರ ಸಂತಸದ ಸಂಗತಿ.

    ಇದನ್ನೂ ಓದಿ: UPSC ಪರೀಕ್ಷೆಯಲ್ಲಿ ಕನ್ನಡಿಗರ ಸಾಧನೆ; ಇಲ್ಲಿದೆ ಕರ್ನಾಟಕದ ಟಾಪರ್ಸ್​ ಲಿಸ್ಟ್​

    ಮುಂದಿನ ವರ್ಷದಿಂದ ಯೋಗಾಭ್ಯಾಸದ ಕ್ಲಾಸ್​

    ಮುಂದಿನ ವರ್ಷದಿಂದ ಹೈಸ್ಕೂಲು, ಕಾಲೇಜುಗಳಲ್ಲಿ ಯೋಗಾಭ್ಯಾಸ ತರಗತಿ ಆರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ‘ನಮ್ಮ ರಾಜ್ಯದಲ್ಲೂ ಯೋಗದ ಬಗ್ಗೆ ಯೋಗಾಭ್ಯಾಸದ ಪ್ರಯೋಜನಗಳ ಬಗ್ಗೆ ದೊಡ್ಡ ಪ್ರಚಾರ ನೀಡುವ ಅವಶ್ಯಕತೆ ಇದೆ. ಅದರಲ್ಲೂ ಕೋವಿಡ್‌ ಬಳಿಕ ಮಕ್ಕಳು ಬೇರೆ ಬೇರೆ ರೀತಿಯ ಒತ್ತಡಗಳಿಗೆ ಒಳಗಾಗಿದ್ದಾರೆ. ಇದರಿಂದ ಅವರನ್ನು ಹೊರಗೆ ತಂದು ಯಥಾಪ್ರಕಾರ ಬಾಲ್ಯವನ್ನು ಸಂತೋಷವಾಗಿ ಕಳೆಯುವಂತಾಗಬೇಕು. ಇದಕ್ಕೆ ಯೋಗ ಬಹಳ ಅಗತ್ಯವಿದೆ. ಹಾಗಾಗಿ ರಾಜ್ಯದಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ಶಾಲೆ, ಕಾಲೇಜುಗಳಲ್ಲಿ ಯೋಗ ಶಿಕ್ಷಣ ಮತ್ತು ಯೋಗಾಭ್ಯಾಸ ಪ್ರಾರಂಭಿಸಲಾಗುವುದು’ ಎಂದು ಹೇಳಿದರು.

    ವರದಿ: ದಿವ್ಯೇಶ್ ಜಿ ವಿ 
    Published by:Pavana HS
    First published: