‘ದಿ ಕೇರಳ ಸ್ಟೋರಿ’ (The Kerala Story) ಸಿನಿಮಾ ಬಗ್ಗೆ ದೇಶದಲ್ಲಿ ಭಾರೀ ಚರ್ಚೆ ಆಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಸಿನಿಮಾ ಬಗ್ಗೆ ಪರ-ವಿರೋಧ ನಿಲುವುಗಳು ಜೋರಾಗಿದೆ. ಇದೀಗ ಕರ್ನಾಟಕದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ‘ದಿ ಕೇರಳ ಸ್ಟೋರಿ’ ಸಿನಿಮಾ ಬಗ್ಗೆ ಮಾತಾಡಿದ್ದಾರೆ. ಭಯೋತ್ಪಾದನೆಯ ಮುಖವನ್ನು ಬಯಲು ಮಾಡುವ ಚಿತ್ರಕ್ಕೆ ಕಾಂಗ್ರೆಸ್ (Congress) ವಿರೋಧ ವ್ಯಕ್ತಪಡಿಸಿದ್ದು,ಇದು ವೋಟ್ ಬ್ಯಾಂಕ್ಗಾಗಿ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಕಿಡಿಕಾರಿದ್ದಾರೆ. ಭಯೋತ್ಪಾದನೆ ಕೇರಳ ಜನರನ್ನು ಹೇಗೆ ತಿಂದು ಹಾಕುತ್ತಿದೆ ಎಂಬುದರ ಬಗ್ಗೆ ಚಿತ್ರದಲ್ಲಿ ತೋರಿಸಿದ್ದಾರೆ ಎಂದು ಪ್ರಧಾನಿ ಹೇಳಿದರು.
ಈ ಚಿತ್ರವನ್ನು ನಿಷೇಧಿಸುವ ಮೂಲಕ ಕಾಂಗ್ರೆಸ್ ಭಯೋತ್ಪಾದನೆಯನ್ನು ರಕ್ಷಿಸುತ್ತಿದೆ ಎಂದು ಮೋದಿ ಹೇಳಿದ್ದಾರೆ. ಬಿಜೆಪಿ ಯಾವಾಗಲೂ ಭಯೋತ್ಪಾದನೆ ವಿರುದ್ಧ ಕಠಿಣ ನಿಲುವು ತಳೆದಿದೆ. ಆದರೆ ಪ್ರತಿ ಬಾರಿ ಭಯೋತ್ಪಾದನೆ ವಿರುದ್ಧ ಕ್ರಮ ನಡೆದಾಗಲೂ ಕಾಂಗ್ರೆಸ್‌ಗೆ ನಷ್ಟವಾಗುತ್ತದೆ. ಭಯೋತ್ಪಾದನೆ ಮಾನವ ವಿರೋಧಿ ಮತ್ತು ಪ್ರತಿಗಾಮಿ. ಆದರೆ ಕಾಂಗ್ರೆಸ್ ತನ್ನ ಸ್ವಂತ ವೋಟ್ ಬ್ಯಾಂಕ್ ಉಳಿಸಲು ಭಯೋತ್ಪಾದನೆಯ ಮುಂದೆ ಮಂಡಿಯೂರಿ ನಿಂತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಕಿಡಿಕಾರಿದ್ರು.
ದಿ ಕೇರಳ ಸ್ಟೋರಿ ಸಿನಿಮಾ ಹೇಗಿದೆ?
ದಿ ಕೇರಳ ಸ್ಟೋರಿ (The Kerala Story) ಸಿನಿಮಾ ಮೇ. 5ರಂದು ರಿಲೀಸ್ ಆಗಿದೆ. ಟ್ರೈಲರ್ (Trailer) ಮೂಲಕವೇ ವಿವಾದ ಸೃಷ್ಟಿಸಿದ್ದ ಈ ಸಿನಿಮಾ ಬಿಡುಗಡೆಗೆ ವಿಶೇಷವಾಗಿ ಕೇರಳದಲ್ಲಿ (Kerala) ತೀವ್ರ ವಿರೋಧ (Oppose) ವ್ಯಕ್ತವಾಗಿತ್ತು. ಕೇರಳದಲ್ಲಿ ಕೆಲವೇ ಥಿಯೇಟರ್ಗಳಲ್ಲಿ ಸಿನಿಮಾ ಬಿಡುಗಡೆಯಾಗಿದೆ (Release). ಸಿನಿಮಾ ನೋಡಿದ ಜನರು ಏನಂದಿದ್ದಾರೆ? ಟ್ವಿಟರ್ ರಿವ್ಯೂ (Twitter Review) ಹೇಗಿದೆ?
ನಿರ್ದೇಶಕ ಸುದಿಪ್ಟೋ ಸೆನ್ ಹಾಗೂ ವಿ.ಪುಲ್ ಅಮೃತ್ಲಾಲ್ ಶಾ ಅವರು ಸಿನಿಮಾದಲ್ಲಿ ಕೇರಳದಿಂದ ನಾಪತ್ತೆಯಾದ 32000 ಯುವತಿಯರ ಕಥೆ ಇದು ಎಂದು ಹೇಳಿದ್ದರು. ಇಸ್ಲಾಂಗೆ (Islam) ಮತಾಂತರಗೊಂಡು (Conversion) ನಂತರ ಅಫ್ಘಾನಿಸ್ತಾನ (Afghanistan), ಟರ್ಕಿ, ಸಿರಿಯಾದಲ್ಲಿ ಐಸಿಸ್ ಸೇರಲ್ಪಟ್ಟ ಯುವತಿಯರ ಕಥೆ ಎಂದು ಹೇಳಿದ್ದರು. ಇದರ ಸತ್ಯಾಸತ್ಯತೆ ಬಗ್ಗೆ ಪ್ರಶ್ನೆ ಏಳುತ್ತಿದ್ದಂತೆ 32,000 ಯುವತಿಯರು ಎಂಬಲ್ಲಿ ಮೂವರು ಯುವತಿಯರ ಕಥೆ ಎಂದು ಬಲಾಯಿಸಲಾಯಿತು. ಈಗ ಸಿನಿಮಾ ರಿಲೀಸ್ ಆಗಿದ್ದು ಅಸಲಿಗೆ ಸಿನಿಮಾ ಕಥೆ ಏನು? ಏನು ಹೇಳಲಾಗಿದೆ? ಏನನ್ನು ತೋರಿಸಲಾಗಿದೆ ಎನ್ನುವ ವಿಚಾರ ಇಲ್ಲಿದೆ.
ಅಸಲಿಗೆ ಸಿನಿಮಾ ಕಥೆ ಏನು?
ಸಿನಿಮಾ ಚೆನ್ನಾಗಿ ಮಾಡಿಲ್ಲ, ಇದರಲ್ಲಿ ನಟಿಸಿದ ಕಲಾವಿದರು ಕೂಡಾ ಚೆನ್ನಾಗಿ ನಟಿಸಿಲ್ಲ. ಬಹು-ಧಾರ್ಮಿಕ, ಬಹು-ಜನಾಂಗೀಯ ಗುರುತಿನಿಂದಲೇ ಹೆಮ್ಮೆಪಡುವ ದಕ್ಷಿಣದ ಚಿಕ್ಕ ರಾಜ್ಯವಾದ ಕೇರಳದ ಸಾಮಾಜಿಕ ಸಂಕೀರ್ಣತೆಗಳನ್ನು ಪ್ರಶ್ನಿಸಲು ಆಸಕ್ತಿಯಿಲ್ಲದೆ ಕಳಪೆಯಾಗಿ ಸಿನಿಮಾ ಮಾಡಲಾಗಿದೆ ಎಂದಿದ್ದಾರೆ ನೆಟ್ಟಿಗರು.
ಇದನ್ನೂ ಓದಿ: Bajrang Dal: 'ಕೈ'ಗೆ ಹೊತ್ತಿಕೊಂಡ 'ಬಜರಂಗಿ' ಬೆಂಕಿ! ಕಾಂಗ್ರೆಸ್ ಸಮೀಕ್ಷೆಯಲ್ಲಿ ಆತಂಕದ ವರದಿ!
ಕೇರಳದ ಮುಗ್ಧ ನಿಷ್ಕಲ್ಮಷ ಮನಸಿನ ಹಿಂದೂ ಮತ್ತು ಕ್ರಿಶ್ಚಿಯನ್ ಯುವತಿಯರು ಮುಸ್ಲಿಮ್ ಪುರುಷರಿಂದ ಓಲೈಸಲ್ಪಡುತ್ತಿದ್ದಾರೆ. ಅವರು ನಂತರ ಇಸ್ಲಾಂಗೆ ಮತಾಂತರವಾಗುತ್ತಿದ್ದಾರೆ. ಆ ಕಾರಣದಿಂದ ಕೇರಳವು ಅಪಾಯದಲ್ಲಿದೆ ಎಂದು ಹೇಳಲು ಅತ್ಯಂತ ಹೊರಟಿರುವ ಸಿನಿಮಾದಲ್ಲಿ ಅಷ್ಟಾಗಿ ಪರಿಣಾಮಕಾರಿಯಲ್ಲದ ಪಾತ್ರಗಳನ್ನು ಸೃಷ್ಟಿಸಲಾಗಿದೆ ಎಂದಿದ್ದಾರೆ.
ಹಲವಾರು ಕೇರಳ ಥಿಯೇಟರ್ಗಳು ದಿ ಕೇರಳ ಸ್ಟೋರಿ ಸಿನಿಮಾವನ್ನು ರಿಲೀಸ್ ಮಾಡಲು ಹಿಂದೇಟು ಹಾಕುತ್ತಿವೆ. ಸಿನಿಮಾ ವಿರುದ್ಧ ಪ್ರತಿಭಟನೆ ಭಯ ಇರುವುದರಿಂದ ಸಿನಿಮಾ ಪ್ರದರ್ಶನಕ್ಕೆ ಚಿತ್ರಮಂದಿರಗಳು ಮನಸು ಮಾಡುತ್ತಿಲ್ಲ. ಮುಖ್ಯವಾಗಿ ರೂಲಿಂಗ್ ಪಾರ್ಟಿಯಿಂದ ಸಿನಿಮಾಗೆ ಬೆಂಬಲ ಸಿಗದೆ ಇರುವ ಕಾರಣ ಪ್ರಮುಖ ಚಿತ್ರಮಂದಿರಗಳು ಸಿನಿಮಾ ರಿಲೀಸ್ ಮಾಡುವ ಬಗ್ಗೆ ಯೋಚನೆ ಮಾಡುತ್ತಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ