• Home
 • »
 • News
 • »
 • state
 • »
 • Narendra Modi: ‘ಲಂಬಾಣಿ ಜನರ ಮಗ ನಾನು, ನೀವು ನಿಶ್ಚಿಂತೆಯಿಂದಿರಿ’: ಪ್ರಧಾನಿ ಮೋದಿ ಭರವಸೆ

Narendra Modi: ‘ಲಂಬಾಣಿ ಜನರ ಮಗ ನಾನು, ನೀವು ನಿಶ್ಚಿಂತೆಯಿಂದಿರಿ’: ಪ್ರಧಾನಿ ಮೋದಿ ಭರವಸೆ

ನರೇಂದ್ರ ಮೋದಿ

ನರೇಂದ್ರ ಮೋದಿ

"ಇಂದು ಈ ವೇದಿಕೆಯಲ್ಲಿ ನನ್ನಿಂದ ಹಕ್ಕು ಪತ್ರ ಪಡೆದ ತಾಯಿ ನನಗೆ ಆಶೀರ್ವಾದ ಮಾಡಿದ್ರು. ಅವರ ಆಶೀರ್ವಾದ ದೇಶಸೇವೆ ಮಾಡುವ ನಮಗೆ ಇನ್ನಷ್ಟು ಧೈರ್ಯ ಕೊಟ್ಟಿದೆ. ಲಂಬಾಣಿ ಜನರ ಮಗ ನಾನು, ನೀವು ನಿಶ್ಚಿಂತೆಯಿಂದಿರಿ. ನಿಮ್ಮ ಮಗನಾದ ನಾನು ದೆಹಲಿಯಲ್ಲಿ ಕೂತಿದ್ದೀನಿ" ಎಂದು ಮೋದಿ ಹೇಳಿದರು.

ಮುಂದೆ ಓದಿ ...
 • News18 Kannada
 • 4-MIN READ
 • Last Updated :
 • Gulbarga, India
 • Share this:

ಕಲಬುರಗಿ: ಕರ್ನಾಟಕ ಪ್ರವಾಸದಲ್ಲಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಅವರು ಕಲಬುರಗಿ (Kalaburgi) ಜಿಲ್ಲೆಯ ಮಳಖೇಡದಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗಿಯಾದರು. ಸಾವಿರಾರು ಮಂದಿ ಲಂಬಾಣಿ, (Lambani) ಬಂಜಾರ ಸಮುದಾಯದ (Banjara Community) ಜನರು ಭಾಗವಹಿಸಿದ್ದ ಈ ಕಾರ್ಯಕ್ರಮವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಬಂಜಾರ ನಗಾರಿ ಬಾರಿಸುವ ಮೂಲಕ ಉದ್ಘಾಟಿಸಿದರು. ಈ ವೇಳೆ ಮೋದಿ ಅವರಿಗೆ ಲಂಬಾಣಿ ಶಾಲು ಹೊದೆಸಿ, ಅನುಭವ ಮಂಟಪದ (Anubhava Mantapa) ಚಿತ್ರ ನೀಡಿ ಗೌರವಿಸಲಾಯಿತು. ಇದೇ ವೇದಿಕೆಯಲ್ಲಿ 5 ಜಿಲ್ಲೆಗಳ 50 ಸಾವಿರಕ್ಕೂ ಹೆಚ್ಚು ಲಂಬಾಣಿ, ತಾಂಡ, ಹಟ್ಟಿ ಸೇರಿದಂತೆ ಇನ್ನಿತರ ಸಮುದಾಯದ ಜನರಿಗೆ ಹಕ್ಕು ಪತ್ರ ವಿತರಣೆಯೂ ನಡೆಯಿತು.


ಬಳಿಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಸಂತ ಸೇವಾಲಾಲ್ ಮಹಾರಾಜರು ಮತ್ತು ಗಾಣಗಾಪುರದ ಗುರು ದತ್ತಾತ್ರೇಯರಿಗೆ ನಮಿಸಿ ಬಂಜಾರ ಭಾಷೆಯಲ್ಲೇ ಮಾತು ಆರಂಭಿಸಿದರು. ಈ ವೇಳೆ ಕರ್ನಾಟಕ ಸರ್ಕಾರದ ಸಾಧನೆಯನ್ನು ಕೊಂಡಾಡಿದ ಮೋದಿ, ಜನರಿಗೆ ಸಾಮಾಜಿಕ ನ್ಯಾಯ ನೀಡಲು ಕರ್ನಾಟಕ ಸರ್ಕಾರ ದೊಡ್ಡ ಹೆಜ್ಜೆ ಇಟ್ಟಿದೆ. ಕರ್ನಾಟಕದ ಲಕ್ಷಾಂತರ ಬಂಜಾರ ಸಮುದಾಯದ ಜನರಿಗೆ ಇಂದು ಅಪರೂಪದ ದಿನ. 51 ಸಾವಿರಕ್ಕೂ ಹೆಚ್ಚು ಜನರಿಗೆ ಹಕ್ಕು ಪತ್ರ ವಿತರಣೆ ಮಾಡಲಾಗಿದೆ. ಇಂದು ನಿಮ್ಮೆಲ್ಲರಿಗೂ ಹಕ್ಕು ಪತ್ರ ಸಿಕ್ಕಿದೆ. ಇದಕ್ಕಾಗಿ ನಿಮ್ಮೆಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ. ಎಲ್ಲರ ಅಭಿವೃದ್ಧಿಗೆ ಬೊಮ್ಮಾಯಿ ಸರ್ಕಾರ ಧೃಡ ಹೆಜ್ಜೆ ಇಟ್ಟಿದೆ ಎಂದು ಹೇಳಿದರು.


‘1994ರಲ್ಲಿ ಕಲಬುರಗಿ ಬಂದಿದ್ದೆ’


ಭಾಷಣದ ವೇಳೆ ಈ ಹಿಂದೆ ಕಲಬುರಗಿ ಬಂದಿದ್ದ ಘಟನೆಯನ್ನು ನೆನಪಿಸಿದ ಪಿಎಂ ಮೋದಿ, 1994ರಲ್ಲಿ ನಾನು ರಾಜಕೀಯ ಸಮಾವೇಶ ನಡೆಸಲು ಕಲಬುರಗಿಗೆ ಬಂದಿದ್ದೆ. ಆಗ ನೀವೆಲ್ಲ ನನಗೆ ಆಶೀರ್ವಾದ ಮಾಡಿ ಕಳಿಸಿದ್ದೀರಿ. ಇಂದು ಈ ವೇದಿಕೆಯಲ್ಲಿ ನನ್ನಿಂದ ಹಕ್ಕು ಪತ್ರ ಪಡೆದ ತಾಯಿ ನನಗೆ ಆಶೀರ್ವಾದ ಮಾಡಿದ್ರು. ಅವರ ಆಶೀರ್ವಾದ ದೇಶಸೇವೆ ಮಾಡುವ ನಮಗೆ ಇನ್ನಷ್ಟು ಧೈರ್ಯ ಕೊಟ್ಟಿದೆ ಎಂದು ಹರ್ಷ ವ್ಯಕ್ತಪಡಿಸಿದರಲ್ಲದೇ, ಲಂಬಾಣಿ ಜನರ ಮಗ ನಾನು, ನೀವು ನಿಶ್ಚಿಂತೆಯಿಂದಿರಿ. ನಿಮ್ಮ ಮಗನಾದ ನಾನು ದೆಹಲಿಯಲ್ಲಿ ಕೂತಿದ್ದೀನಿ. ಬಂಜಾರ ಸಮುದಾಯದ ಅಭಿವೃದ್ಧಿ ನಾವು ಪಣ ತೊಟ್ಟಿದ್ದೇವೆ ಎಂದು ಹೇಳಿದರು.


ಇದನ್ನೂ ಓದಿ: PM Modi: ಡಬಲ್​ ಎಂಜಿನ್​ ಸರ್ಕಾರದಿಂದ ಡಬಲ್​ ಬೆನಿಫಿಟ್​; ರಾಜ್ಯ ಬಿಜೆಪಿ ಸರ್ಕಾರವನ್ನು ಕೊಂಡಾಡಿದ ಪ್ರಧಾನಿ ಮೋದಿ


ಇನ್ನು ಜಗಜ್ಯೋತಿ ಬಸವಣ್ಣ ಅವರನ್ನೂ ನೆನಪಿಸಿಕೊಂಡ ಪ್ರಧಾನಿ, ಸಬ್‌ಕಾ ಸಾಥ್, ಸಬ್‌ಕಾ ವಿಕಾಸ್, ಸಬ್‌ಕಾ ಪ್ರಯಾಸ್ ಎಂಬ ಮಂತ್ರವನ್ನು ಭಗವಾನ್ ಬಸವಣ್ಣನವರೇ ನಮಗೆಲ್ಲ ತಿಳಿಸಿಕೊಟ್ಟಿದ್ದಾರೆ. ಅವರ ಅವತ್ತಿನ ಸಂಸತ್ ಇಂದಿಗೂ ನಮಗೆಲ್ಲರಿಗೂ ಮಾದರಿಯಾಗಿದೆ. ಸಮಾಜದಲ್ಲಿ ಅವರು ಅಂದು ಹೊಸ ಬದಲಾವಣೆಯನ್ನೇ ಮಾಡಿದರು. ಅನುಭವ ಮಂಟಪದಿಂದ ಸಾಮಾಜಿಕ ನ್ಯಾಯ ಕಲ್ಪಿಸಿದ್ರು. ಅದನ್ನು ನಾನು ಎಂದೂ ಮರೆಯಲು ಸಾಧ್ಯವಿಲ್ಲ ಎಂದು ತಿಳಿಸಿದರು.


30 ವರ್ಷದ ಹಿಂದೆಯೇ ಆಗಬೇಕಾಗಿತ್ತು


ಸಾಮಾಜಿಕ ನ್ಯಾಯದ ವಿಚಾರ ಪ್ರಸ್ತಾಪಿಸಿ ವಿಪಕ್ಷಗಳ ವಿರುದ್ಧವೂ ವಾಗ್ದಾಳಿ ನಡೆಸಿದ ಪ್ರಧಾನಿ ಮೋದಿ, 30 ವರ್ಷಗಳ ಹಿಂದೆ ಹಕ್ಕು ಪತ್ರ ನೀಡುವ ಕೆಲಸ ಆಗಬೇಕಾಗಿತ್ತು. ಆದರೆ ತಾಂಡಾ ನಿವಾಸಿಗಳನ್ನು 30 ವರ್ಷ ಕಾಯಿಸಿದ್ರು. ವೋಟ್ ಬ್ಯಾಂಕ್ ರಾಜಕಾರಣಿಗಳು ಆ ಕೆಲಸವನ್ನು ಮಾಡಲಿಲ್ಲ. ಹಕ್ಕು ಪತ್ರ ನೀಡುವ ಬಗ್ಗೆ ವಿಪಕ್ಷ ಯೋಚನೆಯೇ ಮಾಡಲಿಲ್ಲ. ಬಹುವರ್ಷಗಳ ಕಾಲ ಮತಗಳನ್ನು ಪಡೆದು ಆಡಳಿತ ನಡೆಸಿದವರಿದ್ದಾರೆ. ಆದರೆ ಈಗ ಎಲ್ಲ ವಂಚಿತ ವರ್ಗದವರಿಗೆ ಅವರ ಪೂರ್ಣ ಹಕ್ಕು ಸಿಗುತ್ತಿದೆ. ತಾಂಡಾ ಜನರು ಈಗ ಧೈರ್ಯ ಮತ್ತು ಗೌರವದಿಂದ ಬದುಕಬಹುದು ಎಂದು ಭರವಸೆ ವ್ಯಕ್ತಪಡಿಸಿದರು.


ಇದನ್ನೂ ಓದಿ: Karnataka Election 2023: ಕಲ್ಯಾಣ ಕರ್ನಾಟಕದಲ್ಲಿ ಮೋದಿ ಹವಾ; ಸಮಾವೇಶಕ್ಕೆ ಬರೋರಿಗೆ ಭೂರೀ ಭೋಜನದ ವ್ಯವಸ್ಥೆ


ಇನ್ನು ರಾಷ್ಟ್ರ ನಿರ್ಮಾಣದಲ್ಲಿ ಬಂಜಾರ ಸಮುದಾಯ ಕೊಡುಗೆ ನೀಡುತ್ತಿದೆ ಎಂದ ಪಿಎಂ ಮೋದಿ,  ಬಂಜಾರ ಸಮುದಾಯದ ಅಭಿವೃದ್ಧಿಗೆ ನಾವು ಪಣ ತೊಟ್ಟಿದ್ದೇವೆ. ಡಬಲ್ ಇಂಜಿನ್ ಸರ್ಕಾರದ ಎಲ್ಲ ಯೋಜನೆಗಳು ನಿಮಗೆ ಸಿಗಬೇಕು. ಹಕ್ಕುಪತ್ರವಷ್ಟೇ ಅಲ್ಲ, ಬ್ಯಾಂಕ್‌ಗಳಲ್ಲೂ ಸಾಲ ಸಿಗುವಂತೆ ಮಾಡ್ತೀನಿ. ಎಲ್ಲಾ ಬಂಜಾರ, ತಾಂಡಾ ಮಕ್ಕಳನ್ನು ಶಾಲೆಗೆ ಕಳಿಸ್ತೀನಿ. ಕೇಂದ್ರದಿಂದ ಮನೆ, ನೀರು, ಗ್ಯಾಸ್, ವಿದ್ಯುತ್ ಎಲ್ಲವೂ ನಿಮಗೆ ಸಿಗುತ್ತದೆ. ಸ್ವಾತಂತ್ರ್ಯ ಸಿಕ್ಕ ಇಷ್ಟು ವರ್ಷಗಳ ಬಳಿಕ ವಂಚಿತರಿಗೆ ನ್ಯಾಯ ಸಿಕ್ಕಿದೆ.


ನಮ್ಮಿಂದ ಜನರಿಗೆ ಲಾಭ ಆಯಿತು


ಪಿಎಂ ಆವಾಸ್ ಯೋಜನೆ ಮೂಲಕ ಎಲ್ಲರಿಗೂ ನ್ಯಾಯ ಸಿಗುತ್ತಿದೆ. ಅವಕಾಶ, ಗೌರವ ಆದ್ಯತೆಗಳು ಸಿಗುವ ಕಡೆ ನಮ್ಮ ಹೆಜ್ಜೆ ಸಾಗುತ್ತಿದೆ. ಹಿಂದಿದ್ದವರು ದಲಿತರು, ಶೋಷಿತರು ವಂಚಿತರ ಕಷ್ಟವನ್ನೇ ಕೇಳುತ್ತಿರಲಿಲ್ಲ. ಲೋನ್ ಕೇಳಲು ಹೋದಾಗ ಬ್ಯಾಂಕ್‌ನವರು ಗ್ಯಾರೆಂಟಿ ಕೇಳ್ತಾ ಇದ್ದರು. ಅದಕ್ಕಾಗಿ ಮುದ್ರಾ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿ ಮಾಡಿತು. ಇವತ್ತು 20 ಕೋಟಿ ಎಸ್‌ಸಿ ಎಸ್‌ಟಿ ಒಬಿಸಿ ಜನ ಇದರ ಲಾಭ ಪಡೆಯುತ್ತಿದ್ದಾರೆ. ಜನ್‌ಧನ್ ಖಾತೆ ಯೋಜನೆ ತಂದು ಕೋಟ್ಯಂತರ ಜನರಿಗೆ ಲಾಭ ಆಯಿತು ಎಂದು ಮೋದಿ ಸಂತಸ ವ್ಯಕ್ತಪಡಿಸಿದರು.
ವೇದಿಕೆಯಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಕೇಂದ್ರ ಸಚಿವ ಭಗವಂತ ಖೂಬಾ, ಸಚಿವರಾದ ಆರ್ ಅಶೋಕ್, ಮುರುಗೇಶ್ ನಿರಾಣಿ, ಪ್ರಭು ಚೌಹಾಣ್, ಶಾಸಕರಾದ ಪಿ ರಾಜೀವ್, ರಾಜ್ ಕುಮಾರ್ ಪಾಟೀಲ್ ತೇಲ್ಕೂರ್, ದತ್ತಾತ್ರೇಯ ಪಾಟೀಲ್ ರೇವೂರ್,  ಸಂಸದ ಉಮೇಶ್ ಜಾದವ್, ಶಾಸಕ ಅವಿನಾಶ್ ಜಾದವ್, ಸುಭಾಷ್ ಗುತ್ತಿಗೆದಾರ, ಬಸವರಾಜ್ ಮತ್ತಿಮಾಡ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Published by:Avinash K
First published: