ಪ್ರಧಾನಿ ಮೋದಿ ರೈತರ ಖಾತೆಗೆ ನೇರವಾಗಿ ವರ್ಗಾಯಿಸಿದ ಕಿಸಾನ ಸಮ್ಮಾನ್, ಫಸಲ್ ವಿಮಾ ಹಣ ಸಾಲ ಖಾತೆಗೆ ಜಮೆ; ಅನ್ನದಾತರ ಆಕ್ರೋಶ

ದೇವರು‌ ವರ ಕೊಟ್ಟರೂ ಪೂಜಾರಿ ವರ ಕೊಡಲಿಲ್ಲ ಅನ್ನೋ ಹಾಗೇ ಅನ್ನದಾತರ ಪರಿಸ್ಥಿತಿ ಆಗಿದ್ದು ಆದಷ್ಟು ಬೇಗ ಬ್ಯಾಂಕ್‌ಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಲಿ ಎಂಬುದು ಅನ್ನದಾತರ ಹಕ್ಕೊತ್ತಾಯವಾಗಿದೆ.

news18-kannada
Updated:January 15, 2020, 9:05 AM IST
ಪ್ರಧಾನಿ ಮೋದಿ ರೈತರ ಖಾತೆಗೆ ನೇರವಾಗಿ ವರ್ಗಾಯಿಸಿದ ಕಿಸಾನ ಸಮ್ಮಾನ್, ಫಸಲ್ ವಿಮಾ ಹಣ ಸಾಲ ಖಾತೆಗೆ ಜಮೆ; ಅನ್ನದಾತರ ಆಕ್ರೋಶ
ಸಾಂದರ್ಭಿಕ ಚಿತ್ರ
  • Share this:
ಬೆಳಗಾವಿ: ಭೀಕರ ಪ್ರವಾಹ ಕುಂಭದ್ರೋಣ ಮಳೆಯಿಂದ ಕಷ್ಟ ಪಟ್ಟು ಬೆಳೆದ ಬೆಳೆ ಕನಸಿನ ಮನೆ ಕಳೆದುಕೊಂಡ ರೈತರಿಗೆ ಬ್ಯಾಂಕ್ ಮತ್ತೊಂದು ಶಾಕ್ ನೀಡಿದೆ. ಇಷ್ಟು ದಿನ ಸಾಲ ಮರುಪಾವತಿ ಮಾಡುವಂತೆ ನೋಟಿಸ್ ನೀಡುತ್ತಿದ್ದ ಬ್ಯಾಂಕ್‌ಗಳು ಈಗ ಅನ್ನದಾತರ ಮನೆಗಳಿಗೆ ಫೀಲ್ಡ್ ಆಫೀಸರ್‌ಗಳನ್ನು‌ ಕಳುಹಿಸುತ್ತಿದ್ದಾರೆ. ನೆರೆ ಸಂತ್ರಸ್ತ ರೈತರ ಮನೆಗಳಿಗೆ ಹೋಗಿ ಸಾಲದ ಹಣ ಮರುಪಾವತಿ ಮಾಡುವಂತೆ ಎಚ್ಚರಿಸುತ್ತಿದ್ದಾರಂತೆ.

ಇನ್ನು ಮೊನ್ನೆಯಷ್ಟೇ ತುಮಕೂರಿಗೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ರೈತರ ಬ್ಯಾಂಕ್ ಖಾತೆಗಳಿಗೆ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಎರಡನೇ ಕಂತಿನ‌ 2000 ರೂಪಾಯಿ ಹಣವನ್ನು ಜಮಾ ಮಾಡಿದ್ದರು. ಆದರೆ ಈಗ ರೈತರಿಗೆ ನೀಡುವ ಪ್ರೋತ್ಸಾಹ ಧನವೂ ಸಾಲದ ಖಾತೆಗೆ ಜಮಾ ಆಗಿದೆಯಂತೆ. ಫಸಲ್ ಭಿಮಾ ಯೋಜನೆ ಹಣವೂ ಸಾಲದ ಖಾತೆಗೆ ಜಮಾ ಆಗಿದೆ‌. ಬ್ಯಾಂಕ್ ಅಧಿಕಾರಿಗಳ ಕ್ರಮ ಖಂಡಿಸಿ ಬೆಳಗಾವಿ ಜಿಲ್ಲೆ ಕಿತ್ತೂರು ತಾಲೂಕಿನ ವಿವಿಧ ಗ್ರಾಮಗಳ ರೈತರು ಸಿಂಡಿಕೇಟ್ ಬ್ಯಾಂಕ್ ಎದುರು ಪ್ರತಿಭಟನೆ ನಡೆಸಿದರು. ಸಿಂಡಿಕೇಟ್ ಬ್ಯಾಂಕ್‌ನಿಂದ ಮೆರವಣಿಗೆ ಮೂಲಕ ತಹಸೀಲ್ದಾರ್ ಕಚೇರಿಗೆ ತೆರಳಿದ ರೈತರು ರಾಜ್ಯ ಹಾಗೂ ಕೇಂದ್ರ ಸರ್ಕಾರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಸಿಂಡಿಕೇಟ್ ಬ್ಯಾಂಕ್ ಎದುರು ಪ್ರತಿಭಟನೆ ನಡೆಸಿದ ಬಳಿಕ ರೈತರು ಕಿತ್ತೂರು ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಕಿತ್ತೂರು ತಹಸೀಲ್ದಾರ್ ಪ್ರವೀಣ್ ಜೈನ್‌ಗೆ ಮನವಿ ಸಲ್ಲಿಸುವ ವೇಳೆ ವಾಗ್ವಾದ ನಡೆದ ಪ್ರಸಂಗವೂ ನಡೆಯಿತು. ಸಾಲ ಮರುಪಾವತಿ ಮಾಡುವಂತೆ ರೈತರ ಮನೆಗಳಿಗೆ ಫೀಲ್ಡ್ ಆಫೀಸರ್‌ಗಳು ಬರುತ್ತಿರುವುದು, ಕಿಸಾನ್ ಸಮ್ಮಾನ್ ಯೋಜನೆ ಹಣವೂ ಸಾಲದ ಖಾತೆಗೆ ಜಮಾ ಆಗುತ್ತಿರುವ ಬಗ್ಗೆ ಕಿತ್ತೂರು ತಹಸೀಲ್ದಾರ್ ಪ್ರವೀಣ್ ಜೈನ್ ಪ್ರತಿಕ್ರಿಯೆ ನೀಡಿದ್ದಾರೆ. ಜಿಲ್ಲಾಧಿಕಾರಿಗಳು ಸಭೆ ಸೇರಿ ನಿರ್ದೇಶನ ಕೊಟ್ಟಿದ್ದಾರೆ. ಲೀಡ್ ಬ್ಯಾಂಕ್ ಮ್ಯಾನೇಜರ್ ಜೊತೆ ಮಾತುಕತೆಯನ್ನೂ ಸಹ ನಡೆಸಿದ್ದಾರೆ. ಅಧಿಕೃತವಾಗಿ ಇನ್ನೂ ಲೀಡ್ ಬ್ಯಾಂಕ್ ಮ್ಯಾನೇಜರ್ ಗೆ ಪತ್ರ ಬರೆದಿಲ್ಲ. ಅವರಿಗೆ ಪತ್ರ ಬರೆದು ಬೆಳೆ ವಿಮೆ ಹಾಗೂ ಕಿಸಾನ್ ಸಮ್ಮಾನ್ ಯೋಜನೆ ಹಣ ಸಾಲದ ಖಾತೆಗೆ ಜಮಾ ಮಾಡಬಾರದು ಹಾಗೂ ನೆರೆ ಸಂತ್ರಸ್ತ ರೈತರ ಮನೆಗಳಿಗೆ ಫೀಲ್ಡ್ ಆಫೀಸರ್ ಗಳನ್ನು ಕಳುಹಿಸದಂತೆ ಬೆಳಗಾವಿ ಲೀಡ್ ಬ್ಯಾಂಕ್ ಮ್ಯಾನೇಜರ್ ರಿಂದಲೇ ಬ್ಯಾಂಕ್‌ಗಳಿಗೆ ನಿರ್ದೇಶನ ಕೊಡಿಸಿ, ಸಮಸ್ಯೆ ಇತ್ಯರ್ಥಗೊಳಿಸುವ ಭರವಸೆ ನೀಡಿದರು.

ಇದನ್ನು ಓದಿ: ನಿರಾಣಿ ಮಂತ್ರಿ ಮಾಡಿ, ಇಲ್ಲವೇ ಪರಿಣಾಮ ಎದುರಿಸಿ ಎಂದ.. ಸ್ವಾಮಿಗೆ ಬೆದರಿಸಬೇಡಿ ಎಂದು ಎಚ್ಚರಿಸಿದ ಯಡಿಯೂರಪ್ಪ!

ಭೀಕರ ಪ್ರವಾಹ ನೆರೆಯಿಂದ ಕಂಗೆಟ್ಟಿದ್ದ ರೈತರಿಗೆ ಬೆಳೆ ವಿಮೆ ಹಾಗೂ ಕಿಸಾನ್ ಸಮ್ಮಾನ್ ಯೋಜನೆಯ ಪ್ರೋತ್ಸಾಹ ಧನವೂ ಸಿಗದೇ ಇರೋದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಇನ್ನಾದರೂ ಸರ್ಕಾರ ನೆರೆಸಂತ್ರಸ್ತ ರೈತರ ಕಷ್ಟ ಆಲಿಸಲಿ. ದೇವರು‌ ವರ ಕೊಟ್ಟರೂ ಪೂಜಾರಿ ವರ ಕೊಡಲಿಲ್ಲ ಅನ್ನೋ ಹಾಗೇ ಅನ್ನದಾತರ ಪರಿಸ್ಥಿತಿ ಆಗಿದ್ದು ಆದಷ್ಟು ಬೇಗ ಬ್ಯಾಂಕ್‌ಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಲಿ ಎಂಬುದು ಅನ್ನದಾತರ ಹಕ್ಕೊತ್ತಾಯವಾಗಿದೆ.
First published: January 15, 2020, 8:10 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading