ಮೋದಿ ನಾಟಕ ಮಾಡೋದ್ರಲ್ಲಿ ನಿಷ್ಣಾತರು, ಅಷ್ಟು ಸುಳ್ಳು ಹೇಳುವ ಬೇರೊಬ್ಬರನ್ನು ನಾನು ನೋಡೇ ಇಲ್ಲ; ದೇವೇಗೌಡ ವಾಗ್ದಾಳಿ

ಶಿವಮೊಗ್ಗ ಲೋಕಸಭಾ ಚುನಾವಣೆಗೆ ಎರಡೇ ದಿನ ಬಾಕಿ ಇರುವ ಹಿನ್ನೆಲೆಯಲ್ಲಿ ಜೆಡಿಎಸ್​ ಲೋಕಸಭಾ ಅಭ್ಯರ್ಥಿ ಮಧು ಬಂಗಾರಪ್ಪನವರ ಪರ ಮಾಜಿ ಪ್ರಧಾನಿ ದೇವೇಗೌಡರು ಇಂದು ಪ್ರಚಾರ ನಡೆಸಿದ್ದಾರೆ.

Sushma Chakre
Updated:April 20, 2019, 4:10 PM IST
ಮೋದಿ ನಾಟಕ ಮಾಡೋದ್ರಲ್ಲಿ ನಿಷ್ಣಾತರು, ಅಷ್ಟು ಸುಳ್ಳು ಹೇಳುವ ಬೇರೊಬ್ಬರನ್ನು ನಾನು ನೋಡೇ ಇಲ್ಲ; ದೇವೇಗೌಡ ವಾಗ್ದಾಳಿ
ಹೆಚ್​.ಡಿ.ದೇವೇಗೌಡ
  • Share this:
ಶಿವಮೊಗ್ಗ (ಏ. 20): ಪ್ರಧಾನಿ ನರೇಂದ್ರ ಮೋದಿ ನಾಟಕ ಮಾಡುವುದರಲ್ಲಿ ಎತ್ತಿದ ಕೈ. ಮೋದಿ ಯಾರ ಜೊತೆಗೂ ಯಾವುದೇ ಚರ್ಚೆಗೆ ಬರುವುದಿಲ್ಲ. ಪಾಕಿಸ್ತಾನ ಯುದ್ಧ ಯಾಕಾಯ್ತು? ನಾನು ಪ್ರಧಾನಿಯಾಗಿದ್ದಾಗ ಪಾಕಿಸ್ತಾನ ಯುದ್ಧವಾಗಿತ್ತಾ? ಎಂದು ಶಿವಮೊಗ್ಗದ ಉಂಬ್ಳೇಬೈಲಿನಲ್ಲಿ ನಡೆಯುತ್ತಿರುವ ಜೆಡಿಎಸ್​ ಸಮಾವೇಶದಲ್ಲಿ ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡ ಪ್ರಶ್ನಿಸಿದ್ದಾರೆ.

ಶಿವಮೊಗ್ಗ ಜಿಲ್ಲೆಯ ರೈತರ 412 ಕೋಟಿ‌ ರೂ. ಸಾಲ ಮನ್ನಾ ಆಗಿದೆ. ಇದೇ ರೀತಿ ಇನ್ನೂ ಹಲವು ಕಾರ್ಯಕ್ರಮಗಳನ್ನು ಜಾರಿಗೆ ತರಲಾಗಿದೆ. ಬಿಜೆಪಿ ನಾಯಕರು ಎಷ್ಟು ಸುಳ್ಳು ಹೇಳ್ತಾರೆ? ಅವರಿಗೆ ನಾಚಿಕೆಯಾಗಬೇಕು. ಇಷ್ಟು ಸುಳ್ಳು ಹೇಳುವ, ಕೆಳ ಮಟ್ಟಕ್ಕಿಳಿದು ಮಾತನಾಡುವ ಪ್ರಧಾನಿಯನ್ನು ನಾನು ನೋಡೇ ಇಲ್ಲ ಎಂದು ಮೋದಿ ವಿರುದ್ಧ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ವಾಗ್ದಾಳಿ ನಡೆಸಿದ್ದಾರೆ.

ಮೈತ್ರಿ ಸರ್ಕಾರಕ್ಕೆ ಮಂಡ್ಯ ಬಿಟ್ಟರೆ ಬೇರೆ ಜಿಲ್ಲೆಗಳು ಕಾಣುವುದೇ ಇಲ್ಲ; ಶೋಭಾ ಕರಂದ್ಲಾಜೆ ಆರೋಪ

ಯಾರು ಮುಂದೆ ಪ್ರಧಾನಿ ಆಗುತ್ತಾರೋ ಆಮೇಲೆ ನೋಡೋಣ. ನಾನು ರಾಹುಲ್ ಗಾಂಧಿಗೆ ಬೆಂಬಲ ಕೊಡುತ್ತೇನೆ. ಇಂದು ಗ್ಯಾಸ್​ ಸಿಲಿಂಡರ್ ಬೆಲೆ ಎಷ್ಟಾಗಿದೆ ಎಂದು ಯೋಚನೆ ಮಾಡಿ. ನಾನು ವಾಜಪೇಯಿ, ಆಡ್ವಾನಿಗೆ ಈ ರೀತಿ ಮಾತನಾಡುವುದಿಲ್ಲ. ಪಕ್ಷ‌ ಕಟ್ಟಿದವರನ್ನು ಮೋದಿ ಇಂದು ಮೂಲೆಗುಂಪು ಮಾಡಿದ್ದಾರೆ. ಈ ದೇಶದ ದುಷ್ಟ ಶಕ್ತಿಯನ್ನ ತೆಗೆಯಲೇಬೇಕು. ನೀವೆಲ್ಲರೂ ಮನಸು ಮಾಡಿ ಮೋದಿಯನ್ನು ಮನೆಗೆ ಕಳುಹಿಸಿ. ಮಧು ಬಂಗಾರಪ್ಪನವರನ್ನು ಗೆಲ್ಲಿಸಿಕೊಡಿ ಎಂದು ದೇವೇಗೌಡ ಹೇಳಿಕೆ ನೀಡಿದ್ದಾರೆ.

First published:April 20, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading