PM Modi in Mangaluru: ಮಂಗಳೂರಿಗೆ ಪಿಎಂ ಮೋದಿ ಕೊಟ್ಟಿದ್ದೇನು? ಇಲ್ಲಿದೆ ನೋಡಿ

ಹಾಗಾದರೆ ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕದ ಮಂಗಳೂರಿಗೆ ಆಗಮಿಸಿದ್ದಕ್ಕೆ ರಾಜ್ಯಕ್ಕೆ ಸಿಕ್ಕ ಲಾಭವೇನು?

ಮಂಗಳೂರಲ್ಲಿ ಮೋದಿ

ಮಂಗಳೂರಲ್ಲಿ ಮೋದಿ

 • Share this:
  ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದ ಮಂಗಳೂರಿನಲ್ಲಿ  (PM Modi In Mangaluru) ಒಟ್ಟು 3800 ಕೋಟಿ ವೆಚ್ಚದ ಯೋಜನೆಗಳಿಗೆ ಚಾಲನೆ ನೀಡಿದ್ದಾರೆ. ಮಂಗಳೂರಿನಲ್ಲಿ ವಿವಿಧ ಯೋಜನೆಗಳಿಗೆ ಮೋದಿ ಶಿಲಾನ್ಯಾಸ ನೆರವೇರಿಸಿದ್ರು. ಒಟ್ಟು 3,800 ಕೋಟಿ ವೆಚ್ಚದ ಯೋಜನೆಗಳಿಗೆ ಮೋದಿ ಚಾಲನೆ ನೀಡಿದ್ರು, ಗೋಲ್ಡ್ ​ಫಿಂಚ್​​ ಸಿಟಿ ಮೈದಾನದಲ್ಲಿ ಹಲವು ಕಾರ್ಯಕ್ರಮಗಳಿಗೆ ಪ್ರಧಾನಿ ಮೋದಿ ಚಾಲನೆ ಕೊಟ್ಟಿದ್ದಾರೆ. ಹಾಗಾದರೆ ಪ್ರಧಾನಿ ನರೇಂದ್ರ ಮೋದಿ (PM Modi) ಅವರು ಕರ್ನಾಟಕದ ಮಂಗಳೂರಿಗೆ ಆಗಮಿಸಿದ್ದಕ್ಕೆ ರಾಜ್ಯಕ್ಕೆ (PM Modi Karnataka Visit) ಸಿಕ್ಕ ಲಾಭವೇನು? ಇಂದು ಚಾಲನೆ ದೊರೆತ 3800 ಕೋಟಿ ರೂಪಾಯಿಗಳ ಯೋಜನೆ ವಿವರವೇನು? ಎಲ್ಲ ವಿವರ ಇಲ್ಲಿದೆ ನೋಡಿ.

  ಬಂದರಿನ 14ನೇ ಬರ್ತ್ ಯಾಂತ್ರೀಕರಣ ಲೋಕಾರ್ಪಣೆ ₹281 ಕೋಟಿ, ಬಂದರು ಬಿಟುಮಿನ್ ಸಂಗ್ರಹಗಾರದ ಶಿಲಾನ್ಯಾಸ ₹100 ಕೋಟಿ, ಪಿಎಂ ಗತಿಶಕ್ತಿ ಯೋಜನೆಯಡಿ ಹೆದ್ದಾರಿ ಅಭಿವೃದ್ಧಿಗೆ ಚಾಲನೆ ನೀಡಲಾಗಿದೆ. ಶೇಖರಣಾ ಟ್ಯಾಂಕ್, ತೈಲ ಸಂಗ್ರಹಗಾರದ ಶಿಲಾನ್ಯಾಸ ₹100 ಕೋಟಿ, MRPLನ ಶುದ್ಧ ನೀರಿನ ಪ್ಲಾಂಟ್​ ಉದ್ಘಾಟನೆಗೆ  ₹677 ಕೋಟಿ, MRPL 6ನೇ ಇಂಧನ ಸ್ಥಾವರ ಘಟಕ ಉದ್ಘಾಟನೆಗೆ ₹1,829 ಕೋಟಿ, MRPL ಎಲ್​ಪಿಜಿ ಸ್ಟೋರೇಜ್​ ಘಟಕ ಉದ್ಘಾಟನೆ ₹500 ಕೋಟಿ, ಕುಳಾಯಿ ಮೀನುಗಾರಿಕಾ ಜೆಟ್ಟಿ ನಿರ್ಮಾಣ ಘಟಕಕ್ಕೆ ₹200 ಕೋಟಿ ನೀಡಲಾಗಿದೆ.  ಲೋಕಾರ್ಪಣೆಗೊಂಡ ಯೋಜನೆಗಳ ವಿವರ ಇಂತಿದೆ

  ಬಂದರು ಬರ್ತ್​ಸಂಖ್ಯೆ- 14 ಯಾಂತ್ರೀಕರಣ

  ಯೋಜನೆ ವೆಚ್ಚ: ₹281 ಕೋಟಿ

  2,200 ಜನರಿಗೆ ಉದ್ಯೋಗಾವಕಾಶ

  ಸಾಮರ್ಥ್ಯ ಹೆಚ್ಚಳ, 35% ಸಮಯ ಉಳಿಕೆ

  ಕಡಲತೀರ, ಪರಿಸರ ಸಂರಕ್ಷಣೆಯ ಲಾಭಗಳು

  6.02 MTPA ಹೆಚ್ಚುವರಿ ಸಾಮರ್ಥ್ಯ

  BSG-I ಉನ್ನತೀಕರಣ

  ಯೋಜನೆ ವೆಚ್ಚ: ₹1,829 ಕೋಟಿ

  BSG-I ಶ್ರೇಣಿ ಇಂಧನಗಳ ಉತ್ಪಾದನೆ

  ಪರಿಸರ ಸಂರಕ್ಷಣೆ, ಮಾಲಿನ್ಯ ನಿಯಂತ್ರಣ

  ಸಮುದ್ರ ನೀರಿನ ಶುದ್ಧೀಕರಣ

  ಯೋಜನೆ ವೆಚ್ಚ: ₹677 ಕೋಟಿ

  30 MLD ಶುದ್ಧೀಕರಣ

  ಶಿಲಾನ್ಯಾಸಗೊಂಡ ಯೋಜನೆಗಳಿವು

  LPG - ಬೃಹತ್ ಪಿಓಎಲ್ ಸೌಲಭ್ಯ

  ಯೋಜನೆ ವೆಚ್ಚ: ₹500 ಕೋಟಿ

  ಸಾಮರ್ಥ್ಯ ಹೆಚ್ಚಳ: ₹200 ಎಂಟಿಪಿಎ

  2,200 ಜನರಿಗೆ ಉದ್ಯೋಗಾವಕಾಶಗಳು

  ದ್ರವರೂಪದ ಸರಕು ಅನ್‍ಲೋಡ್ ಟೈಂ ಉಳಿತಾಯ

  ಎಲ್‍ಪಿಜಿಯ ಒಟ್ಟಾರೆ ಆಮದು ವೆಚ್ಚದಲ್ಲಿ ಇಳಿಕೆ

  ಪಿಎಂ ಉಜ್ವಲಾ ಯೋಜನೆಗೆ ನೇರ ಬೆಂಬಲ

  ಖಾದ್ಯ ತೈಲ ಸಂಸ್ಕರಣಾಗಾರ

  ಯೋಜನೆ ವೆಚ್ಚ: ₹100 ಕೋಟಿ

  ಎಂಟಿಪಿಎ ಸಾಮರ್ಥ್ಯ: 0.30

  700 ಜನರಿಗೆ ಉದ್ಯೋಗಾವಕಾಶ

  ಖಾದ್ಯ ತೈಲದ ದೋಣಿಗಳ ಓಡಾಟದಲ್ಲಿ ಸುಧಾರಣೆ

  ಖಾದ್ಯ ತೈಲದ ಆಮದು ವೆಚ್ಚದಲ್ಲಿ ಇಳಿಕೆ

  ಖಾದ್ಯ ತೈಲ ಶೇಖರಣಾ ಟ್ಯಾಂಕ್‍

  ಯೋಜನೆ ವೆಚ್ಚ: ರೂ.100 ಕೋಟಿ

  275 ಜನರಿಗೆ ಉದ್ಯೋಗಾವಕಾಶಗಳು

  ಸಾಮರ್ಥ್ಯ: ಪ್ರತಿ ಎಕರೆಗೆ ವಾರ್ಷಿಕ 8,000 ಟನ್‍ಗಳ ಎಂಜಿಟಿ

  ಖಾದ್ಯ ತೈಲ, ಬಿಟುಮೆನ್‍ನ ಆಮದು ವೆಚ್ಚ ಇಳಿಕೆ

  ಬಿಟುಮೆನ್ ಶೇಖರಣಾ ಟ್ಯಾಂಕ್

  ಯೋಜನೆ ವೆಚ್ಚ: ₹100 ಕೋಟಿ

  ಎಂಟಿಪಿಎ ಸಾಮರ್ಥ್ಯ: 40,000 ಎಂಟಿ

  275 ಜನರಿಗೆ ಉದ್ಯೋಗಾವಕಾಶ

  ಬಿಟುಮೆನ್ ಸಾಗಣೆಯಲ್ಲಿ ಸುಧಾರಣೆ

  ಬಿಟುಮೆನ್‍ನ ಒಟ್ಟಾರೆ ದರದಲ್ಲಿ ಇಳಿಕೆ

  ಪಿಎಂ ಗತಿ ಶಕ್ತಿ ಯೋಜನೆಗೆ ನೇರ ಬೆಂಬಲ ದೊರೆಯಲಿದೆ.

  ಮೀನುಗಾರಿಕೆ-ಬಂದರು ಅಭಿವೃದ್ಧಿಗೆ ಸಂಬಂಧಿಸಿದ ಯೋಜನೆಗಳಿವು

  ಕುಳಾಯಿನಲ್ಲಿ ಇಪಿಸಿ ಮಾದರಿಯಲ್ಲಿ ಮೀನುಗಾರಿಕೆ ಬಂದರು ಅಭಿವೃದ್ಧಿ

  ಯೋಜನೆ ವೆಚ್ಚ: ₹196.51 ಕೋಟಿ

  8,500 ಜನರಿಗೆ ಉದ್ಯೋಗಾವಕಾಶ

  ₹192 ಕೋಟಿ ವಾರ್ಷಿಕ ಆದಾಯದ ನಿರೀಕ್ಷೆ

  ಇದನ್ನೂ ಓದಿ: Murugha Mutt Case: ಆಸ್ಪತ್ರೆ ಸೇರಿದ್ದ ಮುರುಘಾ ಸ್ವಾಮೀಜಿಗೆ ಬಿಗ್ ಶಾಕ್, ಕೋರ್ಟ್​ಗೆ ಹಾಜರುಪಡಿಸಲು ಖಡಕ್ ಸೂಚನೆ

  ಪಿಎಂ ಮತ್ಸ್ಯ ಸಂಪದ ಯೋಜನೆ

  ₹120 ಕೋಟಿ ವೆಚ್ಚದಲ್ಲಿ ಉತ್ಪಾದನೆ, ರಫ್ತು

  100 ಆಳ ಸಮುದ್ರ ದೋಣಿಗಳಿಗೆ ಅನುಮೋದನೆ

  ಉತ್ತರ ಕನ್ನಡದ ಮಾಜಾಳಿಯಲ್ಲಿ ಮೀನುಗಾರಿಕಾ ಬಂದರು ಅಭಿವೃದ್ಧಿ

  ಸಾಗರಮಾಲಾ, PMMSY ಯೋಜನೆ ಬಂದರು ಅಭಿವೃದ್ಧಿ

  ₹276 ಕೋಟಿ ವೆಚ್ಚದಲ್ಲಿ ಕಾರವಾರ ಬಂದರು ಅಭಿವೃದ್ಧಿ

  8 ಮೀನುಗಾರಿಕಾ ಬಂದರುಗಳಲ್ಲಿ ಹೂಳೆತ್ತುವ ಕಾರ್ಯ

  ಇದನ್ನೂ ಓದಿ: PM Modi In Mangaluru: ಮಂಗಳೂರಿನಲ್ಲಿ ನಮೋ ಮೇನಿಯಾ, ಮೋದಿ ಭಾಷಣದ ಹೈಲೈಟ್ಸ್

  ಹಳೇ ಮಂಗಳೂರು ಬಂದರಿನಲ್ಲಿ ಕರಾವಳಿ ಬರ್ತ್ ನಿರ್ಮಾಣ

  ₹65 ಕೋಟಿ ವೆಚ್ಚದಲ್ಲಿ 350 ಮೀ. ಕರಾವಳಿ ಬರ್ತ್ ನಿರ್ಮಾಣ

  ₹30.35 ಕೋಟಿ ವೆಚ್ಚದಲ್ಲಿ ಸಮುದ್ರಯಾನ ತರಬೇತಿ ಸಂಸ್ಥೆ ಸ್ಥಾಪನೆ
  Published by:guruganesh bhat
  First published: