PM Modi In Mangaluru: ಮಂಗಳೂರಲ್ಲಿ ಪ್ರಧಾನಿ ಮೋದಿ; ಲೇಟೆಸ್ಟ್ ಅಪ್​ಡೇಟ್ ಇಲ್ಲಿದೆ

ಮಲ್ಲಿಗೆ ಹಾರ, ಉಡುಪಿ ಶ್ರೀಕೃಷ್ಣ, ಶಾಲು ಹಾರ, ಪರಶುರಾಮ ಪುತ್ಥಳಿ ಹಾಕಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸನ್ಮಾನಿಸಲಾಗಿದೆ.

ಮಂಗಳೂರಲ್ಲಿ ಮೋದಿ

ಮಂಗಳೂರಲ್ಲಿ ಮೋದಿ

  • Share this:
    ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದ (PM Narendra Modi In Karnataka) ಮಂಗಳೂರಿಗೆ ಬಂದಿಳಿದಿದ್ದಾರೆ. ಪ್ರಧಾನಿ ಮೋದಿ ಇದ್ದ ವಿಮಾನ ಮಂಗಳೂರಿನ ಬಜಪೆ ವಿಮಾನ ನಿಲ್ದಾಣದಲ್ಲಿ (Mangaluru Airport) ಬಂದಿಳಿದಿದೆ.  ಮಂಗಳೂರಿನ ಬಂಗ್ರಕೂಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi in Mangaluru) ಬೃಹತ್ ಕಾರ್ಯಕ್ರಮದಲ್ಲಿ ಭಾಷಣ ಮಾಡಲಿದ್ದಾರೆ. ಮಲ್ಲಿಗೆ ಹಾರ, ಉಡುಪಿ ಶ್ರೀಕೃಷ್ಣ, ಶಾಲು ಹಾರ, ಪರಶುರಾಮ ಪುತ್ಥಳಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೀಡಿ ಸನ್ಮಾನಿಸಲಾಗಿದೆ. ಅಸಂಖ್ಯಾತ ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು, ಮಂಗಳೂರಿನ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. 

    ಮಂಗಳೂರಿನಲ್ಲಿ ವಿವಿಧ ಯೋಜನೆಗಳಿಗೆ ಮೋದಿ ಶಿಲಾನ್ಯಾಸ ನಡೆಸಲಿದ್ದಾರೆ.
    ಒಟ್ಟು 3,700 ಕೋಟಿ ವೆಚ್ಚದ ಯೋಜನೆಗಳಿಗೆ ಮೋದಿ ಚಾಲನೆ ನೀಡಲಿದ್ದಾರೆ.
    ಗೋಲ್ಡ್ ​ಫಿಂಚ್​​ ಸಿಟಿ ಮೈದಾನದಲ್ಲಿ ಬೃಹತ್ ಸಮಾವೇಶ ಕಾರ್ಯಕ್ರಮ ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡಲಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಲಿರುವ ಯೋಜನೆಗಳ ಮಾಹಿತಿ ಇಲ್ಲಿದೆ

    ಬಂದರಿನ 14ನೇ ಬರ್ತ್ ಯಾಂತ್ರೀಕರಣ ಲೋಕಾರ್ಪಣೆ: ₹281 ಕೋಟಿ
    ಬಂದರು ಬಿಟುಮಿನ್ ಸಂಗ್ರಹಗಾರದ ಶಿಲಾನ್ಯಾಸ : ₹100 ಕೋಟಿ
    ಪಿಎಂ ಗತಿಶಕ್ತಿ ಯೋಜನೆಯಡಿ ಹೆದ್ದಾರಿ ಅಭಿವೃದ್ಧಿಗೆ ಚಾಲನೆ
    ಶೇಖರಣಾ ಟ್ಯಾಂಕ್, ತೈಲ ಸಂಗ್ರಹಗಾರದ ಶಿಲಾನ್ಯಾಸ: ₹100 ಕೋಟಿ
    MRPLನ ಶುದ್ಧ ನೀರಿನ ಪ್ಲಾಂಟ್​ ಉದ್ಘಾಟನೆ: ₹677 ಕೋಟಿ
    MRPL 6ನೇ ಇಂಧನ ಸ್ಥಾವರ ಘಟಕ ಉದ್ಘಾಟನೆ:₹1,829 ಕೋಟಿ
    MRPL ಎಲ್​ಪಿಜಿ ಸ್ಟೋರೇಜ್​ ಘಟಕ ಉದ್ಘಾಟನೆ: ₹500 ಕೋಟಿ
    ಕುಳಾಯಿ ಮೀನುಗಾರಿಕಾ ಜೆಟ್ಟಿ ನಿರ್ಮಾಣ ಘಟಕ: ₹200 ಕೋಟಿ

    ಇದನ್ನೂ ಓದಿ: INS Vikrant Photos: 20 ಸಾವಿರ ಕೋಟಿಯಲ್ಲಿ ನಿರ್ಮಿಸಿದ ಐಎನ್​ಎಸ್ ವಿಕ್ರಾಂತ್ 2 ಫುಟ್​ಬಾಲ್ ಗ್ರೌಂಡ್​ಗಿಂದ ದೊಡ್ಡದು!

    ಮೀನುಗಾರಿಕೆ-ಬಂದರು ಅಭಿವೃದ್ಧಿ

    ಕುಳಾಯಿನಲ್ಲಿ ಇಪಿಸಿ ಮಾದರಿಯಲ್ಲಿ ಮೀನುಗಾರಿಕೆ ಬಂದರು ಅಭಿವೃದ್ಧಿ
    ಯೋಜನೆ ವೆಚ್ಚ: ₹196.51 ಕೋಟಿ
    8,500 ಜನರಿಗೆ ಉದ್ಯೋಗಾವಕಾಶ
    ₹192 ಕೋಟಿ ವಾರ್ಷಿಕ ಆದಾಯದ ನಿರೀಕ್ಷೆ
    ಪಿಎಂ ಮತ್ಸ್ಯ ಸಂಪದ ಯೋಜನೆ
    ₹120 ಕೋಟಿ ವೆಚ್ಚದಲ್ಲಿ ಉತ್ಪಾದನೆ, ರಫ್ತು
    100 ಆಳ ಸಮುದ್ರ ದೋಣಿಗಳಿಗೆ ಅನುಮೋದನೆ
    ಉತ್ತರ ಕನ್ನಡದ ಮಜಲಿಯಲ್ಲಿ ಮೀನುಗಾರಿಕಾ ಬಂದರು ಅಭಿವೃದ್ಧಿ
    ಸಾಗರಮಾಲಾ, PMMSY ಯೋಜನೆ ಬಂದರು ಅಭಿವೃದ್ಧಿ
    ₹276 ಕೋಟಿ ವೆಚ್ಚದಲ್ಲಿ ಕಾರವಾರ ಬಂದರು ಅಭಿವೃದ್ಧಿ
    8 ಮೀನುಗಾರಿಕಾ ಬಂದರುಗಳಲ್ಲಿ ಹೂಳೆತ್ತುವ ಕಾರ್ಯ
    ಹಳೇ ಮಂಗಳೂರು ಬಂದರಿನಲ್ಲಿ ಕರಾವಳಿ ಬರ್ತ್ ನಿರ್ಮಾಣ
    ₹65 ಕೋಟಿ ವೆಚ್ಚದಲ್ಲಿ 350 ಮೀ. ಕರಾವಳಿ ಬರ್ತ್ ನಿರ್ಮಾಣ
    ₹30.35 ಕೋಟಿ ವೆಚ್ಚದಲ್ಲಿ ಸಮುದ್ರಯಾನ ತರಬೇತಿ ಸಂಸ್ಥೆ ಸ್ಥಾಪನೆ

    ಇದನ್ನೂ ಓದಿ: Explained: ಭಾರತದ INS ವಿಕ್ರಾಂತ್​ ನೋಡಿ ಅಮೆರಿಕಾ, ಚೀನಾಗೆ ನಡುಕ! ಈ ಯುದ್ಧನೌಕೆಯ ಶಕ್ತಿ ಅಸಾಧಾರಣ

    ಮೋದಿ ಕಾರ್ಯಕ್ರಮಕ್ಕೆ ಭದ್ರತೆ ಹೀಗಿದೆ
    ಮಂಗಳೂರು ಪೊಲೀಸ್ ‌ಕಮಿಷನರ್ ನೇತೃತ್ವದಲ್ಲಿ ಭದ್ರತೆ
    SPG,NSG ಪಡೆಗಳ ಜೊತೆ 3,000 ಪೊಲೀಸರ ನಿಯೋಜನೆ
    100 ಅಧಿಕಾರಿಗಳು, 2,000 ಪೊಲೀಸರು, 1,000 ಇತರೆ ಸಿಬ್ಬಂದಿ
    ಮಂಗಳೂರಿನ 50ಕ್ಕೂ ಹೆಚ್ಚು ಕಡೆ ಸಿಸಿಟಿವಿ ಅಳವಡಿಕೆ

    ಪ್ರಧಾನಿ ಮೋದಿ ಭಾಷಣದ ಹೈಲೈಟ್ಸ್ ಇಲ್ಲಿದೆ
    ಪ್ರಧಾನಿ ನರೇಂದ್ರ ಮೋದಿ ಕಡಲನಗರಿ ಮಂಗಳೂರಿಗೆ ಆಗಮಿಸಿದ್ದು 3,700 ಕೋಟಿಯ ಯೋಜನೆಗಳಿಗೆ ಚಾಲನೆ ಕೊಟ್ಟಿದ್ದಾರೆ. ಹಲವು ಯೋಜನೆಗಳಿಗೆ ಶಿಲಾನ್ಯಾಸ ನೆರವೇರಿಸಿ ಪ್ರಧಾನಿ ಮೋದಿ ಬೃಹತ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ್ರು. ಇಂದು ಭಾರತದ ಸಮುದ್ರ ಶಕ್ತಿಗೆ ದೊಡ್ಡ ದಿನ. ಸೇನೆ, ಆರ್ಥಿಕ ಸುರಕ್ಷತೆಯಲ್ಲಿ ಭಾರತ ದೊಡ್ಡ ಸಾಧನೆ ಮಾಡಿದೆ. ಕೆಲಹೊತ್ತಿನ ಹಿಂದೆ ಐಎನ್​ಎಸ್ ವಿಕ್ರಾಂತ್ ಲೋಕಾರ್ಪಣೆ ಮಾಡಿದ್ದೇನೆ. ಮಂಗಳೂರಲ್ಲಿ 3,800 ಕೋಟಿ ಮೌಲ್ಯದ ಯೋಜನೆಗಳಿಗೆ ಚಾಲನೆ ನೀಡಿದೆ ಅಂತಾ ಹೇಳಿದ್ರು. ಮೇಕ್​ ಇನ್​ ಇಂಡಿಯಾ ಬಗ್ಗೆ ಉಲ್ಲೇಖಿಸಿದ್ರು. 8 ವರ್ಷಗಳಲ್ಲಿ ಕರ್ನಾಟಕಕ್ಕೆ 70 ಸಾವಿರ ಕೋಟಿಯ ಹೈವೇ ಸಿಕ್ಕಿದೆ. ಮಂಗಳೂರು-ಚೆನ್ನೈ ಎಕ್ಸ್​ಪ್ರೇಸ್ ವೇ ಆಗ್ತಿದೆ. ಬೆಂಗಳೂರು-ಮೈಸೂರು ಹೈವೇ ಯೋಜನೆ ಆಗ್ತಿದೆ ಎಂದರು.

    ಕರ್ನಾಟಕದ ಜನತೆಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ
    ಮಂಗಳೂರು ಬಂದರು ವಿಸ್ತರಣೆ ಆಗಿದೆ. ಮಂಗಳೂರಿನ ಮೀನುಗಾರರ ಗಳಿಕೆ ಹೆಚ್ಚಿಸಲು ಯೋಜನೆ ತಂದಿದ್ದೇವೆ. ಕರ್ನಾಟಕದ ಜನತೆಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಈ ಯೋಜನೆಗಳಿಂದ ಕರ್ನಾಟಕದಲ್ಲಿ ವ್ಯಾಪಾರ ಹೆಚ್ಚಳವಾಗಲಿದೆ. ಕರ್ನಾಟಕದಲ್ಲಿ ಉದ್ಯೋಗ, ಉದ್ದಿಮೆ ಹೆಚ್ಚಾಗಲಿದೆ ಅಂತಾ ಮೋದಿ ಹೇಳಿದರು.
    Published by:guruganesh bhat
    First published: