ಬೆಂಗಳೂರು: ಮಂಗಳವಾರ ಉತ್ತರ ಕರ್ನಾಟಕದಲ್ಲಿ (North Karnataka) ಮಿಂಚಿನ ಸಂಚಾರ ನಡೆಸಿದ ಪ್ರಧಾನಿ ನರೇಂದ್ರ ಮೋದಿ (PM Narendra Modi) ಇಂದು ಕರಾವಳಿ, ಕಿತ್ತೂರು ಕರ್ನಾಟಕದಲ್ಲಿ ಮತಯಾಚನೆ ಮಾಡಲಿದ್ದಾರೆ. PFI ನಿಷೇಧದ ಬಳಿಕ ಮೊದಲ ಬಾರಿಗೆ ಕರಾವಳಿಗೆ ಪ್ರಧಾನಿ ಮೋದಿ ಆಗಮಿಸುತ್ತಿದ್ದು, ಮಂಗಳೂರು (Mangaluru), ಬೆಳಗಾವಿ (Belagavi), ಉತ್ತರ ಕನ್ನಡದಲ್ಲಿ (Uttara Kannada) ಪ್ರಚಾರ ನಡೆಸಲಿದ್ದಾರೆ. ಮಂಗಳೂರಿನ ಕೊಲ್ನಾಡಿಯಲ್ಲಿ ಬೆಳಗ್ಗೆ11ಕ್ಕೆ, ಮಧ್ಯಾಹ್ನ 1.15ಕ್ಕೆ ಅಂಕೋಲಾದ ಹಟ್ಟಿಕೇರಿಯಲ್ಲಿ, ಮಧ್ಯಾಹ್ನ 3.15ಕ್ಕೆ ಬೈಲಹೊಂಗಲದಲ್ಲಿ ಪ್ರಧಾನಿ ಮೋದಿ ಕ್ಯಾಂಪೇನ್ ಮಾಡಲಿದ್ದಾರೆ.
ಬೆಳಗ್ಗೆ 10.30ಕ್ಕೆ ಮಂಗಳೂರು ಏರ್ಪೋರ್ಟ್ಗೆ ಆಗಮಿಸುವ ಪ್ರಧಾನಿಗಳು ಬೆಳಗ್ಗೆ 10.45 : ಮುಲ್ಕಿಯ ಕೊಲ್ನಾಡು ಹೆಲಿಪ್ಯಾಡ್ ತಲುಪಲಿದ್ದಾರೆ. ಬೆಳಗ್ಗೆ 11 ಗಂಟೆಗೆ ಕೊಲ್ನಾಡಿನಲ್ಲಿ ಬೃಹತ್ ಸಮಾವೇಶದಲ್ಲಿ ಭಾಗಿಯಾಗಿ ದಕ್ಷಿಣ ಕನ್ನಡ, ಉಡುಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲಿದ್ದಾರೆ. ಪ್ರಚಾರದ ವೇಳೆ ಪ್ರವೀಣ್ ನೆಟ್ಟಾರ್ ಹತ್ಯೆ ವಿಷ್ಯ ಪ್ರಸ್ತಾಪಿಸುವ ಸಾಧ್ಯತೆಗಳಿವೆ.
ಅಂಕೋಲಾದಲ್ಲಿ ಮೋದಿ ಮತಬೇಟೆ
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ಹಟ್ಟಿಕೇರಿಗೆ ಮಧ್ಯಾಹ್ನ 1.15ಕ್ಕೆ ಆಗಮಿಸುವ ಪ್ರಧಾನಿ ಮೋದಿ ಸಾರ್ವಜನಿಕ ಸಭೆ ನಡೆಸಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲಿದ್ದಾರೆ. ಮೋದಿ ಕಾರ್ಯಕ್ರಮಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.
ಬೆಳಗಾವಿಯಲ್ಲಿ ನಮೋ ಮೇನಿಯಾ
ಮಧ್ಯಾಹ್ನ 3.15ಕ್ಕೆ ಬೆಳಗಾವಿಯ ಬೈಲಹೊಂಗಲದಲ್ಲಿ ಆಯೋಜನೆಯ ಸಮಾವೇಶದಲ್ಲಿ ಪ್ರಧಾನಿ ಮೋದಿ ಭಾಗಿಯಾಗಲಿದ್ದಾರೆ . ಬೆಳಗಾವಿಯ 8 ಕ್ಷೇತ್ರ ಗುರಿಯಾಗಿಟ್ಟುಕೊಂಡು ಮತಬೇಟೆ ನಡೆಸಲಿದ್ದಾರೆ.
ಏ.29ರಂದು ಕುಡಚಿಯಲ್ಲಿ ಸಮಾವೇಶ ನಡೆಸಿದ್ದ ಪ್ರಧಾನಿಗಳು ಈಗ ಮತ್ತೆ ಬೈಲಹೊಂಗಲದಲ್ಲಿ ಪ್ರಚಾರ ನಡೆಸುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ