• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • PM Modi: ವಿಮಾನ ನಿಲ್ದಾಣಕ್ಕೆ ತೆರಳುವ ಪ್ರಯಾಣಿಕರಿಗೆ ಪರ್ಯಾಯ ಮಾರ್ಗ ಸೂಚಿಸಿದ ಪೊಲೀಸರು

PM Modi: ವಿಮಾನ ನಿಲ್ದಾಣಕ್ಕೆ ತೆರಳುವ ಪ್ರಯಾಣಿಕರಿಗೆ ಪರ್ಯಾಯ ಮಾರ್ಗ ಸೂಚಿಸಿದ ಪೊಲೀಸರು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಏರ್ ಪೋರ್ಟ್ ಕಡೆ ಪ್ರಯಾಣಿಸುವ ವಾಹನ ಸವಾರರು ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 1.30 ರ ಸಮಯದಲ್ಲಿ ಪರ್ಯಾಯ ಮಾರ್ಗ ಬಳಸಲು ಟ್ರಾಫಿಕ್ ಪೊಲೀಸರು ಸೂಚಿಸಿದ್ದಾರೆ.

  • Share this:

ಇಂದು ರಾಜಧಾನಿ ಬೆಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಆಗಮನದ ಹಿನ್ನೆಲೆ ನಗರದ ರಸ್ತೆ ರಸ್ತೆಯಲ್ಲೂ ಪೊಲೀಸ್ (Police) ಕಣ್ಗಾವಲು ಇರಿಸಿದ್ದಾರೆ. ಮೇಕ್ರಿ ಸರ್ಕಲ್ ಬಳಿಯೇ 1 ಸಾವಿರದಷ್ಟು ಪೊಲೀಸರಿಗೆ ಬಂದೋಬಸ್ತ್ ಗೆ ಜಂಟಿ ಪೊಲೀಸ್ ಆಯುಕ್ತ ಶರಣಪ್ಪ ಸೂಚನೆ ನೀಡಿದ್ದಾರೆ. ಸ್ಪೆಷಲ್ ವೆಪನ್ ಟ್ಯಾಕ್ಟಿಸ್ ತಂಡವನ್ನ ಕೂಡ ಬಂದೋಬಸ್ತ್ ಗೆ  ಬೆಂಗಳೂರ ಪೊಲೀಸರು (Bengaluru Police) ಬಳಸಿಕೊಳ್ಳುತ್ತಿದ್ದಾರೆ. ಸಾರ್ವಜನಿಕರಿಗೂ ಬ್ಯಾರಿಕೇಡ್ ಹಾಕಿ ಮೋದಿ ಆಗಮನವನ್ನ ನೋಡಲು ಅವಕಾಶ ಮಾಡಿಕೊಡಲು ಪೊಲೀಸರು ಮುಂದಾಗಿದ್ದಾರೆ. ನಗರದಲ್ಲಿ ಸುಮಾರು 6 ಸಾವಿರಕ್ಕೂ ಹೆಚ್ಚು ಪೋಲಿಸರು ನಿಯೋಜನೆ  ಮಾಡಲಾಗಿದ್ದಾರೆ. ಮಫ್ತಿಯಲ್ಲಿ ಸುಮಾರು 300 ಪೋಲಿಸರು ಕಾರ್ಯನಿರ್ವಹಿಸಲಿದ್ದಾರೆ. 11 ಗಂಟೆ ನಂತರದಲ್ಲಿ ಮೇಕ್ರಿ ಸರ್ಕಲ್ (Mekri Circle) ಬಳಿ ವಾಹನ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದೆ.


ಏರ್ಪೋರ್ಟ್ ರಸ್ತೆ ಎಲಿವೇಟೆಡ್ ಫ್ಲೈ ಓವರ್ (Airport Elevated Flyover Bridge) ಬಳಸದಂತೆ ಟ್ರಾಫಿಕ್ ಪೊಲೀಸರು ಸೂಚನೆ ನೀಡಿದ್ದಾರೆ. ಏರ್ ಪೋರ್ಟ್ ಕಡೆ ಪ್ರಯಾಣಿಸುವ ವಾಹನ ಸವಾರರು ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 1.30 ರ ಸಮಯದಲ್ಲಿ ಪರ್ಯಾಯ ಮಾರ್ಗ ಬಳಸಲು ಟ್ರಾಫಿಕ್ ಪೊಲೀಸರು ಸೂಚಿಸಿದ್ದಾರೆ.


ಕೆಐಎಎಲ್ ಗೆ ಹೋಗುವ ಪ್ರಯಾಣಿಕರಿಗೆ ಮಾರ್ಗ ಸೂಚಿಸಿದ ಪೊಲೀಸರು


*ಕೆಆರ್ ಪುರ ಕಡೆಯಿಂದ ಬರುವ ವಾಹನಗಳು-ರಾಮಮೂರ್ತಿನಗರ, ಹೆಣ್ಣೂರು, ಬೈರತಿ ಕ್ರಾಸ್, ಸಂದೀಪ್ ಉನ್ನಿಕೃಷ್ಣನ್ ಜಂಕ್ಷನ್, ಬಾಗಲೂರು, ಮೈಲನಹಳ್ಳಿ, ಬೇಗೂರು ಮೂಲಕ ಏರ್ಪೋರ್ಟ್ ಪ್ರವೇಶ.


ಇದನ್ನೂ ಓದಿ:  Agnipath ಯೋಜನೆ ಜಾರಿಯಿಂದ ಕಾಂಗ್ರೆಸ್​ಗೆ ಉರಿ ಶುರುವಾಗಿದೆ: ಸಚಿವ ಶ್ರೀರಾಮುಲು ವಾಗ್ದಾಳಿ


*ತುಮಕೂರು ಕಡೆಯಿಂದ ಬರುವ ವಾಹನಗಳು-ಗೊರಗುಂಟೆಪಾಳ್ಯ, ಗಂಗಮ್ಮನಗುಡಿ ಸರ್ಕಲ್, ನಾಗೇನಹಳ್ಳಿ, ಸಿಂಗನಾಯಕನಹಳ್ಳಿ, ರಾಜಾನುಕುಂಟೆ, ವಿದ್ಯಾನಗರ, ಸಾದಹಳ್ಳಿ ಗೇಟ್ ಮೂಲಕ ಏರ್ಪೋರ್ಟ್.


*ವಿಧಾನಸೌಧ, ರಾಜಭವನ ಕಡೆಯಿಂದ ಹೋಗುವ ವಾಹನಗಳು- ಕಾವೇರಿ ಜಂಕ್ಷನ್ ಎಡತಿರುವು, ಸಂಪಿಗೆ ರಸ್ತೆ, ಯಶವಂತಪುರ ಸರ್ಕಲ್, ಮತ್ತಿಕೆರೆ ಕ್ರಾಸ್, ಬಿಇಎಲ್ ಸರ್ಕಲ್, ಎಂಎಸ್ ಪಾಳ್ಯ, ಸಂದೀಪ್ ಉನ್ನಿಕೃಷ್ಣನ್ ಜಂಕ್ಷನ್, ನಾಗೇನಹಳ್ಳಿ, ರಾಜಾನುಕುಂಟೆ, ಸಾದಹಳ್ಳಿ ಗೇಟ್ ಮೂಲಕ ಏರ್ಪೋರ್ಟ್.


*ಕಂಟೋನ್ಮೆಂಟ್, ಜೆಸಿನಗರ ಕಡೆಯಿಂದ ಹೋಗುವ ವಾಹನಗಳು- ಜಯಮಹಲ್ ಮುಖ್ಯರಸ್ತೆ, ವಾಟರ್ ಟ್ಯಾಂಕ್ ಜಂಕ್ಷನ್, ಕಾವಲ್ ಬೈರಸಂದ್ರ, ನಾಗವಾರ, ಕೊತ್ತನೂರು, ಬಾಗಲೂರು, ಮೈಲನಹಳ್ಳಿ, ಬೇಗೂರು ಮೂಲಕ ಏರ್ಪೋರ್ಟ್.


ಭಾರೀ ವಾಹನಗಳು ಓಡಾಡೋ ರಸ್ತೆಗಳಲ್ಲೂ ಬದಲಾವಣೆ


ನಾಗರಭಾವಿ ರಿಂಗ್ ರಸ್ತೆ ಚೌಡೇಶ್ವರಿ ಬಸ್‌ ನಿಲ್ದಾಣದಿಂದ ನಾಗರಭಾವಿ ಜಂಕ್ಷನ್ ವರೆಗೆ ಎರಡೂ ಕಡೆಗಳಲ್ಲಿ ಮೈಸೂರು ರಸ್ತೆ ಜ್ಞಾನಭಾರತಿ ಜಂಕ್ಷನ್‌ ನಿಂದ ಜೈರಾಮ್ ದಾಸ್ ಜಂಕ್ಷನ್ ವರೆಗೆ, ಹಳೇ ರಿಂಗ್ ರಸ್ತೆ ಕೆಂಗುಂಟೆ ಜಂಕ್ಷನ್ ನಿಂದ ಶಿರ್ಕೆ ಜಂಕ್ಷನ್ ವರೆಗೆ ಯುನಿವರ್ಸಿಟಿ ಒಳಭಾಗದ ಎಲ್ಲಾ ರಸ್ತೆಗಳು, ಮೈಸೂರು ರಸ್ತೆ ನೈಸ್ ರೋಡ್ ಬಳಿ ನಿಷೇಧಿಸಲಾದ ರಸ್ತೆಗೆ ಪರ್ಯಾಯ ಮಾರ್ಗ ನೀಡಲಾಗಿದೆ.


ಇದನ್ನೂ ಓದಿ:  Bengaluru: ಮೂರು ಬಾರಿ ಜೈಲು ಪಾಲಾದ್ರೂ ಚಾಳಿ ಬಿಡದ ಕಳ್ಳ; ಮತ್ತೆ ಎಟಿಎಂ ದರೋಡೆ ಮಾಡಲು ಹೋಗಿ ಸಿಕ್ಕಿಬಿದ್ದ!


ನೈಸ್​ ರಸ್ತೆ ಮೂಲಕ ಪರ್ಯಾಯ ಮಾರ್ಗ


ಮಾಗಡಿ ಮುಖ್ಯರಸ್ತೆ ಮೂಲಕ ನೈಸ್‌ ರಸ್ತೆ (ಕ್ರ.ಸಂ 1 ರಿಂದ 4) ನೈಸ್ ರಸ್ತೆಯ ಮುಖಾಂತರ ಉತ್ತರಹಳ್ಳಿ ಮುಖ್ಯ ರಸ್ತೆ ಕಡೆಗೆ, ಬೆಂಗಳೂರು ನಗರದ ಕಡೆಗೆ ಅವಕಾಶ, ಹೊಸಕೋಟೆ ಟೋಲ್‌ ಗೇಟ್ ನಿಂದ ಬೂದಿಗೆರೆ ಕ್ರಾಸ್ ಮೂಲಕ ಅವಕಾಶ, ನೈಸ್ ರಸ್ತೆಯ ಮೂಲಕ ತುಮಕೂರು ರಸ್ತೆ ಹಾಗೂ ಮೈಸೂರು ರಸ್ತೆ ಕಡೆಗೆ ಹೋಗಲು ಅವಕಾಶ ಮಾಡಿಕೊಡಲಾಗಿದೆ. ನಿತ್ಯ ಟ್ರಾಫಿಕ್​ ಕಿರಿಕಿಯಿಂದ ಪರದಾಡೋ ಜನರಿಗೆ ಇದೀಗ ಮಾರ್ಗ ಬದಲಾವಣೆ ಕೂಡ ದೊಡ್ಡ ತಲೆನೋವಾಗಲಿದೆ.


ವಾಹನಗಳ ಪಾರ್ಕಿಂಗ್ ನಿಷೇಧಿಸಿರುವ ಸ್ಥಳಗಳು


ಕೊಮ್ಮಘಟ್ಟ ಮುಖ್ಯ ರಸ್ತೆ (ಶಂಕರ್‌ನಾಗ್‌ ಸರ್ಕಲ್ ನಿಂದ ರಾಬಿನ್‌ ಥಿಯೇಟರ್ ವರೆಗೆ) ನಾಗರಬಾವಿ ಸರ್ಕಲ್ ನಿಂದ ಜ್ಞಾನಭಾರತಿ ಆಡೀನ್‌ ಬ್ಲಾಕ್ ಜಂಕ್ಷನ್ ವರೆಗೆ. ವಾಹನಗಳ ಪಾರ್ಕಿಂಗ್ ಸ್ಥಳವನ್ನು ನಿಷೇಧ ಮಾಡಲಾಗಿದೆ.

Published by:Mahmadrafik K
First published: