ದೇಶದ ಜಿಲ್ಲಾಧಿಕಾರಿಗಳ ಜೊತೆ PM Modi ವಿಡಿಯೋ ಸಂವಾದ...! ಯಾದಗಿರಿ ಡಿಸಿ ಜೊತೆ ಕೂಡ ಚರ್ಚೆ

 ದೇಶದಲ್ಲಿಯೇ ಅತಿ ಹಿಂದುಳಿದ ಜಿಲ್ಲೆಯಾದ ಯಾದಗಿರಿ‌ ಜಿಲ್ಲೆಯನ್ನು 2018 ರಲ್ಲಿ ಆಯ್ಕೆ ಮಾಡಲಾಗಿತ್ತು. ಮಹತ್ವಾಕಾಂಕ್ಷೆ ಯೋಜನೆಯಡಿ 2018 ರಿಂದ ಹಲವು ಕ್ಷೇತ್ರದಲ್ಲಿ ಪ್ರಗತಿ ಮಾಡಲಾಗುತ್ತಿದೆ.

ಪ್ರಧಾನಿ ಮೋದಿ ಜೊತೆಗಿನ ಸಂವಾದ

ಪ್ರಧಾನಿ ಮೋದಿ ಜೊತೆಗಿನ ಸಂವಾದ

  • Share this:
ಯಾದಗಿರಿ (ಜ. 22): ದೇಶದ ಐದು ಜಿಲ್ಲೆಯ ಜಿಲ್ಲಾಧಿಕಾರಿ ಜೊತೆ ಇಂದು  ಪ್ರಧಾನಮಂತ್ರಿ ನರೇಂದ್ರ ಮೋದಿ (PM Narendra Modi) ಅವರು ವಿಡಿಯೋ ಸಂವಾದ ನಡೆಸಿದರು. ಎಲ್ಲಾ ರಾಜ್ಯಗಳ ಜಿಲ್ಲಾಧಿಕಾರಿಗಳೊಂದಿಗೆ (PM Video Conference With DCs) ವಿಡಿಯೋ ಕಾನರೆನ್ಸ್ ಮೂಲಕ ಸರ್ಕಾರದ ಪ್ರಮುಖ ಯೋಜನೆಗಳ ಕುರಿತು ಸಮಾಲೋಚನೆ ನಡೆಸಿದರು. ಈ ವೇಳೆ  ಕೃಷಿ,  ಶಿಕ್ಷಣ, ಪೌಷ್ಠಿಕತೆ, ಆರೋಗ್ಯ, ಜಲ ಸಂಪನ್ಮೂಲ , ಕೌಶಲ್ಯಾಭಿವೃದ್ದಿ ವಿವಿಧ ಕ್ಷೇತ್ರದಲ್ಲಿ ಪ್ರಗತಿ ಕುರಿತು ಚರ್ಚೆ ನಡೆಸಿದರು. ಯಾದಗಿರಿ ಜಿಲ್ಲಾಧಿಕಾರಿ ಡಾ. ಆರ್. ರಾಗಾಪ್ರಿಯಾ  ಕೂಡ ಪ್ರಧಾನಮಂತ್ರಿಗಳ ವಿಶೇಷ ಕಾರ್ಯಕ್ರಮದಲ್ಲಿ ಸಂವಾದ ನಡೆಸಿ ತಮ್ಮ ನಿಲುವು ತಿಳಿಸಿದರು. 

ದೇಶದಲ್ಲಿಯೇ ಅತಿ ಹಿಂದುಳಿದ ಜಿಲ್ಲೆಯಾದ ಯಾದಗಿರಿ‌ ಜಿಲ್ಲೆಯನ್ನು 2018 ರಲ್ಲಿ ಆಯ್ಕೆ ಮಾಡಲಾಗಿತ್ತು. ಮಹತ್ವಾಕಾಂಕ್ಷೆ ಯೋಜನೆಯಡಿ 2018 ರಿಂದ ಹಲವು ಕ್ಷೇತ್ರದಲ್ಲಿ ಪ್ರಗತಿ ಮಾಡಲಾಗುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳ ಕಾರ್ಯಕ್ರಮ ಒಟ್ಟುಗೂಡಿಸಿ ಅಭಿವೃದ್ಧಿ ಕಾರ್ಯ ಮಾಡಲಾಗುತ್ತಿದೆ. 49 ಸೂಚ್ಯಂಕಗಳ ಐದು ವಲಯಗಳಲ್ಲಿ ಅಭಿವೃದ್ಧಿ ಕಾರ್ಯ ಮಾಡಲಾಗುತ್ತಿದೆ.

ಯಾದಗಿರಿ ಜಿಲ್ಲೆ ಪ್ರಗತಿಯತ್ತ ಪಿಎಂ ಶ್ಲಾಘನೆ...!
ವಿವಿಧ ಕ್ಷೇತ್ರದಲ್ಲಿ ಯಾದಗಿರಿ ಜಿಲ್ಲೆಯು ಬದಲಾವಣೆ  ಆಗುತ್ತಿರುವದು ಪ್ರಗತಿಯತ್ತ ಸಾಗುತ್ತಿರುವ ಕಾರ್ಯಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಹತ್ವಾಕಾಂಕ್ಷೆ ಯೋಜನೆಯಡಿ ಇನ್ನಷ್ಟು ರೀತಿ ಅಭಿವೃದ್ಧಿ ಮಾಡಬೇಕಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು. ಈ ವೇಳೆ ಜಿಲ್ಲಾಧಿಕಾರಿಯವರು ಹಲವು ಕ್ಷೇತ್ರದಲ್ಲಿ ಸಾಧಿಸಿದ ಪ್ರಗತಿಯ ಯಶೋಗಾಥೆ ಕುರಿತು ಪ್ರಧಾನಿಗೆ ತಿಳಿಸಿದರು.

ಜಿಲ್ಲೆಯ ಸುಧಾರಣೆಗೆ ಕಂಕಣ ಬದ್ಧ

ಸಂವಾದ ಬಳಿಕ ಮಾತನಾಡಿದ ಅವರು, ಇನ್ನೂ ಮುಂದೆ ಎಲ್ಲಾ ಇಲಾಖೆಯ ಅಧಿಕಾರಿಗಳ ಸಹಕಾರದಿಂದ ಅಭಿವೃದ್ಧಿ ಕಾರ್ಯ ಮಾಡಲಾಗುತ್ತದೆ. ಯಾದಗಿರಿ ಜಿಲ್ಲೆಯ ಶಾಲೆಯಲ್ಲಿ ಸಾಕಷ್ಟು ಬದಲಾವಣೆ ತರಲಾಗಿದೆ. ಜಿಲ್ಲೆಯ ಸುರಪುರ, ಶಹಾಪುರ,ವಡಗೇರಾ ಸೇರಿ ಜಿಲ್ಲೆಯ 123 ಶಾಲೆಗಳಲ್ಲಿ ಸ್ಮಾರ್ಟ್ ಕ್ಲಾಸ್ ನಡೆಸುವ ಮೂಲಕ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡಿ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಅನುಕೂಲ ಮಾಡಲಾಗಿದೆ. ಈ ನಿಟ್ಟಿನಲ್ಲಿ ಶಿಕ್ಷಣ ಮಟ್ಟದಲ್ಲಿ ಯಾದಗಿರಿ ಜಿಲ್ಲೆಯಲ್ಲಿ ಸಾಕಷ್ಟು ಪ್ರಗತಿ ಕಾಣುತ್ತಿದೆ. ಶಿಕ್ಷಕರು ಶ್ರಮ ಕೂಡ ಅತಿ ಮುಖ್ಯವಾಗಿದೆ.ವಿದ್ಯಾರ್ಥಿಗಳಿಗೆ ಮನದಟ್ಟಾಗುವ ರೀತಿ ಪಾಠ ಮಾಡಿ ಬದಲಾವಣೆ ತರಲಾಗುತ್ತಿದೆ.

ಇದನ್ನು ಓದಿ: ಬೇಲೂರು ತಾಲೂಕಿನಲ್ಲಿ ಕೊನೆಗೂ ಎದ್ದುನಿಂತ ಕಲ್ಲಿನ ಆನೆ

ಅಂಗನವಾಡಿ , ಆಶಾ ಕಾರ್ಯಕರ್ತರ ಮೂಲಕ ಅಂಗನವಾಡಿಗಳಲ್ಲಿ ಸುಧಾರಣೆ ತರಲಾಗುತ್ತದೆ. ಹಲವು ಬದಲಾವಣೆ ಮೂಲಕ ಅಭಿವೃದ್ಧಿ ಕಾರ್ಯ ಮಾಡಲಾಗುತ್ತದೆ. ಯಾದಗಿರಿ ಜಿಲ್ಲೆಯ ಅಭಿವೃದ್ಧಿಗಾಗಿ ಎಲ್ಲಾ ಇಲಾಖೆಯ ಅಧಿಕಾರಿಗಳ ಸಹಕಾರ ಅತಿ ಮುಖ್ಯವಾಗಿದೆ ಎಂದರು

ಬಡ ಕುಟುಂಬಗಳಿಗೆ ಸೌಕರ್ಯ ಒದಗಿಸಲು ಸೂಚನೆ

ಇನ್ನು ಸಭೆಯಲ್ಲಿ ಮಾತನಾಡಿದ ಪ್ರಧಾನಿಗಳು, ದೇಶದಲ್ಲಿ 4 ವರ್ಷಗಳಲ್ಲಿ ಜನಧನ್ ಖಾತೆಗಳ ಪ್ರಮಾಣವನ್ನು 4ರಿಂದ 5 ಪಟ್ಟು ಹೆಚ್ಚಿಸಲಾಗಿದೆ. ಪ್ರತಿಯೊಂದು ಕುಟುಂಬವೂ ಶೌಚಾಲಯ, ವಿದ್ಯುತ್ ಸಂಪರ್ಕ ಪಡೆದಿದೆ. ವಿದ್ಯುತ್ ಎಂಬುದು ಮನೆಗಳಿಗೆ ಅಗತ್ಯವಾದ ಮೂಲಸೌಕರ್ಯವಷ್ಟೇ ಅಲ್ಲ, ಅದು ಜನ ಜೀವನದ ಪರಿವರ್ತನೆಯ ಶಕ್ತಿ. ಅದರಲ್ಲೂ ಬಡಕುಟುಂಬಗಳಿಗೆ ಇದರ ಅಗತ್ಯ ಹೆಚ್ಚಾಗಿದೆ ಎಂದು ತಿಳಿಸಿದರು.

ಇದನ್ನು ಓದಿ: ಮಾಜಿ ಪ್ರಧಾನಿ ದೇವೇಗೌಡರಿಗೆ ಕೊರೊನಾ; ಆಸ್ಪತ್ರೆಗೆ ದಾಖಲು

ಜಿಲ್ಲಾಧಿಕಾರಿಗಳು ಹಲವಾರು ವಿಷಯಗಳನ್ನು ಮನದಲ್ಲಿಟ್ಟುಕೊಳ್ಳಬೇಕು. ನಿಮ್ಮ ಸೇವೆಯ ಮೊದಲ ದಿನದ ಅಭಿಲಾಷೆಗಳೇ ಮುಂದುವರೆಯಬೇಕು. ಹಾಗಾಗಿ ಹೊಸದಾಗಿ ಕೆಲಸ ಆರಂಭಿಸುತ್ತಿದ್ದೇವೆ ಎಂಬ ಸಂಕಲ್ಪದೊಂದಿಗೆ ಸಮರ್ಪಣಾ ಮನೋಭಾವದಿಂದ ಕೆಲಸ ಮಾಡಿ ಎಂದು ಪ್ರಧಾನಿ ಕರೆ ನೀಡಿದರು.

ವಿವಿಧ ಇಲಾಖೆಗಳು 142 ಜಿಲ್ಲೆಗಳ ಪಟ್ಟಿ ಸಿದ್ಧಪಡಿಸಿವೆ. ಇವು ಅಭಿವೃದ್ಧಿಯಲ್ಲಿ ಹಿಂದುಳಿದಿದ್ದು, ಅವುಗಳ ಸಮಗ್ರ ಸುಧಾರಣೆಗೆ ಸಂಘಟನಾತ್ಮಕವಾಗಿ ಕೆಲಸ ಮಾಡಬೇಕು ಎಂದು ಅವರು ತಿಳಿಸಿದರು.
Published by:Seema R
First published: