• Home
 • »
 • News
 • »
 • state
 • »
 • PM Modi Bangalore Visit : ಕರುನಾಡಿನತ್ತ ಪ್ರಧಾನಿ ಮೋದಿ, ಹೀಗಿದೆ ಕಾರ್ಯಕ್ರಮದ ಪಟ್ಟಿ!

PM Modi Bangalore Visit : ಕರುನಾಡಿನತ್ತ ಪ್ರಧಾನಿ ಮೋದಿ, ಹೀಗಿದೆ ಕಾರ್ಯಕ್ರಮದ ಪಟ್ಟಿ!

ಪ್ರಧಾನಿ ನರೇಂದ್ರ ,ಮೋದಿ

ಪ್ರಧಾನಿ ನರೇಂದ್ರ ,ಮೋದಿ

Modi In Bengaluru: ಬೆಳಗ್ಗೆ 9 ಗಂಟೆಗೆ ದೆಹಲಿಯಿಂದ ರಾಜ್ಯಕ್ಕೆ ಆಗಮಿಸಲಿರುವ ಪ್ರಧಾನಿ ಮೋದಿ ಒಂದು ಸಾರ್ವಜನಿಕ ಸಮಾವೇಶ ಸೇರಿದಂತೆ ಒಟ್ಟು ಐದು ಅಧಿಕೃತ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಬಳಿಕ ಮಧ್ಯಾಹ್ನ ತಮಿಳುನಾಡಿನ ಮಧುರೈಗೆ ತೆರಳಿದ್ದಾರೆ. ಕಳೆದ ಆರು ತಿಂಗಳಲ್ಲಿ ಇದು ಅವರ ಮೂರನೇ ಭೇಟಿ ಎಂಬುವುದು ಉಲ್ಲೇಖನೀಯ.

ಮುಂದೆ ಓದಿ ...
 • News18 Kannada
 • Last Updated :
 • Bangalore [Bangalore], India
 • Share this:

  ಬೆಂಗಳೂರು(ನ.11): ಪ್ರಧಾನ ಮಂತ್ರಿ ನರೇಂದ್ರ ಮೋದಿ (Prime Minister Narendra Modi) ಇಂದು ಶುಕ್ರವಾರ ರಾಜಧಾನಿ ಬೆಂಗಳೂರಿಗೆ (Bengaluru) ಆಗಮಿಸಲಿದ್ದಾರೆ. ಇಲ್ಲಿ ಹಲವಾರು ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿರುವ ಅವರು ಪ್ರಮುಖವಾಗಿ ವಿಮಾನ ನಿಲ್ದಾಣ ಉದ್ಘಾಟನೆ ಹಾಗೂ ಕೆಂಪೇಗೌಡ ಪ್ರತಿಮೆ (Statue Of Kempegowda) ಅನಾವರಣಗೊಳಿಸಲಿದ್ದಾರೆ. ಬೆಳಗ್ಗೆ 9 ಗಂಟೆಗೆ ದೆಹಲಿಯಿಂದ ರಾಜ್ಯಕ್ಕೆ ಆಗಮಿಸಲಿರುವ ಪ್ರಧಾನಿ ಮೋದಿ ಒಂದು ಸಾರ್ವಜನಿಕ ಸಮಾವೇಶ ಸೇರಿದಂತೆ ಒಟ್ಟು ಐದು ಅಧಿಕೃತ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಬಳಿಕ ಮಧ್ಯಾಹ್ನ ತಮಿಳುನಾಡಿನ ಮಧುರೈಗೆ ತೆರಳಿದ್ದಾರೆ. ಕಳೆದ ಆರು ತಿಂಗಳಲ್ಲಿ ಇದು ಅವರ ಮೂರನೇ ಭೇಟಿ ಎಂಬುವುದು ಉಲ್ಲೇಖನೀಯ.


  ಇದನ್ನೂ ಓದಿ: Bengaluru Traffic: ಬೆಂಗಳೂರಿಗೆ ಮೋದಿ, ಈ ರಸ್ತೆಗಳು ಬಂದ್, ಪರ್ಯಾಯ ಮಾರ್ಗ ಹೀಗಿದೆ


  ಚುನಾವಣಾ ಹೊಸ್ತಿಲಲ್ಲಿ ಮಹತ್ವದ ಭೇಟಿ


  ಚುನಾವಣಾ ಹೊಸ್ತಿಲಲ್ಲಿರುವ ಕರ್ನಾಟಕಕ್ಕೆ ಪ್ರಧಾನಿ ಮೋದಿ ನೀಡುತ್ತಿರುವ ಭೇಟಿ ಬಿಜೆರಪಿ ಪಾಳಯದಲ್ಲಿ ಹೊಸ ಶಕ್ತಿ ತುಂಬಲಿದೆ ಎನ್ನಲಾಗುತ್ತಿದೆ. ಅದರಲ್ಲೂ ಪ್ರಮುಖವಾಗಿ ನಾಡಪ್ರಭು ಕೆಂಪೇಗೌಡ ಅವರ ಬೃಹತ್‌ ಕಂಚಿನ ಪ್ರತಿಮೆ ಅನಾವರಣ ಒಕ್ಕಲಿಗ ಸಮುದಾಯದ ಮತ ಗಳಿಸುವಲ್ಲೂ ಸಹಕಾರಿಯಾಗಬಹುದೆಂಬುವುದು ತಜ್ಱರ ಅಭಿಪ್ರಾಯವಾಗಿದೆ. ಈ ನಿಟ್ಟಿನಲ್ಲಿ ಸದ್ಯ ರಾಜ್ಯ ಬಿಜೆಪಿ ಪ್ರಧಾನ ಮಂತ್ರಿ ಮೋದಿಯನ್ನು ಬರಮಾಡಿಕೊಳ್ಳಲು ಭರರದ ಸಿದ್ಧರೆ ನಡೆಸಿದೆ. ಅಲ್ಲದೇ ಮೋದಿ ಆಗಮನ ಹಿನ್ನೆಲೆ ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆಯುಂಟಾಗಲಿದ್ದು, ಮುಂಜಾಗೃತಾ ಕ್ರಮವಾಗಿ ಸಂಚಾರಿ ಪೊಲೀಸರು ಬದಲಿ ಮಾರ್ಗವನ್ನೂ ಸೂಚಿಸಿದ್ದಾರೆ.


  ಪ್ರಧಾನಿ ಮೋದಿಯ ಇಂದಿನ ಕಾರ್ಯಕ್ರಮಗಳೇನು?


  * ಬೆಳಗ್ಗೆ 6.20 - ದೆಹಲಿಯಿಂದ ವಿಶೇಷ ವಿಮಾನದ ಮೂಲಕ ಹೊರಡಲಿರುವ ಮೋದಿ
  * ಬೆಳಗ್ಗೆ 9:00 – ಎಚ್‍ಎಎಲ್‍ ವಿಮಾನ ನಿಲ್ದಾಣಕ್ಕೆ ಆಗಮನ
  * ಬೆಳಗ್ಗೆ 9:30 – ಮೇಖ್ರಿ ವೃತ್ತದ ಬಳಿಯ ಹೆಲಿಪ್ಯಾಡ್‍ಗೆ
  * ಬೆಳಗ್ಗೆ 9:45 – ವಿಧಾನಸೌಧದ ಶಾಸಕರ ಭವನದ ಪ್ರವೇಶ ದ್ವಾರದಲ್ಲಿರುವ ಕನಕದಾಸ, ವಾಲ್ಮೀಕಿ ಪ್ರತಿಮೆಗೆ ಪುಷ್ಪಾರ್ಚನೆ
  * ಬೆಳಗ್ಗೆ 10:20 – ಮೆಜೆಸ್ಟಿಕ್‍ನ ಸೆಂಟ್ರಲ್ ರೈಲ್ವೆ ನಿಲ್ದಾಣಕ್ಕೆ ಆಗಮನ
  * ಬೆಳಗ್ಗೆ 10:40 – ವಂದೇಭಾರತ್ ರೈಲಿಗೆ ಹಸಿರು ನಿಶಾನೆ
  * ಬೆಳಗ್ಗೆ 10:45 – ಕಾಶಿ ದರ್ಶನ ರೈಲಿಗೆ ಹಸಿರು ನಿಶಾನೆ
  * ಬೆಳಗ್ಗೆ 11:20 – ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆಗಮನ
  * ಬೆಳಗ್ಗೆ 11:30 – ವಿಮಾನ ನಿಲ್ದಾಣದಲ್ಲಿರುವ ಟರ್ಮಿನಲ್-2 ಉದ್ಘಾಟನೆ
  * ಮಧ್ಯಾಹ್ನ 12:00 – ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆ ಲೋಕಾರ್ಪಣೆ (20 ನಿಮಿಷಗಳ ಕಾರ್ಯಕ್ರಮದಲ್ಲಿ ಮೋದಿ ಭಾಗಿ)
  * ಮಧ್ಯಾಹ್ನ 12:30 – ಸಾರ್ವಜನಿಕ ಸಭೆ
  * ಮಧ್ಯಾಹ್ನ 1.45- ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದ ಮೂಲಕ ತಮಿಳುನಾಡಿನ ಮಧುರೈಗೆ ಪ್ರಯಾಣ


  ಇದನ್ನೂ ಓದಿ: Bengaluru To Pune: 50 ಸಾವಿರ ಕೋಟಿಯ ಬೆಂಗಳೂರು-ಪುಣೆ ಸೂಪರ್ ಎಕ್ಸ್​ಪ್ರೆಸ್ ಹೈವೆ; ಈ ಜಿಲ್ಲೆಗಳಿಗೂ ಅನುಕೂಲ


  ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಕೆಂಪೇಗೌಡರ ಪ್ರತಿಮೆ ಅನಾವರಣಗೊಳಿಸಲಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಬಳಿಕ ಸಾರ್ವಜನಿಕ ಸಮಾವೇಶ ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಸಮಾವೇಶ ಯಶಸ್ವಿಗೊಳಿಸಲು ರಾಜ್ಯ ಬಿಜೆಪಿ ಸಕಲ ಸಿದ್ಧತೆ ನಡೆಸಿದೆ. ಈ ಸಮಾವೇಶದಲ್ಲಿ ಸುಮಾರು ಎರಡು ಲಕ್ಷಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆ ಇದೆ. ದೂರದಿಂದ ಆಗಮಿಸುವ ವಾಹನಗಳ ಪಾರ್ಕಿಂಗ್‌ ವ್ಯವಸ್ಥೆಗೂ ಸಿದ್ಧತೆ ನಡೆಸಿದೆ. ಅಲ್ಲದೇ ಸುಮಾರು ನಾಲ್ಕು ಸಾವಿರಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.

  Published by:Precilla Olivia Dias
  First published: