• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • PM Modi: ಮೋದಿ ಸ್ವಾಗತಕ್ಕೆ ಮದುವಣಗಿತ್ತಿಯಂತೆ ಸಜ್ಜುಗೊಂಡ ವೈಟ್​ಫೀಲ್ಡ್​​ ಮೆಟ್ರೋ ನಿಲ್ದಾಣ; ಭಾರೀ ಪೊಲೀಸ್‌ ಭದ್ರತೆ!

PM Modi: ಮೋದಿ ಸ್ವಾಗತಕ್ಕೆ ಮದುವಣಗಿತ್ತಿಯಂತೆ ಸಜ್ಜುಗೊಂಡ ವೈಟ್​ಫೀಲ್ಡ್​​ ಮೆಟ್ರೋ ನಿಲ್ದಾಣ; ಭಾರೀ ಪೊಲೀಸ್‌ ಭದ್ರತೆ!

ನಮ್ಮ ಮೆಟ್ರೋ ಉದ್ಘಾಟನೆಗೆ ಸಿದ್ಧತೆ

ನಮ್ಮ ಮೆಟ್ರೋ ಉದ್ಘಾಟನೆಗೆ ಸಿದ್ಧತೆ

ಪ್ರಧಾನಿ ಮೋದಿ ಮೆಟ್ರೋ ರೈಲು ಮಾರ್ಗ ಉದ್ಘಾಟನೆ ಮಾಡಲು ಆಗಮಿಸುತ್ತಿರುವುದರಿಂದ ಖುದ್ದು ಪೊಲೀಸ್ ಕಮಿಷನರ್ ಪ್ರತಾಪ್ ರೆಡ್ಡಿ ಭದ್ರತೆಯ ಉಸ್ತುವಾರಿ ವಹಿಸಿದ್ದಾರೆ.

  • News18 Kannada
  • 3-MIN READ
  • Last Updated :
  • Bangalore [Bangalore], India
  • Share this:

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ (PM Modi) ಮತ್ತೆ ಬೆಂಗಳೂರಿಗೆ (Bengaluru) ಆಗಮಿಸಲಿದ್ದು, ವೈಟ್ ಫೀಲ್ಡ್ (White Field) ಹಾಗೂ ಕೆ.ಆರ್ ಪುರ (KR Puram) ನಡುವಿನ ಮೆಟ್ರೋ ರೈಲು (Metro) ಸಂಚಾರಕ್ಕೆ ಚಾಲನೆ ನೀಡಲಿದ್ದಾರೆ. ಇದರೊಂದಿಗೆ ಬಹುನೀರೀಕ್ಷಿತ ವೈಟ್‌ಫೀಲ್ಡ್- ಕೆ.ಆರ್.ಪುರ ಮೆಟ್ರೋ ಸಂಚಾರಕ್ಕೆ ಕೌಂಟ್‌ಡೌನ್ ಶುರುವಾಗಿದೆ. ಪಿಎಂ ಮೋದಿ ನೇರಳೆ ಮಾರ್ಗ (Purple Route Metro) ಉದ್ಘಾಟಿಸಲಿದ್ದಾರೆ. ಅತ್ತ ವೈಟ್‌ಫೀಲ್ಡ್‌ನಲ್ಲಿ ಕಾಮಗಾರಿ ಸಂಪೂರ್ಣವಾಗಿದೆ. ಆದರೆ ಅಲ್ಲಿಂದ ಕೆ.ಆರ್.ಪುರಗೆ ಹೋಗೋಕೆ ಮಾತ್ರ ಕೊಂಚ ಕಷ್ಟವಾಗಲಿದೆ. ಏಕೆಂದರೆ ಕೆ.ಆರ್.ಪುರದ ಮೆಟ್ರೋ ಸ್ಟೇಷನ್ ಇನ್ನೂ ಕೂಡಾ ಸಂಪೂರ್ಣವಾಗಿ ಸಿದ್ಧವಾಗಿಲ್ಲ. ಮೋದಿ ಆಗಮನದ ಹಿನ್ನೆಲೆಯಲ್ಲಿ ಮಾರ್ಚ್​​​ 24ರ ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 2:30 ರವರೆಗೆ ಸಾರ್ವಜನಿಕ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ.


ವೈಟ್​ಫೀಲ್ಡ್ ಮಾರ್ಗ ಉದ್ಘಾಟನೆಗೆ ಸಕಲ ಸಿದ್ಧತೆ


ಸಿಲಿಕಾನ್ ಸಿಟಿಯ ಐಟಿ ಹಬ್ ಅಂತಲೇ ಕರೆಯಲ್ಪಡುವ ವೈಟ್ ಫೀಲ್ಡ್​​ನಲ್ಲಿ ಮಾರ್ಚ್​​ 25ರಿಂದ ಮೆಟ್ರೋ ಸಂಚಾರ ಶುರುವಾಗಲಿದೆ. ಪ್ರಧಾನಿ ಮೋದಿ ವೈಟ್​ಫೀಲ್ಡ್ ಹಾಗೂ ಕೆ ಆರ್ ಪುರ ನಡುವಿನ ನೇರಳೆ ಮಾರ್ಗವನ್ನ ಉದ್ಘಾಟನೆ ಮಾಡಲಿದ್ದಾರೆ. ವೈಟ್​ಫೀಲ್ಡ್ ಮಾರ್ಗ ಉದ್ಘಾಟನೆಗೆ ಈಗಾಗಲೇ ಸಕಲ ಸಿದ್ಧತೆ ಮಾಡಲಾಗಿದೆ. ಮೋದಿ ಆಗಮನ ಹಿನ್ನೆಲೆ ಎಲ್ಲೆಲ್ಲೂ ಸರ್ಪಗಾವಲನ್ನು ನಿಯೋಜಿಸಲಾಗಿದೆ. ಅಲ್ಲದೆ ಕೆಲ ರಸ್ತೆಗಳಲ್ಲಿ ಸಂಚಾರವನ್ನೂ ನಿರ್ಬಂಧಿಸಿರುವುದಾಗಿ ಪೊಲೀಸರು ಈಗಾಗಲೇ ಸೂಚಿಸಿದ್ದಾರೆ.


ನಮ್ಮ ಮೆಟ್ರೋ ಉದ್ಘಾಟನೆಗೆ ಸಿದ್ಧತೆ


ಇದನ್ನೂ ಓದಿ: Reservation: ಚುನಾವಣೆ ಹೊಸ್ತಿಲಲ್ಲಿ 'ಮೀಸಲಾತಿ' ಮಿಠಾಯಿ! ಲಿಂಗಾಯತರಿಗೆ ಸಿಕ್ತು ಶೇಕಡಾ 7ರಷ್ಟು ರಿಸರ್ವೇಶನ್!


1,500 ಕ್ಕೂ ಹೆಚ್ಚು ಪೊಲೀಸರ ನಿಯೋಜನೆ


ಪ್ರಧಾನಿ ಮೋದಿ ಮೆಟ್ರೋ ರೈಲು ಮಾರ್ಗ ಉದ್ಘಾಟನೆ ಮಾಡಲು ಆಗಮಿಸುತ್ತಿರುವುದರಿಂದ ಖುದ್ದು ಪೊಲೀಸ್ ಕಮಿಷನರ್ ಪ್ರತಾಪ್ ರೆಡ್ಡಿ ಭದ್ರತೆಯ ಉಸ್ತುವಾರಿ ವಹಿಸಿದ್ದಾರೆ. ಓರ್ವ ಐಜಿಪಿ, ನಾಲ್ವರು ಡಿಸಿಪಿಗಳು ಹಾಗೂ ಹತ್ತಕ್ಕೂ ಹೆಚ್ಚು ಇನ್ಸ್‌ಪೆಕ್ಟರ್ ಸೇರಿ ಸುಮಾರು 1,500 ಕ್ಕೂ ಹೆಚ್ಚು ಪೊಲೀಸರನ್ನ ಬಂದೋಬಸ್ತ್ ಗೆ ನಿಯೋಜಿಸಲಾಗಿದೆ.


ಕೆ.ಆರ್.ಪುರಂ ಮೆಟ್ರೋ ನಿಲ್ದಾಣದಲ್ಲಿ ಕಾಮಗಾರಿ ಅಪೂರ್ಣ!


ಪ್ರಧಾನಿ ಮೋದಿ ಉದ್ಘಾಟಿಸಲಿರುವ ವೈಟ್​ಫೀಲ್ಡ್ ಮೆಟ್ರೋ ಮಾರ್ಗ ಐಟಿ ಬಿಟಿಯಲ್ಲಿ ಕೆಲಸ ಮಾಡುತ್ತಿರುವವರಿಗೆ ಹೆಚ್ಚಿನ ಲಾಭವಾಗಲಿದೆ. ಅಲ್ಲದೆ ಇಲ್ಲಿ ಟ್ರಾಫಿಕ್ ಕೂಡ ಕೊಂಚ ಮಟ್ಟಿಗೆ ಕಡಿಮೆ ಆಗಲಿದೆ. ಒಂದು ಕಡೆ ಮೆಟ್ರೋ ಮಾರ್ಗ ಉದ್ಘಾಟನೆ ಆಗುತ್ತಿದೆ. ಆದರೆ ಈ ಮೆಟ್ರೋ ಸ್ಟೇಷನ್ ಕಾಮಗಾರಿ ಮಾತ್ರ ಇನ್ನೂ ಪೂರ್ಣವೇ ಆಗಿಲ್ಲ. ವೈಟ್​​ಫೀಲ್ಡ್​​ನಲ್ಲಿ ಕಾಮಗಾರಿ ಪೂರ್ಣವಾಗಿದ್ದರೆ, ಇತ್ತ ಕೆ.ಆರ್.ಪುರಂ ನಿಲ್ದಾಣ ಇನ್ನೂ ಪೂರ್ಣವೇ ಆಗಿಲ್ಲ.




ಮೆಟ್ರೋ ಓಡಾಡಕ್ಕೆ ಇನ್ನೂ ಸಮಯ ಬೇಕು


ವೈಟ್‌ಫೀಲ್ಡ್‌ನಿಂದ ಕೆ.ಆರ್.ಪುರಗೆ 13.75 ಕಿ.ಮೀ ಇದೆ. ನೇರಳೆ ಮಾರ್ಗದ ಕೊನೆಯ ಸ್ಟೇಷನ್ ಕೆ.ಆರ್.ಪುರ ಆಗಿದೆ. ಆದರೆ ಇನ್ನೂ ಪಿಲ್ಲರ್‌ಗಳು, ಸೀಮೆಂಟ್ ಕಾರ್ಯ, ಸ್ಟೇಷನ್‌ಗೆ ಕಂಬಿಗಳು ಅಳವಡಿಸುವುದು ಸೇರಿದಂತೆ ಅನೇಕ ಕಾರ್ಯಗಳು ಬಾಕಿ ಇವೆ. ಇದರ ಜೊತೆಗೆ ಕೆ.ಆರ್.ಪುರದಿಂದ ಬೈಯ್ಯಪ್ಪನಹಳ್ಳಿಗೆ ಇನ್ನೂ ಕನೆಕ್ಟಿವಿಟಿಯಾಗಿಲ್ಲ.ಈ ಕನೆಕ್ಟಿವಿಟಿಯಾಗೋವರೆಗೂ ಮುಂದುವರೆದ ನಿಲ್ದಾಣಗಳಿಗೆ ಹೋಗಲು ಸಾಧ್ಯವಾಗೋದಿಲ್ಲ.


ಇದನ್ನೂ ಓದಿ: Karnataka Election: ರಾಜ್ಯದಲ್ಲಿ ಸದ್ದು ಮಾಡ್ತಿದೆ ಝಣ-ಝಣ ಕಾಂಚಾಣ; ಕಾರ್​ನಲ್ಲಿತ್ತು ₹ 67 ಲಕ್ಷ ಹಣ, 16 ಕೆಜಿ ಬೆಳ್ಳಿ!

top videos


    ರೈಲು ಸಂಚಾರ ಶುರುವಾದರೂ ಕೆ.ಆರ್‌.ಪುರಂಗೆ ಮೆಟ್ರೋ ಓಡಾಡಕ್ಕೆ ಇನ್ನೂ ಸಮಯ ತೆಗೆದುಕೊಳ್ಳಲಿದೆ. ಮೋದಿ ಬರುತ್ತಾರೆ ಅಂತ ಆತುರದಲ್ಲಿ ಕೆಲಸ ಮಾಡಿಸಲಾಗುತ್ತಿದೆ. ಹೀಗಾಗಿ ಆತುರದಲ್ಲಿ ಆಗುತ್ತಿರುವ ಕೆಲಸ ನಿಜಕ್ಕೂ ಸರಿ ಇದಿಯಾ ಅನ್ನೋ ಡೌಟ್ ಶುರುವಾಗುತ್ತಿದೆ.

    First published: