ಬೆಂಗಳೂರು: ರಾಜ್ಯದಲ್ಲಿ ಮೂರು ಬಾರಿ ಬಿಜೆಪಿ (BJP) ಅಧಿಕಾರಕ್ಕೆ ಬಂದರೂ ಇದುವರೆಗೂ ಚುನಾವಣೆಯಲ್ಲಿ (Elections) ಸರಳ ಬಹುಮತಗಳಿಸಿಲ್ಲ. ಸರ್ಕಸ್ ಮಾಡಿ ಸರ್ಕಾರ ರಚನೆ ಮಾಡಿದ ಮೇಲೆ ಈಗ ಪ್ರಯೋಗದ ಪರೀಕ್ಷೆಯನ್ನು ಎದುರಿಸಬೇಕಿದೆ. ಇಂತಹದ್ದೊಂದು ನಿರ್ಣಾಯಕ ಘಟ್ಟದಲ್ಲಿ ಇಂದು ಪ್ರಧಾನಿ ಮೋದಿ (PM Modi) ಬಹುಮತದ ಬಿಜೆಪಿ (BJP) ಸರ್ಕಾರಕ್ಕಾಗಿ ಮತಯಾಚನೆ ಮಾಡಿದ್ದಾರೆ. ಹುಮ್ನಾಬಾದ್, ವಿಜಯಪುರ, ಕುಡಚಿಯಲ್ಲಿ ಇಂದು ಮೋದಿ ಪ್ರಚಾರ ನಡೆಸಿದ್ದು, ಬೆಂಗಳೂರು (Bengaluru) ಉತ್ತರ ಕ್ಷೇತ್ರಗಳಲ್ಲಿ ಭರ್ಜರಿ ರೋಡ್ ಶೋ ನಡೆಸಿದ್ದಾರೆ. ರೋಡ್ ಶೋ ಬಳಿಕ ರಾಜಭವನಕ್ಕೆ (Raj Bhavana) ತೆರಳಿದ್ದಾರೆ. ಇದಕ್ಕೂ ಮುನ್ನ ಬಿಜೆಪಿ ಮಾಧ್ಯಮ ತಂಡದೊಂದಿಗೆ ಸುಮಾರು 10 ನಿಮಿಷಗಳ ಕಾಲ ಮೋದಿ ಚರ್ಚೆ ನಡೆಸಿದ್ದರು, ಮಾದಾವರ ಹೆಲಿಪ್ಯಾಡ್ ಸುಮಾರು 25 ಜನರ ತಂಡದೊಂದಿಗೆ ಮೋದಿ ಚರ್ಚೆ ನಡೆಸಿದ್ದಾರೆ.
ರಾಜ್ಯ ಸರ್ಕಾರದ ಯೋಜನೆಗಳು ಫಲಾನುಭವಿಗಳಿಗೆ ತಲುಪಿದೆಯಾ?
ಕರ್ನಾಟಕ ಚುನಾವಣೆಯ ಹಿನ್ನೆಲೆಯಲ್ಲಿ ಬಹುಮತದೊಂದಿಗೆ ಅಧಿಕಾರಕ್ಕೆ ಬರಲು ಉದ್ದೇಶಿಸಿರುವ ಬಿಜೆಪಿ ಮಾಧ್ಯಮ ತಂಡದೊಂದಿಗೆ ಭರ್ಜರಿ ಪ್ರಚಾರ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ತಂಡದ ಸದಸ್ಯರೊಂದಿಗೆ ಮಾತುಕತೆ ನಡೆಸಿದ ಮೋದಿ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳು ಫಲಾನುಭವಿಗಳಿಗೆ ತಲುಪಿದೆಯಾ? ಡಬಲ್ ಇಂಜಿನ್ ಸರ್ಕಾರಗಳ ಬಗ್ಗೆ ಜನರು ಏನಂತಾರೆ? ನನ್ನ ಬಗ್ಗೆ ಕರುನಾಡಿನ ಜನರು ಏನಂತಾರೆ? ಖರ್ಗೆ ವಿಷ ಸರ್ಪದ ಮಾತಿಗೆ ಜನರು ಏನಂತಿದ್ದಾರೆ? ಎಂದು ಹಲವು ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.
ಕಾಂಗ್ರೆಸ್ನ ಗ್ಯಾರಂಟಿ ಯೋಜನೆಗಳ ಬಗ್ಗೆ ಜನರು ಏನು ಮಾತಾಡ್ತಿದ್ದಾರೆ?
ಪ್ರಮುಖವಾಗಿ ಈ ಬಾರಿ ಕಾಂಗ್ರೆಸ್ ಗ್ಯಾರೆಂಟಿ ಯೋಜನೆಗಳೊಂದಿಗೆ ಮತದಾರರನ್ನು ಸೆಳೆಯಲು ಮುಂದಾಗಿದ್ದು, ಕಾಂಗ್ರೆಸ್ನ ಗ್ಯಾರಂಟಿ ಯೋಜನೆಗಳ ಬಗ್ಗೆ ಜನರು ಏನು ಮಾತಾಡ್ತಿದ್ದಾರೆ? ರಾಜ್ಯದ ಆರು ಕಡೆಗಳಲ್ಲಿ ಮಾಧ್ಯಮ ಕೇಂದ್ರದ ನಿರ್ವಹಣೆ ಹೇಗಿದೆ ಅಂತಲೂ ಪ್ರಶ್ನಿಸಿ ಮಾಹಿತಿ ಪಡೆದುಕೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ