Siddaramaiah: ಮೋದಿ 7 ವರ್ಷದ ಸಾಧನೆ ಶೂನ್ಯ, ಬಿಜೆಪಿ ಖಾಲಿ ಕೊಡ ಹೊತ್ತು ಸಂಭ್ರಮಿಸುತ್ತಿದೆ; ಸಿದ್ದರಾಮಯ್ಯ ವಾಗ್ದಾಳಿ

ಕಳೆದ ವಾರ ಸಿದ್ದರಾಮಯ್ಯ ಅವರು ರಾಹುಲ್ ಗಾಂಧಿಗೆ ಕರೆ ಮಾಡಿದ್ದರು. ಆದರೆ, ಕೋವಿಡ್ ಹಿನ್ನೆಲೆ ಕರೆ ಸ್ವೀಕರಿಸಿರಲಿಲ್ಲ. ಹಾಗಾಗಿ ಇಂದು ಸ್ವತಃ ಸಿದ್ದರಾಮಯ್ಯಗೆ ರಾಹುಲ್ ಗಾಂಧಿ ಕರೆ ಮಾಡಿ ಮಾತನಾಡಿದ್ದರು. ದೂರವಾಣಿ ಮಾತುಕತೆ ವೇಳೆ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರಾದ ಸೋನಿಯಾ ಗಾಂಧಿ ಅವರ ಆರೋಗ್ಯವನ್ನು ಸಹ ವಿಚಾರಿಸಿದ್ದಾರೆ.

ಸಿದ್ದರಾಮಯ್ಯ

ಸಿದ್ದರಾಮಯ್ಯ

 • Share this:
  ಬೆಂಗಳೂರು: ನಾನು ಕಳೆದ ಎರಡು, ಮೂರು ದಿನಗಳಿಂದ ಚಾನೆಲ್ ನೋಡ್ತಿದ್ದೇನೆ. ಪೇಪರ್ ಕೂಡ ನೋಡ್ತಿದ್ದೇನೆ. ಪ್ರಧಾನಿ ಎರಡನೇ ಭಾರಿ ಅಧಿಕಾರಕ್ಕೆ ಬಂದಿದ್ದಾರೆ. ನಿನ್ನೆಗೆ ಎರಡು ವರ್ಷ ಪೂರೈಸಿದ್ದಾರೆ. ಒಟ್ಟು ಏಳು ವರ್ಷ ಅಧಿಕಾರ ಪೂರೈಸಿದ್ದಾರೆ. ಬಿಜೆಪಿಯವರು ಖಾಲಿ ಕೊಡ ಹೊತ್ತು ಸಂಭ್ರಮಿಸುತ್ತಿದ್ದಾರೆ. ಸಾಧನೆ ಮಾತ್ರ ಏನೂ ಇಲ್ಲ. ಇಂತಹ ಪ್ರಧಾನಿ ಸ್ವತಂತ್ರ್ಯ ಭಾರತದಲ್ಲಿ ನೋಡಿಯೇ ಇಲ್ಲ. ಮೋದಿ ಪಾಪ್ಯುಲಾರಿಟಿ ಗ್ರಾಫ್ ಕೆಳಗಿಳಿಯುತ್ತಿದೆ. ಇದು ನಾನು ಹೇಳ್ತಿಲ್ಲ, ಅಮೆರಿಕ ಹೇಳ್ತಿದೆ. ನಮ್ಮ ದೇಶದ ತಜ್ಙರು ಕೂಡ ಇದನ್ನೇ ಹೇಳ್ತಿದ್ದಾರೆ. ಇದನ್ನ ಮುಚ್ಚಿಕೊಳ್ಳಲು ಜಾಹೀರಾತು ಕೊಡ್ತಿದ್ದಾರೆ. ಪ್ರಧಾನಿ ಇಮೇಜ್ ಕೆಳಗೆ ಹೋಗ್ತಿದೆ. ಅದನ್ನು ಕವರ್ ಮಾಡೋಕೆ ಈ ಪ್ರಯತ್ನ ಮಾಡ್ತಿದ್ದಾರೆ. ಆದರೆ ಜನ ಇವರಿಗೆ ಶಾಪ ಹಾಕ್ತಿದ್ದಾರೆ ಎಂದು ಪ್ರಧಾನಿ ಮೋದಿ ವಿರುದ್ಧ ಸಿದ್ದರಾಮಯ್ಯ ಆಕ್ರೋಶ ಹೊರಹಾಕಿದರು.

  ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು, ಕೇಂದ್ರ ಸರ್ಕಾರದ ಸಾಧನೆಗಳು ಅಂದ್ರೆ ರೈತ ವಿರೋಧಿ ಕಾನೂನುಗಳನ್ನು ತಂದಿದ್ದು. ದೇಶದಲ್ಲಿ ಬಹಳಷ್ಟು ಕಾರ್ಖಾನೆಗಳನ್ನು ಮಾರಾಟ ಮಾಡಿದ್ದಾರೆ. ಸಾಕಷ್ಟು ಕಾರ್ಖಾನೆಗಳನ್ನು ಖಾಸಗಿ ಅವರಿಗೆ ಮಾರಾಟ ಮಾಡಿದ್ದಾರೆ. ದೇಶದಲ್ಲಿ ಜಿಡಿಪಿ ಕುಸಿತ ಕಂಡಿದೆ. ಮೋದಿ ಸರ್ಕಾರ ಬಹಳ ಅನಾಹುತ ಮಾಡಿದ್ದೇ ದೊಡ್ಡ ಸಾಧನೆ. ರೈತ ವಿರೋಧಿ ಕಾನೂನು ತಂದಿದ್ದು. ಇವರು ಬಂದ ನಂತರ ಎಲ್ಲ ಮಾರಾಟ ಮಾಡಿದ್ದಾರೆ. ಏರ್ಪೋರ್ಟ್, ಬಂದರು, ಕೈಗಾರಿಕೆ ಮಾರುತ್ತಿದ್ದಾರೆ. ಖಾಸಗಿಯವರಿಗೆ ಮಾರಾಟ ಮಾಡಿದ್ದಾರೆ. ದೇಶ ಅಭಿವೃದ್ಧಿ ಪಥದಲ್ಲಿ ಹೋಗುತ್ತಿಲ್ಲ. ದೇಶ ಕೆಳಗೆ ಕುಸಿಯುತ್ತಿದೆ. ನಿರುದ್ಯೋಗ, ಜಿಡಿಪಿ ಬಿದ್ದಿದ್ದು, ಸಾಲ ಹೆಚ್ಚಳ ಇವೇ ಇವರ ಸಾಧನೆ ಹೇಳುತ್ತಿವೆ. ಏಳು ವರ್ಷದಲ್ಲಿ ದೇಶ ಮುಂದೆ ಸಾಗಬೇಕಿತ್ತು ಎಂದು ಹೇಳಿದರು.

  ಸಾಮಾನ್ಯರ ಜೀವನ ವಿಕಾಸವಾಗಲಿಲ್ಲ. ಜನರು ಸರ್ಕಾರ ಮೇಲಿನ ನಂಬಿಕೆ ಕಳೆದುಕೊಂಡಿದ್ದಾರೆ. ಸಬ್ ಕಾ ಸಾಥ್ ಇಲ್ಲ, ಸಬ್ ಕಾ ವಿಶ್ವಾಸವೂ ಇಲ್ಲ. ಬಿಜೆಪಿ ಕಾರ್ಯಕರ್ತರೇ ಇದನ್ನು ಹೇಳ್ತಿದ್ದಾರೆ. ದೇಶದಲ್ಲಿ, ಅದಾನಿ ವಿಕಾಸವಷ್ಟೇ ಆಗಿದೆ.  23 ಕೋಟಿ ಜನ ಬಡತನದ ರೇಖೆಗಿಂತ ಕೆಳಗೆ ಇಳಿದಿದ್ದಾರೆ. ಯಾರ ವಿಕಾಸ ಆಗಿದೆ ಹೇಳಿ. ದೇಶದ ಜನ ಊಟಕ್ಕೆ ಪರದಾಡ್ತಿದ್ದಾರೆ. ಹಾಸಿಗೆ, ಆಕ್ಸಿಜನ್, ವೆಂಟಿಲೇಟರ್ ಇಲ್ಲದೆ ಸಾಯ್ತಿದ್ದಾರೆ. ಇದನ್ನು ಕೇಂದ್ರ ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಕೊರೋನಾ ಸೋಂಕನ್ನು ಸರಿಯಾಗಿ ನಿಭಾಯಿಸಲಿಲ್ಲ. ಚಪ್ಪಾಳೆ ತಟ್ಟಿ, ಜಾಗಟೆ ಬಾರಿಸಿ, ದೀಪ ಹಚ್ಚಿದರು. ಮೊದಲು ಮೌಢ್ಯಗಳನ್ನೆಲ್ಲ‌ ಮತ್ತೊಮ್ಮೆ ಬಿತ್ತಿದರು. ಎರಡನೇ ಅಲೆ ಎಚ್ಚರಿಕೆ‌ ಇದ್ರೂ ಸುಮ್ಮನಾದರು. ಯಾವುದೇ ಸಿದ್ಧತೆ ಮಾಡಿಕೊಳ್ಳಲಿಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

  ನೋಟ್ ಬ್ಯಾನ್ ಮಾಡಿ ಎಕಾನಮಿ ಹಾಳು‌ ಮಾಡಿದ್ರು. ನಾವಿದ್ದಾಗ ಜಿಎಸ್ ಟಿ ವಿರೋಧ ಮಾಡಿದ್ರು. ಈಗ ಜಿಎಸ್ ಟಿ ಮಾಡಿ ವ್ಯಾಪಾರ ಹಾಳುಗೆಡವಿದ್ರು. ಕೊರೋನಾ ವಿರುದ್ಧ ಗೆದ್ವಿ ಎಂದು ಮೈಮರೆತರು. ಲಕ್ಷಾಂತರ ಮಂದಿ ಸೋಂಕಿನಿಂದ ಸಾವನ್ನಪ್ಪಿದರು. ಆಕ್ಸಿಜನ್ ಕೊಡೋಕೆ ಆಗ್ತಿಲ್ಲ, ಬೆಡ್ ಸಿಗ್ತಿಲ್ಲ. ರೆಮಿಡಿಸಿವಿರ್ ಕೊಡ್ತಿಲ್ಲ. ಈಗ ಸೋ‌ಂಕು ಕಡಿಮೆ ಅಂತ ಹೇಳ್ತಿದ್ದಾರೆ. ರ್ಯಾಂಡಮ್ ಟೆಸ್ಟ್ ಮಾಡಿದರೆ ಗೊತ್ತಾಗುತ್ತದೆ ಎಂದರು.

  ಇದನ್ನು ಓದಿ: ರಮೇಶ್ ಜಾರಕಿಹೊಳಿ ಬ್ಲ್ಯಾಕ್​ಮೇಲ್ ಪ್ರಕರಣ; ಶ್ರವಣ್, ನರೇಶ್ ಜಾಮೀನು ಅರ್ಜಿ ಬುಧವಾರಕ್ಕೆ ಮುಂದೂಡಿಕೆ

  ಸಿದ್ದರಾಮಯ್ಯಗೆ ರಾಹುಲ್ ಗಾಂಧಿ ಕರೆ

  ರಾಜ್ಯ ರಾಜಕಾರಣ ಚರ್ಚೆ ಮಾಡಲು ರಾಹುಲ್ ಗಾಂಧಿ ಅವರು ಸಿದ್ದರಾಮಯ್ಯ ಅವರಿಗೆ ಕರೆ ಮಾಡಿದ್ದರು. ಈ ವೇಳೆ ರಾಜ್ಯ, ಕೇಂದ್ರ ಸರ್ಕಾರದ ಹೋರಾಟದ ಚರ್ಚೆ ಮಾಡಬೇಕಿದೆ. ರಾಜಕಾರಣದ ಬಗ್ಗೆಯೂ ಚರ್ಚಿಸಬೇಕಿದೆ. ಮತ್ತಷ್ಟು ಹೋರಾಟ ತೀರ್ವಗೊಳಿಸಬೇಕಿದೆ.  ಸರ್ಕಾರದ ವಿರುದ್ಧ ಹೋರಾಟ ಮುಂದುವರಿಸಿದ್ದೇವೆ. ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ನಿಮ್ಮನ್ನ ಭೇಟಿ ಮಾಡಿ ಚರ್ಚಿಸುವುದಿದೆ ಎಂದು ಹೇಳಿದ್ದಾರೆ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.

  ಕಳೆದ ವಾರ ಸಿದ್ದರಾಮಯ್ಯ ಅವರು ರಾಹುಲ್ ಗಾಂಧಿಗೆ ಕರೆ ಮಾಡಿದ್ದರು. ಆದರೆ, ಕೋವಿಡ್ ಹಿನ್ನೆಲೆ ಕರೆ ಸ್ವೀಕರಿಸಿರಲಿಲ್ಲ. ಹಾಗಾಗಿ ಇಂದು ಸ್ವತಃ ಸಿದ್ದರಾಮಯ್ಯಗೆ ರಾಹುಲ್ ಗಾಂಧಿ ಕರೆ ಮಾಡಿ ಮಾತನಾಡಿದ್ದರು. ದೂರವಾಣಿ ಮಾತುಕತೆ ವೇಳೆ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರಾದ ಸೋನಿಯಾ ಗಾಂಧಿ ಅವರ ಆರೋಗ್ಯವನ್ನು ಸಹ ವಿಚಾರಿಸಿದ್ದಾರೆ.
  Published by:HR Ramesh
  First published: