• Home
 • »
 • News
 • »
 • state
 • »
 • PM Modi: 'ಮೋದಿ ಮನುಷ್ಯ ಅಲ್ರಿ ದೇವರು; ಅದಕ್ಕೆ ಹಾರ ಹಾಕಲು ಹೋಗಿದ್ದೆ'- ಕೇಳಿದ್ರಾ 12ರ ಬಾಲಕನ ಮಾತು?

PM Modi: 'ಮೋದಿ ಮನುಷ್ಯ ಅಲ್ರಿ ದೇವರು; ಅದಕ್ಕೆ ಹಾರ ಹಾಕಲು ಹೋಗಿದ್ದೆ'- ಕೇಳಿದ್ರಾ 12ರ ಬಾಲಕನ ಮಾತು?

ಪ್ರಧಾನಿ ಮೋದಿಗೆ ಹಾರ ಹಾಕಲು ಹೋಗಿದ್ದ ಬಾಲಕ

ಪ್ರಧಾನಿ ಮೋದಿಗೆ ಹಾರ ಹಾಕಲು ಹೋಗಿದ್ದ ಬಾಲಕ

ನನಗೆ ಮೋದಿ ಎಂದರೇ ತುಂಬಾ ಪ್ರೀತಿ. ಮೋದಿಯವರನ್ನು ದೇವರು ಅಂತ ಭಾವಿಸ್ತೇನೆ. ದೇವರಿಗೆ ಹಾರ ಹಾಕಲು ಹೋಗಿದ್ದೆ ಎಂದು 12 ವರ್ಷದ ಬಾಲಕ ಹೇಳಿದ್ದಾರೆ.

 • News18 Kannada
 • 4-MIN READ
 • Last Updated :
 • Hubli-Dharwad (Hubli), India
 • Share this:

ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಯುವ ಜನೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಲು ನಿನ್ನೆ ಹುಬ್ಬಳ್ಳಿಗೆ (Hubli) ಬಂದಿದ್ದರು. ಆಗ ಪೊಲೀಸ್ ಕಟ್ಟೆಚ್ಚರದ ನಡುವೆಯೂ ಪ್ರಧಾನಿ ಮೋದಿಗೆ, 11 ವರ್ಷದ ಕುನಾಲ್ ಎಂಬ ಬಾಲಕ ಹಾರ ಹಾಕಲು ನುಗ್ಗಿದ್ದ(PM MOdi's security Breach). ಇದೀಗ ಕುನಾಲ್ ನ್ಯೂಸ್ 18 ಜತೆ ಮಾತಾಡಿದ್ದಾನೆ. ನನಗೆ ಮೋದಿ ಎಂದರೇ ತುಂಬಾ ಪ್ರೀತಿ. ಮೋದಿಯವರನ್ನು ದೇವರು (God) ಅಂತ ಭಾವಿಸ್ತೇನೆ. ದೇವರಿಗೆ ಹಾರ ಹಾಕಲು ಹೋಗಿದ್ದೆ. ಭದ್ರತಾ ಸಿಬ್ಬಂದಿ ತಡೆದರೂ ಮೋದಿ ಜೀ ನನ್ನ ಹಾರ ಸ್ವೀರಿಸಿದರು. ಅವರ ಕೈ ಸ್ಪರ್ಷವಾಯ್ತು ಎಂದು ಬಾಲಕ ತಿಳಿಸಿದ್ದಾನೆ.


ಅಂದಹಾಗೇ, ಹುಬ್ಬಳ್ಳಿಯ ತೊರವಿಹಕ್ಕಲದ ನಿವಾಸಿಯಾಗಿರುವ ಕುನಾಲ್, ಯುವ ಜನೋತ್ಸವ ಕಾರ್ಯಕ್ರಮಕ್ಕೆ ಆಗಮಿಸಿದ್ದ ವೇಳೆ ಪ್ರಧಾನಿ ರೋಡ್ ಶೋ ಭದ್ರತೆಯನ್ನು ಲೆಕ್ಕಿಸಿದೆ ಹೂ ಹಾಕಲು ಯುವಕ ಮುಂದಾಗಿದ್ದ. ಈ ವೇಳೆ ಮೋದಿ ಭದ್ರತಾ ಲೋಪ ತೀವ್ರ ಚರ್ಚೆಗೆ ಗ್ರಾಸವಾಗಿತ್ತು.
ಇದನ್ನೂ ಓದಿ: Varanasi Tent City: ವಿಶ್ವದ ಅತೀ ಉದ್ದದ ಕ್ರೂಸ್​ಗೆ ಚಾಲನೆ ನೀಡಿದ ಮೋದಿ, ಇದರ ವಿಶೇಷತೆಗಳೇನು ನೋಡಿ!


ಮೋದಿಯವರನ್ನು ನೋಡಲು ನಮ್ಮ ಕುಟುಂಬಸ್ಥರ ಜೊತೆಗೆ ಹೋಗಿದ್ದೆ


ನ್ಯೂಸ್​18 ಕನ್ನಡದೊಂದಿಗೆ ಮಾತನಾಡಿದ ಬಾಲಕ ಕುನಾಲ್​, ನನಗೆ ಮೋದಿ ಅಂದ್ರೆ ತುಂಬಾ ಪ್ರೀತಿ. ಮೋದಿ ಅವರನ್ನು ದೇವರು ಅಂತ ಭಾವಿಸ್ತೇನೆ. ಆದ್ದರಿಂದಲೇ ದೇವರಿಗೆ ಹಾರ ಹಾಕಲು ಹೋಗಿದ್ದೆ. ಭದ್ರತಾ ಸಿಬ್ಬಂದಿ ತಡೆದರೂ ಮೋದಿ ಅವರು ನನ್ನ ಹಾರ ಸ್ವೀಕರಿಸಿದರು. ಇದಕ್ಕೆ ನನಗೆ ತುಂಬಾ ಸಂತೋಷವಾಗುತ್ತಿದೆ.


ಅಕ್ಕನ ಮಗಳ ಕೈಲಿ ಹಾರ ಹಾಕಿಸೋ ಯೋಚನೆ ಇತ್ತು


ಅಲ್ಲದೇ, ಮೋದಿಯವರನ್ನು ನೋಡಲು ನಮ್ಮ ಕುಟುಂಬಸ್ಥರ ಜೊತೆಗೆ ಹೋಗಿದ್ದೆ. ನನ್ನ ಅಕ್ಕನ ಮಗಳಿಗೆ ಗಣವೇಷ ಹಾಕಲಾಗಿತ್ತು. ಆಕೆ ಕೈಯಲ್ಲಿ ಹೂವಿನ ಹಾರ ಹಿಡಿದಿದ್ದಳು. ಆಕೆಯ ಕೈಯಿಂದ ಮೋದಿಯವರಿಗೆ ಹೂವಿನ ಹಾರ ಹಾಕಿಸುವ ಯೋಜನೆ ಮಾಡಲಾಗಿತ್ತು. ಆದರೆ ಮೋದಿಯವರು ನಮ್ಮ ಸಮೀಪ ಬರಲಿಲ್ಲ. ಹೀಗಾಗಿ ಮಾಲೆ ಹಿಡಿದು ಮೋದಿಯತ್ತ ನಾನೇ ತೆರಳಿದೆ ಎಂದು ತನ್ನ ಉದ್ದೇಶವನ್ನು ತಿಳಿಸಿದ್ದಾನೆ.


ಇದನ್ನೂ ಓದಿ: NATIONAL YOUTH DAY 2023: ರನ್​ವೇ ರೆಡಿ ಇದೇ, ನೀವು ಟೇಕಾಫ್​ ಆಗೋದು ಅಷ್ಟೇ ಬಾಕಿ; ಯುವಕರಿಗೆ ಪ್ರಧಾನಿ ನರೇಂದ್ರ ಮೋದಿ ಕರೆ
ಮೋದಿ ಎಡಗೈ ನನಗೆ ತಾಕಿತು, ತುಂಬಾ ಖುಷಿ ಆಯ್ತು


ಸಮೀಪ ಹೋದ ಸಂದರ್ಭದಲ್ಲಿ ಪೊಲೀಸರು ನನ್ನ ಪಕ್ಕಕ್ಕೆ ತಳ್ಳಿದರು. ಆದರೆ ಮೋದಿಯವರು ನನ್ನ ಹಾರ ತೆಗೆದುಕೊಂಡರು. ಆ ವೇಳೆ ಅವರ ಎಡಗೈ ನನಗೆ ತಾಕಿತು. ಇದರಿಂದಾಗಿ ನನಗೆ ತುಂಬಾ ಖುಷಿಯಾಗಿದೆ. ಮುಂದೆಯೂ ಅವಕಾಶ ಸಿಕ್ಕರೆ ಮೋದಿಯವರನ್ನು ಭೇಟಿಯಾಗೋಕೆ ಯತ್ನಿಸ್ತೇನೆ. ಭದ್ರತೆ ನಡುವೆ ಹಾರ ಹಾಕಲು ಹೋಗಿದ್ದು ತಪ್ಪು ಎಂದು ಅರಿವಾಗಿದೆ. ಆದರೂ ಮೋದಿಗೆ ಹಾರ ಹಾಕಬೇಕೆಂದು ನುಗ್ಗಿದೆ ಎಂದಿದ್ದಾರೆ.


ನಾವು ಜಾಗತಿಕವಾಗಿ ದೊಡ್ಡ ಶಕ್ತಿಯಾಗಿ ಬೆಳೆಯುತ್ತಿದ್ದೇವೆ


ಇನ್ನು ಕಾರ್ಯಕ್ರಮದಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ ಅವರು, ಭಾರತ ದೊಡ್ಡ ಆರ್ಥಿಕ ಶಕ್ತಿಯಾಗಿ ಬೆಳೆಯುತ್ತಿದ್ದು ಸಾಧನೆ ಮಾಡಲು ಯುವ ಸಮುದಾಯಕ್ಕೆ ಇದು ಸಕಾಲ. ಕಳೆದ 8 ವರ್ಷಗಳಲ್ಲಿ ಯುವಕರಿಗಾಗಿ ಸಾಕಷ್ಟು ಯೋಜನೆ ಜಾರಿ ಮಾಡಿದ್ದೇವೆ. ಯುವಕರಿಗಾಗಿ ಭವ್ಯ ಭವಿಷ್ಯವನ್ನು ನಾವು ರೂಪಿಸಿದ್ದೇವೆ. ನಮ್ಮಲ್ಲಿ ಯುವಕರ ದೊಡ್ಡ ಪಡೆ ಇರುವುದರಿಂದ ನಾವು ಜಾಗತಿಕವಾಗಿ ದೊಡ್ಡ ಶಕ್ತಿಯಾಗಿ ಬೆಳೆಯುತ್ತಿದ್ದೇವೆ ಅಂತ ಹೇಳಿದ್ದರು.

Published by:Sumanth SN
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು