ಬೆಂಗಳೂರು: ರಾಜಧಾನಿಯಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ 2ನೇ ದಿನದ ರೋಡ್ ಶೋ (Roadshow) ಬೆಳಗ್ಗೆ 10 ಗಂಟೆಗೆ ಆರಂಭವಾಗಲಿದೆ. ಇದು 6.5 ಕಿ.ಮೀ ರೋಡ್ಶೋ ಇದಾಗಿದ್ದು, HAL ಬಳಿಯ ಸುರಂಜನ್ ದಾಸ್ ರಸ್ತೆಯಿಂದ ಶುರುವಾಗಲಿದೆ. ರೋಡ್ಶೋ ಹಿನ್ನೆಲೆ 20 ರಸ್ತೆಗಳಲ್ಲಿ ಬೆಂಗಳೂರು ಪೊಲೀಸರು (Bengaluru Police) ಸಂಚಾರ ನಿರ್ಬಂಧಿಸಿದ್ದು, ಬೆಳಗ್ಗೆ 8 ರಿಂದ ಮಧ್ಯಾಹ್ನ 12 ತನಕ ಬದಲಿ ಮಾರ್ಗ (Route Change) ಬಳಸಲು ಸೂಚನೆ ನೀಡಲಾಗಿದೆ. ಎರಡನೇ ದಿನದ ರೋಡ್ಶೋ ಬೆಳಗ್ಗೆ 10ಕ್ಕೆ ಆರಂಭವಾಗಿ 11.30ಕ್ಕೆ ಮುಗಿಯಲಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ರಾಜಭವನದಿಂದ ಬೆಳಗ್ಗೆ 9.30ಕ್ಕೆ HQTC ಹೆಲಿಪ್ಯಾಡ್ನಿಂದ ಪ್ರಯಾಣ ಬೆಳೆಸಲಿದ್ದಾರೆ. HAL ವಿಮಾನ ನಿಲ್ದಾಣ ತಲುಪಿದ ಬಳಿಕ ಸುರಂಜನ್ ದಾಸ್ ಸರ್ಕಲ್ನಿಂದ ರೋಡ್ಶೋ ಆರಂಭವಾಗಲಿದೆ.
ಇಂದಿನ ರೋಡ್ಶೋ ವೇಳಾಪಟ್ಟಿ ಹೀಗಿದೆ.
ಬೆಳಗ್ಗೆ 10 ಗಂಟೆ: ಕೆಂಪೇಗೌಡ ಪ್ರತಿಮೆ, ನ್ಯೂ ತಿಪ್ಪಸಂದ್ರ ರಸ್ತೆ
ಬೆಳಗ್ಗೆ 10.15: HAL 2ನೇ ಹಂತ, 80 ಅಡಿ ರಸ್ತೆ ಜಂಕ್ಷನ್
ಬೆಳಗ್ಗೆ 10:25: HAL 2ನೇ ಹಂತ, 12ನೇ ಮುಖ್ಯ ರಸ್ತೆ ಜಂಕ್ಷನ್
ಬೆಳಗ್ಗೆ 10:35: 100 ಫೀಟ್ ರೋಡ್ ಜಂಕ್ಷನ್
ಬೆಳಗ್ಗೆ 10:50: ಇಎಸ್ಐ ಆಸ್ಪತ್ರೆ ರಸ್ತೆ
ಬೆಳಗ್ಗೆ 11:10: ಮೆಟ್ರೋ ಪಿಲ್ಲರ್ 76, ಸಿಎಂಹೆಚ್ ರಸ್ತೆ
ಬೆಳಗ್ಗೆ 11:20: ಹಲಸೂರು ಮೆಟ್ರೋ ಸ್ಟೇಷನ್
ಬೆಳಗ್ಗೆ 11:30: ಟ್ರಿನಿಟಿ ಸರ್ಕಲ್
ಈ ರಸ್ತೆಗಳು ಬಂದ್
ರಾಜಭವನಕ್ಕೆ ರಸ್ತೆ, ಮೇಖ್ರಿ ಸರ್ಕಲ್, ರೇಸ್ ಕೋರ್ಸ್ ರಸ್ತೆ, ಚೌಡಯ್ಯ ರಸ್ತೆ, ರಮಣ ಮಹರ್ಷಿ ರಸ್ತೆ, ಹಳೇ ವಿಮಾನ ನಿಲ್ದಾಣ ರಸ್ತೆ, ಸುರಂಜನ್ ದಾಸ್ ರಸ್ತೆ, ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ಜಗದೀಶ ನಗರ ಕ್ರಾಸ್,ಬಿಇಎಂಎಲ್ ಕ್ರಾಸ್, ಜೆ ಬಿ ನಗರ ರಸ್ತೆ, ಇಂದಿರಾನಗರ, ನ್ಯೂ ತಿಪ್ಪಸಂದ್ರ, ಸಿಎಂಎಚ್ ರಸ್ತೆ, ಆದರ್ಶ ಜಂಕ್ಷನ್, ಹಲಸೂರು ಮೆಟ್ರೋ ಮತ್ತು ಟ್ರಿನಿಟಿ ಸರ್ಕಲ್ ಸಂಚಾರ ನಿರ್ಬಂಧ
ಪೊಲೀಸ್ ಕಂಡಿಷನ್ಸ್
ಮೋದಿ ರೋಡ್ ಶೋ ಮಾರ್ಗದಲ್ಲಿರುವ ಮನೆ, ಅಪಾರ್ಟ್‌ಮೆಂಟ್, ಮಳಿಗೆಗಳಿಗೆ ಪೂರ್ವ ವಿಭಾಗ ಡಿಸಿಪಿಯವರಿಂದ ನೋಟಿಸ್ ಜಾರಿ ಮಾಡಲಾಗಿದೆ. ಮನೆ, ಮಳಿಗೆಗಳ ಮೇಲೆ ಅಪರಿಚಿತರನ್ನು ಸೇರಿಸುವಂತಿಲ್ಲ. ಅನುಮಾನಸ್ಪದ ವಸ್ತುಗಳು ಕಂಡು ಬಂದಲ್ಲಿ ಮಾಹಿತಿ ಕೊಡಬೇಕು ಎಂದು ಹೇಳಲಾಗಿದೆ.
ಇದನ್ನೂ ಓದಿ: Bengaluru: ಯಶವಂತಪುರದಲ್ಲಿ ಕೈ-ಕಮಲ ಕಾರ್ಯಕರ್ತರ ನಡುವೆ ಗಲಾಟೆ; ಕುಸುಮಾ ಮುಂದೆಯೇ ಪೊಲೀಸರಿಂದ ಲಾಠಿಚಾರ್ಜ್
ಕಂಪನಿ, ಕಚೇರಿ, ಮಳಿಗೆಗಳಲ್ಲಿ ಸಿಬ್ಬಂದಿ ವಿಳಾಸ, ಪೋನ್ ನಂಬರ್ ಸಂಗ್ರಹಿಸಬೇಕು. ಅಪರಿಚಿತ ವ್ಯಕ್ತಿಗಳು ಬಂದರೆ ಕೂಡಲೇ ಮಾಹಿತಿ ನೀಡಬೇಕು. ಗಣ್ಯ ವ್ಯಕ್ತಿಗಳ ಮೇಲೆ ಹೂ ಸೇರಿ ಯಾವುದೇ ವಸ್ತು ಎಸೆಯುವುದು ನಿಷೇಧ ಎಂದು ನೋಟಿಸ್ ಮೂಲಕ ಸೂಚನೆ ನೀಡಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ