ಮನೆಯಲ್ಲೇ ಸರಳವಾಗಿ ದೇವೇಗೌಡರ ಹುಟ್ಟುಹಬ್ಬ: ಪ್ರಧಾನಿ ಮೋದಿ, ಲಂಕಾ ಪಿಎಂ ಸೇರಿ ಹಲವರಿಂದ ಶುಭ ಕೋರಿಕೆ

ಇವತ್ತು ಜೆಡಿಎಸ್ ಕಚೇರಿಯಲ್ಲಿ ದೇವೇಗೌಡರ ಜನ್ಮದಿನದ ಅಂಗವಾಗಿ ಪಕ್ಷದ ಕಾರ್ಯಕರ್ತರು ರಕ್ತದಾನ ಶಿಬಿರ ಏರ್ಪಡಿಸಿದ್ದಾರೆ. ದೇವೇಗೌಡರೇ ಈ ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ಧಾರೆ.

ಮಾಜಿ ಪ್ರಧಾನಿ ಹೆಚ್​ ಡಿ ದೇವೇಗೌಡ

ಮಾಜಿ ಪ್ರಧಾನಿ ಹೆಚ್​ ಡಿ ದೇವೇಗೌಡ

 • Share this:
  ಬೆಂಗಳೂರು(ಮೇ 18): ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಇಂದು ತಮ್ಮ ಮನೆಯಲ್ಲೇ ಹುಟ್ಟುಹಬ್ಬವನ್ನು ಬಹಳ ಸರಳವಾಗಿ ಆಚರಿಸಿಕೊಳ್ಳುತ್ತಿದ್ದಾರೆ. ಕೊರೊನಾ ಹಿನ್ನೆಲೆಯಲ್ಲಿ ತಮ್ಮ ಬಳಿ ಬರದಂತೆ ದೇವೇಗೌಡರು ತಮ್ಮ ಅಭಿಮಾನಿಗಳು ಹಾಗೂ ಪಕ್ಷದ ಕಾರ್ಯಕರ್ತರಿಗೆ ಮನವಿ ಮಾಡಿದ್ದಾರೆ. ತಾವೆಲ್ಲರೂ ಇದ್ದಲ್ಲಿಂದಲೇ ಹರಿಸಿರಿ. ಮನೆ ಬಳಿ ಗುಂಪು ಸೇರುವುದು ಬೇಡ ಎಂದು ಕೋರಿಕೊಂಡಿದ್ದಾರೆ.

  ಇವತ್ತು ಬೆಳಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಪದ್ಮನಾಭನಗರದಲ್ಲಿರುವ ದೇವೇಗೌಡರ ನಿವಾಸಕ್ಕೆ ತೆರಳಿ ಶುಭ ಕೋರಿದರು. ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮಾಡಿ ಶುಭಕೋರಿದ್ದಲ್ಲದೇ, ದೂರವಾಣಿ ಕರೆ ಮಾಡಿ ಕುಶಲೋಪರಿ ವಿಚಾರಿಸಿದರು.

  ಶ್ರೀಲಂಕಾದ ಪ್ರಧಾನಿ ಮಹಿಂದ ರಾಜಪಕ್ಸ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಉಪಮುಖ್ಯಮಂತ್ರಿ ಡಾ. ಅಶ್ವತ್ಥ ನಾರಾಯಣ್ ಮೊದಲಾದವರೂ ಕೂಡ ದೇವೇಗೌಡರ ಜನ್ಮದಿನಕ್ಕೆ ಶುಭಕೋರಿದ್ಧಾರೆ.

  ಇದನ್ನೂ ಓದಿ: HD Deve Gowda: ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರ 88ನೇ ಜನ್ಮದಿನ  ದೇಶದ ಅತ್ಯುನ್ನತ ಹುದ್ದೆಯನ್ನು ಸಾಮಾನ್ಯನೂ ಅಲಂಕರಿಸಬಹುದು ಎಂಬುದನ್ನು ದೇವೇಗೌಡರು ತೋರಿಸಿದ್ದಾರೆ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ತಮ್ಮ ತಂದೆಯ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ್ಧಾರೆ.  ಇದೇ ವೇಳೆ, ಇವತ್ತು ಜೆಡಿಎಸ್ ಕಚೇರಿಯಲ್ಲಿ ದೇವೇಗೌಡರ ಜನ್ಮದಿನದ ಅಂಗವಾಗಿ ಪಕ್ಷದ ಕಾರ್ಯಕರ್ತರು ರಕ್ತದಾನ ಶಿಬಿರ ಏರ್ಪಡಿಸಿದ್ದಾರೆ. ದೇವೇಗೌಡರೇ ಈ ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ಧಾರೆ. ಅದೊಂದು ಬಿಟ್ಟರೆ ಉಳಿದಂತೆ ಇವತ್ತು ದಿನವೆಲ್ಲಾ ಮಾಜಿ ಪ್ರಧಾನಿಗಳು ತಮ್ಮ ಮನೆಯಲ್ಲೇ ಕುಟುಂಬಸದಸ್ಯರ ಜೊತೆ ಕಾಲ ಕಳೆಯಲಿದ್ಧಾರೆ.

  First published: