ಬೆಂಗಳೂರು: ಪ್ರಧಾನಿ ಮೋದಿ (PM Modi) ಇಂದು ರಾಜ್ಯಕ್ಕೆ ಆಗಮಿಸುತ್ತಿದ್ದು, 2 ಜಿಲ್ಲೆಯಲ್ಲಿ 6 ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಅಭಿವೃದ್ಧಿ ಜೊತೆ ಚುನಾವಣೆ ಪ್ರಚಾರನೂ (Karnataka Election) ಮಾಡುತ್ತಿದ್ದಾರೆ. ಪ್ರಧಾನಿಗಳ ಆಗಮನಕ್ಕಾಗಿ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಮೊದಲು ಪ್ರಧಾನಿ ಮೋದಿ (PM Modi) ಬೆಂಗಳೂರಿನಲ್ಲಿ (Bengaluru) ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಮಧ್ಯಾಹ್ನ ಕಲ್ಪತರು ನಾಡು ತುಮಕೂರು (Tumakuru) ಜಿಲ್ಲೆಗೆ ಭೇಟಿ ನೀಡಲಿದ್ದಾರೆ. ಮಧ್ಯಾಹ್ನ 3.30ಕ್ಕೆ ಜಿಲ್ಲೆಗೆ ಆಗಮಿಸಿ ಗುಬ್ಬಿ ತಾಲೂಕಿನ ನಿಟ್ಟೂರು ಬಳಿಯ ಬಿದರೆಹಳ್ಳ ಕಾವಲ್ನಲ್ಲಿರೋ ನೂತನ ಹೆಚ್ಎಎಲ್ ಘಟಕ (HAL) ಉದ್ಘಾಟನೆ ಮಾಡಲಿದ್ದಾರೆ. ಜೊತೆಗೆ ಜಲಜೀವನ್ ಮಿಷನ್ (Jal Jeevan Mission) ಯೋಜನೆಯಡಿ ತಿಪಟೂರಿನ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಶಂಕುಸ್ಥಾಪನೆ ಮಾಡಲಿದ್ದಾರೆ.
ಈ ವೇಳೆ ಒಂದು ಗಂಟೆಗಳ ಕಾಲ ಕಾರ್ಯಕ್ರಮದಲ್ಲಿ ಇರಲಿದ್ದು, ಕಾರ್ಯಕರ್ತರನ್ನು ಉದ್ದೇಶಿಸಿ ಮೋದಿ ಮಾತನಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಒಂದು ಲಕ್ಷಕ್ಕೂ ಅಧಿಕ ಜನರು ಸೇರುವ ನಿರೀಕ್ಷೆ ಇದೆ. ಕಾರ್ಯಕ್ರಮಕ್ಕೆ ಬರುವವರಿಗೆ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ.
ಇದನ್ನೂ ಓದಿ: PM Modi: ರಾಜಧಾನಿಗೆ ಮೋದಿ; ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ, ಹೊಸ ಮಾರ್ಗ ಹೀಗಿದೆ
ಈ ಕುರಿತಂತೆ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಫೆಬ್ರವರಿ 6 ರಂದು ನಾನು ಕರ್ನಾಟಕದಲ್ಲಿ ಇರಲು ಎದುರು ನೋಡುತ್ತಿದ್ದೇನೆ. ಬೆಂಗಳೂರು ತಲುಪಿದ ನಂತರ, ನಾನು ಭಾರತ ಇಂಧನ ಸಪ್ತಾಹ 2023ರಲ್ಲಿ ಭಾಗವಹಿಸುತ್ತೇನೆ. ನಂತರ, ನಾನು ಪ್ರಮುಖ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಲು ಮತ್ತು ವಿವಿಧ ಯೋಜನೆಗಳ ಶಂಕುಸ್ಥಾಪನೆ ಮಾಡಲು ತುಮಕೂರಿಗೆ ಭೇಟಿ ನೀಡುತ್ತೇನೆ ಎಂದು ತಿಳಿಸಿದ್ದಾರೆ.
ಇನ್ನು, ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ಆಗಮಿಸುವವರು ಮಧ್ಯಾಹ್ನ 1 ಗಂಟೆಯಿಂದ 2.30ರ ಒಳಗೆ ಕಾರ್ಯಕರ್ತರು ವೇದಿಕೆ ಮುಂಭಾಗ ಆಸೀನರಾಗಬೇಕು. ಭದ್ರತಾ ದೃಷ್ಟಿಯಿಂದ ನೀರಿನ ಬಾಟಲ್, ಪ್ಲಾಸ್ಟಿಕ್ ಪೇಪರ್, ಊಟದ ಬಾಕ್ಸ್, ಇತರೆ ವಸ್ತುಗಳನ್ನ ಸಂಪೂರ್ಣ ನಿಷೇಧ ಮಾಡಲಾಗಿದೆ. ಸಿಎಂ ಬೊಮ್ಮಾಯಿ, ರಾಜ್ಯಪಾಲರು, ಸಚಿವರು, ಕೇಂದ್ರ ಸಚಿವರು, ಜಿಲ್ಲೆಯ ಶಾಸಕರು ಮುಖಂಡರು ಸೇರಿದಂತೆ ಒಂದೂವರೆ ಸಾವಿರ ವಿವಿಐಪಿಗಳಿಗೆ ವಿಶೇಷ ಆಸನ ವ್ಯವಸ್ಥೆ ಕಲ್ಪಿಸಲಾಗಿದ್ದು, ಭಾರೀ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕೂಡ ಆಗಿದೆ. ಹಾಗೇ ವಾಹನ ಸವಾರರಿಗೆ ಟ್ರಾಫಿಕ್ ಬಿಸಿ ತಟ್ಟಲಿದ್ದು ಮಾರ್ಗ ಬದಲಾವಣೆಯನ್ನೂ ಮಾಡಿದ್ದಾರೆ.
ತಿಪಟೂರು To ತುಮಕೂರು
ತಿಪಟೂರು ಕಡೆಯಿಂದ ಬರುವವರು ,ಕೆಬಿ ಕ್ರಾಸ್,ತುರುವೇಕೆರೆ ಟಿಬಿ ಕ್ರಾಸ್ ಹಾಗೂ ನಿಟ್ಟೂರು ಮೂಲಕ ತುಮಕೂರು ಕಡೆ ಹೋಗಬೇಕು. ಇನ್ನೂ ಪ್ರಧಾನಿ ಮೋದಿ ಆಗಮನ ಹಿನ್ನೆಲೆಯಲ್ಲಿ ಬಾರಿ ಬಂದೋಬಸ್ತ್ ಮಾಡಲಾಗಿದ್ದು, ತುಮಕೂರು ಎಸ್.ಪಿ ರಾಹುಲ್ ಕುಮಾರ್ ಸೇರಿದಂತೆ ಒಟ್ಟು 5 ಜನ ಎಸ್.ಪಿಗಳ ನೇತೃತ್ವದಲ್ಲಿ ಭದ್ರತೆಯ ವ್ಯವಸ್ಥೆ ಮಾಡಲಾಗಿದೆ.
I am looking forward to being in Karnataka tomorrow, 6th February. Upon reaching Bengaluru, I will take part in the India Energy Week 2023. Later, I will go to Tumakuru to launch key development works and lay the foundation stone of various projects. https://t.co/5f8t4MAVKf
— Narendra Modi (@narendramodi) February 5, 2023
ಮೋದಿ ಕಾರ್ಯಕ್ರಮಕ್ಕೆ ಬಿಜೆಪಿ ಕಡೆಯಿಂದ 300 KSRTC ಬಸ್, 500 ಖಾಸಗಿ ಬಸ್ ಸೇರಿದಂತೆ ಕಾರುಗಳನ್ನೂ ಬುಕ್ ಮಾಡಿದ್ದಾರೆ. ಒಟ್ಟಾರೆ ಸರ್ಕಾರಿ ಕಾರ್ಯಕ್ರಮ ಉದ್ಘಾಟನೆ ನೆಪದಲ್ಲಿ ಮೋದಿ ಮತ್ತೆ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ತುಮಕೂರು ನಗರ ಸೇರಿದಂತೆ ಗುಬ್ಬಿ-ನಿಟ್ಟೂರು ರಸ್ತೆಗಳಲ್ಲಿ ಬಿಜೆಪಿ ಬಾವುಟ ರಾರಾಜಿಸುತ್ತಿದೆ. ವಿಧಾನಸಭೆ ಚುನಾವಣೆ ಹೊತ್ತಲ್ಲಿ ಬಿಜೆಪಿ ನಾಯಕರಿಗೆ ಮೋದಿ ಆಗಮನ ಬೂಸ್ಟರ್ ಸಿಕ್ಕಂತಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ