• Home
 • »
 • News
 • »
 • state
 • »
 • Karnataka Elections: ಮೋದಿ ಭೇಟಿ, ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆದ ಬಿಜೆಪಿ!

Karnataka Elections: ಮೋದಿ ಭೇಟಿ, ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆದ ಬಿಜೆಪಿ!

ನರೇಂದ್ರ ಮೋದಿ

ನರೇಂದ್ರ ಮೋದಿ

ಪ್ರಧಾನಿ ಮೋದಿ ಭೇಟಿಯ ಹಿನ್ನೆಲೆಯಲ್ಲಿ ತಂತ್ರಗಾರಿಕೆ ರೂಪಿಸಿದ ಬಿಜೆಪಿ ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆಯೋ ಕೆಲಸ ಮಾಡಿದೆ. ಒಂದು ಕಡೆ ರೋಡ್ ಶೋ ಮೂಲಕ ಬಿಜೆಪಿ ಕಾರ್ಯಕರ್ತರು, ಜನತೆಯನ್ನು ಹುರಿದುಂಬಿಸಿದ ಮೋದಿ, ಮತ್ತೊಂದೆ ಯುವಜನೋತ್ಸವದ ಮೂಲಕ ಯುವಕರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮುಂದೆ ಓದಿ ...
 • News18 Kannada
 • 3-MIN READ
 • Last Updated :
 • Dharwad, India
 • Share this:

ಹುಬ್ಬಳ್ಳಿ(ಜ.13): ಇನ್ನೇನು ಕೆಲವೇ ದಿನಗಳಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆ (Karnataka Assembly Elerctions) ನಡೆಯಲಿದೆ. ಚುನಾವಣೆಗೆ ದಿನಗಣನೆ ಆರಂಭಗೊಂಡಿರುವಂತೆ ಘಟಾನುಘಟಿ ನಾಯಕರ ರಾಜ್ಯ ಭೇಟಿಯೂ ಜೋರಾಗಿದೆ. ರಾಷ್ಟ್ರೀಯ ಯುವಜನೋತ್ಸವದ (National Youth Day) ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ (PM Narendra Modi) ಹುಬ್ಬಳ್ಳಿಗೆ ಭೇಟಿ ನೀಡೋದರ ಲಾಭ ಪಡೆದುಕೊಳ್ಳುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಯುವಜನೋತ್ಸವ ಸರ್ಕಾರಿ ಕಾರ್ಯಕ್ರಮವಾಗಿದ್ದರೂ, ನಗರದಲ್ಲಿ ರೋಡ್ ಶೋ ನಡೆಸುವ ಮೂಲಕ ಪಕ್ಷದ ಕಾರ್ಯಕರ್ತರಲ್ಲಿ ಜೋಶ್ ಹುಟ್ಟಿಸೋ ಯತ್ನ ಮಾಡಿದ್ದಾರೆ. ಮೋದಿ ಭೇಟಿ ಮೂಲಕ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಯನ್ನು ಹೊಡೆಯೋ ಕೆಲಸ ಮಾಡಲಾಗಿದೆ.


ಹೌದು ಧಾರವಾಡ ಜಿಲ್ಲೆ ಬಿಜೆಪಿಯ ಭದ್ರಕೋಟೆ. ಈ ಕೋಟೆಯನ್ನು ಮತ್ತಷ್ಟು ಸದೃಢ ಮಾಡಿ, ಮುಂದಿನ ಚುನಾವಣೆಯಲ್ಲಿ ಜಿಲ್ಲೆಲ್ಲಿ ಕ್ಲೀನ್ ಸ್ವೀಪ್ ಮಾಡೋಕೆ ಬಿಜೆಪಿ ಅಖಾಡ ಸಿದ್ಧಗೊಳಿಸುತ್ತಿದೆ. ಚುನಾವಣೆ ಹತ್ತಿರ ಬರುತ್ತಿರೋ ಹಿನ್ನೆಲೆಯಲ್ಲಿ ಒಂದಲ್ಲ ಒಂದು ಕಾರ್ಯಕ್ರಮದ ಹೆಸರಲ್ಲಿ ಪ್ರಧಾನಿ ಮೋದಿ ಮತ್ತಿತರ ನಾಯಕರು ರಾಜ್ಯಕ್ಕೆ ಭೇಟಿ ನೀಡ್ತಿದಾರೆ. ಇದೀಗ ರಾಷ್ಟ್ರೀಯ ಯುವಜನೋತ್ಸವದ ಹಿನ್ನೆಲೆಯಲ್ಲಿ ಆಗಮಿಸಿರೋ ಪ್ರಧಾನಿ ಮೋದಿ ಅವರನ್ನು ಪಕ್ಷದ ಪ್ರಚಾರಕ್ಕೂ ಬಳಸಿಕೊಂಡಿದ್ದಾರೆ.


ಇದನ್ನೂ ಓದಿ: Karnataka Elections 2023: ಪ್ರಧಾನಿ ಮೋದಿ ಕರ್ನಾಟಕ ಭೇಟಿ ಬೆನ್ನಲ್ಲೇ ರಾಜ್ಯಕ್ಕೆ ಬರ್ತಾರೆ ಪ್ರಿಯಾಂಕಾ ಗಾಂಧಿ; ವಿಧಾನಸಭಾ ಚುನಾವಣೆಗೆ ಕೈ-ಕಮಲ ರಣಕಹಳೆ


ಹುಬ್ಬಳ್ಳಿಯ ವಿಮಾನ ನಿಲ್ದಾಣದಿಂದ ರೈಲ್ವೆ ಮೈದಾನದವರೆಗೂ 8 ಕಿಲೋ ಮೀಟರ್ ಉದ್ದ ರೋಡ್ ಶೋ ಮಾಡಲಾಯಿತು. ಪ್ರಧಾನಿ ಮೋದಿ ಅವರು ವಿಮಾನ ನಿಲ್ದಾಣದ ಹೊರಗೆ ಕೆಳಗೆ ಇಳಿದು ಕೈ ಬೀಸಿ ವಾಹನದ ಮೇಲೆ ನಿಂತು ಜನರತ್ತ ಕೈ ಬೀಸಿ ಮುಂದೆ ಸಾಗಿದರು. ರಸ್ತೆಯ ಎರಡೂ ಬದಿಗಳಲ್ಲಿ ನಿಂತ ಜನ ಮೋದಿಯನ್ನು ಸ್ವಾಗತಿಸಿದರು. ಕೆಲವೆಡೆ ಪುಷ್ಪ ಹಾಕಿ, ಮೋದಿ ಪರ ಘೋಷಣೆ ಕೂಗಿ ಸ್ವಾಗತ ಕೋರಿದರು. ಬಿಜೆಪಿ ಕಾರ್ಯಕರ್ತರೂ ಸೇರಿ ರಸ್ತೆಯುದ್ದಕ್ಕೂ ಸುಮಾರು ಮೂರು ಲಕ್ಷದಷ್ಟು ಜನ ಜಮಾವಣೆಗೊಂಡಿದ್ದರು.
ಇನ್ನು ರೈಲ್ವೆ ಮೈದಾನದಲ್ಲಿ ನಡೆದ ರಾಷ್ಟ್ರೀಯ ಯುವಜನೋತ್ಸವಕ್ಕೆ ಚಾಲನೆ ನೀಡಿದ ಪ್ರಧಾನಿ ಮೋದಿ ಯುವ ಜನತೆಯನ್ನು ಉತ್ತೇಜಿಸುವ ಕೆಲಸ ಮಾಡಿದರು. ರೈಲ್ವೆ ಮೈದಾನ ಬಿಜೆಪಿಯ ಲಕ್ಕಿ ಗ್ರೌಂಡ್ ಅಂತಲೇ ಬಿಂಬಿತಗೊಂಡಿದ್ದು, ಅಲ್ಲಿಂದಲೇ ಚುನಾವಣಾ ರಣಕಹಳೆ ಮೊಳಗಿಸುವ ಕಾರ್ಯ ಮಾಡಿದರು. ಯುವಕರನ್ನು ಹುರುದುಂಬಿಸಿದ ಮೋದಿ, ಯುವಕರೇ ದೇಶದ ಶಕ್ತಿ, ದೇಶದ ಭವಿಷ್ಯ ಎಂದರು. ಯುವಕರ ದೊಡ್ಡ ಪಡೆ, ಯುವ ಶಕ್ತಿ ನಮ್ಮ ದೇಶದಲ್ಲಿದೆ.


ದೇಶದ ಬೆಳವಣಿಗೆಗೆ ಯುವ ಶಕ್ತಿ ಅಡಿಪಾಯವಾಗಲಿದೆ. ಕೃಷಿ ಕ್ಷೇತ್ರದಲ್ಲಿ ತಂತ್ರಜ್ಞಾನ ಅಳವಡಿಕೆಯೊಂದಿಗೆ ಹೊಸ ಕ್ರಾಂತಿಗೆ ನಾಂದಿಹಾಡಲಿದೆ. ಭಾರತ ದೊಡ್ಡ ಶಕ್ತಿಯಾಗಿ ಹೊರಹೊಮ್ಮುತ್ತಿದೆ, ಇದಕ್ಕೆ ಮುಖ್ಯ ಕಾರಣ ನಮ್ಮ ಯುವ ಶಕ್ತಿ. ಶಿಕ್ಷಣ ಸೇರಿ ಎಲ್ಲ ಕ್ಷೇತ್ರಗಳಲ್ಲಿಯೂ ಬದಲಾವಣೆ ಕಾಣಿಸಿದೆ. ಯುವಕರು ಭವಿಷ್ಯದ ದೃಷ್ಟಿಯಿಂದ ಬದಲಾಗಬೇಕಿದೆ. ಮೈಂಡ್ ಸೆಟ್ ಬದಲಾಯಿಸಿಕೊಳ್ಳಬೇಕಿದೆ, ಶಾಲೆಗಳಿಂದಲೇ ಆವಿಷ್ಕಾರದ ಮೇಲೆ ಬೆಳಕು ಚೆಲ್ಲುವಂತಾಗಬೇಕಿದೆ ಎಂದರು.


ಯುವಕರು ಹೊಸತನಕ್ಕೆ ಹೊಂದಿಕೊಳ್ಳಲು ಸಿದ್ಧರಾಗಬೇಕು. ಹೊಸ ಶಿಕ್ಷಣ ನೀತಿಯನ್ನು ಜಾರಿಗೆ ತರಲಾಗುತ್ತಿದೆ. ಇನ್ಸ್‌ಟಿಟ್ಯೂಷನ್, ಇನ್ನೋವೇಷನ್ ಬಗ್ಗೆ ಚಿಂತಿಸಬೇಕಾಗಿದೆ. ಇಂದು ಭಾರತ ಡಿಜಿಟಲ್ ಪೇಮೆಂಟ್‌ನಲ್ಲಿ ವರ್ಡ್ ಲೀಡರ್ ಆಗಿದೆ. ಯುಥ್ ಫೆಸ್ಟಿವಲ್‌‌ನಲ್ಲಿ ಯಾರೇ ಗೆದ್ದರೂ ದೇಶ ಗೆದ್ದಂತೆ. ವಿಕಸಿತ ಭಾರತ, ಸಶಕ್ತ ಭಾರತ ಅನ್ನೋದು ನಮ್ಮ ಆಶಯ ಎಂದು ಮೋದಿ ತಿಳಿಸಿದರು. ತಮ್ಮ ಭಾಷಣದ ಮೂಲಕ ಯುವ ಜನತೆಯಲ್ಲಿ ಕಿಚ್ಚು ಹಚ್ಚಿದ ಮೋದಿ, ಸ್ಪರ್ಧೆಗಳಲ್ಲಿ ಗೆದ್ದು ಬರುವಂತೆ ಶುಭ ಹಾರೈಸಿದರು.


ಇದನ್ನೂ ಓದಿ: Karnataka Election 2023: ಕಾಂಗ್ರೆಸ್​​​​ ಅಧಿಕಾರಕ್ಕೆ ಬಂದ್ರೆ ಕರೆಂಟ್​ ಫ್ರೀ; ರಾಜ್ಯದ ಪ್ರತಿಮನೆಗೂ 200 ಯೂನಿಟ್​ ಉಚಿತ


ಒಟ್ಟಾರೆ ಬಿಜೆಪಿ ಭದ್ರ ಕೋಟೆಯಲ್ಲಿ ಪ್ರಧಾನಿ ಮೋದಿ ಚುನಾವಣಾ ರಣಕಹಳೆ ಮೊಳಗಿಸಿ ದೆಹಲಿಗೆ ವಾಪಸ್ಸಾಗಿದ್ದಾರೆ. ಯುವಜನೋತ್ಸವದ ಹೆಸರಲ್ಲಿ ಹುಬ್ಬಳ್ಳಿಗೆ ಬಂದು ಹೋಗಿರೋ ಮೋದಿ ಕೆಲ ದಿನಗಳ ಅಂತರದಲ್ಲಿಯೇ ಧಾರವಾಡಕ್ಕೆ ಆಗಮಿಸಿ ಐಐಟಿ ಉದ್ಘಾಟನೆ ನೆರವೇರಿಸಲಿದ್ದಾರೆ ಎಂದು ಬಿಜೆಪಿ ನಾಯಕರು ತಿಳಿಸಿದ್ದಾರೆ. ಹೀಗಾಗಿ ಬಿಜೆಪಿ ಮೋದಿಯನ್ನು ಬರಮಾಡಿಕೊಳ್ಳೋ ಮೂಲಕ ಬಿಜೆಪಿ ಭರ್ಜರಿಯಾಗಿ ಚುನಾವಣಾ ತಾಲೀಮು ಆರಂಭಿಸಿದೆ.

Published by:Precilla Olivia Dias
First published: