ಬೆಂಗಳೂರು: ಮುಸ್ಲೀಮರ ವಿರುದ್ಧ (Muslim Community) ದ್ವೇಷ ಸಾಧಿಸಬೇಡಿ. ಇದು ಪ್ರಧಾನಿ ಮೋದಿ (PM Modi) ಬಿಜೆಪಿ ನಾಯಕರಿಗೆ ಕೊಟ್ಟಿರುವ ಎಚ್ಚರಿಕೆ ಸಂದೇಶನಾ? ಹೌದು ಅನ್ನೋದಕ್ಕೆ ಸಾಕ್ಷಿ ಯಡಿಯೂರಪ್ಪ (Ex CM BS Yediyurappa) ಕೊಟ್ಟ ಹೇಳಿಕೆ. ಆದರೆ ಇದೆಲ್ಲಾ ಎಲೆಕ್ಷನ್ ಪ್ರೀತಿ ಅಂತ ಈಗ ವಿಪಕ್ಷಗಳು ಕಿಡಿಕಾರ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರೊಂದಿಗೆ ಬರೋಬ್ಬರಿ ಒಂದು ಗಂಟೆ ಕಾಲ ಗಂಟೆ ಮಾತಾಡಿದ್ದಾರೆ. ಇದಕ್ಕೆ ಕಾರಣ ದಕ್ಷಿಣ ಭಾರತದಲ್ಲಿ (South India) ಬಿಜೆಪಿ ಆಡಳಿತದಲ್ಲಿರುವ ರಾಜ್ಯ ಎಂದರೇ ಅದು ಕರ್ನಾಟಕ (Karnataka) ಮಾತ್ರ. ಈ ಸಲ ಕರ್ನಾಟಕ ಚುನಾವಣೆಯಲ್ಲೂ ಕಮಲ ಅರಳಿಸಬೇಕು ಅನ್ನೋದು ಹೈಕಮಾಂಡ್ ಗುರಿ. ಇದಕ್ಕೆಂದೇ ಖುದ್ದು ಪ್ರಧಾನಿ ಮೋದಿಯೇ ರಾಜ್ಯ ಬಿಜೆಪಿ ನಾಯಕರಿಗೆ (Karnataka BJP Leaders) ಕೆಲ ಟಾಸ್ಕ್ ಕೊಟ್ಟಿದ್ದಾರೆ. ಯಡಿಯೂರಪ್ಪ ಅವರ ಜೊತೆಯಲ್ಲೇ ಗಂಟೆಗಟ್ಟಲೆ ಚರ್ಚೆ ನಡೆಸಿ ಕೆಲ ಮಹತ್ವದ ಸಂದೇಶ ನೀಡಿದ್ದಾರೆ.
ಮೋದಿ ಸರ್ವಧರ್ಮ ಮಂತ್ರ
ಪ್ರಧಾನಿ ಮೋದಿ ಈ ಬಾರಿ ಸರ್ವಧರ್ಮ ಸಮಾನತೆಯ ಮಂತ್ರ ಜಪಿಸಿದ್ದಾರೆ. ಅದರಲ್ಲೂ ರಾಜ್ಯದಲ್ಲಿ ಬಿಜೆಪಿ ನಾಯಕರು ಮುಸ್ಲಿಂ ಸಮುದಾಯದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡುವುದನ್ನ ನಿಲ್ಲಿಸಬೇಕು ಅಂತ ಸೂಚನೆ ಕೊಟ್ಟಿದ್ದಾರೆ. ಅಲ್ಲದೆ ಮುಸ್ಲಿಮರಿಗೆ ಅಗೌರವ ತೋರದೆ, ಉತ್ತಮ ಸಮನ್ವಯತೆ ಸ್ಥಾಪಿಸಿ ಅಂತ ಹೇಳಿದ್ದಾರೆ.
ಇದನ್ನೂ ಓದಿ: PM Narendra Modi: ಖರ್ಗೆ ಭದ್ರಕೋಟೆ ಛಿದ್ರ ಮಾಡಲು ಮೋದಿ ಲಗ್ಗೆ; ಇಂದು ಯಾದಗಿರಿ, ಕಲಬುರಿಯಲ್ಲಿ ಪ್ರಧಾನಿ ಮೋದಿ ಅಬ್ಬರ
ಇನ್ನು ರಾಜ್ಯದಲ್ಲಿ ಮುಸ್ಲಿಮರನ್ನ ತೆಗಳಿದರೆ ಮಾತ್ರ ಹಿಂದೂ ಮತ ಬರುತ್ತೆ ಅನ್ನೋ ಕಲ್ಪನೆ ಬೇಡ, ಮುಸ್ಲಿಂ ಸಮುದಾಯದ ಪರ ಸಹಾನುಭೂತಿಯಿಂದ ಯೋಚಿಸಿ ಅಂದಿದ್ದಾರೆ. ಬಿಜೆಪಿ ನಾಯಕರು ಇನ್ನುಮುಂದೆ ಮಂದಿರಗಳ ಜೊತೆ ಮಸೀದಿ, ಚರ್ಚ್ಗಳಿಗೂ ಭೇಟಿ ಕೊಡಬೇಕು ಅಂದಿದ್ದಾರೆ. ದೇಶದಲ್ಲಿ ಅನೇಕ ಸಮುದಾಯಗಳ ಮತಗಳು ಬಿಜೆಪಿಗೆ ಬರಲ್ಲ, ಹೀಗಾಗಿ ಮೊದಲು ಮತಗಳ ನಿರೀಕ್ಷೆ ಇಲ್ಲದೆ ಎಲ್ಲಾ ಧರ್ಮಗಳನ್ನೂ ತಲುಪಲು ಪ್ರಯತ್ನಿಸಿ ಅಂತ ಅಂದಿದ್ದಾರೆ.
BSY ಜೊತೆ ಮೋದಿ 1 ಗಂಟೆ ಮಾತುಕತೆ
ಈ ಕುರಿತಂತೆ ಮಾತನಾಡಿರುವ ಮಾಜಿ ಸಿಎಂ ಯಡಿಯೂರಪ್ಪ ಅವರು, ಬಹಳ ದೊಡ್ಡ ಪ್ರಮಾಣದಲ್ಲಿ ಅಲ್ಪಸಂಖ್ಯಾತ ಮುಸ್ಲಿಂ ಬಂಧುಗಳನ್ನು ನಮ್ಮ ಜೊತೆಗೆ ತೆಗೆದುಕೊಂಡು ಹೋಗುವಂತಹ ಪ್ರಮಾಣ ಪ್ರಯತ್ನ ಮಾಡ್ಬೇಕು ಎಂಬ ಸಲಹೆಯನ್ನು ಮೋದಿ ಅವರು ನೀಡಿದ್ದಾರೆ.
ನಾವು ಈಗಾಗಲೇ ಮುಸ್ಲಿಂ ಸಮುದಾಯದೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದೇವೆ. ನಮ್ಮ ಬಗ್ಗೆ ಗೌರವವಿದೆ, ನಮಗೂ ಅವರ ಮೇಲೆ ವಿಶ್ವಾಸವಿದೆ. ಮುಂದಿನ ದಿನಗಳಲ್ಲಿ ಇನ್ನು ಹೆಚ್ಚು ಅವರನ್ನು ಸಂಪರ್ಕ ಮಾಡುವ ಪ್ರಯತ್ನವನ್ನು ಪ್ರಧಾನಿಗಳ ಅಪೇಕ್ಷೆಯಂತೆ ಮಾಡುತ್ತೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: Actress Ramya: ಸಚಿವ ಸುಧಾಕರ್ರನ್ನ ಹಾಡಿ ಹೊಗಳಿದ ರಮ್ಯಾ; ಬಿಜೆಪಿ ಸೇರ್ಪಡೆಯಾಗ್ತಾರಾ ಮೋಹಕ ತಾರೆ?
ಯಡಿಯೂರಪ್ಪಗೆ ಹೈಕಮಾಂಡ್ ಮತ್ತೆ ಮಣೆ!
ಇನ್ನು ಕರ್ನಾಟಕ ಗೆಲ್ಲಲು ಯಡಿಯೂರಪ್ಪ ಅನಿವಾರ್ಯ ಅನ್ನೋದು ಬಿಜೆಪಿಗೆ ಗೊತ್ತಾಗಿದೆ. ಸಿಎಂ ಬೊಮ್ಮಾಯಿಯಾಗಲೀ ಅಥವಾ ನಳಿನ್ ಕುಮಾರ್ ಕಟೀಲ್ ಒಬ್ಬಿಬ್ಬರಿಂದ ಮಾತ್ರ ಪಕ್ಷ ಅಧಿಕಾರಕ್ಕೆ ತರಲು ಆಗಲ್ಲ. ಬಿಎಸ್ವೈ ಅವರು ಜನಪ್ರಿಯತೆಗೆ ಮಾತ್ರ ಇದು ಸಾಧ್ಯ ಅನ್ನೋದನ್ನ ಹೈಕಮಾಂಡ್ ಮನಗಂಡಿದೆ. ಹೀಗಾಗಿ ಕರ್ನಾಟಕದ ಮಟ್ಟಿಗೆ ಯಡಿಯೂರಪ್ಪನವರೇ ಪರಮೋಚ್ಛನಾಯಕ ಅನ್ನೋದನ್ನ ಹೈಕಮಾಂಡ್ ಒಪ್ಪಿಕೊಂಡಂತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ