PM Modi: ಬಿಜೆಪಿ ಸರ್ಕಾರ ಬಡವರ ಪರ; ಸತ್ಯಸಾಯಿ ಆಸ್ಪತ್ರೆ ಲೋಕಾರ್ಪಣೆ

ಪ್ರಧಾನಿ ನರೇಂದ್ರ ಮೋದಿ

ಪ್ರಧಾನಿ ನರೇಂದ್ರ ಮೋದಿ

ಪ್ರಾದೇಶಿಕ ಭಾಷೆಗಳಲ್ಲೂ ಮೆಡಿಕಲ್ ಕಲಿಕೆ ಸಿಗಲಿದೆ. ಬಡವರಿಗೆ ಈಗ ಉತ್ತಮ ಆಸ್ಪತ್ರೆಗಳು ದೊರಕುತ್ತಿವೆ. ಬಡವರಿಗೆ ಕಡಿಮೆ ವೆಚ್ಚದಲ್ಲಿ ಉತ್ತಮ ಚಿಕಿತ್ಸೆ ನೀಡಲಾಗುತ್ತಿದೆ. ಸಾಯಿ ವೈದ್ಯಕೀಯ ಕಾಲೇಜು ಉತ್ತಮ ಸೇವೆ ನೀಡುತ್ತಿದೆ. ಅವರ ಸೇವೆಗೆ ದೇಶದ ವತಿಯಿಂದ ಧನ್ಯವಾದ ಎಂದು ತಿಳಿಸಿದರು.

ಮುಂದೆ ಓದಿ ...
  • Share this:

ಚಿಕ್ಕಬಳ್ಳಾಪುರ: ಮುದ್ದೇನಹಳ್ಳಿಯಲ್ಲಿರುವ ಸತ್ಯಸಾಯಿ ಆಸ್ಪತ್ರೆ ಉದ್ಘಾಟಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ (PM Narendra Modi), ಇಂದು ನಿಮ್ಮೆಲ್ಲರನ್ನು ಭೇಟಿಯಾಗುವ ಅವಕಾಶ ನನಗೆ ಸಿಕ್ಕಿದೆ. ಸರ್ ಎಂ.ವಿಶ್ವೇಶರಯ್ಯ (Sir M Vishwesharaiah) ಅವರ ಜನ್ಮಸ್ಥಳ ಚಿಕ್ಕಬಳ್ಳಾಪುರ. ಇಂದು ಅವರ ಸಮಾಧಿಗೆ ಭೇಟಿ ನೀಡಿ ನಮಸ್ಕರಿಸಿದ್ದೇನೆ. ಈ ಪುಣ್ಯಭೂಮಿಗೆ ಬಂದಿರೋದು ಸಂತಸ ತಂದಿದೆ. ಇಂದು ವೈದ್ಯಕೀಯ ಕಾಲೇಜು (Medical College) ಆರಂಭವಾಗಿದೆ. ಇಲ್ಲಿಂದ ದೇಶಕ್ಕೆ ಅನೇಕ ಕೊಡುಗೆಗಳು ಸಿಕ್ಕಿವೆ. ಇದು ತಂತ್ರಜ್ಞಾನ, ಹೊಸ ಆವಿಷ್ಕಾರಗಳ ಪುಣ್ಯಭೂಮಿ. ಇಲ್ಲಿಂದ ದೇಶಕ್ಕೆ ಅನೇಕ ಕೊಡುಗೆಗಳು ಸಿಕ್ಕಿವೆ. ಇಂದು ವೈದ್ಯಕೀಯ ಕಾಲೇಜು ಆರಂಭ ಆಗ್ತಿದೆ. ದೇಶದ ಕೋಟಿ ಕೋಟಿ ಜನರಿಗೆ ಉಚಿತ ಚಿಕಿತ್ಸೆ ಸಿಗಲಿದೆ. ಇದಕ್ಕಾಗಿ ನನ್ನ ಅನಂತ ಅನಂತ ಧನ್ಯವಾದಗಳು ಎಂದರು.


ಸಂಕಲ್ಪ ಇದ್ದರೆ ಸಿದ್ಧಿ ಪ್ರಾಪ್ತಿ ಸಿಗಲಿದೆ. ಬಿಜೆಪಿ ಸರ್ಕಾರ ಬಡವರ ಪರವಾಗಿದೆ. ಆಶ್ರಮ, ಮಠಗಳು ಬಡವರಿಗಾಗಿ ಶ್ರಮಿಸಿವೆ. ಸತ್ಯಸಾಯಿ ವಿವಿಯ ವೇದವಾಕ್ಯ ಒಂದೇ ಯೋಗ, ಕರ್ಮ, ಕೌಶಲ್ಯದ ವೇದವಾಕ್ಯ.




2014ರ ಹಿಂದೆ 380 ಮೆಡಿಕಲ್​ ಕಾಲೇಜುಗಳಿದ್ದವು. ಈಗ ಭಾರತದಲ್ಲಿ 650 ಮೆಡಿಕಲ್ ಕಾಲೇಜುಗಳಿವೆ. ಕರ್ನಾಟಕದಲ್ಲೇ 37 ಮೆಡಿಕಲ್ ಕಾಲೇಜ್‌ಗಳಿವೆ. ಕನ್ನಡದಲ್ಲೇ ಮೆಡಿಕಲ್​ ಕಲಿಕೆಯ ಅವಕಾಶ ನೀಡಿದ್ದೇವೆ. ಕೆಲವರು ಕನ್ನಡ ಭಾಷೆಯನ್ನು ರಾಜಕೀಯವಾಗಿ ಬಳಸಿಕೊಂಡರು ಎಂದು ಹೇಳಿದರು.


ಇದನ್ನು ಓದಿ: Koppal Voters: 100 ವರ್ಷ ಮೀರಿದ 212 ಮತದಾರರು! ಈ ಹಿರಿಯರ ಮಾತನ್ನು ನೀವೂ ಕೇಳಿ!


ಕಡಿಮೆ ವೆಚ್ಚದಲ್ಲಿ ಉತ್ತಮ ಚಿಕಿತ್ಸೆ

top videos


    ಪ್ರಾದೇಶಿಕ ಭಾಷೆಗಳಲ್ಲೂ ಮೆಡಿಕಲ್ ಕಲಿಕೆ ಸಿಗಲಿದೆ. ಬಡವರಿಗೆ ಈಗ ಉತ್ತಮ ಆಸ್ಪತ್ರೆಗಳು ದೊರಕುತ್ತಿವೆ. ಬಡವರಿಗೆ ಕಡಿಮೆ ವೆಚ್ಚದಲ್ಲಿ ಉತ್ತಮ ಚಿಕಿತ್ಸೆ ನೀಡಲಾಗುತ್ತಿದೆ. ಸಾಯಿ ವೈದ್ಯಕೀಯ ಕಾಲೇಜು ಉತ್ತಮ ಸೇವೆ ನೀಡುತ್ತಿದೆ. ಅವರ ಸೇವೆಗೆ ದೇಶದ ವತಿಯಿಂದ ಧನ್ಯವಾದ ಎಂದು ತಿಳಿಸಿದರು.

    First published: