• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • PM Modi: ಇಂಧನ ಸಪ್ತಾಹ-2023ಕ್ಕೆ ಚಾಲನೆ; ಹಸಿರು ಇಂಧನ ಕ್ಷೇತ್ರದ ಬಗ್ಗೆ 'ನಮೋ' ಮಾತು

PM Modi: ಇಂಧನ ಸಪ್ತಾಹ-2023ಕ್ಕೆ ಚಾಲನೆ; ಹಸಿರು ಇಂಧನ ಕ್ಷೇತ್ರದ ಬಗ್ಗೆ 'ನಮೋ' ಮಾತು

ಪಿಎಂ ಮೋದಿ

ಪಿಎಂ ಮೋದಿ

ಇಂದು ಭಾರತದಲ್ಲಿ ಇಂಧನ ವಿಷಯವಾಗಿ ನಡೆಯುತ್ತಿರುವ ಅಭಿವೃದ್ಧಿ ಅತ್ಯಂತ ವೇಗವಾಗಿ ನಡೆಯುತ್ತಿದೆ. ಇಂದು ಸೋಲಾರ್ ಶಕ್ತಿಯಿಂದ ಮನೆ ಕೆಲಸಗಳು ನಡೆಯುತ್ತಿವೆ. ಸರ್ಕಾರಿ ಕಚೇರಿಗಳು, ವಿಮಾನ ನಿಲ್ದಾಣಗಳು, ಕೃಷಿ ಕೆಲಸಗಳು ಸೋಲಾರ್ ಶಕ್ತಿಯಿಂದ ನಡೆಯುತ್ತಿವೆ.

  • News18 Kannada
  • 3-MIN READ
  • Last Updated :
  • Bangalore, India
  • Share this:

ಬೆಂಗಳೂರು: ಬೆಂಗಳೂರಿಗೆ ಆಗಮಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಅವರನ್ನು ಸಿಎಂ ಬಸವರಾಜ್ ಬೊಮ್ಮಾಯಿ (CM Basavaraj Bommai) ಮತ್ತು ಥಾವರ್ ಚಂದ್ ಗೆಹ್ಲೋಟ್ ಬರಮಾಡಿಕೊಂಡರು. ನೆಲಮಂಗಲದ ಮಾದವಾರದ ಬಿಐಇಸಿಯಲ್ಲಿ, ಇಂಡಿಯಾ ಎನರ್ಜಿ ವೀಕ್ 2023ಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು. ಭಾರತ ಇಂಧನ ಸಪ್ತಾಹಕ್ಕೆ ಚಾಲನೆ ನೀಡಿದ ಬಳಿಕ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಟರ್ಕಿಯಲ್ಲಿ ಉಂಟಾಗಿರುವ ಭೂಕಂಪನದ ಬಗ್ಗೆ ಮಾತನಾಡಿ, ಸಂತ್ರಸ್ತರ ಜೊತೆ ಭಾರತ ಇರಲಿದೆ ಎಂದು ಹೇಳಿದರು. ಭಾರತ ಅತಿ ವೇಗವಾಗಿ ಬೆಳೆಯುತ್ತಿರುವ ದೇಶವಾಗಿದೆ. ಭೂಕಂಪ ಪೀಡಿತರಿಗೆ ಎಲ್ಲಾ ರೀತಿಯ ಸಹಾಯ ನೀಡಲು ಭಾರತ ಸಿದ್ಧವಾಗಿದೆ.


ಬೆಂಗಳೂರು ನಗರ ತಂತ್ರಜ್ಞಾನ, ಪ್ರತಿಭೆ ಮತ್ತು ನಾವೀನ್ಯತೆಯ ಶಕ್ತಿಯಿಂದ ತುಂಬಿದ ನಗರವಾಗಿದೆ. ನನ್ನಂತೆಯೇ ನೀವೂ ಸಹ ಇಲ್ಲಿನ ಯುವ ಶಕ್ತಿಯನ್ನು ಅನುಭವಿಸುತ್ತಿರಬೇಕು. ಭಾರತದ G20 ಪ್ರೆಸಿಡೆನ್ಸಿ ಕ್ಯಾಲೆಂಡರ್‌ನಲ್ಲಿ ಇದು ಮೊದಲ ಪ್ರಮುಖ ಶಕ್ತಿ ಘಟನೆಯಾಗಿದೆ. ಭಾರತ ಎನರ್ಜಿ ವೀಕ್ ಕಾರ್ಯಕ್ರಮಕ್ಕೆ ನಾನು ಎಲ್ಲರನ್ನು ಸ್ವಾಗತಿಸುತ್ತೇನೆ ಎಂದರು.


ಮೊಬೈಲ್ ತಯಾರಿಸುವ ಎರಡನೇ ರಾಷ್ಟ್ರ


ಭಾರತ ಅತಿ ಹೆಚ್ಚು ಮೊಬೈಲ್ ತಯಾರಿಸುವ ಎರಡನೇ ರಾಷ್ಟ್ರವಾಗಿದೆ.  ಇಂದು ಹಳ್ಳಿ ಹಳ್ಳಿಗೂ ತಂತ್ರಜ್ಆನ್ ತಲುಪಿದೆ. ಕೊರೊನಾ ಕಾಲಘಟ್ಟದಲ್ಲಿಯೂ ಭಾರತದ ಆರ್ಥಿಕತೆ ಪ್ರಕಾಶಮಾನವಾಗಿ ಅಭಿವೃದ್ಧಿಯತ್ತ ಸಾಗುತ್ತಿದೆ ಎಂದರು.


ಇಂಧನ ವಲಯದಲ್ಲಿಯೇ ಭಾರತ ಮುಂಚೂಣಿಯಲ್ಲಿದೆ. ಇಂದು ಭಾರತ ಹೊರಗಿನ ಸವಾಲುಗಳನ್ನು ಸಮರ್ಥವಾಗಿ ಎದುರಿಸುತ್ತದೆ. ಹೊರಗಿನ ಸ್ಥಿತಿ ಏನೇ ಇರಲಿ ಭಾರತ ಆಂತರಿಕವಾಗಿ ಸದೃಢವಾಗಿದೆ. ಇಂಧನ ಪೂರೈಕೆಯಲ್ಲಿ ಮತ್ತಷ್ಟು ಅಗತ್ಯ ಕ್ರಮಗಳು ಬೇಕಿದೆ. ಇಂದು ದೇಶದ ಹಳ್ಳಿ ಹಳ್ಳಿಗಳಿಗೂ ಅಂತರ್ಜಾಲ ಸಂಪರ್ಕ ಹೊಂದಿವೆ.


ಸೋಲಾರ್ ಶಕ್ತಿ ಬಳಕೆ


ಇಂದು ಭಾರತದಲ್ಲಿ ಇಂಧನ ವಿಷಯವಾಗಿ ನಡೆಯುತ್ತಿರುವ ಅಭಿವೃದ್ಧಿ ಅತ್ಯಂತ ವೇಗವಾಗಿ ನಡೆಯುತ್ತಿದೆ. ಇಂದು ಸೋಲಾರ್ ಶಕ್ತಿಯಿಂದ ಮನೆ ಕೆಲಸಗಳು ನಡೆಯುತ್ತಿವೆ. ಸರ್ಕಾರಿ ಕಚೇರಿಗಳು, ವಿಮಾನ ನಿಲ್ದಾಣಗಳು, ಕೃಷಿ ಕೆಲಸಗಳು ಸೋಲಾರ್ ಶಕ್ತಿಯಿಂದ ನಡೆಯುತ್ತಿವೆ. ಮನೆ ಮನೆ, ರಸ್ತೆ ಬದಿ ದೀಪಗಳಲ್ಲೂ ಇಂದು ಎಲ್​​ಇಡಿ ಬಳಕೆ ಮಾಡಲಾಗಿದೆ. ಮೂರು ಕೋಟಿಗೂ ಅಧಿಕ ಮನೆಗಳಲ್ಲಿ ಸೌರ ಕುಕ್​​ ಟಾಪ್​ಗಳಿವೆ. ಹಸಿರು ಇಂಧನದ ಬಗ್ಗೆ ಮಾತನಾಡಿದರು.



ಎಥೈನಾಲ್ ಬ್ಲೆಂಡ್


ಮುಂದಿನ ಕೆಲವೇ ವರ್ಷಗಳಲ್ಲಿ ಮಿಥೈನ್​ನಲ್ಲಿ ಸ್ವಾವಲಂಬಿಯಾಗಲಿದೆ. ಜೈವಿಕ ಇಂಧನ, ಎಥೈನಾಲ್ ಬ್ಲೆಂಡ್ ಮಾಡಲಾಗಿದೆ. ಎಥೈನಾಲ್ ಬ್ಲೆಂಡ್ ಶೇ.10ರಷ್ಟು ಹೆಚ್ಚಳ ಮಾಡಲಾಗಿದೆ.


ಇದನ್ನೂ ಓದಿ:  Karnika: ಭಾಗ್ಯದ ನಿಧಿ ತುಂಬಿ ತುಳುಕುತ್ತಲೇ ಪರಾಕ್; ಮೈಲಾರ ಗೊರವಯ್ಯ ಕಾರ್ಣಿಕ


ವಿದ್ಯುತ್ ಮರುಬಳಕೆ, ರೀಸೈಕ್ಲಿಂಗ್​ಗೆ ಮೊದಲ ಆದ್ಯತೆ ನೀಡಲಾಗಿದೆ. ಮರುಬಳಕೆಯ ಪದ್ಧತಿಯಿಂದ ಪರಿಸರದ ರಕ್ಷಣೆ ಆಗಲಿದೆ. ಗ್ಯಾಸ್​ ಪೈಪ್​ಲೈನ್ ವಿಸ್ತರಣೆಗೆ ಕ್ರಮಕೈಗೊಳ್ಳಲಾಗಿದೆ.




21ನೇ ಶತಮಾನದಲ್ಲಿ ವಿಶ್ವದ ಭವಿಷ್ಯವನ್ನು ನಿರ್ಧರಿಸುವಲ್ಲಿ ಇಂಧನ ಕ್ಷೇತ್ರವು ಪ್ರಮುಖ ಪಾತ್ರ ವಹಿಸುತ್ತದೆ. ಶಕ್ತಿಯ ಹೊಸ ಸಂಪನ್ಮೂಲಗಳನ್ನು ಅಭಿವೃದ್ಧಿಪಡಿಸುವಲ್ಲಿ ಮತ್ತು ಶಕ್ತಿಯ ಪರಿವರ್ತನೆಯಲ್ಲಿ ಭಾರತವು ಇಂದು ಪ್ರಬಲವಾದ ಧ್ವನಿಗಳಲ್ಲಿ ಒಂದಾಗಿದೆ ಎಂದರು.

Published by:Mahmadrafik K
First published: