ಹುಬ್ಬಳ್ಳಿ; ಯುವಜನೋತ್ಸವವನ್ನು (National Youth Day) ಉದ್ಘಾಟನೆ ಮಾಡಲು ಪ್ರಧಾನಿ ನರೇಂದ್ರ ಮೋದಿ ಅವರು (PM Narendra Modi) ಇಂದು ಹಬ್ಬಳಿಗೆ ಆಗಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಧಾನಿಗಳು ಸ್ವಾಗರಿಸಲು ಸಿಎಂ ಬಸವರಾಜ ಬೊಮ್ಮಾಯಿ (CM Basavaraj Bommai) ಅವರು ಹುಬ್ಬಳಿ ವಿಮಾನ ನಿಲ್ದಾಣಕ್ಕೆ (Hubli) ಬಂದಿಳಿದಿದ್ದಾರೆ. ಈ ವೇಳೆ ಹಣೆಗೆ ಹಚ್ಚಿಕೊಂಡಿದ್ದ ಕುಂಕುಮವನ್ನು ಸಿಎಂ ಅಳಿಸಿಕೊಂಡ ಘಟನೆ ನಡೆದಿದೆ. ಸಿಎಂ ಹುಬ್ಬಳಿಗೆ ಆಗಮಿಸಿದ ಹಿನ್ನೆಲೆಯಲ್ಲಿ ಯುವಜನೋತ್ಸವದ ಕಲಾತಂಡ (National Youth Day-2023) ಮುಖ್ಯಮಂತ್ರಿಗಳಿಗೆ ಆರತಿ ಮಾಡಿ ಸ್ವಾಗತ ಮಾಡಿದ್ದರು. ಈ ವೇಳೆ ಹಣೆಗೆ ಕುಂಕುಮವನ್ನು ಇಟ್ಟಿದ್ದರು. ಆದರೆ ಪ್ರಧಾನಿಗಳ ಆಗಮನ ಕುರಿತಂತೆ ಮಾಧ್ಯಮಗಳಿಗೆ ಮಾಹಿತಿ ನೀಡಲು ಬಂದ ಸಿಎಂ, ಹಣೆಗೆ ಇಟ್ಟಿದ್ದ ಕುಂಕುಮವನ್ನು ಅಳಿಸಿಕೊಂಡರು. ಅಲ್ಲದೇ, ನಾನು ದೇವಸ್ಥಾನಕ್ಕೆ ಹೋಗಿರಲಿಲ್ಲ. ಸ್ವಾಗತ ಕೋರಿ ಹಣೆಗೆ ಕುಂಕುಮ ಇಟ್ಟಿದ್ದರು ಎಂದು ತಿಳಿಸಿದ್ದರು.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ, ರಾಷ್ಟ್ರದ ಪ್ರಧಾನಿ ನರೇಂದ್ರ ಮೋದಿ ಹುಬ್ಬಳ್ಳಿಗೆ ಬರುತ್ತಿದ್ದಾರೆ. ಧಾರವಾಡದಲ್ಲಿ ಒಂದು ವಾರ ಕಾರ್ಯಕ್ರಮ ನಡೆಯುತ್ತಿದೆ.
ಹುಬ್ಬಳ್ಳಿಯಲ್ಲಿ ಕಾರ್ಯಕ್ರಮದ ಉದ್ಘಾಟನೆ ನಡೆಯುತ್ತಿದೆ. ನರೇಂದ್ರ ಮೋದಿ ಅವರು ಪ್ರಧಾನಿಗಳಾಗುವವರೆಗೂ ನಾವು ಜನಸಂಖ್ಯೆಯೇ ನಮ್ಮ ಅಭಿವೃದ್ಧಿಗೆ ಮಾರಕ ಎಂದು ತಿಳಿದಿದ್ದೇವು, ಆದರೆ ಈಗ ಯುವಕರನ್ನ ಬಳಕೆ ಮಾಡಿಕೊಂಡು ದೇಶ ಕಟ್ಟಬಹುದು. ಅವರಿಗೆ ಅಗತ್ಯವಿರುವ ಕೌಶಲ್ಯ ನೀಡಲು ಯುವಕರಿಗೆ ಬೇಕಾದ ಹೊಸ ಹೊಸ ಯೋಜನೆಯ ನೀಡಿದ್ದಾರೆ.
ಯುವಕರಿಗೆ ಮುದ್ರಾ ಯೋಜನೆ, ಖೇಲೋ ಇಂಡಿಯಾ ಸೇರಿದಂತೆ ಹಲವು ಯೋಜನೆಗಳ ಮೂಲಕ ಸಮಗ್ರವಾಗಿ ಯುವಕರಿಗೆ ಒತ್ತು ನೀಡಿದ್ದಾರೆ. ಯುವಜನೋತ್ಸವ ಕಾರ್ಯಕ್ರಮ ಹುಬ್ಬಳ್ಳಿ ನಡೆಯುತ್ತಿರುವುದು ಕರ್ನಾಟಕದ ಯುವಕರಿಗೆ ಸಂದೇಶ, ಉತ್ಸಾಹ ಉಂಟುಮಾಡಿದೆ. ನ್ಯೂ ಎಜುಕೇಷನ್ ಪಾಲಿಸಿ ಮೂಲಕ ವಿದ್ಯಾರ್ಥಿಗಳಿಗೆ ಹೆಚ್ಚಿನ ಪದವಿಗಳನ್ನು ಪಡೆಯಲು ಅವಕಾಶ ನೀಡಿದ್ದಾರೆ. ನಮ್ಮ ಭಾಗದಲ್ಲಿ ಈ ಕಾರ್ಯಕ್ರಮ ನಡೆಯುತ್ತಿರುವುದು ಬಹಳ ಸಂತೋಷ ತಂದಿದೆ.
ಕಾಂಗ್ರೆಸ್ ರಾಜಕೀಯ ದಿವಾಳಿ ಹೋಗಿದೆ. ಕಾಂಗ್ರೆಸ್ ನಲ್ಲಿ ಎಂತಹ ವ್ಯಕ್ತಿಗಳು ಇದ್ದರೆ ದಿನೇಶ್ ಗುಂಡೂರಾವ್ ನೋಡಲಿ, 200 ಯೂನಿಟ್ ವಿದ್ಯುತ್ ಫ್ರೀ ಭರವಸೆಯನ್ನು ಕಾಂಗ್ರೆಸ್ ಹತಾಶ ಮನೋಭಾವನೆಯಿಂದ ನೀಡಿದೆ. ಅವರ ಅವಧಿಯಲ್ಲಿ ಉಚಿತವಾಗಿ ನೀಡಬಹುದಿತ್ತು.
ಆದರೆ ಈಗ 200 ಯೂನಿಯನ್ ಫ್ರೀ ಏನೋ ಕೊಡುತ್ತಾರೆ ಅಂತೆ. ಹೇಗಾದ್ರು ಮಾಡಿ ಚುನಾವಣೆಯಲ್ಲಿ ಗೆಲ್ಲಲೇ ಬೇಕು ಎಂದು ತೀರ್ಮಾನ ಮಾಡಿ ಕಾಂಗ್ರೆಸ್ ಇಂತಹ ಸುಳ್ಳು ಆಶ್ವಾಸನೆಗಳನ್ನು ನೀಡುತ್ತಿದೆ. ಕೇಜ್ರಿವಾಲ್ ಈಗ ತಾನೇ ರಾಜ್ಯಕ್ಕೆ ಬಂದಿದ್ದಾರೆ, ಅದ್ದರಿಂದ ಅವರು ಹೇಳಿದ್ದರು. ಆದರೆ ರಾಜ್ಯದಲ್ಲಿ ಇಷ್ಟು ವರ್ಷ ಆಡಳಿತ ನಡೆಸಿರುವ ಕಾಂಗ್ರೆಸ್ ಇಂತಹ ಭರವಸೆಗಳನ್ನು ನೀಡಿರುವುದು, ಎಂದು ವ್ಯಂಗ್ಯವಾಡಿದರು.
ಇದನ್ನೂ ಓದಿ: PM Modi: ಬಿಜೆಪಿಯ ಲಕ್ಕಿ ಗ್ರೌಂಡ್ನಲ್ಲಿ ಮೋದಿ ಕಾರ್ಯಕ್ರಮ; ವಾಜಪೇಯಿ ಪಿಎಂ ಆಗಿದ್ದಾಗಲೂ ಇಲ್ಲಿಗೆ ಬಂದಿದ್ರು!
ಪ್ರಧಾನಿ ಮೋದಿಗೆ ಅಭಿಮಾನಿಯಿಂದ ವಿಶೇಷ ಸ್ವಾಗತ
ಹುಬ್ಬಳಿಗೆ ಆಗಮಿಸುತ್ತಿರುವ ಪ್ರಧಾನಿಗಳಿಗೆ ವಿಶೇಷವಾಗಿ ಕೋರಲು ಸಿದ್ಧತೆ ನಡೆಸಲಾಗಿದೆ. ಕಲಾವಿದರಾದ ದಿನೇಶ್ ಚಿಲ್ಲಾಳ ಅವರು ರಂಗೋಲಿಯಲ್ಲಿ ಅರಳಿದ ಪ್ರಧಾನಿ ಮೋದಿ ಚಿತ್ತಾರ ಬಿಡಿಸಿದ್ದು, ವೇದಿಕೆಯ ಮುಂಭಾಗದಲ್ಲಿಯೇ ಮೋದಿ ಚಿತ್ರ ಬಿಡಿಸಲಾಗಿದೆ.
ಇನ್ನು 75ನೇ ಅಮೃತ ಮಹೋತ್ಸವದ ಸಂದರ್ಭದಲ್ಲಿ ಮೋದಿ ಧರಿಸಿದ್ದ ಪೋಷಾಕಿನ ಚಿತ್ರವನ್ನು ಕಲಾವಿದರು ಬಿಡಿಸಿದ್ದಾರೆ. ಈ ರಂಗೋಲಿಯ ಚಿತ್ರವನ್ನು ಪ್ರಧಾನಿಗಳು ವೀಕ್ಷಣೆ ಮಾಡಲಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ದಿನೇಶ್ ಚಿಲ್ಲಾಳ್, ನಾನು ಬಿಡಿಸಿದ ಮೋದಿ ಚಿತ್ರವನ್ನು ಅವರೇ ಖುದ್ದು ನೋಡುತ್ತಿರುವುದು ಇದೇ ಮೊದಲು. ವಿಶ್ವ ನಾಯಕ ಮೋದಿ ಚಿತ್ರ ಬಿಡಿಸಿದ್ದು, ಅವರೇ ನೋಡ್ತಿರೋದು ಖುಷಿಯ ವಿಚಾರ ಎಂದು ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ