ಬೆಂಗಳೂರು: ಸದ್ಯ ರಾಜ್ಯದಲ್ಲಿ ಕಾಂಗ್ರೆಸ್ ಪ್ರಣಾಳಿಕೆ (Congress Manifesto) ಬಿಡುಗಡೆ ವಿವಾದದ ಜೊತೆಗೆ ಹೆಚ್ಚು ಸದ್ದು ಮಾಡುತ್ತಿದೆ. ರಾಜ್ಯದಲ್ಲಿ ಚುನಾವಣೆ (Election Campaign) ಪ್ರಚಾರ ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ (PM Narendra Modi) ವಿಜಯನಗರ (Vijayanagara) ಸಮಾವೇಶದಲ್ಲಿ ಪ್ರತಿಕ್ರಿಯಿಸಿ ಕಾಂಗ್ರೆಸ್ (Congress) ವಿರುದ್ಧ ವಾಗ್ದಾಳಿ ನಡೆಸಿದ್ದರು. ಪ್ರಧಾನಿಗಳು ತಮ್ಮ ಭಾಷಣದಲ್ಲಿ ಲಕ್ಷಾಂತರ ಹನುಮ ಭಕ್ತರ (Lord Hanuma Devotees) ಭಾವನೆಗಳಿಗೆ ಧಕ್ಕೆಯುಂಟು ಮಾಡಿದ್ದು, ಕ್ಷಮೆ ಕೇಳಬೇಕೆಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣ್ದೀಪ್ ಸುರ್ಜೇವಾಲಾ (Congress Leader Randeep Surjewala) ಆಗ್ರಹಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಹಾಗೂ ಅವರ ಸಂಗಡಿಗರು ರಾಜ್ಯ ಬಿಜೆಪಿ ಸರ್ಕಾರದ 40% ಭ್ರಷ್ಟಾಚಾರದ ಬಗ್ಗೆ ಮಾತನಾಡುವುದಿಲ್ಲ. ಕೇವಲ ಸಮಾಜ ವಿಭಜಿಸಿ ಚುನಾವಣೆ ನಡೆಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಸುರ್ಜೇವಾಲಾ ಆರೋಪಿಸಿದ್ದಾರೆ.
ಮೋದಿ ಹಾಗೂ ಬಿಜೆಪಿಯವರು ಪ್ರತಿ ಚುನಾವಣೆಯಲ್ಲೂ ಭ್ರಷ್ಟಾಚಾರ, ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆ, ದ್ವೇಷ ರಾಜಕೀಯ ವಿಚಾರವಾಗಿ ಉತ್ತರಿಸುವ ಬದಲು ಧರ್ಮದ ಹೆಸರಿನಲ್ಲಿ ಸಮಾಜ ವಿಭಜನೆ ಮಾಡಲು ಮುಂದಾಗುತ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಸಿಎಂ, ಪಿಎಂ ರಾಜಧರ್ಮ ಪಾಲಿಸುತ್ತಿಲ್ಲ
ಸಂವಿಧಾನ ಹಾಗೂ ಕಾನೂನಿನಲ್ಲಿ ಯಾವುದೇ ವ್ಯಕ್ತಿ ಅಥವಾ ಸಂಘಟನೆ ದ್ವೇಷವನ್ನು ಹರಡಿ, ಶತೃತ್ವ ಪಸರಿಸಿದರೆ ಅದರ ವಿರುದ್ಧ ಕಾನೂನು ರೀತಿಯ ಕ್ರಮ ಕೈಗೊಳ್ಳಬಹುದು ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ. ಈ ರಾಜಧರ್ಮವನ್ನು ಪಾಲಿಸಬೇಕು. ಆದರೆ ಪ್ರಧಾನಮಂತ್ರಿಗಳು ಹಾಗೂ ಮುಖ್ಯಮಂತ್ರಿಗಳು ಇದನ್ನು ಮಾಡಲು ನಿರಾಕರಿಸಿದ್ದಾರೆ.
ಹನುಮಂತನಿಗೆ ಅಪಮಾನ
ಹನುಮಂತ ರಾಜಧರ್ಮ ಪಾಲನೆಯ ಪ್ರತೀಕ, ಹನುಮಂತ ಗೌರವ ಹಾಗೂ ಕರ್ತವ್ಯದ ಪ್ರತೀಕ, ಹನುಮಂತ ಸೇವೆ ಹಾಗೂ ತ್ಯಾಗ ಪ್ರತೀಕ. ಇಂತಹ ಮಹಾನ್ ಹನುಮಂತನನ್ನು ಯಾವುದೇ ಒಬ್ಬ ವ್ಯಕ್ತಿ ಅಥವಾ ಸಂಘಟನೆಗೆ ಹೋಲಿಕೆ ಮಾಡುವುದು ಹನುಮಂತನಿಗೆ ಮಾಡಬಹುದಾದ ದೊಡ್ಡ ಅಪಮಾನ. ಪ್ರಧಾನಿ ನರೇಂದ್ರ ಮೋದಿ ಅವರು ಲಕ್ಷಾಂತರ ಹನುಮಂತನ ಭಕ್ತರ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಕಿಡಿಕಾರಿದ್ದಾರೆ.
ಕ್ಷಮೆಗೆ ಆಗ್ರಹ
ಇಂತಹ ಸುಳ್ಳನ್ನು ಸ್ವಯಂ ಘೋಷಿತ ಚಾಣಕ್ಯ, ಬಿ.ಎಲ್ ಸಂತೋಷ್ ಅವರ ಕಾರ್ಖಾನೆಯಲ್ಲೇ ತಯಾರು ಮಾಡಲಾಗಿದೆ. ಹನುಮಂತನನ್ನು ಬಜರಂಗದಳದ ಜೊತೆ ಹೋಲಿಕೆ ಮಾಡಿದ ಪ್ರಧಾನಮಂತ್ರಿಗಳು ಕೂಡಲೇ ಕ್ಷಮೆ ಕೋರಬೇಕು ಎಂದು ಸುರ್ಜೇವಾಲಾ ಆಗ್ರಹಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಹಾಗೂ ಅವರ ಸಂಗಡಿಗರು ರಾಜ್ಯ ಬಿಜೆಪಿ ಸರ್ಕಾರದ 40% ಭ್ರಷ್ಟಾಚಾರದ ಬಗ್ಗೆ ಮಾತನಾಡುವುದಿಲ್ಲ. ಕೇವಲ ಸಮಾಜ ವಿಭಜಿಸಿ ಚುನಾವಣೆ ನಡೆಸುವ ಪ್ರಯತ್ನ ಮಾಡುತ್ತಿದ್ದಾರೆ.
ಮೋದಿ ಹಾಗೂ ಬಿಜೆಪಿಯವರು ಪ್ರತಿ ಚುನಾವಣೆಯಲ್ಲೂ ಭ್ರಷ್ಟಾಚಾರ, ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆ, ದ್ವೇಷ ರಾಜಕೀಯ ವಿಚಾರವಾಗಿ ಉತ್ತರಿಸುವ ಬದಲು…
— Randeep Singh Surjewala (@rssurjewala) May 2, 2023
ಇದರ ವಿರುದ್ಧ ಲಕ್ಷಾಂತರ ಹನುಮಂತನ ಭಕ್ತರು ಹೋರಾಟ ಮಾಡುತ್ತಾರೆ. ಕನ್ನಡಿಗರು 40% ಭ್ರಷ್ಟಾಸುರರ ದಹನಕ್ಕೆ ಸಿದ್ಧರಾಗಿದ್ದಾರೆ ಎಂದು ಟ್ವಿಟ್ಟರ್ನಲ್ಲಿ ಬರೆದುಕೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ