ಬೆಂಗಳೂರು: ಇಂದು ಮತ್ತು ನಾಳೆ ಮತ್ತೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಕರ್ನಾಟಕಕ್ಕೆ ಆಗಮಿಸಲಿದ್ದು, ಬಿಜೆಪಿ ಅಭ್ಯರ್ಥಿಗಳ (BJP Candidates) ಪರ ಮತಯಾಚನೆ ಮಾಡಲಿದ್ದಾರೆ. ಇಂದು ಉತ್ತರ ಮತ್ತು ಮಧ್ಯೆ ಕರ್ನಾಟಕದಲ್ಲಿ ಪ್ರಧಾನಿ ಮೋದಿ ಪ್ರಚಾರ ನಡೆಸಲಿದ್ದಾರೆ. ಚಿತ್ರದುರ್ಗ (Chitradurga), ವಿಜಯನಗರ (Vijayanagar), ರಾಯಚೂರಿನ (Raichur) ಸಮಾವೇಶದಲ್ಲಿ ಭಾಗಿಯಾಗಿ, ಸಂಜೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Congress President, Mallikarjun Kharge) ಅವರ ಕ್ಷೇತ್ರ ಕಲಬುರಗಿಯಲ್ಲಿ (Kalaburgi) ಬೃಹತ್ ರೋಡ್ಶೋ ನಡೆಸಲಿದ್ದಾರೆ. ಕಲಬುರಗಿಯಲ್ಲಿ ರೋಡ್ಶೋ (Roadshow) ಇಂದು ಡ್ರೋನ್ ಹಾರಾಟ ನಿಷೇಧಿಸಲಾಗಿದೆ.
ಚಿತ್ರದುರ್ಗದಲ್ಲಿ ಬೆಳಗ್ಗೆ 10 ಗಂಟೆ, ವಿಜಯನಗರ ಮಧ್ಯಾಹ್ನ 12 ಗಂಟೆ, ರಾಯಚೂರಿನ ಸಿಂಧನೂರಿನಲ್ಲಿ ಮಧ್ಯಾಹ್ನ 2ಕ್ಕೆ ಸಮಾವೇಶ ನಡೆಯಲಿದೆ. ಕಲಬುರಗಿಯಲ್ಲಿ ಸಂಜೆ 5 ಗಂಟೆಗೆ ರೋಡ್ಶೋ ಆರಂಭಗೊಳ್ಳಲಿದೆ.
ಚಿತ್ರದುರ್ಗ
ಬೆಳಗ್ಗೆ 10.25ಕ್ಕೆ ಕುದಾಪುರ ಬಳಿಯ ಏರ್ಪೋರ್ಟ್ಗೆ ಆಗಮಿಸುವ ಪ್ರಧಾನಿಗಳು ಜಯದೇವ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿರುವ ಸಮಾವೇಶದಲ್ಲಿ ಮಾತನಾಡಲಿದ್ದಾರೆ.
ವಿಜಯನಗರ
ಹೊಸಪೇಟೆಯಲ್ಲಿ ಮಧ್ಯಾಹ್ನ 12 ಗಂಟೆಗೆ ಪುನೀತ್ ರಾಜ್‍ಕುಮಾರ್ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿರುವ ಸಮಾವೇಶದಲ್ಲಿ ಪ್ರಧಾನಿಗಳು ಭಾಗಿಯಾಗಲಿದ್ದಾರೆ. ಈ ಸಮಾವೇಶದಲ್ಲಿ ಸುಮಾರು 3 ಲಕ್ಷ ಜನರು ಸೇರುವ ನಿರೀಕ್ಷೆಗಳಿವೆ.
ರಾಯಚೂರು
ರಾಯಚೂರು ಜಿಲ್ಲೆಯ ಹೊಸಹಳ್ಳಿಗೆ ಮಧ್ಯಾಹ್ನ 2 ಗಂಟೆಗೆ ಪ್ರಧಾನಿಗಳು ಆಗಮಿಸಲಿದ್ದಾರೆ. ಭತ್ತದನಾಡು ಸಿಂಧನೂರಿನ ಹೊಸಹಳ್ಳಿ ಕ್ಯಾಂಪ್ನ 20 ಎಕರೆ ಪ್ರದೇಶದಲ್ಲಿ ನರೇಂದ್ರ ಮೋದಿ ಅವರ ಕಾರ್ಯಕ್ರಮಕ್ಕಾಗಿ ಬೃಹತ್ ವೇದಿಕೆ ನಿರ್ಮಿಸಲಾಗಿದೆ.
ಇದನ್ನೂ ಓದಿ: Karnataka Election: 4 ಜಿಲ್ಲೆಗಳಲ್ಲಿ ಮಿಂಚಿನ ಸಂಚಾರ ನಡೆಸಿದ ರಾಹುಲ್ ಗಾಂಧಿಗೆ ಮಳೆ ಕಾಟ!
ಕಲಬುರಗಿ
ಸಂಜೆ 5 ಗಂಟೆ ಕಲಬುರಗಿಯ ಗಂಜ್ ಪ್ರದೇಶದ ಕೆಎಂಎಫ್ನಿಂದ ವಲ್ಲಭಭಾಯ್ ಪಟೇಲ್ ವೃತ್ತದವರೆಗೂ ಪ್ರಧಾನಿಗಳ ರೋಡ್ ಶೋ ನಡೆಯಲಿದೆ. ಸುಮಾರು 7 ಕಿಲೋ ಮೀಟರ್ ರೋಡ್ಶೋ ಬಳಿಕ ಕಲಬುರಗಿ ನಗರದಲ್ಲಿಯೇ ಪ್ರಧಾನಿಗಳು ವಾಸ್ತವ್ಯ ಹೂಡಲಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ