Omicron ರೂಪಾಂತರಿ ಸವಾಲ್​ ಆಗಿರಬಹುದು; ಮಕ್ಕಳ ಲಸಿಕೆ ಅಭಿಯಾನಕ್ಕೆ ವೇಗ ನೀಡಲು ಪ್ರಧಾನಿ ಸೂಚನೆ

ರಾಜ್ಯದ ಸ್ಥಿತಿಗತಿ ಬಗ್ಗೆಯೂ ನಾವು ಹೇಳಿದ್ದೇವೆ. ಸದ್ಯ ರಾಜ್ಯದಲ್ಲಿ ಕೊವೀಡ್ ನಿಯಂತ್ರಣ ದಲ್ಲಿದೆ. ಪ್ರತಿ ದಿನ 30 ಸಾವಿರ ಟೆಸ್ಟ್ ಹೆಚ್ಚಳ ಮಾಡಲು ಕ್ರಮ ವಹಿಸಿದ್ದೇವೆ.

ಪ್ರಧಾನಿಗಳ ಜೊತೆ ಸಿಎಂ ಕೋವಿಡ್​ ಸಭೆ

ಪ್ರಧಾನಿಗಳ ಜೊತೆ ಸಿಎಂ ಕೋವಿಡ್​ ಸಭೆ

  • Share this:
    ಬೆಂಗಳೂರು (ಏ. 27):  ದೇಶದಲ್ಲಿ ತಗ್ಗಿದ್ದ ಕೋವಿಡ್ (Covid)​ ಪ್ರಕರಣಗಳು ಮತ್ತೇ ಏರಿಕೆ ಕಾಣುತ್ತಿದ್ದು, ಅನೇಕ ರಾಜ್ಯಗಳಲ್ಲಿ ಮಾಸ್ಕ್ (Mask)​ ಕಡ್ಡಾಯ ಆದೇಶ ಜಾರಿ ಮಾಡಲಾಗಿದೆ. ಈ ನಡುವೆ ನಾಲ್ಕನೇ ಅಲೆ ಭೀತಿ (Fourth wave) ಎದುರಾಗಿರುವ ಹಿನ್ನಲೆ ತೆಗೆದುಕೊಳ್ಳಬೇಕಾದ ಕಟ್ಟು ನಿಟ್ಟಿನ ಕ್ರಮಗಳ ಕುರಿತು ದೇಶದ ರಾಜ್ಯಗಳ ಸಿಎಂಗಳ ಜೊತೆ ಇಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಸಭೆ ನಡೆಸಿದರು. ಈ ವೇಳೆ ಕೋವಿಡ್ ರೂಪಾಂತಾರಿ ತಳಿ ಸೋಂಕಿನ ಕುರಿತು ಮಾಹಿತಿ ಪಡೆದ ಅವರು, ರಾಜ್ಯಗಳು ಕೈಗೊಳ್ಳಬೇಕಾದ ಕಟ್ಟುನಿಟ್ಟಿನ ಕ್ರಮದ ಕುರಿತು ಸೂಚನೆ ನೀಡಿದರು.

    ರಾಜ್ಯದ ಕೋವಿಡ್​ ಪರಿಸ್ಥಿತಿ ವಿವರಣೆ ನೀಡಿದ ಸಿಎಂ
    ಇನ್ನು ವಿಡಿಯೋ ಕಾನ್ಪರೆನ್ಸ್​ನಲ್ಲಿ ಭಾಗಿಯಾದ ಸಿಎಂ ಬಸವರಾಜ ಬೊಮ್ಮಾಯಿ ಅವರು ರಾಜ್ಯದ ಕೊವೀಡ್ ಪರಿಸ್ಥಿತಿ ಬಗ್ಗೆ ಪ್ರಧಾನಿಗಳಿಗೆ ವಿವರಣೆ ನೀಡಿದರು. ಈ ವೇಳೆ ಕೊವೀಡ್ ನಿಯಂತ್ರಣಕ್ಕೆ ಮಾಡಿರುವ ಕ್ರಮಗಳು, ತಜ್ಞರು ಕೊಟ್ಟ ಸಲಹೆಗಳು, ಸಲಹೆಗಳ ಆಧಾರದ ಮೇಲೆ ಮುಂದೆ ತೆಗೆದುಕೊಳ್ಳುವ ಕ್ರಮಗಳು ಹಾಗೂ ಕೊವೀಡ್ ಲಸಿಕಾಕರಣದ ಬಗ್ಗೆ ವಿವರಣೆ ನೀಡಿದರು.

    ಬೂಸ್ಟರ್​ ಡೋಸ್​ ಹೆಚ್ಚಳಕ್ಕೆ ಸೂಚನೆ
    ಕರ್ನಾಟಕದಲ್ಲಿ 98% ಎರಡನೇ ಡೋಸ್ ನೀಡಲಾಗಿದೆ. ಬೂಸ್ಟರ್​ ಡೋಸ್​ 55% ಆಗಿದ್ದು 45% ಬಾಕಿ ಇದೆ. ಮುಂಜಾಗ್ರತಾ ಕ್ರಮವಾಗಿ ಮಾಸ್ಕ್ ಕಡ್ಡಾಯ ಮಾಡಲಾಗಿದೆ. ವಿದೇಶದಿಂದ ಬಂದ ಪ್ರಯಾಣಿಕರ ಮೇಲೆ ನಿಗಾ ವಹಿಸಲಾಗಿದೆ. ಸೋಂಕು ಹೆಚ್ಚಿರುವ ದೇಶಗಳ ಪ್ರಯಾಣಿಕರಿಗೆ ಪ್ರತ್ಯೇಕ ಪರೀಕ್ಷೆಗೆ ಸೂಚನೆ ನೀಡಿದ್ದು, ಬೂಸ್ಟರ್ ಡೋಸ್ ಹೆಚ್ಚಳ ಮಾಡಲು ಒತ್ತು ಕೊಟ್ಟಿದ್ದೇವೆ ಎಂದು ತಿಳಿಸಿದರು.

    ಇದನ್ನು ಓದಿ: ಕರಗ ಮಹೋತ್ಸವ ವೇಳೆ ನಿಖಿಲ್ ಕುಮಾರಸ್ವಾಮಿಗೆ ಗರ್ಭಗುಡಿ ಪ್ರವೇಶಕ್ಕೆ ನಿರ್ಬಂಧ

    ಪ್ರಧಾನಿ ಜೊತೆ ಸಭೆ ಬಳಿಕ ಆರೋಗ್ಯ ಸಚಿವರು ಅಧಿಕಾರಿಳೊಂದಿಗೆ ಸಭೆ ನಡೆಸಿದ ಸಿಎಂ, ಬಳಿಕ ಮಾಧ್ಯಮಗಳಿಗೆ ಮಾತನಾಡಿದರು. ಈ ವೇಳೆ, ಪ್ರಧಾನ ಮಂತ್ರಿ ಗಳು ಸುದೀರ್ಘ ವಾಗಿ ರಾಜ್ಯದ ವರದಿ ಬಗ್ಗೆ ಪಡೆದಿದ್ದಾರೆ. ರಾಜ್ಯದ ಸ್ಥಿತಿಗತಿ ಬಗ್ಗೆಯೂ ನಾವು ಹೇಳಿದ್ದೇವೆ. ಸದ್ಯ ರಾಜ್ಯದಲ್ಲಿ ಕೊವೀಡ್ ನಿಯಂತ್ರಣ ದಲ್ಲಿದೆ. ಪ್ರತಿ ದಿನ 30 ಸಾವಿರ ಟೆಸ್ಟ್ ಹೆಚ್ಚಳ ಮಾಡಲು ಕ್ರಮ ವಹಿಸಿದ್ದೇವೆ.

    ಮಕ್ಕಳ ಲಸಿಕಾಕರಣಕ್ಕೆ ವೇಗ

    6-12 ವರ್ಷದ ಮಕ್ಕಳಿಗೆ ಅಭಿಯಾನದ ಮೂಲಕ ಲಸಿಕೆ ಕೊಡಲು ಪ್ರಧಾನಿ ಸೂಚನೆ ನೀಡಿದ್ದಾರೆ. 15 ರಿಂದ 18 ವರ್ಷದ ಮಕ್ಕಳಿಗೆ ಲಸಿಕೆ ಹೆಚ್ಚು ನೀಡಲು ಸೂಚನೆ ನೀಡಲಾಗಿದ್ದು, 3 ಸೂತ್ರದ ಬಗ್ಗೆ ಸೂಚನೆ ಕೊಟ್ಟಿದ್ದಾರೆ. ಲಸಿಕೆ ಅಭಿಯಾನ ಉತ್ತಮವಾಗಿ ಮಾಡಿದ್ರಿಂದ ಮೂರನೇ ಅಲೆ ಸಮರ್ಥವಾಗಿ ಎದುರಿಸಿದ್ದೇವೆ. ಈ ಹಿನ್ನಲೆ ಲಸಿಕಾಕರಣಕ್ಕೆ ಹೆಚ್ಚು ಒತ್ತು ನೀಡುವಂತೆ ಸೂಚಿಸಿದ್ದಾರೆ.

    ಇದನ್ನು ಓದಿ:  Puttur: ಹೊಡೆದಾಟವೂ ಇಲ್ಲಿ ಒಂದು ಆಚರಣೆ! ಪರಸ್ಪರ ಹೊಡೆದಾಡಿಕೊಳ್ತಾರೆ ಗ್ರಾಮಸ್ಥರು

    ಬೆಂಗಳೂರಿಗೆ ಹೆಚ್ಚು ಗಮನ ಕೊಟ್ಟಿದ್ದೇವೆ. ಟೆಸ್ಟಿಂಗ್ ಹೆಚ್ಚು ಮಾಡಲು ಕ್ರಮ ವಹಿಸಿದ್ದೇವೆ. ಸಾರ್ವಜನಿಕವಾಗಿ ಸ್ಥಳಗಳಲ್ಲಿ ಕೊವೀಡ್ ನಿಯಮ ಪಾಲನೆಗೆ ಕ್ರಮ ಕೈಗೊಳ್ಳಲಾಗಿದ್ದು, ವಿದೇಶದಿಂದ ಬಂದ ಪ್ರಯಾಣಿಕರ ಮೇಲೆ ನಿಗಾ ವಹಿಸಲಾಗಿದೆ. ಸೊಂಕು ಹೆಚ್ಚಿರುವ ದೇಶಗಳಿಂದ ಬಂದವರಿಗೆ ಪ್ರತ್ಯೇಕ ಪರೀಕ್ಷೆ ವ್ಯವಸ್ಥೆ ಮಾಡಲಾಗಿದೆ. ಪ್ರಧಾನಿಗಳು ಅನಾವಶ್ಯಕವಾದ ನಿರ್ಬಂಧ ಇರಬಾರದು. ಆದರೆ ಮುಂಜಾಗ್ರತಾ ಕ್ರಮದ ಮೂಲಕ ನಿಯಂತ್ರಣಕ್ಕೆ ಸೂಚನೆ ನೀಡಿದ್ದಾರೆ. ಅದರಂತೆ ಕಾರ್ಯ ನಿರ್ವಹಿಸಲಾಗುವುದು ಎಂದರು.

    ಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಕೊರೊನಾವೈರಸ್ ಸವಾಲು ಇನ್ನೂ ಮುಗಿದಿಲ್ಲ. ಓಮಿಕ್ರಾನ್ ಮತ್ತು ಉಪ ರೂಪಾಂತರಗಳು ಪಾಶ್ಚಿಮಾತ್ಯ ದೇಶಗಳಲ್ಲಿ ಸವಾಲಾಗಿದೆ. ದೇಶದ ವಯಸ್ಕರು ಈಗಾಗಲೇ ಮೊದಲ ಡೋಸ್​ ಲಸಿಕೆ ಪಡೆದಿದ್ದಾರೆ. 15 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ ಶೇ 85 ಮಂದಿ ಎರಡನೇ ಡೋಸ್​ ಲಸಿಕೆ ಪಡೆದಿದ್ದಾರೆ ಎಂದು ತಿಳಿಸಿದರು.
    Published by:Seema R
    First published: