ಕಾಶ್ಮೀರದ ಗಡಿಯಲ್ಲಿ ಯೋಧರೊಂದಿಗೆ ದೀಪಾವಳಿ ಆಚರಿಸಲಿರುವ ಪ್ರಧಾನಿ ನರೇಂದ್ರ ಮೋದಿ

ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದಾದ ಬಳಿಕ ಗಡಿ ನಿಯಂತ್ರಣ ರೇಖೆ ಬಳಿ ಬಿಗಿ ಬಂದೋಬಸ್ತ್​ ಮಾಡಲಾಗಿದೆ. ಕಾಶ್ಮೀರ ಶಾಂತಿಯನ್ನು ಕದಡುವ ಪ್ರಯತ್ನ ಪಾಕಿಸ್ತಾನದಿಂದ ನಡೆಸಲಾಗುತ್ತಿದೆ ಎಂಬ ಆರೋಪ ಕೂಡ ಕೇಳಿ ಬಂದಿರುವ ಹಿನ್ನೆಲೆ ಪ್ರಧಾನಿ ಭೇಟಿ ನೀಡುತ್ತಿರುವ ಸ್ಥಳದ ಬಗ್ಗೆ ಗೌಪ್ಯತೆ ಕಾಯ್ದುಕೊಳ್ಳಲಾಗಿದೆ.

Seema.R | news18-kannada
Updated:October 27, 2019, 7:03 AM IST
ಕಾಶ್ಮೀರದ ಗಡಿಯಲ್ಲಿ ಯೋಧರೊಂದಿಗೆ ದೀಪಾವಳಿ ಆಚರಿಸಲಿರುವ ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ
  • Share this:
ನವದೆಹಲಿ (ಅ.26): ಪ್ರಧಾನಿ ನರೇಂದ್ರ ಮೋದಿ ಈ ಬಾರಿ ಕಾಶ್ಮೀರದ ಗಡಿಯಲ್ಲಿ ಸೈನಿಕರೊಂದಿಗೆ ದೀಪಾವಳಿಯನ್ನು ಆಚರಿಸಿಕೊಳ್ಳಲಿದ್ದಾರೆ.

ಗಡಿ ನಿಯಂತ್ರಣ ರೇಖೆಯಲ್ಲಿ ಕರ್ತವ್ಯ ನಿರತರಾಗಿರುವ ಸೈನಿಕರನ್ನು ಭೇಟಿ ಮಾಡಿ ಅವರಿಗೆ ದೀಪಾವಳಿ ಶುಭಾಶಯ ಸಲ್ಲಿಸಲಿದ್ದಾರೆ.

ಕಳೆದ ವರ್ಷ ಕೂಡ ಪ್ರಧಾನಿ ಮೋದಿ ಉತ್ತರಖಂಡದ ಚೀನಾ, ಪಾಕಿಸ್ತಾನದ ಗಡಿ ಅಂಚಿನಲ್ಲಿ ಯೋಧರೊಂದಿಗೆ ದೀಪಾವಳಿ ಆಚರಿಸಿಕೊಂಡಿದ್ದರು.

ಅದೇ ರೀತಿ ಈ ಬಾರಿ ಕೂಡ ಯೋಧರೊಂದಿಗೆ ಅವರು ಹಬ್ಬದ ಸಮಯ ಕಳೆಯಲಿದ್ದಾರೆ. ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದಾದ ಬಳಿಕ ಗಡಿ ನಿಯಂತ್ರಣ ರೇಖೆ ಬಳಿ ಬಿಗಿ ಬಂದೋಬಸ್ತ್​ ಮಾಡಲಾಗಿದೆ. ಕಾಶ್ಮೀರ ಶಾಂತಿಯನ್ನು ಕದಡುವ ಪ್ರಯತ್ನ ಪಾಕಿಸ್ತಾನದಿಂದ ನಡೆಸಲಾಗುತ್ತಿದೆ ಎಂಬ ಆರೋಪ ಕೂಡ ಕೇಳಿ ಬಂದಿರುವ ಹಿನ್ನೆಲೆ ಪ್ರಧಾನಿ ಭೇಟಿ ನೀಡುತ್ತಿರುವ ಸ್ಥಳದ ಬಗ್ಗೆ ಗೌಪ್ಯತೆ ಕಾಯ್ದುಕೊಳ್ಳಲಾಗಿದೆ.

ಇದನ್ನು ಓದಿ: ಶ್ರೀನಗರದಲ್ಲಿ ಕೇಂದ್ರ ಮೀಸಲು ಭದ್ರತಾ ಪಡೆಯ ಮೇಲೆ ಗ್ರನೈಡ್ ಸ್ಫೋಟಿಸಿದ ಉಗ್ರರು; 6 ಸೈನಿಕರಿಗೆ ಗಾಯ

ಯೋಧರನ್ನು ಭೇಟಿಯಾಗಲಿರುವ ಮೋದಿ ಅವರಿಗೆ ಸಿಹಿ ಹಂಚಿ ಶುಭಾಶಯ ಕೋರಲಿದ್ದಾರೆ.

First published: October 27, 2019, 7:03 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading