• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Karnataka Elections 2023: ಬಿಜೆಪಿಗೆ ಬೂಸ್ಟ್ ಕೊಡ್ತಿದೆಯಾ ನಮೋ ಕ್ಯಾಂಪೇನ್; ಆಡಳಿತ ವಿರೋಧಿ ಅಲೆಯನ್ನ ಅಸ್ತ್ರ ಮಾಡಿಕೊಳ್ಳುತ್ತಾ ಕಾಂಗ್ರೆಸ್?

Karnataka Elections 2023: ಬಿಜೆಪಿಗೆ ಬೂಸ್ಟ್ ಕೊಡ್ತಿದೆಯಾ ನಮೋ ಕ್ಯಾಂಪೇನ್; ಆಡಳಿತ ವಿರೋಧಿ ಅಲೆಯನ್ನ ಅಸ್ತ್ರ ಮಾಡಿಕೊಳ್ಳುತ್ತಾ ಕಾಂಗ್ರೆಸ್?

ಕಾಂಗ್ರೆಸ್ -ಬಿಜೆಪಿ ಚುನಾವಣಾ ಪ್ರಚಾರ

ಕಾಂಗ್ರೆಸ್ -ಬಿಜೆಪಿ ಚುನಾವಣಾ ಪ್ರಚಾರ

PM Modi Campaign: ಬೆಲೆ ಏರಿಕೆಯ ವಿಷಯದಲ್ಲಿ ರಾಜ್ಯದಲ್ಲಿ ಮಾತ್ರವಲ್ಲದೆ ಅಂತರಾಷ್ಟ್ರೀಯ ಮಟ್ಟದಲ್ಲೂ ಇದು ಪ್ರಸ್ತುತ ಕಳವಳಕಾರಿ ವಿದ್ಯಮಾನವಾಗಿದೆ ಎಂಬ ಪ್ರತಿಕ್ರಿಯೆಗಳೇ ದೊರೆಯುತ್ತದೆ.

  • Trending Desk
  • 5-MIN READ
  • Last Updated :
  • Karnataka, India
  • Share this:

ಬೆಂಗಳೂರು: ಈ ಬಾರಿಯ ಚುನಾವಣೆಯಲ್ಲಿ (Elections) ಎಲ್ಲಾ ಪಕ್ಷಗಳು ರಾಜ್ಯದಲ್ಲಿ ಆಡಳಿತದ ಚುಕ್ಕಾಣಿ ಹಿಡಿಯಬೇಕೆಂಬ ಪ್ರಬಲ ಆಶಯದಲ್ಲಿ ತೀವ್ರ ಸ್ಪರ್ಧೆಗೆ ಇಳಿದಿವೆ. ಪ್ರತೀ ಬಾರಿ ಚುನಾವಣೆಯು ಮತದಾರರಿಗೆ (Voters) ಪ್ರಯೋಜನಕಾರಿಯಾಗಿರುವುದಕ್ಕಿಂತ ಹೆಚ್ಚು ಪಕ್ಷಗಳ ಲಾಭವನ್ನೇ ಗುರಿಯಾಗಿರಿಸಿಕೊಂಡಿದೆ. ಜನರ ಸಮಸ್ಯೆಗಳು ಹಾಗೂ ಕ್ಷೇತ್ರಗಳ ಅಭಿವೃದ್ಧಿ ಇಲ್ಲಿ ಮುಖ್ಯವಾಗುವುದೇ ಇಲ್ಲ ಬದಲಿಗೆ ಪಕ್ಷಗಳ ನಾಯಕರ (Political Leaders) ಸಂಘರ್ಷಗಳು, ಪಕ್ಷಗಳ ವಿವಾದಗಳು, ದೋಷಾರೋಪಗಳೇ ಚುನಾವಣೆಯ ಹೈಲೈಟ್ ಆಗಿ ಕಂಡುಬರುತ್ತಿದೆ.


ಚುನಾವಣೆಯ ಪಗಡೆಯಾಟದಲ್ಲಿ ಪಕ್ಷಗಳು ಜಾತಿ ಹಾಗೂ ಧರ್ಮಗಳ ದಾಳವನ್ನು ಬಳಸಿಕೊಂಡಿದ್ದು, ಜನರ ಸಮಸ್ಯೆಗಳಿಗೆ ದನಿಯಾಗಬೇಕಾಗಿರುವ ಮತ ಪ್ರಚಾರ ಚುನಾವಣೆ ಎಂಬುದು ಧರ್ಮ ಹಾಗೂ ಜಾತಿ ರಾಜಕೀಯಕ್ಕೆ ಮುಡಿಪಾಗಿರುವಂತೆ ಕಂಡುಬರುತ್ತಿದೆ.


ಕರ್ನಾಟಕದ ಭಾಗಗಳಲ್ಲಿ ರಾಜಕೀಯ ಪಗಡೆಯಾಟ


ಮಂಡ್ಯ, ತುಮಕೂರು ಹಾಗೂ ಮೈಸೂರು ಜಿಲ್ಲೆಗಳಲ್ಲಿ ಪ್ರಸ್ತುತ ಬೆಲೆ ಏರಿಕೆ, ಭ್ರಷ್ಟಾಚಾರ ನಿರ್ಮೂಲನೆ, ರೈತರ ಸಂಕಷ್ಟಗಳು, ಶಿಕ್ಷಣ ಮತ್ತು ಉದ್ಯೋಗಗಳ ಮೇಲಿನ ಕಾಳಜಿ ಆಡಳಿತ ವರ್ಗದ ಮುಂದಿರುವ ಸವಾಲಾಗಿದ್ದು ಇಲ್ಲಿನ ಜನತೆ ಕೂಡ ಆಡಳಿತ ಚುಕ್ಕಾಣಿ ಹಿಡಿಯುವ ಪಕ್ಷ ಈ ಬಗೆಯಲ್ಲಿ ಚಿಂತಿಸಲಿ ಹಾಗೂ ಸಮಸ್ಯೆಗಳಿಗೆ ಪರಿಹಾರವನ್ನೊದಗಿಸಲಿ ಎಂಬ ಆಶಯದಲ್ಲಿದೆ.




ಈ ಪ್ರಾಂತ್ಯಗಳು ಜಾತಿ ಪ್ರಾಬಲ್ಯವಿರುವ ಒಕ್ಕಲಿಕ ಕ್ಷೇತ್ರವೆನಿಸಿದ್ದು, ಜೆಡಿಎಸ್ ಇಲ್ಲಿ ಪ್ರಬಲ ಸ್ಥಾನ ಪಡೆದುಕೊಂಡಿದೆ ಅಂತೆಯೇ ಕಾಂಗ್ರೆಸ್‌ ಕೂಡ ಪೈಪೋಟಿಗೆ ಇಳಿದಿದೆ. ಈ ಎರಡೂ ಪಕ್ಷಗಳ ನಡುವೆ ಬಿಜೆಪಿ ಕೂಡ ಸ್ಥಾನ ಪಡೆದುಕೊಳ್ಳಲು ಹೆಣಗಾಡುತ್ತಿದೆ.


ಕರಾವಳಿ ಭಾಗದಲ್ಲಿ ಹಸಿರಾಗಿರುವ ಬಿಜೆಪಿ ಪ್ರಾಬಲ್ಯ


ಇನ್ನು ಕರ್ನಾಟಕದ ಕರಾವಳಿ ಭಾಗಗಳಾದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡದ ಭಾಗದಲ್ಲಿ ಬಿಜೆಪಿ ತನ್ನ ನಿಯಂತ್ರಣವನ್ನು ಸಾಧಿಸಿದೆ. ಹಿಂದುತ್ವದ ಆಧಾರದ ಮೇಲೆ ತನ್ನ ಭದ್ರಕೋಟೆ ನಿರ್ಮಿಸಿರುವ ಬಿಜೆಪಿ ಇಲ್ಲಿನ ಜನತೆಯ ಭಾವನೆಗಳನ್ನೇ ಪಕ್ಷದ ಶ್ರೇಯಸ್ಸಿಗಾಗಿ ಬಳಸಿಕೊಂಡಿದೆ.


ಹಿಂದುತ್ವ ಹಾಗೂ ಹಿಂದೂ ಕಾಳಜಿಗಳನ್ನು ಬಳಸಿಕೊಂಡು ಮತ ಹಾಕಿದರೆ ಅದು ಬಿಜೆಪಿಗೆ ಎಂಬ ತತ್ವಕ್ಕೆ ಬದ್ಧರಾಗಿರುವಂತೆ ಮನವೊಲಿಸಿಕೊಂಡಿದೆ.


ಉತ್ತರ ಕರ್ನಾಟಕದಲ್ಲಿ ಜಾತಿ ಪ್ರಧಾನವಾಗಿದೆ


ಉತ್ತರ ಕರ್ನಾಟಕದ ಭಾಗದಲ್ಲಿ ಅಂದರೆ ಹುಬ್ಬಳ್ಳಿ-ಧಾರವಾಡ ಪ್ರಾಂತ್ಯಗಳಲ್ಲಿ ಜಾತಿಯೇ ಮುಖ್ಯವಾಗಿದ್ದು ಪ್ರಬಲ ಲಿಂಗಾಯತ ಬಲದಿಂದ ಬಿಜೆಪಿಯೇ ಹೆಚ್ಚು ಲಾಭ ಪಡೆದುಕೊಳ್ಳಲಿದೆ.


ಈ ಭಾಗಗಳಲ್ಲಿ ಬಿಜೆಪಿ ತನ್ನ ಡಬಲ್ ಎಂಜಿನ್ ಸರಕಾರದ ಮೂಲಕ ಜನರ ಮನಗೆಲ್ಲಲು ಹೊರಟಿದ್ದು, ಪ್ರಗತಿಪರ ಅಭಿವೃದ್ಧಿ ಕಾರ್ಯಗಳು ಈ ಹಿಂದೆಯೇ ನಡೆದಿತ್ತು ಎಂಬುದನ್ನು ನೆನಪಿಸಿದೆ.


ಬಿಜೆಪಿ ಈ ಹಿಂದಿನ ತನ್ನ ಸಾಮರ್ಥ್ಯ ಹಾಗೂ ಬಲವನ್ನು ಕಳೆದುಕೊಂಡಿದ್ದು, ಬಿಜೆಪಿಯನ್ನು ಈ ಹಂತಕ್ಕೆ ತಂದ ಯಡಿಯೂರಪ್ಪನವರ ನಿರ್ಗಮನ, ಕೋವಿಡ್ ಬಿಕ್ಕಟ್ಟು, ಕೆಲವೊಂದು ಹಗರಣಗಳು ನಾಲ್ಕು ವರ್ಷಗಳ ಅವಧಿಯಲ್ಲಿ ಬಿಜೆಪಿಯ ಭದ್ರಕೋಟೆಯನ್ನು ಅಲ್ಲಾಡಿಸುವಷ್ಟರ ಮಟ್ಟಿಗೆ ಪರಿಣಾಮಕಾರಿಯಾಗಿದೆ.




ಕರ್ನಾಟಕದಲ್ಲಿ ಬಿಜೆಪಿ ದುರ್ಬಲವಾಗಿದೆಯೇ?


ಬಿಜೆಪಿಯ ಈ ದುರ್ಬಲತೆಯನ್ನೇ ಬಂಡವಾಳವಾಗಿಸಿಕೊಂಡಿರುವ ಇತರ ಪಕ್ಷಗಳು ಬಿಜೆಪಿಯ ಮೇಲೆ ದಾಳಿ ನಡೆಸುತ್ತಿವೆ. ಒಟ್ಟಿನಲ್ಲಿ ಬಸವರಾಜ ಬೊಮ್ಮಾಯಿ ಸರ್ಕಾರವು ಪ್ರದೇಶಗಳಾದ್ಯಂತ, ಬಿಜೆಪಿ ಬೆಂಬಲಿಗರ ನಡುವೆಯೂ ಸಹ ದುರ್ಬಲ ಅಸ್ತಿತ್ವವನ್ನು ಕಂಡುಕೊಂಡಿದೆ.


ಹಿಂದುತ್ವದ ಬಲವಾದ ಬೇರು ಇರುವಲ್ಲಿ ಮೋದಿ ಪ್ರಭಾವ ಪರಿಣಾಮ ಬೀರಬಹುದಾದರೂ ಇನ್ನುಳಿದ ಭಾಗಗಳಲ್ಲಿ ಪಕ್ಷಗಳು ವಿಭಜನೆಗೊಳ್ಳುತ್ತವೆ.


ಕರ್ನಾಟಕದಲ್ಲಿ ಬಿಜೆಪಿಗೆ, ಹಿಂದುತ್ವ ಮತ್ತು ಮೋದಿಯರ ಪ್ರಭಾವಿ ಅಂಶಗಳ ಕಾರಣದಿಂದ ಸರ್ಕಾರದ ವಿರುದ್ಧ ಆಡಳಿತ ವಿರೋಧಿಯನ್ನು ಪಳಗಿಸುವುದು ಸವಾಲಾಗಿದ್ದರೆ ಕಾಂಗ್ರೆಸ್‌ನ ಭವಿಷ್ಯ ಆಡಳಿತ ವಿರೋಧವು ಎಷ್ಟು ತೀವ್ರವಾಗಿದೆ ಎಂಬುದನ್ನು ಆಧರಿಸಿದೆ.


ಮತದಾರರ ಪ್ರತಿಕ್ರಿಯೆ ಹೇಗಿದೆ?


ತುಮಕೂರು ಜಿಲ್ಲೆಯ ಯಡಿಯೂರು ಗ್ರಾಮದಲ್ಲಿ ಟಿಪ್ಪು ಸುಲ್ತಾನ್ ಬಗೆಗಿನ ಹೇಳಿಕೆಗಳನ್ನೊಳಗೊಂಡಿರುವ ಬಿಜೆಪಿ ಹಿಂದುತ್ವ ಮತ ಪ್ರಚಾರವು ಅಲ್ಲಿನ ಜಾತಿ ಅಪನಂಬಿಕೆಯ ಮೇಲೆ ಪರಿಣಾಮ ಬೀರಿದೆ.


ಸಣ್ಣ ವ್ಯಾಪಾರೋದ್ಯಮಿಯಾಗಿರುವ ಕುಮಾರ್ ಪ್ರಸ್ತುತ ಬಿಜೆಪಿಯ ಮೇಲೆ ಅಸಮಾಧಾನ ಹೊಂದಿದ್ದು, ರಾಜ್ಯವು ರೈತ ಕೇಂದ್ರಿತವಾಗಿದ್ದರೂ ಬಿಜೆಪಿ ಗುತ್ತಿಗೆದಾರರಿಗೆ ಪ್ರಾಶಸ್ತ್ಯ ನೀಡುತ್ತದೆ.


ಈ ಗುತ್ತಿಗೆದಾರರು ಇತರ ರಾಜ್ಯಗಳಿಂದ ಜನರನ್ನು ಕರೆತರುತ್ತಾರೆ ಹಾಗೂ ವೇತನ ಕಡಿಮೆ ಮಾಡಿ ದುಡಿಸಿಕೊಳ್ಳುತ್ತಾರೆ. ಹೀಗಾದಾಗ ಸ್ಥಳೀಯರು ಉದ್ಯೋಗ ಸಮಸ್ಯೆಯಿಂದ ಬಳಲಬೇಕಾಗುತ್ತದೆ ಎಂದು ತಿಳಿಸಿದ್ದಾರೆ.


ಮದುವೆ ಕಾರ್ಯಕ್ರಮಗಳಿಗೆ ಹೂವಿನ ಅಲಂಕಾರ ಮಾಡುವ ರಾಮು ಕೂಡ ತಮ್ಮ ಅಭಿಮತ ತಿಳಿಸಿದ್ದು, ಎಲ್‌ಪಿಜಿ ಸಿಲಿಂಡರ್ ಬೆಲೆ ಏರಿದೆ. ಮೊದಲೆಲ್ಲಾ ಸೌದೆ ಕಟ್ಟಿಗೆಯಿಂದ ಜನ ಅಡುಗೆ ಮಾಡಿಕೊಳ್ಳುತ್ತಿದ್ದರು. ಇದೀಗ ಇಕ್ಕಟ್ಟಿಗೆ ಸಿಲುಕಿದ ಪರಿಸ್ಥಿತಿಯಾಗಿದೆ ಎಂದು ತಿಳಿಸಿದ್ದಾರೆ. ಎಲ್‌ಪಿಜಿ ಬೆಲೆ ಈ ಹಿಂದೆ ಇದ್ದ 400-600 ರೂ.ಗಳಿಂದ 1,200-1,400 ರೂ.ಗೆ ಏರಿಕೆಯಾಗಿದೆ ಎಂದು ತಿಳಿಸುತ್ತಾರೆ.


ಬಿಜೆಪಿ ಸರ್ಕಾರದ ವಿರುದ್ಧ ಕುಖ್ಯಾತ "40 ಪ್ರತಿಶತ ಕಮಿಷನ್" ಇನ್ನೊಬ್ಬ ಮತದಾರರಾದ ಕುಮಾರ್ ಆರೋಪಿಸಿದ್ದು ಪ್ರಧಾನಿಗೆ ಗುತ್ತಿಗೆದಾರರ ಸಂಘ ಬರೆದ ಪತ್ರದಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿಸಿದ್ದಾರೆ.


ಮೊದಲು 10% ಕಮೀಷನ್ ಇತ್ತು. ಇದೀಗ ಅದು 40% ವಾಗಿದೆ. ಕಳಪೆ ಗುಣಮಟ್ಟದ ರಸ್ತೆಯಲ್ಲಿಯೇ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಕಿಡಿಕಾರಿದ್ದಾರೆ.


ಆಡಳಿತ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ಮೇಲುಗೈ ಸಾಧಿಸಿದೆ


ಬಿಜೆಪಿಯ ಮಾಜಿ ಮುಖ್ಯಮಂತ್ರಿ ಹಾಗೂ 6 ಬಾರಿ ಶಾಸಕರಾಗಿದ್ದ ಜಗದೀಶ ಶೆಟ್ಟರ್ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದು ಭ್ರಷ್ಟಾಚಾರದ ಕಳವಳಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.


ಹುಬ್ಬಳ್ಳಿಯ ಕಿಮ್ಸ್ ವೈದ್ಯಕೀಯ ಕಾಲೇಜಿನಲ್ಲಿ 30 ವೈದ್ಯರ ಸೀಟುಗಳು ಖಾಲಿ ಇದ್ದು ಸಂದರ್ಶನದ ನಂತರ ನೇಮಕಾತಿ ನಡೆದಿಲ್ಲ. ಮುಖ್ಯಮಂತ್ರಿಗಳ ಸ್ವಂತ ಜಿಲ್ಲೆ ಹಾವೇರಿಯ ವೈದ್ಯಕೀಯ ಕಾಲೇಜಿನಲ್ಲಿ ಕಳೆದ ಎಂಟು ತಿಂಗಳಿಂದ ಸಂದರ್ಶನದ ನಂತರ 76 ಸೀಟುಗಳು ಖಾಲಿ ಇವೆ. ಫೈಲ್‌ಗಳು ಮಾತ್ರ ಮುಂದಕ್ಕೆ ಹೋಗುತ್ತಿವೆ ಯಾವುದೇ ನೇಮಕಾತಿ ನಡೆಯುತ್ತಿಲ್ಲ ಹಾಗೂ ರೋಗಿಗಳು ಬಳಲುತ್ತಿದ್ದಾರೆ ಎಂದು ಆಪಾದಿಸಿದ್ದಾರೆ.


ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆಯಲ್ಲಿ ಸರ್ಕಾರಿ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯಿನಿ ಜಾನಕಿ ಎಚ್‌ಟಿ ಅಭಿಪ್ರಾಯ ಪ್ರಕಟಿಸಿದ್ದು 1920ರ ದಶಕದಲ್ಲಿ ಅಂದಿನ ಮೈಸೂರು ದೊರೆ ಕೃಷ್ಣರಾಜ ಒಡೆಯರ್‌ ನಿರ್ಮಿಸಿದ್ದ ಕೆಆರ್‌ಎಸ್‌ ಅಣೆಕಟ್ಟು ಯಥಾಸ್ಥಿತಿಯಲ್ಲಿದ್ದು ಪ್ರಧಾನಿ ನರೇಂದ್ರ ಮೋದಿಯವರು ಉದ್ಘಾಟಿಸಿದ್ದ ರಾಷ್ಟ್ರೀಯ ಹೆದ್ದಾರಿ ಉದ್ಘಾಟನೆಯ ಒಂದು ವಾರದ ನಂತರ ಜಲಾವೃತವಾಯಿತು ಎಂಬ ಹೇಳಿಕೆಯನ್ನು ನೀಡಿದ್ದಾರೆ.


ಮೈಸೂರು ಭಾಗಗಳಲ್ಲಿ ಮೋದಿ ಹವಾ


ಮಂಡ್ಯ ಗ್ರಾಮಾಂತರ ವಲಯಗಳಲ್ಲಿ ಜನತೆ ಬಿಜೆಪಿಯ ಮೇಲೆ ಅಸಮಾಧಾನ ಹೊಂದಿದ್ದರೂ ಮೈಸೂರು ನಗರದಲ್ಲಿ ಪಕ್ಷದ ಮೇಲಿದ್ದ ಕೋಪ ಕಡಿಮೆಯಾದಂತಿದೆ.


ವಿಶೇಷವಾಗಿ ಯುವಕರಲ್ಲಿ, ಅನೇಕ ಮತದಾರರು ಕೇಂದ್ರ ಮತ್ತು ರಾಜ್ಯಗಳ ನಡುವೆ ವ್ಯತ್ಯಾಸವನ್ನು ಮಾಡುತ್ತಾರೆ. ಕೇಂದ್ರದಲ್ಲಿ ಮೋದಿ ಹವಾವಿದ್ದರೆ ರಾಜ್ಯ ಮಟ್ಟದಲ್ಲಿ ಕಾಂಗ್ರೆಸ್, ಜೆಡಿಎಸ್ ಇಲ್ಲವೇ ಸ್ಥಳೀಯ ಅಭ್ಯರ್ಥಿಗಳ ಪರವಾಗಿದೆ.




ಮೈಸೂರಿನ ಜಿಎಸ್‌ಎಸ್ ಕಾಲೇಜಿನ ಎಂಜಿನಿಯರಿಂಗ್ ವಿದ್ಯಾರ್ಥಿನಿ ರಮಿತಾ, ಮೋದಿ ಜಿ ಮಾತ್ರ ಉತ್ತಮ ನಾಯಕ, ಅವರು ಸ್ವಚ್ಛ ಭಾರತ್ ಮತ್ತು ಕೋವಿಡ್ ಸಮಯದಲ್ಲಿ ಉತ್ತಮ ಕೆಲಸ ಮಾಡಿದ್ದಾರೆ.


ಆದರೆ ಕರ್ನಾಟಕ ಬಿಜೆಪಿಯಲ್ಲಿ ಉತ್ತಮ ನಾಯಕರಿಲ್ಲ. ನನ್ನ ಕುಟುಂಬ ಜೆಡಿಎಸ್ ಅನ್ನು ಬೆಂಬಲಿಸುತ್ತದೆ, ಹಾಗಾಗಿ ರಾಜ್ಯದಲ್ಲಿ ನಾನು ಅದನ್ನು ಬೆಂಬಲಿಸಬಹುದು ಎಂದು ಹೇಳುತ್ತಾರೆ.


ಇನ್ನೊಬ್ಬ ವಿದ್ಯಾರ್ಥಿನಿ ಅಕ್ಷತಾ ಕೂಡ ಪ್ರತಿಕ್ರಿಯೆ ತಿಳಿಸಿದ್ದು ರಾಜ್ಯ ಮಟ್ಟದಲ್ಲಿ, ಎಲ್ಲಾ ಮೂರು ಪಕ್ಷಗಳು ರಾಜ್ಯದ ಪ್ರಗತಿಗಾಗಿ ಏನು ಮಾಡುತ್ತಿಲ್ಲ ನಾನು ಅಭ್ಯರ್ಥಿಯನ್ನು ನೋಡಿ ಮತಚಲಾಯಿಸುವುದು ಪಕ್ಷವನ್ನಲ್ಲ ಎಂದು ತಿಳಿಸಿದ್ದಾರೆ.


ಮೋದಿಯವರ ಬಗ್ಗೆ ಧನಾತ್ಮಕವಾಗಿ ಮಾತನಾಡುವ ಅಕ್ಷತಾ ದೇಶದ ಮುನ್ನಡೆಗೆ ರಕ್ಷಣೆಗೆ ಅನೇಕ ಕ್ರಮಗಳನ್ನು ಕೈಗೊಂಡಿದ್ದಾರೆ ಎಂದು ಹೇಳುತ್ತಾರೆ.


ಪಕ್ಷಕ್ಕಿಂತಲೂ ವ್ಯಕ್ತಿಯಾಗಿ ಮೋದಿಯವರ ಪ್ರಭಾವ


ಮೋದಿಗೆ ಬೆಂಬಲವನ್ನು ನೀಡುವ ಹಾಗೂ ಅವರು ಮಾಡಿರುವ ಕೆಲಸಗಳ ಬಗ್ಗೆ ಮೆಚ್ಚುಗೆ ನೀಡುವ ಹಲವಾರು ಜನಾಭಿಪ್ರಾಯಗಳು ದೊರೆತಿದ್ದು, ವ್ಯಕ್ತಿಯಾಗಿ ಮೋದಿ ಜನರ ಮನಸ್ಸಿನಲ್ಲಿ ಅಚ್ಚೊತ್ತಿದ್ದಾರೆ ಎಂಬುದು ನಿಚ್ಚಳವಾಗಿದೆ.


ಮೈಸೂರಿನಿಂದ ದಕ್ಷಿಣ ಕರ್ನಾಟದತ್ತ ಬಂದಂತೆ ಪಶ್ಚಿಮ ಘಟ್ಟದಾಚೆಗಿನ ಕರಾವಳಿ ಭಾಗಗಳಲ್ಲಿ ಅಭಿಪ್ರಾಯಗಳ ಏರಿಳಿತಗಳನ್ನು ಗಮನಿಸಬಹುದಾಗಿದೆ.


ಕರಾವಳಿ ಭಾಗಗಳಲ್ಲಿ ಬಿಜೆಪಿಗೆ ಬೆಂಬಲ


ಹಿಜಾಬ್, ಹಲಾಲ್, "ಲವ್ ಜಿಹಾದ್"ಗಳ ಸುತ್ತ ಯಶಸ್ವಿ ಹಿಂದುತ್ವ ಚಳುವಳಿಗಳ ಸುದೀರ್ಘ ಇತಿಹಾಸವನ್ನು ಹೊಂದಿರುವ ಕರಾವಳಿ ಪ್ರದೇಶಗಳಲ್ಲಿ, ಬಿಜೆಪಿ ಪರವಾದ ಬೆಂಬಲವನ್ನು ಕಾಣಬಹುದಾಗಿದೆ.


ಬಿಜೆಪಿ ಮಾತ್ರವಲ್ಲದೆ ಎಲ್ಲಾ ಸರಕಾರಗಳು ಸಮಾನವಾಗಿ ಭ್ರಷ್ಟವಾಗಿವೆ. ಕಾಂಗ್ರೆಸ್ ಕೂಡ ಭ್ರಷ್ಟತೆಯಿಂದಲೇ ತುಂಬಿತ್ತು. ಇನ್ನು ಬೆಲೆ ಏರಿಕೆಯ ವಿಷಯದಲ್ಲಿ ರಾಜ್ಯದಲ್ಲಿ ಮಾತ್ರವಲ್ಲದೆ ಅಂತರಾಷ್ಟ್ರೀಯ ಮಟ್ಟದಲ್ಲೂ ಇದು ಪ್ರಸ್ತುತ ಕಳವಳಕಾರಿ ವಿದ್ಯಮಾನವಾಗಿದೆ ಎಂಬ ಪ್ರತಿಕ್ರಿಯೆಗಳೇ ದೊರೆಯುತ್ತದೆ.


ಇದನ್ನೂ ಓದಿ:  Narendra Modi: ಜೆಡಿಎಸ್​ ಅಭ್ಯರ್ಥಿಗಳೆಲ್ಲಾ ಕಾಂಗ್ರೆಸ್ ಅಭ್ಯರ್ಥಿಗಳೇ! ತುಮಕೂರಲ್ಲಿ ಪ್ರಧಾನಿ ಮೋದಿ ವಾಗ್ದಾಳಿ


ಈ ಭಾಗದ ಜನತೆ ಮೋದಿ ಹಾಗೂ ಬಿಜೆಪಿಗೆ ಬೆಂಬಲವನ್ನು ನೀಡುತ್ತವೆಯೇ ಹೊರತು ಸರಕಾರ ಹಾಗೂ ಅಭ್ಯರ್ಥಿ ಮುಖ್ಯವಾಗಿಲ್ಲ. ಸುಳ್ಯದ ಕಾರ್ ಕೇರ್ ಸೆಂಟರ್‌ನ ಉದ್ಯೋಗಿ ಆನಂದ್ ಹೇಳುವಂತೆ ಬಿಜೆಪಿ ಅಧಿಕಾರಕ್ಕೆ ಮರಳಿದರೆ ಅದು ಮೋದಿ ಹೇಳಿದಂತೆ ಕೇಳುತ್ತದೆ ಹಾಗೂ ಅವರ ನಿಯಂತ್ರಣದಲ್ಲಿರುತ್ತದೆ.

top videos


    ಉತ್ತರ ಪ್ರದೇಶದಲ್ಲಿ ಹೇಗೆ ಗೂಂಡಾಗಳು ಹಾಗೂ ಕೊಲೆಗಾರರಿಗೆ ಶಿಕ್ಷೆ ವಿಧಿಸಲಾಗುತ್ತದೆಯೋ, ಹೇಗೆ ಅವರನ್ನು ಮಟ್ಟ ಹಾಕಲಾಗುತ್ತದೆಯೋ ಅದೇ ರೀತಿ ರಾಜ್ಯದಲ್ಲಿಯೂ ನಡೆಯಬೇಕು. ಕರ್ನಾಟಕ ಕೂಡ ಯುಪಿಯಂತಾಗಬೇಕು ಎಂದು ತಿಳಿಸಿದ್ದಾರೆ.

    First published: