• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Bengaluru: ಮೋದಿ ರೋಡ್​​​​ ಶೋನಿಂದ ಛತ್ರಕ್ಕೆ ಬಾರದ ಮದುಮಗ, ಕಣ್ಣೀರಿಟ್ಟ ಮದುಮಗಳು!

Bengaluru: ಮೋದಿ ರೋಡ್​​​​ ಶೋನಿಂದ ಛತ್ರಕ್ಕೆ ಬಾರದ ಮದುಮಗ, ಕಣ್ಣೀರಿಟ್ಟ ಮದುಮಗಳು!

ವಧು ವರನಿಗೆ ಮೋದಿ ರೋಡ್​ ಶೋ ಬಿಸಿ!

ವಧು ವರನಿಗೆ ಮೋದಿ ರೋಡ್​ ಶೋ ಬಿಸಿ!

ನಾವು ಒಂದು ತಿಂಗಳ ಹಿಂದೆಯೇ ಮದುವೆ ದಿನಾಂಕ ನಿಗದಿ ಮಾಡಿ, ಕಲ್ಯಾಣ ಮಂಟಪ ಬುಕ್​ ಮಾಡಿದ್ದೇವು. ಇವರು ಏಕಾಏಕಿ ರೋಡ್​ ಶೋ ಘೋಷಣೆ ಮಾಡಿದ್ದಾರೆ ಎಂದು ಯುವತಿ ಕಣ್ಣೀರಿಟ್ಟಿದ್ದಾರೆ.

  • News18 Kannada
  • 3-MIN READ
  • Last Updated :
  • Bangalore [Bangalore], India
  • Share this:

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ (PM Modi) ಅವರ ಮೆಗಾ ರೋಡ್ ಶೋ (Roadshow) ಕೆಲ ಹೊತ್ತಲ್ಲೇ ನಡೆಸಲಿದ್ದಾರೆ. ಈಗಾಗಲೇ ಸುಮನಹಳ್ಳಿ ಜಂಕ್ಷನ್ (Sumanahalli Junction ) ಬ್ರಿಡ್ಜ್ ಕೆಳಗೆ ಬ್ಯಾರಿಕೇಡ್ ಹಾಕಿದ ಪೊಲೀಸರು. ರೋಡ್ ಶೋ ವೇಳೆ ಸಾರ್ವಜನಿಕರು ಮತ್ತು ಕಾರ್ಯಕರ್ತರು ರಸ್ತೆಗೆ ಬರದಂತೆ ಬಿಗಿ ಬಂದೋಬಸ್ತ್‌ ಕೈಗೊಂಡಿದ್ದಾರೆ. ಬೆಂಗಳೂರಿನ (Bengaluru) ಹಲವು ಕಡೆ ಭಾರೀ ಮಳೆಯಾಗಿದೆ. ಶಾಂತಿನಗರ, ಶಿವಾಜಿನಗರ, ಕೆ.ಆರ್.ವೃತ್ತ, ಮೆಜೆಸ್ಟಿಕ್, ಮಲ್ಲೇಶ್ವರಂ, ಕೆಆರ್ ಮಾರ್ಕೆಟ್ (KR Market), ಕಾರ್ಪೊರೇಷನ್ ಸರ್ಕಲ್, ರಿಚ್ ಮಂಡ್ ಸರ್ಕಲ್, ಸುಮನಹಳ್ಳಿ ಜಂಕ್ಷನ್​ ಸೇರಿದಂತೆ ಹಲವೆಡೆ ಮಳೆಯಾಗಿದೆ. ಪ್ರಧಾನಿ ಮೋದಿ ರೋಡ್​ ಶೋಗೆ ವರುಣರಾಯ ಅಡ್ಡಿಪಡಿಸುವ ಸಾಧ್ಯತೆ ಇದೆ.


ಇದರ ನಡುವೆ ಬೆಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿಯಿಂದ ರೋಡ್ ಶೋ ಹಿನ್ನೆಲೆಯಲ್ಲಿ ರಸ್ತೆಗಳ ಬಂದ್ ಮಾಡಿರುವುದರಿಂದ ಜನರಿಗೆ ಕಿರಿಕಿರಿ ಆಗುತ್ತಿದೆ. ಮದುವೆ ಮನೆಗೆ ಹೋಗೋದಕ್ಕೂ ಮದುಮಗ ಹಾಗೂ ಮದುಮಗಳು ಪರದಾಡುತ್ತಿದ್ದಾರೆ. ಕಲ್ಯಾಣ ಮಂಟಪಕ್ಕೆ ಹೋಗುತ್ತಿದ್ದ ಮದುವೆ ಗಂಡು, ಹೆಣ್ಣನ್ನು ಪೊಲೀಸರು ತಡೆದು ನಿಲ್ಲಿಸಿದ್ದಾರೆ. ಕಾರಿನಲ್ಲಿ ತೆರಳಲು ಪೊಲೀಸರು ಅನುಮತಿ ನೀಡದ ಕಾರಣ ಕೊನೆಗೆ ಮದುಮಗಳು ಬೈಕ್​​ನಲ್ಲಿ ಕಲ್ಯಾಣ ಮಂಟಪಕ್ಕೆ ತೆರಳಿದ್ದಾರೆ.




ಈ ಕುರಿತಂತೆ ನ್ಯೂಸ್​18 ಕನ್ನಡದೊಂದಿಗೆ ಮಾತನಾಡಿದ ಮದುಮಗಳು, ಸುಮನಹಳ್ಳಿಯಲ್ಲೇ ಪೊಲೀಸರು ಬ್ಯಾರಿಕೇಟ್​ ಆಗಿ ಕ್ಲೋಸ್​ ಮಾಡಿದ್ದಾರೆ. ನಾವು ಬರೋ ವೇಳೆಗೆ ಟ್ರಾಫಿಕ್ ಜಾಮ್​ ಆಗಿತ್ತು. ಹುಡುಗ ಕೂಡ ಇನ್ನೂ ಮದುವೆ ಮಂಟಪಕ್ಕೆ ಬಂದಿಲ್ಲ. ಜನರು ಮದುವೆಗೆ ಬರಲು ಕೂಡ ಆಗುತ್ತಿಲ್ಲ. ಒಬ್ಬರಿಗಾಗಿ ಇಷ್ಟೆಲ್ಲಾ ಸಮಸ್ಯೆ ಆಗುತ್ತಿರುವ ಬಗ್ಗೆ ನಾಯಕರೇ ಅರ್ಥ ಮಾಡಿಕೊಳ್ಳಬೇಕು.


ಇದನ್ನೂ ಓದಿ: Karnataka Election: ನಮೋ ಹೊಸ ಮಂತ್ರ; ಈ ಬಾರಿಯ ನಿರ್ಧಾರ ಬಹುಮತದ ಬಿಜೆಪಿ ಸರ್ಕಾರ! ಕನ್ನಡದಲ್ಲೇ ಒತ್ತಿ ಒತ್ತಿ ಹೇಳಿದ ಮೋದಿ




ನಾವು ಒಂದು ತಿಂಗಳ ಹಿಂದೆಯೇ ಮದುವೆ ದಿನಾಂಕ ನಿಗದಿ ಮಾಡಿ, ಕಲ್ಯಾಣ ಮಂಟಪ ಬುಕ್​ ಮಾಡಿದ್ದೇವು. ಇವರು ಏಕಾಏಕಿ ರೋಡ್​ ಶೋ ಘೋಷಣೆ ಮಾಡಿದ್ದಾರೆ. ಪೊಲೀಸರು ಕಲ್ಯಾಣ ಮಂಟಪದ ಎದುರು ಕೂಡ ಬ್ಯಾರಿಕೇಟ್​ ಆಗಿದ್ದು, ಮದುವೆ ಊಟದ ತಯಾರಿಗೆ ಬೇಕಿದ್ದ ಹಲವು ವಸ್ತುಗಳನ್ನು ತೆಗೆದುಕೊಂಡು ಬರಲು ಆಗಿಲ್ಲ. ಬಹಳ ದೂರದಿಂದ ಈಗ ವಸ್ತುಗಳನ್ನು ಹೊತ್ತುಕೊಂಡು ತರುವ ಸ್ಥಿತಿ ನಿರ್ಮಾಣ ಆಗಿದ್ದು, ಬಹಳ ಬೇಸರ ಆಗ್ತಿದೆ ಎಂದು ತಿಳಿಸಿದ್ದಾರೆ.

top videos
    First published: