PM Modi @Bengaluru: ಇಂದು ಇಡೀ ದಿನ ಬೆಂಗಳೂರಲ್ಲಿ ಮೋದಿ ಏನೆಲ್ಲಾ ಮಾಡ್ತಾರೆ? ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ

ಪ್ರಧಾನಿ ನರೇಂದ್ರ ಮೋದಿ ಇಂದು, ನಾಳೆ 2 ದಿನಗಳ ಕಾಲ ಕರ್ನಾಟಕ ಪ್ರವಾಸ ಕೈಗೊಂಡಿದ್ದಾರೆ. ಬೆಂಗಳೂರು, ಮೈಸೂರಿಗೆ ಪಿಎಂ ಭೇಟಿ ನೀಡಲಿದ್ದಾರೆ. ಇಂದು ಇಡೀ ದಿನ ಬೆಂಗಳೂರಲ್ಲಿ ಮೋದಿ ಏನೆಲ್ಲಾ ಮಾಡ್ತಾರೆ ಎಂಬುವುದರ ಮಾಹಿತಿ ಇಲ್ಲಿದೆ.

ಪ್ರಧಾನಿ ಮೋದಿ (ಸಂಗ್ರಹ ಚಿತ್ರ)

ಪ್ರಧಾನಿ ಮೋದಿ (ಸಂಗ್ರಹ ಚಿತ್ರ)

  • Share this:
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ (PM Modi) ಅವರು ಸೋಮವಾರ, ಮಂಗಳವಾರ ಎರಡು ದಿನಗಳ ಕಾಲ ಕರ್ನಾಟಕ ಪ್ರವಾಸ (Karnataka Tour) ನಡೆಸಲಿದ್ದಾರೆ. ಬೆಂಗಳೂರು ಮತ್ತು ಮೈಸೂರಿಗೆ (Bengaluru and Mysore) ಭೇಟಿ ನೀಡಲಿದ್ದು, ವಿವಿಧ ಅಧಿಕೃತ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಮೊದಲ ದಿನವಾದ ಇಂದು ಬೆಳಗ್ಗೆ ಅವರು ಮೆದುಳಿನ ಸಂಶೋಧನಾ ಕೇಂದ್ರವನ್ನು ಉದ್ಘಾಟಿಸಲಿದ್ದಾರೆ. ಐಐಎಸ್‌ಸಿಯಲ್ಲಿ ಬಾಗ್ಚಿ-ಪಾರ್ಥಸಾರಥಿ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯ ಅಡಿಪಾಯವನ್ನು ಹಾಕುತ್ತಾರೆ. ನಂತರ ಮೋದಿ ಅವರು ಡಾ. ಬಿ.ಆರ್. ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ (ಬೇಸ್) ನ ಹೊಸ ಕ್ಯಾಂಪಸ್ ಅನ್ನು ಪ್ರಾರಂಭಿಸಲಿದ್ದಾರೆ. ಟಾಟಾ ಅವರ ಉದಾರ ಧನಸಹಾಯದೊಂದಿಗೆ ಐಟಿಐಗಳನ್ನು ಉನ್ನತೀಕರಿಸುವ ಮೂಲಕ ರಾಜ್ಯದ ಕೌಶಲ್ಯಾಭಿವೃದ್ಧಿ ಇಲಾಖೆ ಅಭಿವೃದ್ಧಿಪಡಿಸಿದ 150 ತಂತ್ರಜ್ಞಾನ ಕೇಂದ್ರಗಳಿಗೆ ಮೋದಿ ಚಾಲನೆ ನೀಡಲಿದ್ದಾರೆ.

ಮಧ್ಯಾಹ್ನ, 27,000 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಬಹು ರೈಲು ಮತ್ತು ರಸ್ತೆ ಮೂಲಸೌಕರ್ಯ ಯೋಜನೆಗಳಿಗೆ ಪ್ರಧಾನಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಸಂಜೆ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಸಾರ್ವಜನಿಕ ಸಮಾರಂಭದಲ್ಲಿ ಭಾಗವಹಿಸುವ ಅವರು ನಾಗನಹಳ್ಳಿ ರೈಲು ನಿಲ್ದಾಣದಲ್ಲಿ ಕೋಚಿಂಗ್ ಟರ್ಮಿನಲ್‌ಗೆ ಶಂಕುಸ್ಥಾಪನೆ ಮತ್ತು ಅಖಿಲ ಭಾರತ ಸಂಸ್ಥೆಯಲ್ಲಿ 'ಸಂವಹನ ಅಸ್ವಸ್ಥತೆ ಹೊಂದಿರುವ ವ್ಯಕ್ತಿಗಳ ಶ್ರೇಷ್ಠತೆಯ ಕೇಂದ್ರ'ವನ್ನು ಉದ್ಘಾಟಿಸಲಿದ್ದಾರೆ. (AIISH).

ಸಂಜೆ ಸುತ್ತೂರು ಮಠಕ್ಕೆ ಭೇಟಿ ನೀಡಲಿದ್ದು, ಬಳಿಕ ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಮೋದಿ ಭೇಟಿ ನೀಡಲಿದ್ದಾರೆ. ಮಂಗಳವಾರ ಎಂಟನೇ ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ಮೈಸೂರು ಅರಮನೆ ಮೈದಾನದಲ್ಲಿ ನಡೆಯುವ ಸಾಮೂಹಿಕ ಯೋಗ ಪ್ರದರ್ಶನದಲ್ಲಿ ಮೋದಿ ಭಾಗವಹಿಸಲಿದ್ದಾರೆ.

ಬೆಂಗಳೂರಿನಲ್ಲಿ ಪ್ರಧಾನಿ ಏನು ಮಾಡುತ್ತಾರೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ

1) ಬೆಂಗಳೂರು ಉಪನಗರ ರೈಲು ಯೋಜನೆಗೆ (BSRP) ಚಾಲನೆ. 15,700 ಕೋಟಿ ರೂ.ಗಳ ಯೋಜನೆಯು 148-ಕಿಮೀ ಉದ್ದದ ಮಾರ್ಗದ ನಾಲ್ಕು ಕಾರಿಡಾರ್‌ಗಳನ್ನು ಹೊಂದಿರುತ್ತದೆ.

2) ಬೆಂಗಳೂರು ಕ್ಯಾಂಟ್ ಮತ್ತು ಯಶವಂತಪುರ ಜಂಕ್ಷನ್ ರೈಲು ನಿಲ್ದಾಣಗಳ ಪುನರಾಭಿವೃದ್ಧಿಗೆ ಕ್ರಮವಾಗಿ 500 ಕೋಟಿ ಮತ್ತು 375 ಕೋಟಿ ರೂ. ಮಂಜೂರು

ಇದನ್ನೂ ಓದಿ: PM Modi: ವಿಮಾನ ನಿಲ್ದಾಣಕ್ಕೆ ತೆರಳುವ ಪ್ರಯಾಣಿಕರಿಗೆ ಪರ್ಯಾಯ ಮಾರ್ಗ ಸೂಚಿಸಿದ ಪೊಲೀಸರು

3) ಬೈಯಪ್ಪನಹಳ್ಳಿಯಲ್ಲಿ ಭಾರತದ ಮೊದಲ ಎಸಿ ರೈಲು ನಿಲ್ದಾಣ ಸರ್ ಎಂ ವಿಶ್ವೇಶ್ವರಯ್ಯ ರೈಲು ನಿಲ್ದಾಣ ಉದ್ಘಾಟನೆ. 315 ಕೋಟಿ ರೂಪಾಯಿ ವೆಚ್ಚದಲ್ಲಿ ಆಧುನಿಕ ವಿಮಾನ ನಿಲ್ದಾಣದ ರೀತಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ.

4) ಉಡುಪಿ, ಮಡಗಾಂವ್ ಮತ್ತು ರತ್ನಗಿರಿಯಿಂದ ಎಲೆಕ್ಟ್ರಿಕ್ ರೈಲುಗಳನ್ನು ಫ್ಲ್ಯಾಗ್ ಮಾಡುವ ಮೂಲಕ ರೋಹಾ (ಮಹಾರಾಷ್ಟ್ರ) ದಿಂದ ತೋಕೂರ್ (ಕರ್ನಾಟಕ) ವರೆಗೆ ಕೊಂಕಣ ರೈಲು ಮಾರ್ಗದ (ಸುಮಾರು 740 ಕಿಮೀ) 100% ವಿದ್ಯುದ್ದೀಕರಣ ಆರಂಭ

5) ಎರಡು ರೈಲು ಮಾರ್ಗ ದ್ವಿಗುಣಗೊಳಿಸುವ ಯೋಜನೆಗಳಿಗೆ ಚಾಲನೆ. ಅರಸೀಕೆರೆಯಿಂದ ತುಮಕೂರು (ಸುಮಾರು 96 ಕಿಮೀ) ಮತ್ತು ಯಲಹಂಕದಿಂದ ಪೆನುಕೊಂಡ (ಸುಮಾರು 120 ಕಿಮೀ) ಕ್ರಮವಾಗಿ ಪ್ಯಾಸೆಂಜರ್ ರೈಲುಗಳು ಮತ್ತು MEMU ಸೇವೆಗಳನ್ನು ಫ್ಲ್ಯಾಗ್ ಮಾಡುವ ಮೂಲಕ.

6) ಬೆಂಗಳೂರು ರಿಂಗ್ ರೋಡ್ ಯೋಜನೆಯ ಎರಡು ವಿಭಾಗಗಳಲ್ಲಿ ಚಾಲನೆ. ಬೆಂಗಳೂರಿನ ಸಂಚಾರ ದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ 2280 ಕೋಟಿ ರೂ. ವಿನಿಯೋಗ.

7) NH-48 ರ ನೆಲಮಂಗಲ-ತುಮಕೂರು ವಿಭಾಗದ ಆರು ಲೇನಿಂಗ್‌ಗೆ ಚಾಲನೆ.  NH-73 ರ ಪುಂಜಾಲಕಟ್ಟೆ-ಚಾರ್ಮಾಡಿ ವಿಭಾಗದ ಅಗಲೀಕರಣ.

8) ಬೆಂಗಳೂರಿನಿಂದ 40 ಕಿಮೀ ದೂರದಲ್ಲಿರುವ ಮುದ್ದಲಿಂಗನಹಳ್ಳಿಯಲ್ಲಿ Rs 1800 ಕೋಟಿ ವೆಚ್ಚದ ಮಲ್ಟಿ ಮಾಡಲ್ ಲಾಜಿಸ್ಟಿಕ್ ಪಾರ್ಕ್​​ಗೆ ಶಂಕುಸ್ಥಾಪನೆ. ಇದು ಸಾರಿಗೆ, ನಿರ್ವಹಣೆ ಮತ್ತು ದ್ವಿತೀಯ ಸರಕು ಸಾಗಣೆ ವೆಚ್ಚವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
Published by:Kavya V
First published: