ಬೆಂಗಳೂರು: ಏರೋ ಇಂಡಿಯಾ (Aero India) ಏರ್ ಶೋ ಉದ್ಘಾಟನೆಗೆ ಪ್ರಧಾನಿ ಮೋದಿ (PM Modi) ಬೆಂಗಳೂರಿಗೆ ಆಗಮಿಸಿದ್ದಾರೆ. ನಾಳೆ ಏರ್ಶೋ ಕಾರ್ಯಕ್ರಮದ ಉದ್ಘಾಟನೆಯನ್ನು ಪ್ರಧಾನಿ ಮೋದಿ ಮಾಡಲಿದ್ದು, ಪ್ರಧಾನಿಗಳು ಆಗಮಿಸುವ ಹಿನ್ನೆಲೆಯಲ್ಲಿ ಬಿಬಿಎಂಪಿ (BBMP) ರಸ್ತೆಗಳನ್ನೆಲ್ಲಾ ಝಗಮಗಿಸುವಂತೆ ಮಾಡಿದೆ. ಹೆಚ್ಎಎಲ್ ವಿಮಾನ (HAL Airport) ನಿಲ್ದಾಣಕ್ಕೆ ಆಗಮಿಸಿದ ಪ್ರಧಾನಿ ಮೋದಿ ಅವರನ್ನು ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai), ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಸ್ವಾಗತಿಸಿದರು. ಹೆಚ್ಎಎಲ್ ವಿಮಾನ ನಿಲ್ದಾಣದಿಂದ ಪ್ರಧಾನಿ ಮೋದಿ ನೇರ ರಾಜಭವನಕ್ಕೆ ತೆರಳಿದ್ದಾರೆ. ಇಂದು ರಾಜಭವನದಲ್ಲಿ (Rajbhavan) ನಾಡಿನ ವಿವಿಧ ಕ್ಷೇತ್ರಗಳ ಪ್ರಮುಖರೊಂದಿಗೆ ಮೋದಿ ಸಂವಾದ ನಡೆಸಲಿದ್ದಾರೆ. ಇದಕ್ಕೂ ಮುನ್ನ ನಡೆಯುವ ಔತಣಕೂಟಕ್ಕೆ ಹಲವು ಗಣ್ಯರನ್ನು ಆಹ್ವಾನಿಸಲಾಗಿದೆ. ಪ್ರಧಾನಿಗಳ ಜೊತೆ ಭೋಜನ ಸವಿಯುತ್ತಾ ಗಣ್ಯರು ಸಂವಾದ ನಡೆಸಲಿದ್ದಾರೆ.
ರಾಜಭವನದಲ್ಲಿ ಪ್ರಧಾನಿ ಮೋದಿ ವಾಸ್ತವ್ಯ
ಔತಣಕೂಟದಲ್ಲಿ ಕನ್ನಡ ಚಿತ್ರರಂಗದ ನಟ ಯಶ್, ನಟ-ನಿರ್ದೇಶಕ ರಿಷಬ್ ಶೆಟ್ಟಿ, ನಿರ್ಮಾಪಕ ವಿಜಯ್ ಕಿರಗಂದೂರು, ಅಶ್ವಿನಿ ಪುನೀತ್ ರಾಜ್ಕುಮಾರ್, ಶ್ರದ್ಧಾ ಜೈನ್, ನಿರ್ದೇಶಕ ಪ್ರಶಾಂತ್ ನೀಲ್ ಸೇರಿದಂತೆ ಹಲವು ಗಣ್ಯರಿಗೆ ಆಹ್ವಾನ ನೀಡಲಾಗಿದೆ. ಕ್ರಿಕೆಟ್ ರಂಗದಿಂದ ಜಾವಗಲ್ ಶ್ರೀನಾಥ್, ವೆಂಕಟೇಶ್ ಪ್ರಸಾದ್, ಅನಿಲ್ ಕುಂಬ್ಳೆ ದಂಪತಿ, ಮಯಾಂಕ್ ಅಗರ್ವಾಲ್, ಮನೀಶ್ ಪಾಂಡೆಗೆ ಆಹ್ವಾನ ನೀಡಲಾಗಿದೆ. ಉದ್ಯಮ ವಲಯದಿಂದ ನಿತಿನ್ ಕಾಮತ್, ತರುಣ್ ಮೆಹ್ತಾ ಅವರು ಔತಣಕೂಟದಲ್ಲಿ ಭಾಗಿಯಾಗಲಿದ್ದಾರೆ.
ಇದನ್ನೂ ಓದಿ: Shivamogga Airport: ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಕುವೆಂಪು ಹೆಸರು ಅಂತಿಮ
ನಾಳೆ ಏರೋ ಇಂಡಿಯಾ ಶೋಗೆ ಚಾಲನೆ
ಇನ್ನು, ಪ್ರಧಾನಿ ಮೋದಿ 6 ದಿನಗಳ ಹಿಂದಷ್ಟೇ ಬೆಂಗಳೂರು, ತುಮಕೂರಿಗೆ ಆಗಮಿಸಿದ್ದರು. ಇವತ್ತು ಮತ್ತೆ ಬೆಂಗಳೂರಿಗೆ ಬಂದಿದ್ದಾರೆ. ಯಲಹಂಕ ವಾಯುನೆಲೆಗೆ ಬಂದ ಪ್ರಧಾನಿ ಮೋದಿ ರಾಜಭವನದಲ್ಲಿ ವಾಸ್ತವ್ಯ ಹೂಡಿದ್ದಾರೆ. ನಾಳೆ ಬೆಳಗ್ಗೆ 9.30 ರಿಂದ 11.30ರವರೆಗೆ ಬೆಂಗಳೂರು ಅಂತಾರಾಷ್ಟ್ರೀಯ ಏರೋ ಇಂಡಿಯಾ ಶೋಗೆ ಚಾಲನೆ ನೀಡಲಿದ್ದಾರೆ.
ಬೊಮ್ಮಾಯಿ ಡೈನಾಮಿಕ್ ಸಿಎಂ!
ಪ್ರಧಾನಿಗಳ ಆಗಮನಕ್ಕೂ ಮುನ್ನ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಬೆಂಗಳೂರಿಗೆ ಆಗಮಿಸಿದ್ದರು. ಸಿಎಂ ಬಸವರಾಜ ಬೊಮ್ಮಾಯಿ ಜೊತೆ ಯಲಹಂಕ ಏರೋ ಇಂಡಿಯಾ ಸಮಾವೇಶದಲ್ಲೂ ಭಾಗಿಯಾಗಿದ್ದರು. ಈ ವೇಳೆ ಮಾತನಾಡಿದ ರಾಜನಾಥ್ ಸಿಂಗ್ ಅವರು ಆರಂಭದಲ್ಲೇ ಬಸವಣ್ಣ ಹಾಗೂ ಕೆಂಪೇಗೌಡರನ್ನು ಸ್ಮರಿಸಿಕೊಂಡರು. ಏರೋ ಇಂಡಿಯಾದಲ್ಲಿ ಎರಡನೇ ಬಾರಿಗೆ ಭಾಗಿಯಾಗಿದ್ದೇನೆ. ಇಂದು ತುಂಬಾ ಸಂತಸದ ದಿನ, ಕಳೆದ ಹಲವಾರು ತಿಂಗಳುಗಳ ಪರಿಶ್ರಮ ಈಗ ಫಲ ನೀಡುತ್ತಿದೆ. ಡೈನಾಮಿಕ್ ಸಿಎಂ ಬೊಮ್ಮಾಯಿ ಅವರಿಂದ ಇದು ಸಾಧ್ಯವಾಗಿದೆ. ಎಲ್ಲಾ ಅಧಿಕಾರಿಗಳು ಏರ್‌ಶೋಗೆ ತಮ್ಮ ಪೂರ್ಣ ಪ್ರಮಾಣದ ಬೆಂಬಲ ನೀಡಿದ್ದಾರೆ.
𝗖𝗹𝗶𝗰𝗸 𝗵𝗲𝗿𝗲 ▶️ 𝘁𝗼 𝘄𝗮𝘁𝗰𝗵 𝐑𝐚𝐤𝐬𝐡𝐚 𝐌𝐚𝐧𝐭𝐫𝐢 Shri @rajnathsingh addressing the curtain raiser event of 14th #AeroIndia 2023, 𝐋𝐈𝐕𝐄 from Bengaluru, today. @rajnathsingh @AjaybhattBJP4UK @giridhararamane https://t.co/XCygmWvNEx
— A. Bharat Bhushan Babu (@SpokespersonMoD) February 12, 2023
100ಕ್ಕೂ ಅಧಿಕ ದೇಶಗಳು ಶೋದಲ್ಲಿ ಭಾಗಿಯಾಗುತ್ತಿದೆ. ಕಳೆದ ಎಲ್ಲಾ ವರ್ಷಗಳ ಏರೋ ಇಂಡಿಯಾ ದಾಖಲೆಗಳನ್ನು ಈ ಶೋ ಮುರಿಯಲಿದೆ. ಏರೋ ಇಂಡಿಯಾ ದೇಶದ ಐಟಿ ಕ್ಯಾಪಿಟಲ್ನಲ್ಲಿ ನಡೆಯುತ್ತಿದೆ. ಅಂತಾರಾಷ್ಟ್ರೀಯ ಮಟ್ಟದ ನಾಯಕರು, ಲೀಡರ್‌ಗಳು ಆಗಮಿಸುತ್ತಿದ್ದಾರೆ.
ನಮ್ಮ ಉತ್ಪಾದನೆ ಹಾಗೂ ಕೌಶಲ್ಯಗಳ ಪ್ರದರ್ಶನ ಮಾಡಲು ಇದು ವೇದಿಕೆಯಾಗಿದೆ. 2020ರಲ್ಲಿ ನಾವು ತುಂಬಾ ದೊಡ್ಡ ಈವೆಂಟ್ ಪ್ಲಾನ್ ಮಾಡಿದ್ದೆವು. ಈ ಬಾರಿ ಅದಕ್ಕಿಂತ ದೊಡ್ಡ ಈವೆಂಟ್ ನಡೆಯಲಿದೆ. ಕರ್ನಾಟಕ ದೇಶದ ಆರ್ಥಿಕತೆಗೆ ಕೊಡುಗೆ ನೀಡುವುದರಲ್ಲಿ ಮೇಲಿನ ಸ್ಥಾನದಲ್ಲಿದೆ. ರಾಜ್ಯದಲ್ಲಿ ಸೇನೆಗೆ ಬೇಕಾದ ಅನೇಕ ಕಂಪನಿಗಳಿಗೆ ಜಾಗ ನೀಡಿದೆ. ಐಟಿ ಹಾಗೂ ಉತ್ಪಾದನಾ ಕ್ಷೇತ್ರದಲ್ಲಿ ಕ್ಯಾಪಿಟಲ್ ಆಗಿದೆ ಎಂದು ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ