ಬೆಂಗಳೂರು: ಹಗರಣಗಳ ಆರೋಪಗಳು (Karnataka Scam), ಮೀಸಲಾತಿ ಹೋರಾಟಗಳು (Reservation Protest), ಪಕ್ಷದಲ್ಲಿರುವ ಅತೃಪ್ತರು ಸೇರಿದಂತೆ ಸಾಲು ಸಾಲು ಸಮಸ್ಯೆಗಳ ಸರಮಾಲೆಯಲ್ಲಿ ಸಿಲುಕಿ ವಿಲವಿಲ ಒದ್ದಾಡುತ್ತಿರುವ ಬಿಜೆಪಿ ನಾಯಕರಿಗೆ (Karnataka BJP) ಪ್ರಧಾನಿ ನರೇಂದ್ರ ಮೋದಿ (PM Narendra Modi) ಬೂಸ್ಟರ್ ಡೋಸ್ (Booster Dose) ಕೊಡಲು ಬರುತ್ತಿದ್ದಾರೆ. ಇತ್ತ ಪ್ರಧಾನಿ ಬಂದು ಹೋಗುತ್ತಿದ್ದಂತೆ ರಾಜ್ಯಕ್ಕೆ ಮೊದಲ ಬಾರಿಗೆ ಪ್ರಿಯಾಂಕ ಗಾಂಧಿ ವಾದ್ರಾ (Priyanka Gandhi Vadra) ಎಂಟ್ರಿ ಕೊಡುತ್ತಿದ್ದು, 2023 ಕರ್ನಾಟಕ ವಿಧಾನ ಸಭಾ ಚುನಾವಣೆಯ (2023 Karnataka Legislative Assembly Election) ಕಾವು ರಂಗೇರುತ್ತಿದೆ.
ಬಿಜೆಪಿ ಪರ ಪ್ರಚಾರಕ್ಕೆ ಪ್ರಧಾನಿ ಮೋದಿ ಎಂಟ್ರಿ
ರಾಜ್ಯ ಬಿಜೆಪಿ ನಾಯಕರು ದಿನಕ್ಕೊಂದು ವಿವಾದಲ್ಲಿ ಸಿಲುಕಿ ಒದ್ದಾಡ್ತಿದ್ದಾರೆ. ಪ್ರತಿಪಕ್ಷಗಳು ಧ್ವನಿ ಎತ್ತುತ್ತಿರುವ ವಿವಾದಗಳು, ಭ್ರಷ್ಟಚಾರಗಳು, ಹೋರಾಟಗಳ ಬಾಣಗಳಿಗೆ ಸಿಲುಕಿ ಸಂಕಷ್ಟ್ಕೆ ಸಿಲುಕಿದ್ದಂತೆ ಕಾಣುತ್ತಿರುವ ಬಿಜೆಪಿಯವರಿಗೆ 2023ರ ಚುನಾವಣಾ ಪ್ರಚಾರಕ್ಕೆ ಹೋದಲ್ಲಿ ಬಂದಲ್ಲೆಲ್ಲಾ ಸಮಸ್ಯೆಗಳೇ. ಪರಿಣಾಮ ಕುಗ್ಗಿ ಹೋಗಿಗುವಂತೆ ಕಾಣುತ್ತಿರುವ ರಾಜ್ಯ ನಾಯಕರನ್ನು ಹುರಿದುಂಬಿಸಲು ಈಗ ಪ್ರಧಾನಿ ಮೋದಿ ಮತ್ತೆ ರಾಜ್ಯಕ್ಕೆ ಎಂಟ್ರಿ ಕೊಡುತ್ತಿದ್ದಾರೆ.
ಮೋದಿ ರಾಜ್ಯ ಪ್ರವಾಸ 2023
ಮೋದಿ ಟೂರ್ 01: ಜನವರಿ 12ರಂದು ಹುಬ್ಬಳ್ಳಿಯಲ್ಲಿ ನಡೆಯಲಿರುವ 26ನೇ ರಾಷ್ಟ್ರೀಯ ಯುವಜನೋತ್ಸವ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಭಾಗಿಯಾಗಲಿದ್ದಾರೆ. ರಾಷ್ಟ್ರೀಯ ಯುವಜನೋತ್ಸವ ಕಾರ್ಯಕ್ರಮವನ್ನು ಪ್ರಧಾನಿ ಮೋದಿ ಉದ್ಘಾಟನೆ ಮಾಡಲಿದ್ದಾರೆ. ಉತ್ತರ ಕರ್ನಾಟಕದಲ್ಲಿ ಬಿಜೆಪಿ ಪಕ್ಷದ ಪಕ್ಷ ಸಂಘಟನೆ ಸೇರಿದಂತೆ ಮತಬೇಟೆಗೆ ಮೋದಿ ಆಗಮನ ಪ್ರಮುಖ ಪಾತ್ರವಹಿಸಲಿದೆ. 26ನೇ ರಾಷ್ಟ್ರೀಯ ಯುವಜನೋತ್ಸವ ಉದ್ಘಾಟನ ಕಾರ್ಯಕ್ರಮದಲ್ಲಿ ಅಂದಾಜು 5 ಲಕ್ಷ ಜನರನ್ನು ಸೇರಿಸಲು ಬಿಜೆಪಿ ಸಿದ್ಧತೆ ಮಾಡಿಕೊಳ್ಳುತ್ತಿದೆ.
ಇದನ್ನೂ ಓದಿ: PM Modi: ಬಿಜೆಪಿಯ ಲಕ್ಕಿ ಗ್ರೌಂಡ್ನಲ್ಲಿ ಮೋದಿ ಕಾರ್ಯಕ್ರಮ; ವಾಜಪೇಯಿ ಪಿಎಂ ಆಗಿದ್ದಾಗಲೂ ಇಲ್ಲಿಗೆ ಬಂದಿದ್ರು!
ಜನವರಿ 12 ರಂದು ಹುಬ್ಬಳ್ಳಿಯಲ್ಲಿ ನಡೆಯಲಿರುವ ರಾಷ್ಟ್ರೀಯ ಯುವ ಜನೋತ್ಸವ ಸಮಾರಂಭದಲ್ಲಿ ಪಾಲ್ಗೊಳ್ಳಲು ರಾಜ್ಯಕ್ಕೆ ಆಗಮಿಸುತ್ತಿರುವ ಪ್ರಧಾನಿ ಶ್ರೀ @narendramodi ಅವರಿಗೆ ಆದರದ ಸ್ವಾಗತ. #NYKSYouthFestival #NYF2023 pic.twitter.com/anNGS9xFF8
— BJP Karnataka (@BJP4Karnataka) January 11, 2023
ಮೋದಿ ಟೂರ್ 02: ಆ ಬಳಿಕ 19 ಜನವರಿ ಕಲಬುರಗಿ ಆಗಲಿದ್ದು, ಕೇಂದ್ರ ಹಾಗೂ ರಾಜ್ಯ ಅನುದಾನದಲ್ಲಿ ನಾರಾಯಣಪುರ ಎಡದಂತೆ ಕಾಲುವೆ ಆಧುನೀಕರಣ ಯೋಜನೆಯನ್ನು ರಾಷ್ಟ್ರಕ್ಕೆ ಸಮರ್ಪಿಸುವ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಇದೇ ವೇಳೆ ಬಂಜಾರ ಸಮಾವೇಶದಲ್ಲೂ ಪ್ರಧಾನಿ ಮೋದಿ ಭಾಗಿಯಾಗಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಉತ್ತರ ಕರ್ನಾಟಕ ಜನರನ್ನು ಸೆಳೆಯುವ ಕೆಲಸವನ್ನು ಪ್ರಧಾನಿ ಮೋದಿ ಮಾಡಲಿದ್ದಾರೆ.
ಉಳಿದಂತೆ ಮುಂದಿನ ತಿಂಗಳು ಅಂದರೇ, ಫೆಬ್ರವರಿ 12ರಂದು ಶಿವಮೊಗ್ಗದ ನೂತನ ವಿಮಾನ ನಿಲ್ದಾಣ ಉದ್ಘಾಟನೆಗೆ ಪ್ರಧಾನಿಯವರು ಆಗಮಿಸಲಿದ್ದಾರೆ. ಶಿವಮೊಗ್ಗ ಕಾರ್ಯಕ್ರಮದ ಮೂಲಕ ಮಲೆನಾಡು ಭಾಗದಲ್ಲಿ ಮತಬೇಟೆಗೆ ಬಿಜೆಪಿ ಲಗ್ಗೆ ಹಾಕಲಿದ್ದಾರೆ.
ಕಾಂಗ್ರೆಸ್ಗೆ ಶಕ್ತಿತುಂಬಲು ಪ್ರಿಯಾಂಕಾ ಎಂಟ್ರಿ
ಬಿಜೆಪಿಯವರನ್ನು ಹೋದಲ್ಲಿ ಬಂದಲ್ಲಿ ಇಕ್ಕಟ್ಟಿಗೆ ಸಿಲುಕಿಸುತ್ತಿರುವ ಕಾಂಗ್ರೆಸ್ಸಿಗರು ಫುಲ್ ಜೋಶ್ನಲ್ಲಿದ್ದಾರೆ. ಇದೇ ಜೋಶ್ನಲ್ಲೇ ಮುನ್ನುಗ್ಗಿ ನಡೆಯಿರಿ ಅಂತ ಶಕ್ತಿ ತುಂಬೋಕೆ ಪ್ರಿಯಾಂಕಾ ವಾದ್ರಾ ರಾಜ್ಯಕ್ಕೆ ಬರ್ತಿದ್ದಾರೆ.
ಪ್ರಿಯಾಂಕ 2023 ಟೂರ್
ಪ್ರಿಯಾಂಕಾ ಗಾಂಧಿ ಬಂದು ಹೋಗುವ ಮೊದಲು ಅಂದರೇ ಪ್ರಧಾನಿಗಳು ಬರುವ ದಿನವೇ ಕಾಂಗ್ರೆಸ್ ಜನವರಿ 12ರಿಂದ ಬಸ್ ಯಾತ್ರೆ ಶುರು ಮಾಡುತ್ತಿದೆ. ಹೀಗಾಗಿ ಇವತ್ತು ಬಸ್ ಯಾತ್ರೆಗೆ ಸಂಬಂಧಿಸಿದಂತೆ ಪೂರ್ವಾಭಾವಿ ಸಭೆಯನ್ನೂ ಡಿ.ಕೆ.ಶಿವಕುಮಾರ್ ಈಗಾಗಲೇ ನಡೆಸಿದ್ದಾರೆ.
ಇದನ್ನೂ ಓದಿ: ಬಿಜೆಪಿ, ಕಾಂಗ್ರೆಸ್ ಮುಖಂಡರು ಖುಷಿಯಲ್ಲಿ ಕುಣಿದು ಕುಪ್ಪಳಿಸಿದ್ರು! ನೆನಪು ಬಿಚ್ಚಿಟ್ಟ ಪ್ರಿಯಾಂಕಾ ಗಾಂಧಿ ವಾದ್ರಾ
ಬಿಜೆಪಿಯ ದುರಾಡಳಿತದಿಂದ ಸಂಕಷ್ಟದಲ್ಲಿರುವ ರಾಜ್ಯದ ಜನರ ಧ್ವನಿಯಾಗಿ ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿರುವ 'ಪ್ರಜಾ ಧ್ವನಿ' ಯಾತ್ರೆಯ ಮೊದಲ ಸಮಾವೇಶ ಅಭೂತಪೂರ್ವ ಜನ ಬೆಂಬಲದೊಂದಿಗೆ ಚಿಕ್ಕೋಡಿಯಲ್ಲಿ ಆರಂಭ.#PrajaDhwaniYatre pic.twitter.com/AOPVauOJ3d
— Karnataka Congress (@INCKarnataka) January 11, 2023
ಚುನಾವಣೆಗೆ 3 ತಿಂಗಳಿದೆ ಹಾಗಾಗಿನೇ ಎಲ್ಲಾ ಪಕ್ಷದವ್ರು ಊರೂರು ಸುತ್ತುತ್ತಿದ್ದಾರೆ. ಸಭೆ, ಸಮಾರಂಭ, ಉತ್ಸವ, ಸಮಾವೇಶಗಳ ಹೆಸರಲ್ಲಿ ಮತಬೇಟೆ ಮಾಡ್ತಿದ್ದಾರೆ. ಜನ ದಡ್ಡರಾಗಬಾರದು ಅಷ್ಟೇ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ