ಮೋದಿ, ಶಾ ಇಡೀ ದೇಶವನ್ನು ಹಾಳು ಮಾಡುತ್ತಿದ್ದಾರೆ; ಕೇಂದ್ರ ಸರ್ಕಾರದ ವಿರುದ್ಧ ಖರ್ಗೆ ಕಿಡಿ

ಯುವಕರು ಮೋದಿ ತಪ್ಪು ಮಾಡಿದರೂ ಹೊಗಳುತ್ತಾರೆ. ಆದರೆ ರಾಹುಲ್, ಸೋನಿಯಾ ಅವರನ್ನು ತೆಗಳುತ್ತಾರೆ. ಮೋದಿ, ಶಾ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಪ್ರಿಯಾಂಕ ವಿರುದ್ಧ ದ್ವೇಷದ ರಾಜಕಾರಣ ನಡೆದಿದೆ. ಮೊದಲು ದ್ವೇಷದ ರಾಜಕಾರಣ ವಿರುದ್ಧ ಬೆನ್ನತ್ತಬೇಕು ಎಂದು ಖರ್ಗೆ ಹೇಳಿದರು. 

news18-kannada
Updated:July 2, 2020, 3:08 PM IST
ಮೋದಿ, ಶಾ ಇಡೀ ದೇಶವನ್ನು ಹಾಳು ಮಾಡುತ್ತಿದ್ದಾರೆ; ಕೇಂದ್ರ ಸರ್ಕಾರದ ವಿರುದ್ಧ ಖರ್ಗೆ ಕಿಡಿ
ಮಲ್ಲಿಕಾರ್ಜುನ ಖರ್ಗೆ
  • Share this:
ಬೆಂಗಳೂರು; ನಮ್ಮ‌ ಪಕ್ಷದ ನಾಯಕರ ಮೇಲೆ ಬಿಜೆಪಿಯವರು ಟೀಕೆ ಮಾಡುತ್ತಾರೆ.  ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ, ರಾಹುಲ್ ಗಾಂಧಿ ಮೇಲೆ ಟೀಕೆ ಮಾಡುತ್ತಾರೆ.  ನಾವು ಟೀಕೆ ಮಾಡಿದರೂ ಪೃತ್ಯುತ್ತರ ನೀಡಬೇಕು ಎಂದು ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಡಿಕೆ ಶಿವಕುಮಾರ್ ಪ್ರತಿಜ್ಞಾ ವಿಧಿ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಎಐಸಿಸಿ ಮಟ್ಟದಲ್ಲಿ ಉತ್ತಮ ವ್ಯವಸ್ಥೆಯಿದೆ. ಸುರ್ಜೇವಾಲಾರಂತವರು ಟೀಕೆಗಳಿಗೆ ಸಮರ್ಥವಾಗಿ ಉತ್ತರ ನೀಡುತ್ತಾರೆ. ಇಲ್ಲೂ ಅದನ್ನು ಮಾಡುತ್ತಿರಿ ಎಂಬ ನಂಬಿಕೆಯಿದೆ ಎಂದು ಖರ್ಗೆ ಹೇಳಿದರು.

ಚೀನಾದ ಟಿಕ್ ಟಾಕ್ ಸಂಸ್ಥೆಯಿಂದ 30 ಕೋಟಿ ರೂಪಾಯಿಯನ್ನು ಕೇಂದ್ರ ಸರ್ಕಾರ ಪಡೆದುಕೊಂಡಿದೆ. ಚೀನಾದವರು ಗಡಿಭಾಗದಲ್ಲಿ ಉಪಟಳ ಮಾಡುತ್ತಾರೆ. ಅದನ್ನ ನಾವು ಸುಮ್ಮನೆ ನೋಡಿಕೊಂಡಿದ್ದೇವೆ. ಗಡಿಭಾಗದಲ್ಲಿ ಏನೂ ಆಗಿಲ್ಲ ಅಂತ ಪ್ರಧಾನಿ ಹೇಳ್ತಾರೆ.  ಅವರು ಗಡಿಗೆ ಬಾರದಿದ್ದರೆ ನಮ್ಮ ಸೈನಿಕರು ಹೇಗೆ ಸಾಯುತ್ತಿದ್ದರು. ಇದರ ಬಗ್ಗೆ ಪ್ರಧಾನಿ ಜನರಿಗೆ ಉತ್ತರ ಕೊಡಬೇಕು ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ಪಕ್ಷದ ಮುಂದೆ ಅನೇಕ ಸವಾಲುಗಳಿವೆ. ಎಲ್ಲರೂ ಒಗ್ಗಟ್ಟಾಗಿ ಪಕ್ಷ ಕಟ್ಟುವುದೇ ನಮ್ಮ ಗುರಿ. ಡಿ.ಕೆ ಶಿವಕುಮಾರ್ ಹೆಗಲಿಗೆ ಹೆಗಲು ಕೊಟ್ಟು ಸಾಗಬೇಕು.  ಎಲ್ಲರನ್ನು ಜೊತೆಯಲ್ಲಿ ಕರೆದುಕೊಂಡು ಹೋಗಬೇಕು. ಪಕ್ಷದ ತತ್ವ, ಸಿದ್ಧಾಂತ ಬಿಡಬಾರದು. ಮೋದಿ, ಶಾ ಇಡೀ ದೇಶವನ್ನು ಹಾಳು ಮಾಡುತ್ತಿದ್ದಾರೆ. ಕೆಟ್ಟ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದಾರೆ. ಇಡೀ ದೇಶದಲ್ಲಿ‌ ಕೊರೋನಾ ಹೆಚ್ಚಲು ಮೋದಿ, ಶಾ ಕಾರಣ. ಅವರು ತಪ್ಪು ಮಾಡಿದ್ದರೂ ಒಪ್ಪಿಕೊಳ್ಳಲ್ಲ. ವಿರೋಧ ಪಕ್ಷದವರ ಮಾತನ್ನು ಕೇಳುವುದಿಲ್ಲ. ಸುಳ್ಳು ಹೇಳಿಕೊಂಡು ಬಿಜೆಪಿ ಪಕ್ಷ ಬೆಳೆಸುತ್ತಿದ್ದಾರೆ. ಇದನ್ನು ನಾವು ಕಣ್ಣಲ್ಲಿ ಕಣ್ಣಿಟ್ಟು ನೋಡಬೇಕು. ಮೋದಿ, ಶಾರನ್ನು ವೈಭವೀಕರಿಸಲಾಗುತ್ತಿದೆ.  ಇದರ‌ ಹಿಂದೆ ಆರ್​ಎಸ್​ಎಸ್ ಇದೆ. ಎಲ್ಲಿಯವರೆಗೂ ಆರ್​ಎಸ್​ಎಸ್​ ಬಗ್ಗು ಬಡಿಯುವುದಿಲ್ಲವೋ ಅಲ್ಲಿಯವರೆಗೂ ಯುವಕರಿಗೆ ಭವಿಷ್ಯವಿಲ್ಲ ಎಂದರು.

ಇದನ್ನು ಓದಿ: DK Shivakumar: ಬಿಜೆಪಿಯವರು ಎಷ್ಟು ಕೇಸಾದರೂ ಹಾಕಲಿ, ನಾನು ಬಗ್ಗೋ ಮಗನೇ ಅಲ್ಲ; ಡಿ.ಕೆ. ಶಿವಕುಮಾರ್ ಸವಾಲು

ಯುವಕರು ಮೋದಿ ತಪ್ಪು ಮಾಡಿದರೂ ಹೊಗಳುತ್ತಾರೆ. ಆದರೆ ರಾಹುಲ್, ಸೋನಿಯಾ ಅವರನ್ನು ತೆಗಳುತ್ತಾರೆ. ಮೋದಿ, ಶಾ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಪ್ರಿಯಾಂಕ ವಿರುದ್ಧ ದ್ವೇಷದ ರಾಜಕಾರಣ ನಡೆದಿದೆ. ಮೊದಲು ದ್ವೇಷದ ರಾಜಕಾರಣ ವಿರುದ್ಧ ಬೆನ್ನತ್ತಬೇಕು ಎಂದು ಖರ್ಗೆ ಹೇಳಿದರು.
First published: July 2, 2020, 3:08 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading