ಅತ್ತಿವೇರಿ ಪಕ್ಷಿಧಾಮ; ಉತ್ತರಕನ್ನಡ ಜಿಲ್ಲೆ ಮುಂಡಗೋಡಿನಲ್ಲಿ ಹಕ್ಕಿಗಳ ಕಲರವ

Attiveri Bird Sanctuary: ಪಕ್ಷಿಧಾಮ ಎಂದರೆ ರಂಗನತಿಟ್ಟು ನೆನಪಿಗೆ ಬರುವುದು ಸಹಜ. ಆದರೆ, ಉತ್ತರಕನ್ನಡ ಜಿಲ್ಲೆ ಮುಂಡಗೋಡು ತಾಲೂಕಿನಲ್ಲಿರುವ ಅತ್ತಿವೇರಿ ಪಕ್ಷಿಧಾಮ ಬಹಳಷ್ಟು ದೇಶವಿದೇಶಿ ಹಕ್ಕಿಗಳನ್ನ ಆಕರ್ಷಿಸುತ್ತದೆ.

ಅತ್ತಿವೇರಿ ಪಕ್ಷಿಧಾಮ

ಅತ್ತಿವೇರಿ ಪಕ್ಷಿಧಾಮ

  • Share this:
ಕಾರವಾರ: ರಾಜ್ಯದಲ್ಲಿ ಹತ್ತಾರು ಪಕ್ಷಿಧಾಮಗಳು ಗಮನ ಸೆಳೆಯುತ್ತವೆ. ಮಲೆನಾಡು ಭಾಗದಲ್ಲೇ ಮೂರ್ನಾಲ್ಕು ಪಕ್ಷಿಧಾಮಗಳಿವೆ. ಶಿವಮೊಗ್ಗದಲ್ಲಿ ಬಂಕಾಪುರ, ಗುಡವಿ ಪಕ್ಷಧಾಮಗಳಿಗೆ. ಉತ್ತರ ಕನ್ನಡ ಜಿಲ್ಲೆಯಲ್ಲೂ ದಾಂಡೇಲಿಯಲ್ಲಿದೆ. ಮುಂಡಗೋಡ ತಾಲೂಕಿನಲ್ಲೂ ಅತ್ತಿವೇರಿ ಪಕ್ಷಿಧಾಮ ಇದೆ. ಅತ್ತಿವೇರಿ ಪಕ್ಷಿಧಾಮಕ್ಕೆ (Attiveri Bird Sanctuary) ವಿವಿಧ ಭಾಗಗಳಿಂದ ಹಲವಾರು ಬಗೆಯ ಪಕ್ಷಿಗಳು ಆಗಮಿಸಿ ಬೀಡು ಬಿಟ್ಟಿರುವುದು ಪಕ್ಷಿ ಪ್ರಿಯರಿಗೆ ಸಂತಸವನ್ನುಂಟು ಮಾಡಿದೆ. ಪಕ್ಷಿಗಳನ್ನ ನೋಡಲೆಂದೆ ಪ್ರವಾಸಿಗರು ಆಗಮಿಸುತ್ತಿರೋದು ಕಂಡು ಬರುತ್ತಿದೆ...

ಸೂರ್ಯ ಉದಯಿಸುವ ಮುನ್ನವೆ ಹಕ್ಕಿಗಳ ಚಿಲಿಪಿಲಿ ಸದ್ದು ಎತ್ತ ನೋಡಿದರೂ ಅತ್ತ ಪಕ್ಷಿಗಳು. ಪಕ್ಷಿಗಳ ಹಾರಾಟ, ಕೂಗಾಟ ಬೆಳಗ್ಗೆ ಹಾಗೂ ಸಂಜೆ ಸಮಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಣಸಿಗುವ ಸ್ವದೇಶಿ ಪಕ್ಷಿಗಳ ಕಲರವ ನೋಡಲು ಎರಡು ಕಣ್ಣುಗಳು ಸಾಲದು. ಇದಕ್ಕೆ ಸಾಕ್ಷಿಯಾಗಿದೆ ಮುಂಡಗೋಡ. ಈ ತಾಲೂಕಿನ ಹುನಗುಂದ ಗ್ರಾಮ ಪಂಚಾಯತ್ ವ್ಯಾಪ್ತಿಯ ಅತ್ತಿವೇರಿ ಗ್ರಾಮದ ಸನಿಹದಲ್ಲಿ ಪಕ್ಷಿಧಾಮವಿದ್ದು ಹಲವಾರು ದಶಕಗಳಿಂದಲೂ ಅಕ್ಟೋಬರ್, ನವಂಬರ್ ತಿಂಗಳಲ್ಲಿ ದೇಶ ವಿದೇಶದ ನೂರಾರು ಬಗೆಯ ಪಕ್ಷಿಗಳು ವಲಸೆ ಬಂದು ವಂಶಾಭಿವೃದ್ಧಿ ಮಾಡಿಕೊಂಡು ಮಾರ್ಚ್ ಏಪ್ರೀಲ್ ತಿಂಗಳ ವೇಳೆಗೆ ಮರಳುವುದು ಸಾಮಾನ್ಯ ಅದರಂತೆ ಈ ಭಾರಿಯೂ ಪಕ್ಷಿಗಳು ಅತ್ತಿವೇರಿಗೆ ಆಗಮಿಸಿವೆ.

ಆಗಮಿಸಿರುವ ವಿವಿಧ ಜಾತಿಯ ಪಕ್ಷಿಗಳು:

ಅತ್ತಿವೇರಿ ಪಕ್ಷಿಧಾಮಕ್ಕೆ ಸದ್ಯ ಸ್ವದೇಶ ಪಕ್ಷಿಗಳು ಮಾತ್ರ ಆಗಮಿಸಿದ್ದು ವಿದೇಶ ಪಕ್ಷಿಗಳು ಇದೂವರೆಗೂ ಆಗಮಿಸಿಲ್ಲ ಜಲಾಶಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹವಿರುವ ಕಾರಣ ವಿದೇಶಿ ಪಕ್ಷಿಗಳು ಆಗಮಿಸಿಲ್ಲ ಎನ್ನಲಾಗುತ್ತಿದೆ. ಸದ್ಯ ಸ್ವದೇಶಿಯ ಕರಿಕೊಕ್ಕರೆ, ಸೂಜಿ ಬಾಲದ ಬಾತುಕೋಳಿ, ಸಲಿಕೆ ಚುಂಚಿನ ಬಾತುಕೋಳಿ, ನೀಲಿ ರೆಕ್ಕೆಯ ಬಾತುಕೋಳಿ, ಸಾಮಾನ್ಯ ಬಾತುಕೋಳಿ, ಜಾಗು ಸೆಳವ, ಮತ್ಸ್ಯ ಭಕ್ಷಕ ಗಿಡುಗ, ಚಕೋರ, ಉಂಗುರದ ಕೆಸರುಗೊರವ, ಕೆಂಟಿಷ್‌ಗೊರವ, ಸಾಮಾನ್ಯ ಗ್ರೀನ್‌ಶಾಂಕ್, ವರಟೆ ದೇವನಕ್ಕಿ, ಚಮಚ ಕೊಕ್ಕರೆ, ಸಣ್ಣ ಸ್ಟಿಂಟ್, ಬೂದು ಖಂಜನ, ಬಿಳಿ ಖಂಜನ, ಹಳದಿ ಖಂಜನ, ಜಾತಕಪಕ್ಷಿ, ಗುಲಾಬಿ ಮೈನಾ, ಹಸಿರುಮರಳು ಪೀಪಿ ಹೀಗೆ ಇಪ್ಪತ್ತಕ್ಕೂ ಹೆಚ್ಚು ಬಗೆಯ ಪಕ್ಷಿಗಳು ಆಗಮಿಸಿ ಬೀಡು ಬಿಟ್ಟಿವೆ.

ಇದನ್ನೂ ಓದಿ: ಕಾಲು ಜಾರಿ ಬಾವಿಗೆ ಬಿದ್ದು ಪ್ರಿಯಕರ ಸಾವು: ಮನನೊಂದು ಆತ್ಮಹತ್ಯೆಗೆ ಶರಣಾದ ಯುವತಿ

ಎನಂತಾರೆ ತಜ್ಞರು?:

ಅಕ್ಟೋಬರ್ ತಿಂಗಳಿಂದ ಅತ್ತಿವೇರಿ ಪಕ್ಷಿಧಾಮಕ್ಕೆ ಆಗಮಿಸುವ ಪಕ್ಷಿಗಳು ಮಾರ್ಚ್ ತಿಂಗಳವರೆಗೂ ಇಲ್ಲಿಯೇ ಬೀಡು ಬಿಡುತ್ತವೆ. ಪಕ್ಷಿಧಾಮದ ಬಳಿಯಿರುವ ಜಲಾಶಯದ ನಡುಗಡ್ಡೆಗಳಲ್ಲಿ ಹಾಗೂ ಸುತ್ತಲಿನ ದಟ್ಟಅರಣ್ಯದಲ್ಲಿನ ಮರಗಳಲ್ಲಿ ಗೂಡು ಕಟ್ಟಿಕೊಂಡು ವಂಶಾಭಿವೃದ್ಧಿ ಗೊಳಿಸಿಕೊಂಡು ನಂತರ ಮರಿಗಳೊಂದಿಗೆ ಮಾರ್ಚ್ ತಿಂಗಳ ಅವಧಿಗೆ ವಿದೇಶಕ್ಕೆ ಮರಳುತ್ತವೆ. ಚಳಿಗಾಲ ಸಮಯದಲ್ಲಿ ಈ ಹಕ್ಕಿಗಳು ಇಲ್ಲಿಗೆ ಆಗಮಿಸಿ ವಂಶಾಭಿವೃದ್ಧಿಗೊಳಿಸುವುದು ಸಾಮಾನ್ಯವಾಗಿದೆ.

ಈ ವರ್ಷ ಅತ್ತಿವೇರಿ ಪಕ್ಷಿಧಾಮಕ್ಕೆ ಸ್ವದೇಶಿಯ ವಿವಿಧ ಬಗೆಯ ಪಕ್ಷಿಗಳು ಆಗಮಿಸಿ ಬೀಡು ಬಿಟ್ಟಿವೆ. ವಿದೇಶ ಪಕ್ಷಿಗಳು ಸಹ ಆಗಮಿಸುವ ಸಾಧ್ಯತೆಗಳಿವೆ. ಬೆಳಗ್ಗೆ ಹಾಗೂ ಸಂಜೆ ಸಮಯದಲ್ಲಿ ಪಕ್ಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾಣಸಿಗುತ್ತವೆ.

ಇದನ್ನೂ ಓದಿ: ಐದನೇ ಮಹಡಿಯಿಂದ ಬಿದ್ದು ಎರಡು ವರ್ಷದ ಮಗು ಸಾವು

ಪ್ರವಾಸಿಗರಿಗೆ ಉತ್ತಮ ವ್ಯವಸ್ಥೆ ಮಾಡಿಕೊಡಲು ಆಗ್ರಹ:

ಪಕ್ಷಿಗಳ ಕಲರವ ನೋಡಲು ಬರುವ ಪ್ರವಾಸಿಗರಿಗೆ ಉತ್ತಮ ವ್ಯವಸ್ಥೆ ಮಾಡಿಕೊಟ್ರೆ ಅತ್ತಿವೆರಿ ಪಕ್ಷಿಧಾಮವನ್ನ ಅಭಿವೃದ್ಧಿ ಗೊಳಿಸಬಹುದು... ಈ ಹಿನ್ನೆಲೆಯಲ್ಲಿ ಈ‌ ಪಕ್ಷಿಧಾಮದ ಸುತ್ತ ಸಂಬಂಧಿಸಿದ ಆಡಳಿತ ವ್ಯವಸ್ಥೆ ಉತ್ತಮ ವ್ಯವಸ್ಥೆ ಕಲ್ಪಿಸಿದರೆ ಈ ತಾಣ ಪ್ರವಾಸಿಗರ ಸ್ವರ್ಗ ಆಗುವುದಲ್ಲಿ ಎರಡು ಮಾತಿಲ್ಲ.

ವರದಿ: ದರ್ಶನ್ ನಾಯ್ಕ್
Published by:Vijayasarthy SN
First published: