Suicide Attempt: ದಯಮಾಡಿ ಕ್ಷಮಿಸಿ ನನಗೆ ಬದುಕುವುದಕ್ಕೆ ಇಷ್ಟವಿಲ್ಲ, ಕೈಕುಯ್ದುಕೊಂಡು ವಿದ್ಯಾರ್ಥಿನಿ ಆತ್ಮಹತ್ಯೆ ಯತ್ನ!

ಮೈಸೂರಿನಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಮಾತ್ರೆಗಳನ್ನ ಸೇವಿಸಿ, ಕೈ ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನ ಮಾಡಿದ್ದಾಳೆ. ಮೈಸೂರಿನ ಪ್ರತಿಷ್ಠಿತ ಖಾಸಗಿ ಕಾಲೇಜು ವಿದ್ಯಾರ್ಥಿನಿಯಾಗಿದ್ದು, ಕಾಲೇಜಿನಲ್ಲಿ ತಾರತಮ್ಯ ಮಾಡುತ್ತಿದ್ದಾರೆ ಎಂದು ಆಪಾದನೆ ಮಾಡಿದ್ದಾಳೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಮೈಸೂರು: ಶಾಲೆ-ಕಾಲೇಜುಗಳೆಂದರೆ (School Collage) ವಿದ್ಯಾದೇಗುಲ. ಓದೋಕೆ ಎಲ್ಲೆಲ್ಲಿಂದಲೋ ಬರ್ತಾರೆ. ಆದರೆ ಇತ್ತೀಚೆಗೆ ವಿದ್ಯೆ ಕೂಡ ಉದ್ಯಮ ಅನ್ನೋ ತರ ಭಾಸವಾಗ್ತಿದೆ. ಡೊನೇಷನ್ (Donation) ಎಲ್ಲರನ್ನು ಕಿತ್ತು ತಿನ್ನುತ್ತಿದೆ. ಇನ್ನು ಶಾಲಾ-ಕಾಲೇಜುಗಳಲ್ಲಿ ಮಕ್ಕಳನ್ನು ಸಮಾನವಾಗಿ (Equality)  ನೋಡ್ಬೇಕು. ಶಿಕ್ಷಣ ಸಂಸ್ಥೆಗಳ ಒಳಗೆ ಬಂದ ಮೇಲೆ ಎಲ್ಲರೂ ಸಮಾನರು. ಆದ್ರೆ ಇಲ್ಲೊಬ್ಬ ವಿದ್ಯಾರ್ಥಿನಿ (Student), ತನಗೆ ಕಾಲೇಜಿನಲ್ಲಿ ತಾರತಮ್ಯ ಮಾಡ್ತಿದ್ದಾರೆ ಅಂತಾ ಆರೋಪಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ (Suicide attempt). ಮೈಸೂರಿನಲ್ಲಿ (Mysuru) ಈ ಘಟನೆ ನಡೆದಿದೆ. ದಯಮಾಡಿ ಕ್ಷಮಿಸಿ, ನನಗೆ ಬದುಕುವುದಕ್ಕೆ ಇಷ್ಟವಿಲ್ಲ ಅಂತಾ ವಿದ್ಯಾರ್ಥಿನಿ ಕೈಕುಯ್ದುಕೊಂಡು ಆತ್ಮಹತ್ಯೆ ಯತ್ನ ಮಾಡಿದ್ದಾಳೆ. ಸದ್ಯ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾಳೆ.

ಮೈಸೂರಿನಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಮಾತ್ರೆಗಳನ್ನ ಸೇವಿಸಿ, ಕೈ ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನ ಮಾಡಿದ್ದಾಳೆ. ಮೈಸೂರಿನ ಪ್ರತಿಷ್ಠಿತ ಖಾಸಗಿ ಕಾಲೇಜು ವಿದ್ಯಾರ್ಥಿನಿಯಾಗಿದ್ದು, ಕಾಲೇಜಿನಲ್ಲಿ ತಾರತಮ್ಯ ಮಾಡುತ್ತಿದ್ದಾರೆ ಎಂದು ಆಪಾದನೆ ಮಾಡಿದ್ದಾಳೆ.

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್..!
ವಿದ್ಯಾರ್ಥಿನಿಯ ಆತ್ಮಹತ್ಯೆ ಯತ್ನದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನಮ್ಮ ಕಾಲೇಜಿನಲ್ಲಿ ತುಂಬಾ ಸಮಸ್ಯೆ ಆಗುತ್ತಿದೆ. ನಾನು ಡಿಪ್ರೆಶನ್ ಗೆ ಒಳಗಾಗಿದ್ದೀನಿ. ನನ್ನ ಪರಿಸ್ಥಿತಿಯನ್ನ ಯಾರೂ ಕೇಳ್ತಿಲ್ಲ. ಕಾಲೇಜಿನಲ್ಲಿ ಪಕ್ಷಪಾತ ಮಾಡುತ್ತಿದ್ದಾರೆ ಅಂತಾ ಆರೋಪಿಸಿದ್ದಾಳೆ.

ಇದನ್ನೂ ಓದಿ: ಹೆಂಡತಿ ದಪ್ಪ ಆಗಿದ್ದಕ್ಕೆ ತಲಾಖ್! ಡಿವೋರ್ಸ್​ಗೆ ಕಾರಣ ಹೀಗೂ ಇರುತ್ತಾ?

ಹಾಜರಾತಿ ಕಡಿಮೆ ಎಂದು ಕಿರುಕುಳ ನೀಡುತ್ತಿದ್ದಾರೆ
ಕಾಲೇಜಿನಲ್ಲಿ ನನಗೆ ಹಾಜರಾತಿ ಕಡಿಮೆ ಎಂದು ಕಿರುಕುಳ ನೀಡುತ್ತಿದ್ದಾರೆ. ಕಳೆದ ಬಾರಿ ಕೂಡ ಹಾಜರಾತಿ ಕಡಿಮೆಯ ನೆಪವೊಡ್ಡಿ ಹಣ ಕಿತ್ತಿದ್ರು. ನಂತರ ದಂಡ ಅಂತ ಹಣ ಪಡೆದುಕೊಂಡು ರಶೀದಿ ನೀಡಿರಲಿಲ್ಲ ಅಂತಾ ವಿದ್ಯಾರ್ಥಿನಿ ಆರೋಪಿಸಿದ್ದಾಳೆ.

Please forgive me I don t want to live student suicide attempt by cutting hands in mysuru
ಮೈಸೂರಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆ ಯತ್ನ


ಪೊಲೀಸರಿಗೆ ಸುಳ್ಳು ಹೇಳಿದ್ಳಾ ವಿದ್ಯಾರ್ಥಿನಿ?
ಸದ್ಯ ಆತ್ಮಹತ್ಯೆಗೆ ಯತ್ನಿಸಿರುವ ವಿದ್ಯಾರ್ಥಿನಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಖಾಸಗಿ ಆಸ್ಪತ್ರೆಯಲ್ಲಿ ವಿದ್ಯಾರ್ಥಿನಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಇನ್ನು ಜಯಲಕ್ಷ್ಮಿಪುರಂ ಠಾಣಾ ಪೊಲೀಸರು ವಿದ್ಯಾರ್ಥಿನಿಯನ್ನು ಭೇಟಿಯಾಗಿದ್ದಾರೆ. ಆದರೆ ಭೇಟಿ ವೇಳೆ ವಿದ್ಯಾರ್ಥಿನಿ ಸುಳ್ಳು ಹೇಳಿದ್ದಾಳೆ. ನನಗೆ ಲೋ ಬಿಪಿ ಇದ್ದ ಕಾರಣ ಕೆಳಗೆ ಬಿದ್ದಾಗ ಏಟಾಗಿದೆ ಎಂಬ ಹೇಳಿಕೆ ಕೊಟ್ಟಿದ್ದಾಳೆ.

Please forgive me I don t want to live student suicide attempt by cutting hands in mysuru
ವಿದ್ಯಾರ್ಥಿನಿ ಬರೆದಿದ್ದ ಡೆತ್​ನೋಟ್


ಮಹಿಳೆಯನ್ನು ಅಪಹರಿಸಿ ಅತ್ಯಾಚಾರ, ಕ್ಯಾಬ್ ಚಾಲಕರು ಅರೆಸ್ಟ್
ಮಹಿಳೆಯನ್ನು ಅಪಹರಿಸಿ ಅತ್ಯಾಚಾರಗೈದಿದ್ದ ಕ್ಯಾಬ್ ಚಾಲಕರಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ವಿವೇಕನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಬಳ್ಳಾರಿ ಮೂಲದ ಅಖೀಲೇಶ್ ಜಿ (25) ಮತ್ತು ಹಾಸನ ಮೂಲದ ದೀಪು ಜೆಎಲ್ (21) ಬಂಧಿತ ಆರೋಪಿಗಳು. ಇಬ್ಬರು ಕ್ಯಾಬ್ ಚಾಲಕರಾಗಿದ್ದು, ಈಜಿಪುರದಲ್ಲಿ ವಾಸವಾಗಿದ್ದರು.

ಬೈಕ್ನಲ್ಲಿ ಅಪಹರಿಸಿ ಅತ್ಯಾಚಾರ
25 ವರ್ಷದ ಮಹಿಳೆ ಪೂರ್ವ ಬೆಂಗಳೂರಿನ ನಿವಾಸಿಯಾಗಿದ್ದು, ಬುಧವಾರ ಸಂಜೆ ಸುಮಾರು 5 ಗಂಟೆಗೆ ಈಜಿಪುರದ 10ನೇ ಕ್ರಾಸ್ ಬಳಿ ನಡೆದುಕೊಂಡು ಮನೆಗೆ ಹೊರಟಿದ್ದರು. ಈ ವೇಳೆ ಬೈಕ್ನಲ್ಲಿ ಬಂದ ಇಬ್ಬರು ಮಹಿಳೆಯನ್ನು ಹಿಂಬಾಲಿಸಿದ್ದಾರೆ. ಇದರಿಂದ ಭಯಗೊಂಡ ಮಹಿಳೆ ರಸ್ತೆ ಬದಿ ಅಡಗಿಕೊಳ್ಳಲು ಮುಂದಾಗಿದ್ರು. ಅಲ್ಲಿಗೆ ಬಂದ ಒಬ್ಬ ಚರ್ಚ್ ಬಳಿ ಡ್ರಾಪ್ ಮಾಡೋದಾಗಿ ಹೇಳಿದ್ದಾನೆ. ಅವನ ಜೊತೆ ತೆರಳಲು ಒಪ್ಪದಿದ್ದಾಗ ಮಹಿಳೆಯನ್ನು ಬೈಕ್ನಲ್ಲಿ ಅಪಹರಿಸಿ ಕರೆದುಕೊಂಡು ಹೋಗಿದ್ದಾರೆ.

ಇದನ್ನೂ ಓದಿ: ಪ್ರೀತಿಸಿದ ಯುವತಿಯನ್ನ ಮದ್ವೆಯಾದ ಗೆಳೆಯನಿಗೆ ಚಾಕುವಿನಿಂದ ಇರಿದು ಕೊಂದ

ಕಾಡಿನಲ್ಲಿ ಅಡಗಿ ಕುಳಿತು ಎಸ್ಕೇಪ್
ಎಲೆಕ್ಟ್ರಾನಿಕ್ಸ್ ಸಿಟಿ ಬಳಿಯ ಹುಸ್ಕೂರ ಬಳಿಯ ನಿರ್ಜನ ಪ್ರದೇಶಕ್ಕೆ ಮಹಿಳೆಯನ್ನು ಕರೆದೊಯ್ದು ಇಬ್ಬರು ಹಲ್ಲೆ ನಡೆಸಿ ಅತ್ಯಾಚಾರ ಎಸಗಿದ್ದಾರೆ. ಕೆಲ ಸಮಯದ ಬಳಿಕ ಇಬ್ಬರಿಂದ ತಪ್ಪಿಸಿಕೊಂಡ ಮಹಿಳೆ ಅಲ್ಲಿಯೇ ಇದ್ದ ಪೊದೆಗಳಲ್ಲಿ ಅಡಗಿಕೊಂಡು ರಾತ್ರಿ ಕಳೆದಿದ್ದಾರೆ.

24 ಗಂಟೆಯಲ್ಲಿ ಆರೋಪಿಗಳ ಬಂಧನ
ನಂತರ ಸ್ಥಳೀಯರ ಸಹಾಯ ಪಡೆದು ಬಟ್ಟೆ ಬದಲಾಯಿಸಿಕೊಂಡು ಗುರುವಾರ ಬೆಳಗ್ಗೆ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ದೂರು ದಾಖಲಾದ 24 ಗಂಟೆಯೊಳಗೆ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
Published by:Thara Kemmara
First published: