ಪಿಎಲ್​ಡಿ ಬ್ಯಾಂಕ್​ ಅಧ್ಯಕ್ಷ ನಿಧನ; ಮತ್ತೆ ಶುರುವಾಗುತ್ತಾ ಹೆಬ್ಬಾಳ್ಕರ್​- ಜಾರಕಿಹೊಳಿ ಕಿತ್ತಾಟ?

Sushma Chakre | news18
Updated:October 29, 2018, 8:40 PM IST
ಪಿಎಲ್​ಡಿ ಬ್ಯಾಂಕ್​ ಅಧ್ಯಕ್ಷ ನಿಧನ; ಮತ್ತೆ ಶುರುವಾಗುತ್ತಾ ಹೆಬ್ಬಾಳ್ಕರ್​- ಜಾರಕಿಹೊಳಿ ಕಿತ್ತಾಟ?
  • News18
  • Last Updated: October 29, 2018, 8:40 PM IST
  • Share this:
ನ್ಯೂಸ್​18 ಕನ್ನಡ

ಎರಡು ತಿಂಗಳ ಹಿಂದೆ ಬೆಳಗಾವಿ ರಾಜಕಾರಣವನ್ನು ಇಡೀ ರಾಜ್ಯದೆದುರು ತೆರೆದಿಟ್ಟಿದ್ದು ಅಲ್ಲಿನ ಪಿಎಲ್​ಡಿ ಬ್ಯಾಂಕ್​ ಚುನಾವಣೆ. ಆ ಚುನಾವಣೆಯಲ್ಲಿ ತಮ್ಮ ಬಣದ ಅಭ್ಯರ್ಥಿಯೇ ಅಧ್ಯಕ್ಷನಾಗಬೇಕೆಂದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್​ ಮತ್ತು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್​ ಜಾರಕಿಹೊಳಿ ಸಹೋದರರ ನಡುವೆ ಜೋರಾದ ಸಂಘರ್ಷವೇ ಆಗಿತ್ತು.

ಕೊನೆಗೆ, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಖುದ್ದಾಗಿ ಬೆಳಗಾವಿಗೆ ತೆರಳಿ,ಸಂಧಾನ ನಡೆಸಿ,  ಲಕ್ಷ್ಮೀ ಹೆಬ್ಬಾಳ್ಕರ್ ಅವರ ಅಭ್ಯರ್ಥಿಯನ್ನು ಅವಿರೋಧವಾಗಿ ಆಯ್ಕೆ ಮಾಡಿದ್ದರು. ಇನ್ನೇನು ಅಲ್ಲಿನ ಗಲಾಟೆ ತಣ್ಣಗಾಯಿತು ಎನ್ನುವಷ್ಟರಲ್ಲಿ ಪಿಎಲ್​ಡಿ ಬ್ಯಾಂಕ್​ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಮಹಾದೇವ ಪಾಟೀಲ್​ ಇಂದು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ: ಪಿಎಲ್​​ಡಿ ಬ್ಯಾಂಕ್​ಗೆ ಅವಿರೋಧ ಆಯ್ಕೆ; ಲಕ್ಷ್ಮೀ ಹೆಬ್ಬಾಳ್ಕರ್​ ಬಣಕ್ಕೆ ಒಲಿದ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ

82 ವರ್ಷದ ಮಹಾದೇವ ಪಾಟೀಲ್ ಅವರು ಇಂದು ಬೆಳವಾಗಿಯ ಫುಲಬಾಗ್ ಗಲ್ಲಿಯಲ್ಲಿರುವ ತಮ್ಮ ನಿವಾಸದಲ್ಲಿ ಸಾವನ್ನಪ್ಪಿದ್ದಾರೆ. 2 ತಿಂಗಳೂ ತಮ್ಮ ಅಧಿಕಾರಾವಧಿಯನ್ನು ಪೂರ್ತಿಗೊಳಿಸದೆ ಇಹಲೋಕ ತ್ಯಜಿಸಿರುವ ಮಹಾದೇವ ಪಾಟೀಲ್​ ಅವರಿಂದ ತೆರವಾದ ಸ್ಥಾನಕ್ಕೆ ಮತ್ತೆ ಚುನಾವಣೆ ನಡೆದರೆ ಇನ್ನೊಮ್ಮೆ ಜಾರಕಿಹೊಳಿ- ಹೆಬ್ಬಾಳ್ಕರ್​ ನಡುವೆ ಬೆಂಕಿ ಹೊತ್ತಿಕೊಳ್ಳುವುದು ಖಚಿತ.

ಇದನ್ನೂ ಓದಿ: ಬೆಳಗಾವಿಯಲ್ಲಿ ಮತ್ತೆ ಆರಂಭವಾಗುತ್ತಾ ಹೆಬ್ಬಾಳ್ಕರ್​ VS ಜಾರಕಿಹೊಳಿ ಕದನ?

ಬೆಳಗಾವಿಯಲ್ಲಿ ಪ್ರಭಾವಿಯಾಗಿ ಗುರುತಿಸಿಕೊಂಡಿದ್ದ ಸತೀಶ್ ಜಾರಕಿಹೊಳಿ ಮತ್ತು ರಮೇಶ್ ಜಾರಕಿಹೊಳಿ ಸಹೋದರರ ಬಣದ ಅಭ್ಯರ್ಥಿಗಳೇ ಪ್ರತಿಬಾರಿ ಪಿಎಲ್​ಡಿ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಆಯ್ಕೆಯಾಗುತ್ತಿದ್ದರು. ಆದರೆ, ಈ ಬಾರಿ ಲಕ್ಷ್ಮೀ ಹೆಬ್ಬಾಳ್ಕರ್​ ಬಣದ ಅಭ್ಯರ್ಥಿಯೇ ಅಧ್ಯಕ್ಷರಾಗಬೇಕೆಂದು ಅವರು ಪಟ್ಟು ಹಿಡಿದಿದ್ದರಿಂದ ಬೆಳಗಾವಿಯ ಪ್ರಭಾವಿಗಳಿಬ್ಬರ ನಡುವಿನ ಜಗಳ ಕಾಂಗ್ರೆಸ್​ ಹೈಕಮಾಂಡ್​ವರೆಗೂ ಮುಟ್ಟಿತ್ತು. ಕೊನೆಗೆ ರಾಜ್ಯ ಕಾಂಗ್ರೆಸ್​ ನಾಯಕರೇ ಮಧ್ಯಸ್ಥಿಕೆ ವಹಿಸಿ ಸಂಧಾನ ಮಾಡಬೇಕಾಯಿತು.ನಂತರವೂ ಮೇಲ್ನೋಟಕ್ಕೆ ಎಲ್ಲವೂ ಸರಿಯಾಗಿದೆ ಎನಿಸಿದರೂ ಒಳಗೊಳಗೆ ಜಗಳ ಇನ್ನೂ ಕಡಿಮೆಯಾಗಿಲ್ಲ. ವೇದಿಕೆ ಸಿಕ್ಕಾಗಲೆಲ್ಲ ಪರೋಕ್ಷವಾಗಿ ಲಕ್ಷ್ಮೀ ಹೆಬ್ಬಾಳ್ಕರ್​ ಜಾರಕಿಹೊಳಿ ಸಹೋದರರ ಬಗ್ಗೆ ತಮ್ಮ ಅಸಮಾಧಾನವನ್ನು ಹೊರಹಾಕುತ್ತಲೇ ಇರುತ್ತಾರೆ. ಇನ್ನು, ಮತ್ತೊಮ್ಮೆ ಚುನಾವಣೆ ಘೋಷಣೆ ಆದರೆ ಮತ್ತೆ ಪ್ರತಿಷ್ಠೆಯ ವಿಷಯವಾಗುವ ಸಾಧ್ಯತೆಯಿದೆ.

First published:October 29, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading