ಪಿ.ಎಲ್.ಡಿ. ಬ್ಯಾಂಕ್ ಗಳ ಸಾಲ ಮನ್ನಾವಿಲ್ಲ - ಬಂಡೆಪ್ಪ ಕಾಶಂಪೂರ

news18
Updated:September 8, 2018, 3:55 PM IST
ಪಿ.ಎಲ್.ಡಿ. ಬ್ಯಾಂಕ್ ಗಳ ಸಾಲ ಮನ್ನಾವಿಲ್ಲ - ಬಂಡೆಪ್ಪ ಕಾಶಂಪೂರ
news18
Updated: September 8, 2018, 3:55 PM IST
- ಶಿವರಾಮ ಅಸುಂಡಿ, ನ್ಯೂಸ್ 18 ಕನ್ನಡ

ಕಲಬುರ್ಗಿ (ಸೆ.08) : ಪಿಎಲ್‌ಡಿ ಬ್ಯಾಂಕ್‌ಗಳಲ್ಲಿ ರೈತರು ಪಡೆದ ಸಾಲಮನ್ನಾ ಈಗ ಸದ್ಯಕ್ಕಿಲ್ಲ. ಪಿಎಲ್‌ಡಿ ಬ್ಯಾಂಕ್‌ಗಳಲ್ಲಿ ಬೆಳೆಸಾಲ ನೀಡಿಲ್ಲ, ಹೀಗಾಗಿ ಅಲ್ಲಿನ ಸಾಲಮನ್ನಾ ಮಾಡಲಾಗುವುದಿಲ್ಲ. ಈ ಕುರಿತು ಎರಡನೇ ಹಂತದ ಸಾಲಮನ್ನಾ ಘೋಷಣೆ ವೇಳೆ ಸೂಕ್ತ ನಿರ್ಧಾರ ಕೈಗೊಳ್ಳಲಿರುವುದಾಗಿ ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ ತಿಳಿಸಿದ್ದಾರೆ.

ಕಲಬುರ್ಗಿಗೆ ಆಗಮಿಸಿದ ವೇಳೆ ಮಾತನಾಡಿದ ಅವರು, ರಾಜ್ಯದಲ್ಲಿ 78 ಲಕ್ಷ ಜನ ರೈತರಿದ್ದು, ಒಂದು ವರ್ಷದೊಳಗೆ 15 ಲಕ್ಷ ರೈತರಿಗೆ ಡಿಸಿಸಿ ಬ್ಯಾಂಕ್ ಅಡಿಯಲ್ಲಿ ತರುವ ಚಿಂತನೆ ಸರ್ಕಾರ ಮಾಡುತ್ತಿದೆ ಎಂದು ತಿಳಿಸಿದ್ದಾರೆ.

ರಾಜ್ಯ ಸರ್ಕಾರವನ್ನು ಉರುಳಿಸಲು ಬಿಜೆಪಿ ಷಡ್ಯಂತ್ರ ನಡೆಸುತ್ತಿದೆ ಎಂಬ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಹೇಳಿಕೆ ಅವರ ವೈಕ್ತಿಕ ವಿಚಾರ ಎಂದು ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ ಅಭಿಪ್ರಾಯಪಟ್ಟಿದ್ದಾರೆ. ಕಲಬುರ್ಗಿಗೆ ಆಗಮಿಸಿದ ಸಂದರ್ಭದಲ್ಲಿ ಮಾತನಾಡಿದ ಅವರು, ರಾಜ್ಯದ ಸಮ್ಮಿಶ್ರ ಸರ್ಕಾರ ಪೂರ್ಣಾವಧಿ ಪೂರೈಸಲಿದೆ. ಯಾವುದೇ ಕಾರಣಕ್ಕೂ ತೊಂದರೆ ಆಗೋದಿಲ್ಲ, ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಹೆಚ್ ಡಿ ಕುಮಾರಸ್ವಾಮಿ ಅವರು ಮುಂದುವರಿಯಲಿದ್ದಾರೆ ಎಂದರು.

ಮಾಜಿ ಸಚಿವ ಸತೀಶ ಜಾರಕಿಹೊಳಿ ಹಾಗೂ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಅವರ ಮಧ್ಯೆ ನಡೆದಿರೋ ಗಲಾಟೆ ವೈಕ್ತಿಕವಾಗಿದೆ ಎಂದರು. ಈ ಕುರಿತು ನಾನೇನು ಹೆಚ್ಚು ಹೇಳುವುದಿಲ್ಲ ಎಂದು ಬಂಡೆಪ್ಪ ತಿಳಿಸಿದ್ದಾರೆ.

 
First published:September 8, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...