HOME » NEWS » State » PLANNING FOR TRIP READ THIS TOURISM REPORT BEFORE PACKING BAGS SKTV SNVS

ಟ್ರಿಪ್ ಪ್ಲಾನ್ ಮಾಡ್ತಿದ್ದೀರಾ? ಈ ಬಾರಿಯ ಟೂರಿಸಂ ಬಗ್ಗೆ ಫುಲ್ ಡೀಟೆಲ್ಸ್​ಗೆ ಈ ವರದಿ ಓದಿ

ಕೋವಿಡ್​ನಿಂದಾಗಿ ಹಲವು ತಿಂಗಳು ಮನೆಯಲ್ಲೇ ಕಚ್ಚಿಕೂತ ಜನರು ಈಗ ಪ್ರವಾಸಗಳಿಗೆ ಹೊರಡುತ್ತಿದ್ದಾರೆ. ಎಲ್ಲೆಲ್ಲಿ ಟ್ರಿಪ್​ಗಳು ಹೆಚ್ಚಾಗಿ ನಡೆಯುತ್ತಿವೆ ಎಂಬ ಒಂದು ಮಾಹಿತಿ ಈ ವರದಿಯಲ್ಲಿದೆ.

news18-kannada
Updated:November 6, 2020, 3:32 PM IST
ಟ್ರಿಪ್ ಪ್ಲಾನ್ ಮಾಡ್ತಿದ್ದೀರಾ? ಈ ಬಾರಿಯ ಟೂರಿಸಂ ಬಗ್ಗೆ ಫುಲ್ ಡೀಟೆಲ್ಸ್​ಗೆ ಈ ವರದಿ ಓದಿ
ಮೈಸೂರು
  • Share this:
ಬೆಂಗಳೂರು: ಕೊರೋನಾ ಆತಂಕವೇನೋ ಜನರಲ್ಲಿ ನಿಧಾನಕ್ಕೆ ಕಡಿಮೆಯಾಗುತ್ತಿದೆಯಾದರೂ ಸಂಪೂರ್ಣವಾಗಿ ಹೋಗಿಲ್ಲ. ಇಷ್ಟು ದಿನ ಮನೆಯೊಳಗೇ ಲಾಕ್ ಆದಂತಿದ್ದ ಜನ ಪ್ರವಾಸಕ್ಕೆ ಉತ್ಸಾಹದಿಂದ ತೆರಳುತ್ತಿರುವುದೇನೋ ಹೌದು, ಆದರೆ, ಈ ಬಾರಿಯ ಟೂರಿಸಂ ಪ್ಯಾಟರ್ನ್ ಬಹಳ ವಿಭಿನ್ನವಾಗಿದೆ. 

ಇಯರ್ ಎಂಡ್ ಅಂದ್ರೆ ಉಳಿದ ರಜೆಗಳನ್ನೆಲ್ಲಾ ಒಟ್ಟು ಸೇರಿಸಿ ಕುಟುಂಬದ ಜೊತೆಗೋ ಫ್ರೆಂಡ್ಸ್ ಜೊತೆಗೋ ಟ್ರಿಪ್ ಹೋಗೋದು ಅನೇಕರ ಅಭ್ಯಾಸ. ಈ ಸಲ ಮಾತ್ರ ಟ್ರಿಪ್ ಬಗ್ಗೆ ಜನ ವಿಪರೀತ ತಲೆ ಕೆಡಿಸಿಕೊಂಡಿದ್ದಾರೆ. ಕೊರೋನಾ ಸಂಬಂಧಿತ ನಿಯಮಗಳು ಅನೇಕ ಕಡೆ ಇನ್ನೂ ಹಾಗೇ ಇರೋದ್ರ ಜೊತೆಗೆ ತಮ್ಮ ಸೇಫ್ಟಿಗೂ ಹೆಚ್ಚು ಒತ್ತು ಕೊಡ್ತಿದ್ದಾರೆ. ಹಾಗಾಗಿ ಕೊರೊನಾ ಆರ್ಭಟ ಕಡಿಮೆಯಾದರೂ ಪ್ರವಾಸೋದ್ಯಮ ಇನ್ನೂ ಚಿಗುರಿಲ್ಲ. ಅನೇಕರು ವರ್ಷಾಂತ್ಯಕ್ಕೆ ವಿದೇಶ ಸುತ್ತೋ ಅಭ್ಯಾಸ ಇಟ್ಕೊಂಡಿರ್ತಾರೆ. ಆದ್ರೆ ಅಂತಾರಾಷ್ಟ್ರೀಯ ಪ್ರವಾಸ ಹೋಗೋರೆಲ್ಲಾ ಈ ಬಾರಿ ದೇಶದೊಳಗೇ ಲಾಕ್‌ ಆಗ್ಬಿಟ್ಟಿದ್ದಾರೆ.‌ ಸದ್ಯಕ್ಕೆ ಮಾಲ್ಡೀವ್ಸ್ ಮತ್ತು ದುಬೈ ಬಿಟ್ಟರೆ ಉಳಿದ್ಯಾವ ದೇಶಗಳೂ ಭಾರತೀಯ ಪ್ರವಾಸಿಗರಿಗೆ ವೀಸಾ ನೀಡ್ತಿಲ್ಲ. ಬೇರೆ ದಾರಿ ಇಲ್ಲದೇ ಆದಷ್ಟು ರಾಜ್ಯದೊಳಗಿನ ಪ್ರವಾಸಿ ಸ್ಥಳಗಳಿಗೆ ಭೇಟಿ ಕೊಡ್ತಿದ್ದಾರೆ ಜನ.

ಇದನ್ನೂ ಓದಿ: ಪಟಾಕಿ ನಿಷೇಧಕ್ಕೆ ಸರ್ಕಾರ ನಿರ್ಧಾರ; ಶೀಘ್ರದಲ್ಲೇ ಆದೇಶ: ಸಿಎಂ ಯಡಿಯೂರಪ್ಪ

ಕರ್ನಾಟಕದಲ್ಲಿ ಕೊಡಗು, ಕಬಿನಿ ಮತ್ತು ಚಿಕ್ಕಮಗಳೂರು ಈ ಬಾರಿ ಟೂರಿಸ್ಟ್ ಗಳ ಫೇವರಿಟ್ ಸ್ಪಾಟ್ ಆಗಿವೆ. ಕೊರೊನಾ ಲಾಕ್ ಡೌನ್ ನಂತರದ ಅವಧಿಯಲ್ಲಿ ಈ ಮೂರು ಪ್ರದೇಶಗಳಿಗೆ ಅತೀ ಹೆಚ್ಚು ಪ್ರವಾಸಿಗರು ಭೇಟಿ ನೀಡ್ತಿದ್ದಾರೆ. ಈ ಪ್ರದೇಶಗಳಲ್ಲಿ ಇನ್ನೂ ಅನೇಕ ಹೋಮ್ ಸ್ಟೇ ಗಳು ತೆರೆದಿಲ್ಲ, ಇರುವ ಕಡೆಯೂ ಅರ್ಧದಷ್ಟು ಮಾತ್ರ ಓಪನ್ ಇದೆ. ಕೊಡಗಿನಲ್ಲಿ ಕೆಲವರು ಉತ್ತಮ ವ್ಯವಹಾರ ನಡೆಸಿದ್ರೆ ಮತ್ತೆ ಕೆಲವರು ಇನ್ನೂ ವಹಿವಾಟು ಮುಚ್ಚಿಯೇ ಇದ್ದಾರೆ. ಆದರೆ ಇನ್ನೇನು ವ್ಯಾಪಾರ ಸಂಪೂರ್ಣ ಮುಚ್ಚಬೇಕು ಎನ್ನುವಂತೆ ಇದ್ದ ಸಂದರ್ಭದಲ್ಲಿ ಈಗಿನ ಸನ್ನಿವೇಶ ಉತ್ತಮವಾಗಿದೆ ಎನ್ನುವುದು ಮಡಿಕೇರಿಯ ಹೋಮ್ ಸ್ಟೇ ಅಸೋಸಿಯೇಷನ್ ಅಧ್ಯಕ್ಷ ಅನಂತಶಯನ ಅವರ ಅಭಿಪ್ರಾಯ.

ಹಿಂದೆ ರಾಜ್ಯದ ಜನರಿಗೆ ಅಷ್ಟೊಂದು ಆಸಕ್ತಿಕರ ಎನಿಸದ ಶಿವಮೊಗ್ಗ, ಹಂಪಿ, ಬೀದರ್​ಗೂ ಈ ಬಾರಿ ಭಾರೀ ಡಿಮ್ಯಾಂಡ್ ಬಂದಿದೆ. ಮನೆಯಿಂದ ಹೊರಗೆ ದೂರ ಎಲ್ಲಾದರೂ ಹೋದ್ರೆ ಸಾಕು ಎನ್ನುವಂತೆ ಜನ ಕಾಯ್ತಿದ್ದಾರೆ. ಇಂಟರ್ನ್ಯಾಷನಲ್ ಟ್ರಿಪ್​ಗಳಂತೂ ಈಗ ಸಂಪೂರ್ಣ ಮುಚ್ಚಿದೆ. ಕನ್ನಡಿಗರ ನೆಚ್ಚಿನ ಯೂರೋಪ್, ಸ್ವಿಟ್ಜರ್ಲೆಂಡ್‌ಗಳು ಇನ್ನೂ ವೀಸಾ ನೀಡ್ತಿಲ್ಲ. ಜೊತೆಗೆ ಅಲ್ಲಿ ಕೊರೋನಾ ಎರಡನೇ ಅಲೆಯೂ ಇದೆ. ಹಾಗಾಗಿ ಅಂತಾರಾಷ್ಟ್ರೀಯ ಪ್ರವಾಸಿಗರು ಈ ಬಾರಿ ಉತ್ತರ ಭಾರತ ಅಥವಾ ರೋಡ್ ಟ್ರಿಪ್​ಗಳಿಗೇ ಹೆಚ್ಚು ಆಸಕ್ತಿ ತೋರಿಸ್ತಿದ್ದಾರೆ ಎನ್ನುತ್ತಾರೆ ಇಂಟರ್ನ್ಯಾಷನಲ್ ಟೂರ್ಸ್ & ಟ್ರಾವೆಲ್ ವಹಿವಾಟು ನಡೆಸುವ ಕವಲ್ಜೀಜ್ ಸಿಂಗ್.

ಇದನ್ನೂ ಓದಿ: ಮಾಸ್ಕ್ ಧರಿಸುವ ವಿಚಾರ: ಜನರೊಂದಿಗೆ ಸಂಯಮದಿಂದ ವರ್ತಿಸಿ; ಮಾರ್ಷಲ್ ಗಳಿಗೆ ಬಿಬಿಎಂಪಿ ಕಮಿಷನರ್ ಸೂಚನೆ

ಟೂರಿಸಂ ಇಂಡಸ್ಟ್ರಿ ಮತ್ತೆ ಚಿಗುರೋಕೆ ಇನ್ನೂ ಸಾಕಷ್ಟು ಸಮಯ ಬೇಕಾಗುತ್ತದೆ. ಆದ್ರೆ ಜನ ಸಾಧ್ಯವಿದ್ದಷ್ಟು ಟೂರ್​ಗಳನ್ನು ಮಾಡೋ ಪ್ಲಾನ್​ಗಳನ್ನಂತೂ ನಿಲ್ಲಿಸಿಲ್ಲ. ಉತ್ತರ ಭಾರತೀಯರು ದಕ್ಷಿಣ ಭಾರತಕ್ಕೆ ಟ್ರಿಪ್ ಬಂದರೆ ಇಲ್ಲಿನವರು ಉತ್ತರ ಭಾರತದೆಡೆ ಮುಖ ಮಾಡ್ತಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಆದಷ್ಟು ಕಡಿಮೆ ಜನರಿರುವ ಹೋಟೆಲ್, ಹೋಮ್ ಸ್ಟೇ ಗಳ ಬಗ್ಗೆ ಆಸಕ್ತಿ ತೋರಿಸ್ತಿದ್ದಾರೆ. ಕೆಲವರು ತಾವೇ ಅಡುಗೆ ಮಾಡಿಕೊಳ್ಳುವ ಅವಕಾಶ ಇರುವ ಬಗ್ಗೆ ವಿಚಾರಿಸುತ್ತಿದ್ದಾರೆ. ಹೀಗಾಗಿ ಕೊರೊನಾ ಭಯದ ನಡುವೆಯೇ ಹಾಲಿಡೇ ಸೀಸನ್ ನಡೆಯುತ್ತಿದೆ.ವರದಿ: ಸೌಮ್ಯಾ ಕಳಸ
Published by: Vijayasarthy SN
First published: November 6, 2020, 3:32 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories