ಬೆಂಗಳೂರು (ಜು. 12): ಮೈಸೂರು ಅರಸರ ಸಂಬಂಧಿ ಎಂದು ಯುವಕನೊಬ್ಬ ಹಲವು ಹುಡುಗಿಯರಿಗೆ ವಂಚನೆ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ. ಸಿದ್ಧಾರ್ಥ್ ಎಂಬ ಆರೋಪಿ ವಿವಿಧ ಮ್ಯಾಟ್ರಿಮೋನಿ ವೆಬ್ಸೈಟ್ ಮೂಲಕ ಯುವತಿಯರಿಗೆ ಮದುವೆಯಾಗುವುದಾಗಿ ಮಾತುಕತೆ ನಡೆಸುತ್ತಿದ್ದ. ಬಳಿಕ ಅವರ ಬಳಿಕ ಹಣ ಪಡೆದು ವಂಚಿಸುತ್ತಿದ್ದ ಎಂಬುದು ತಿಳಿದು ಬಂದಿದೆ. ಈ ಸಂಬಂದ ಪ್ರಕರಣ ಯುವತಿಯೋರ್ವಳು ಪ್ರಕರಣ ದಾಖಲಿಸಿದ್ದು ಆರೋಪಿ ಸಿದ್ಧಾರ್ಥ್ನನ್ನು ವೆಟ್ಫೀಲ್ಡ್ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇನ್ನು ಈತ ತಾನು ಮೈಕ್ರೋಸಾಫ್ಟ್ ಉದ್ಯೋಗಿ ಆಗಿದ್ದು, ಅಮೆರಿಕದಲ್ಲಿ ನೆಲೆಸಿರುವುದಾಗಿ ಯುವತಿಯರಿಗೆ ನಂಬಿಸುತ್ತಿದ್ದ ಎಂಬುದು ತಿಳಿದು ಬಂದಿದೆ.
ಅರಸು ಮನೆತನದ ಫೋಟೋ ಹಂಚಿಕೊಳ್ಳುತ್ತಿದ್ದ ಆರೋಪಿ
ಸಿದ್ಧಾರ್ಥ್ ಅರಸ್ ಎಂಬ ಮ್ಯಾಟ್ರಿಮೋನಿ ವೆಬ್ ಸೈಟ್ ಒಂದರಲ್ಲಿ ಪ್ರೋಫೈಲ್ ಸೃಷ್ಟಿಸಿ, ತಾನು ಸಾಫ್ಟ್ವೇರ್ ಉದ್ಯೋಗಿ ಎಂದು ಬಿಂಬಿಸಿಕೊಂಡಿದ್ದ, ಈ ಮೂಲಕ ಮೂವರು ಯುವತಿಯರಿಗೆ ವಂಚಿಸಿದ್ದ. ಈತನ ಪ್ರೋಫೈಲ್ ನೀಡಿ ಬಂದವರಿಗೆ ಗೆ ತಾನು ರಾಜವಂಶಸ್ಥ ಎಂದು ನಂಬಿಕೆ ಬರುವಂತೆ ಮೈಸೂರು ರಾಜವಂಶಸ್ಥರ ಜೊತೆ ಬಾಲ್ಯವನ್ನು ಕಳೆದಿರುವ ಹಾಗೇ ಪೋಟೋಗಳನ್ನ ತಯಾರು ಮಾಡಿ ಕಳಿಸುತ್ತಿದ್ದ. ಯುವತಿಯರ ಜೊತೆ ಸಲಿಗೆ ಬೆಳೆದ ಬಳಿಕ ವೈದ್ಯಕೀಯ ಮತ್ತು ವೈಯಕ್ತಿಕ ಸಮಸ್ಯೆ ಇರುವುದಾಗಿ ತಿಳಿಸಿ ಹಣ ಪಡೆಯುತ್ತಿದ್ದ. ಮೂವರು ಯುವತಿಯರಿಂದ 40 ಲಕ್ಷ ರೂ ಹಣ ವಂಚಿಸಿದ್ದಾನೆ.
ಏಳನೇ ಕ್ಲಾಸ್ ಓದಿದ್ದ ಆರೋಪಿ
ಪ್ರಕರಣ ದಾಖಲಾಗುತ್ತಿದ್ದ ತನಿಖೆ ನಡೆಸಿದ ಪೊಲೀಸರಿಗೆ ಈತ ಇಂಟರ್ನ್ಯಾಷನಲ್ ಕಾರ್ಡ್ ಪಡೆದು ವಂಚಿಸುತ್ತಿದ್ದ ಎಂಬುದು ಬಯಲಾಗಿದೆ. ಅಲ್ಲದೇ, , ಪಿರಿಯಾಪಟ್ಟಣದಲ್ಲಿ ನೆಲೆಸಿದ್ದ ಈತ ಏಳನೇ ಕ್ಲಾಸ್ ಮಾತ್ರ ಓದಿದ್ದ. ಪಿರಿಯಾ ಪಟ್ಟಣಕ್ಕೆ ಬರುವ ವಿದೇಶಿಗರಿಂದ ಅಮೆರಿಕನ್ ಇಂಗ್ಲಿಷ್, ಸ್ಪಾನಿಷ್, ಮಲಯಾಳಂ ಕಲಿತಿದ್ದ. ಭಾಷೆಗಳ ಮೇಲೆ ಹಿಡಿತ ಸಾಧಿಸಿದ್ದರಿಂದ ಅದನ್ನೇ ಬಂಡಾವಳ ಮಾಡಿಕೊಂಡು ಈ ವಂಚನೆ ಕೃತ್ಯಕ್ಕೆ ಮುಂದಾಗಿದ್ದ.
ಇದನ್ನು ಓದಿ: 28 ವರ್ಷದ ಹಿಂದೆ ಅಂತರ್ಜಾತಿ ವಿವಾಹ; ಈಗ ಮನೆಗೆ ನುಗ್ಗಿ ಹಲ್ಲೆ- ಮಹಿಳೆ ಸೀರೆ ಎಳೆದ ಕ್ರೂರಿಗಳು
ಕಳೆದೆರೆಡು ವರ್ಷಗಳ ಹಿಂದೆ ಯೂಟ್ಯೂಬ್ನಲ್ಲಿ ವಿಡಿಯೋ ನೋಡಿಕೊಂಡು ಇದರಿಂದ ಪ್ರೇರಿಪಿತನಾಗಿ ಈತ ಈ ಮೋಸ ಮಾಡಲು ಮುಂದಾಗಿದ್ದ . ಬೈಲುಕುಪ್ಪೆಯಲ್ಲಿ ಕೂಲಿ ಕೆಲಸ ಮಾಡುವರಿಗೆ ಎರಡ್ಮೂರು ಸಾವಿರ ಹಣ ಕೊಟ್ಟು ಅವರ ಅಕೌಂಟ್ ಪಡೆದು ಆರ್ ಟಿಜಿಎಸ್ ಮಾಡುತ್ತಿದ್ದ. ವಂಚನೆ ಹಣದಿಂದ ಈತ ಐಷಾರಾಮಿಜೀವನ ನಡೆಸುತ್ತಿದ್ದ ಎಂಬುದು ತಿಳಿದು ಬಂದಿದೆ.
ಸದ್ಯ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಬಂಧಿತನಿಂದ ಆ್ಯಪಲ್ ಐ ಫೋನ್, ಒಂದು ಸ್ಯಾಮ್ ಸಂಗ್ ನೋಟ್ 9 ಫೋನ್,ಎಸ್ಬಿಐ ಬ್ಯಾಂಕ್ ಡೆಬಿಟ್ ಕಾರ್ಡ್, ಕೊಟಕ್ ಮಹೀಂದ್ರ ಬ್ಯಾಂಕ್ ನ ಡೆಬಿಟ್ ಕಾರ್ಡ್, 2ಹೆಚ್ ಡಿಎಫ್ ಸಿ ಬ್ಯಾಂಕ್ ಡೆಬಿಟ್ ಕಾರ್ಡ್, ಆ್ಯಕ್ಸಿಸ್ ಬ್ಯಾಂಕ್ ಡೆಬಿಟ್ ಕಾರ್ಡ್ ವಶಕ್ಕೆ ಪಡೆದಿದ್ದಾರೆ. ಈತ ವಂಚನೆ ಮತ್ತೊಬ್ಬ ಸ್ನೇಹಿತ ಕೂಡ ಸಹಾಯ ಮಾಡುತ್ತಿದ್ದ ಎಂಬುದು ತಿಳುದ ಬಂದಿದ್ದು, ಆತನ ಹುಡುಕಾಟ ಮುಂದುವರೆದಿದೆ.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್ಡೌನ್ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ