ಫೋನ್​ಗೆ ಕಳ್ಳಗಿವಿ; ಮೈತ್ರಿ ಸರ್ಕಾರದ ವೇಳೆ 300 ನಾಯಕರ ಫೋನ್​ ಟ್ಯಾಪ್​?

ಲೋಕಸಭೆ ಚುನಾವಣೆ ಸಮಯದಲ್ಲಿ ಈ ಫೋನ್​ ಕದ್ದಾಲಿಕೆ ನಡೆದಿದೆ ಎನ್ನಲಾಗಿದೆ.  ಬಿಜೆಪಿ ಮುಖಂಡರದ್ದಷ್ಟೇ ಅಲ್ಲದೇ, ಕಾಂಗ್ರೆಸ್​-ಜೆಡಿಎಸ್​ನ ಹಲವು ನಾಯಕರ ಫೋನ್​ಗಳನ್ನು ಕದ್ದಾಲಿಸಲಾಗಿದೆ. ಅವರಲ್ಲಿ ಮುಖ್ಯವಾಗಿ ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕರ ಕರೆಗಳನ್ನು ಕದ್ದಾಲಿಸಲಾಗಿದೆ ಎನ್ನಲಾಗಿದೆ.

HR Ramesh | news18
Updated:August 13, 2019, 2:23 PM IST
ಫೋನ್​ಗೆ ಕಳ್ಳಗಿವಿ; ಮೈತ್ರಿ ಸರ್ಕಾರದ ವೇಳೆ 300 ನಾಯಕರ ಫೋನ್​ ಟ್ಯಾಪ್​?
ಪ್ರಾತಿನಿಧಿಕ ಚಿತ್ರ
HR Ramesh | news18
Updated: August 13, 2019, 2:23 PM IST
ಬೆಂಗಳೂರು: ಮೈತ್ರಿ ಸರ್ಕಾರದ ವೇಳೆ ಮೂರು ಪಕ್ಷಗಳ ಪ್ರಮುಖ ಮುಖಂಡರು, ಮಾಧ್ಯಮ ಪ್ರತಿನಿಧಿಗಳು, ಐಪಿಎಸ್​ ಅಧಿಕಾರಿಗಳು ಸೇರಿದಂತೆ 300ಕ್ಕೂ ಹೆಚ್ಚು ಜನರ ಫೋನ್​ಗಳನ್ನು ಟ್ಯಾಪ್​ ಮಾಡಲಾಗಿತ್ತು. ಸುಮಾರು ಆರು ತಿಂಗಳ ಕಾಲ ಸತತವಾಗಿ ಎಲ್ಲರ ಮಾತುಗಳನ್ನು ಕದ್ದಾಲಿಕೆ ಮಾಡಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಫೋನ್​ ಕದ್ದಾಲಿಕೆ ಪ್ರಕರಣ ಸಂಬಂಧ ಡಿಜಿಗೆ ಮಧ್ಯಂತರ ವರದಿ ಸಲ್ಲಿಕೆಯಾಗಿದ್ದು, ವರದಿಯಲ್ಲಿ 300 ಜನರ ಫೋನ್​ಗಳು ಟ್ಯಾಪ್​ ಆಗಿರುವುದನ್ನು ಉಲ್ಲೇಖಿಸಲಾಗಿದೆ ಎನ್ನಲಾಗಿದೆ. ನ್ಯೂಸ್​ 18 ಕನ್ನಡದಲ್ಲಿ ಈ ಬಗ್ಗೆ ವಿಶೇಷ ವರದಿ ಪ್ರಸಾರವಾದ ಬಳಿಕ ಪ್ರಕರಣ ಸಂಬಂಧ ಪ್ರತಿಕ್ರಿಯೆ ನೀಡಿರುವ ಸಿಎಂ ಬಿ.ಎಸ್​.ಯಡಿಯೂರಪ್ಪ ಅವರು ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಹೇಳಿದ್ದಾರೆ.

ಕಾಂಗ್ರೆಸ್​-ಜೆಡಿಎಸ್ ಮೈತ್ರಿ ಸರ್ಕಾರದ ಚುಕ್ಕಾಣಿ ಹಿಡಿದಿದ್ದವರೆ ಈ ಫೋನ್​ ಕದ್ದಾಲಿಕೆಯ ಹಿಂದಿದ್ದಾರೆ ಎಂಬ ಆರೋಪ ಕೂಡ ಕೇಳಿಬಂದಿದೆ. ಸರ್ಕಾರ ವಿರುದ್ಧವಾಗಿ ಯಾರ್ಯಾರು ಪಿತೂರಿ ಮಾಡುತ್ತಿದ್ದಾರೆ ಎಂಬುದನ್ನು ತಿಳಿದುಕೊಳ್ಳಲು ಸಿಎಂ ಕುಮಾರಸ್ವಾಮಿ ಅವರೇ ಈ ಎಲ್ಲರ ಫೋನ್​ಗಳನ್ನು ಟ್ಯಾಪ್​ ಮಾಡಿಸಿದ್ದಾರೆ ಎಂಬ ಆರೋಪ ಕೂಡ ಬಂದಿದೆ.  ಹಿರಿಯ ಐಪಿಎಸ್​ ಅಧಿಕಾರಿಯೇ ನಿಂತು ಕದ್ದಾಲಿಕೆ ಮಾಡಿಸಿದ್ರಂತೆ. ಸಿಸಿಬಿ ಇನ್ಸ್​ಪೆಕ್ಟರ್​ಗಳ ಮೂಲಕ ಫೋನ್​ ಕದ್ದಾಲಿಕೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.

ಇದನ್ನು ಓದಿ: ಫೋನ್ ಕದ್ದಾಲಿಕೆ ಪ್ರಕರಣ; ಸಿದ್ದರಾಮಯ್ಯರ ಫೋನ್​ಅನ್ನು ಕುಮಾರಸ್ವಾಮಿ ಟ್ಯಾಪ್​ ಮಾಡಿಸಿದ್ದರು; ಆರ್.ಅಶೋಕ್​ ಆರೋಪ

ಲೋಕಸಭೆ ಚುನಾವಣೆ ಸಮಯದಲ್ಲಿ ಈ ಫೋನ್​ ಕದ್ದಾಲಿಕೆ ನಡೆದಿದೆ ಎನ್ನಲಾಗಿದೆ.  ಬಿಜೆಪಿ ಮುಖಂಡರದ್ದಷ್ಟೇ ಅಲ್ಲದೇ, ಕಾಂಗ್ರೆಸ್​-ಜೆಡಿಎಸ್​ನ ಹಲವು ನಾಯಕರ ಫೋನ್​ಗಳನ್ನು ಕದ್ದಾಲಿಸಲಾಗಿದೆ. ಅವರಲ್ಲಿ ಮುಖ್ಯವಾಗಿ ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕರ ಕರೆಗಳನ್ನು ಕದ್ದಾಲಿಸಲಾಗಿದೆ ಎನ್ನಲಾಗಿದೆ.

ಬಿಜೆಪಿಯ ಯಾವ ನಾಯಕರ ಫೋನ್​ ಕದ್ದಾಲಿಕೆ?

  • ಬಿ.ಎಸ್​.ಯಡಿಯೂರಪ್ಪ

  • ಬಿಎಸ್​ವೈ ಪುತ್ರ ಬಿ.ವೈ ವಿಜಯೇಂದ್ರ

  • ಮಾಜಿ ಡಿಸಿಎಂ ಆರ್. ಅಶೋಕ್

  • ಮಾಜಿ ಸಿಎಂ ಎಸ್.ಎಂ. ಕೃಷ್ಣ

  • ಮಾಜಿ ಸಚಿವ ಸಿ.ಪಿ ಯೋಗೇಶ್ವರ್

  • ಮೊಳಕಾಲ್ಮೂರು ಶಾಸಕ ಶ್ರೀರಾಮುಲು

  • ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ

  • ಮಲ್ಲೇಶ್ವರಂ ಶಾಸಕ ಅಶ್ವಥ್ ನಾರಾಯಣ

  • ಯಲಹಂಕ ಶಾಸಕ ಎಸ್.ಆರ್ ವಿಶ್ವನಾಥ್

  • ಬಿಎಸ್​ವೈ ಆಪ್ತ ಸಹಾಯಕ ಸಂತೋಷ್​

  • ದೇವದುರ್ಗ ಶಾಸಕ ಶಿವನಗೌಡ ನಾಯಕ್

  • ಹಾಸನ ಶಾಸಕ ಪ್ರೀತಂ ಗೌಡ

  • ಮಾಜಿ ಸಚಿವ ಎ.ಮಂಜು

  • ಮಹದೇವಪುರ ಶಾಸಕ ಅರವಿಂದ ಲಿಂಬಾವಳಿ

  • ಹೊನ್ನಾಳಿ ಶಾಸಕ ರೇಣುಕಾಚಾರ್ಯ

  • ಮಾಜಿ ಪತ್ರಕರ್ತ ಎಂ.ಬಿ ಮರಮ್ಕಲ್

  • ಜನಾರ್ದನ ರೆಡ್ಡಿ ಆಪ್ತ ಆಲಿಖಾನ್


ಕಾಂಗ್ರೆಸ್​ನ​ ಯಾವ ನಾಯಕರ ಫೋನ್​ ಕದ್ದಾಲಿಕೆ?

  • ಸಮನ್ವಯ ಸಮಿತಿ ನಾಯಕ ಸಿದ್ದರಾಮಯ್ಯ

  • ಸಿದ್ದರಾಮಯ್ಯ ಮಾಧ್ಯಮ ಸಂಯೋಜಕ ಕೆ.ವಿ ಪ್ರಭಾಕರ್

  • ಸಿದ್ದರಾಮಯ್ಯ ವಿಶೇಷಾಧಿಕಾರಿ ವೆಂಕಟೇಶ್

  • ಬಳ್ಳಾರಿ ಗ್ರಾಮಾಂತರ ಶಾಸಕ ಬಿ. ನಾಗೇಂದ್ರ

  • ಹಗರಿ ಬೊಮ್ಮನಹಳ್ಳಿ ಶಾಸಕ ಭೀಮಾನಾಯ್ಕ್

  • ಅನರ್ಹಗೊಂಡ ಶಾಸಕರು ಮತ್ತು ಅವರ ಆಪ್ತರು

  • ಸಿದ್ದರಾಮಯ್ಯ ಆಪ್ತ ಶಾಸಕರು, ಸಚಿವರು


ಜೆಡಿಎಸ್​​ನ​ ಯಾವ ನಾಯಕರ ಫೋನ್​ ಕದ್ದಾಲಿಕೆ?

  • ಸಚಿವರಾಗಿದ್ದ ಜಿ.ಟಿ ದೇವೇಗೌಡ

  • ನಾಗಮಂಗಲ ಶಾಸಕ ಸುರೇಶ್ ಗೌಡ

  • ದಾಸರಹಳ್ಳಿ ಶಾಸಕ ಮಂಜುನಾಥ್

  • ಶಾಸಕ ರಾಜಾ ವೆಂಕಟಪ್ಪ ನಾಯಕ

  • ಜೆಡಿಎಸ್ ರಾಜ್ಯಾಧ್ಯಕ್ಷರಾಗಿದ್ದ ಹೆಚ್.ವಿಶ್ವನಾಥ್


 

(ವಿಶೇಷ ವರದಿ: ಚಿದಾನಂದ ಪಟೇಲ್​)

 

First published:August 13, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...