ಕನ್ನಡದ ಪವರ್ ಸ್ಟಾರ್ ದಿವಂಗತ ಪುನೀತ್ ರಾಜ್ಕುಮಾರ್ (Power Star Puneeth Rajkumar) ಕುಟುಂಬ ವೈದ್ಯ ಡಾ ರಮಣ ರಾವ್ (Dr Ramana Rao) ವಿರುದ್ಧ ಪುನೀತ್ ಅಭಿಮಾನಿಗಳಿಂದ (Appu Fans) ಪ್ರತಿಭಟನೆಗಳು ಮತ್ತು ದೂರುಗಳು ಬಂದ ನಂತರ ಕರ್ನಾಟಕದಲ್ಲಿ ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಮ್ಸ್ ಅಸೋಸಿಯೇಷನ್ (PHANA) ನವೆಂಬರ್ 6 ಶನಿವಾರದಂದು ರಕ್ಷಣೆ ಕೋರಿದೆ. ಅಕ್ಟೋಬರ್ 29ರಂದು ಭಾರಿ ಹೃದಯ ಸ್ತಂಭನಕ್ಕೆ ಬಲಿಯಾದ ದಿನ ಡಾ. ರಮಣ ರಾವ್ ಕ್ಲಿನಿಕ್ನಲ್ಲಿ ಪುನೀತ್ ರಾಜ್ಕುಮಾರ್ ಸಮಾಲೋಚನೆ ನಡೆಸಿದ್ದರು.
ಡಾ. ರಾವ್ ಎಲ್ಲಾ ಸೂಕ್ತ ಕ್ರಮಗಳನ್ನು ತೆಗೆದುಕೊಂಡಿದ್ದಾರೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಹಾಗೆಯೇ ಹೃದಯಾಘಾತವಾದ ನಂತರ ಪುನೀತ್ ವಿಕ್ರಮ್ ಆಸ್ಪತ್ರೆಗೆ ಧಾವಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು ಎಂದು ವೈದ್ಯರು ತಿಳಿಸಿದರು.
"ಪುನೀತ್ ರಾಜ್ಕುಮಾರ್ ನಿಧನದ ನಂತರ ಮಾಧ್ಯಮಗಳು ಮತ್ತು ಸಾರ್ವಜನಿಕರಲ್ಲಿ ಆರೋಗ್ಯ ರಕ್ಷಣೆಯ ಬಗ್ಗೆ ಬಿತ್ತರಿಸುತ್ತಿರುವ ಸುದ್ದಿಗಳು, ವಿಶೇಷ ಕಾರ್ಯಕ್ರಮಗಳ ಕಂಡು ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಮ್ಸ್ ಅಸೋಸಿಯೇಷನ್ ತೀವ್ರ ಕಳವಳ ವ್ಯಕ್ತಪಡಿಸಿದೆ. ನಾವು ಯುವ ಮತ್ತು ಜನಪ್ರಿಯ ನಟನನ್ನು ಕಳೆದುಕೊಂಡ ದುಃಖ ಮತ್ತು ಆಘಾತ ಹಂಚಿಕೊಳ್ಳುತ್ತಿರುವಾಗ, ಬೇರೊಂದು ಸ್ವರೂಪ ಪಡೆದುಕೊಳ್ಳುತ್ತಿರುವ ಪೋಸ್ಟ್ಗಳ ಬಗ್ಗೆ ಕೂಡಲೇ ನಿಮ್ಮ ಗಮನಕ್ಕೆ ತರಬೇಕು'' ಎಂದು ಪಂ. ಅಧ್ಯಕ್ಷ ಪ್ರಸನ್ನ ಎಚ್ಎಂ ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಒತ್ತಾಯಿಸಿದರು.
"ಚಿಕಿತ್ಸೆ ನೀಡುವ ವೈದ್ಯರ ಕಡೆಗೆ ಬೆರಳು ತೋರಿಸುವ ಪ್ರಯತ್ನವನ್ನು ನಾವು ಬಲವಾಗಿ ವಿರೋಧಿಸುತ್ತೇವೆ, ವಿಶೇಷವಾಗಿ ಡಾ. ರಮಣ ರಾವ್ ತಮ್ಮ ಕೈಲಾದಷ್ಟು ಪುನೀತ್ ರಾಜ್ಕುಮಾರ್ ಅವರನ್ನು ಬದುಕಿಸಲು ಶ್ರಮಪಟ್ಟಿದ್ದಾರೆ. ಎಲ್ಲಾ ಪ್ರಯತ್ನಗಳ ನಂತರವೂ ವೈದ್ಯಕೀಯ ವೃತ್ತಿಯ ಮಿತಿಗಳನ್ನು ಮೀರಿಯೂ ಕಾರ್ಯನಿರ್ವಹಿಸಿದ್ದಾರೆ ಮತ್ತು ಜೀವಗಳನ್ನು ಉಳಿಸುವುದು ಯಾವಾಗಲೂ ಅಸಾಧ್ಯ ಎಂದು ಹೇಳಿದರು.
ವೈದ್ಯಕೀಯ ಬಂಧುತ್ವದ ಸ್ಥೈರ್ಯ ಹೆಚ್ಚಿಸುವ ಸಲುವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಹಿರಂಗ ಹೇಳಿಕೆ ನೀಡಬೇಕೆಂದು ಪ್ರಸನ್ನ ಒತ್ತಾಯಿಸಿದರು.
"ಡಾ. ರಮಣರಾವ್ ಮತ್ತು ಪುನೀತ್ ರಾಜ್ ಕುಮಾರ್ ಚಿಕಿತ್ಸೆಯಲ್ಲಿ ತೊಡಗಿರುವ ವೈದ್ಯಕೀಯ ವೃತ್ತಿಪರರನ್ನು ರಕ್ಷಿಸಲು ದಯವಿಟ್ಟು ಪೊಲೀಸ್ ರಕ್ಷಣೆ ಒದಗಿಸಿ" ಎಂದು ಅವರು ಮನವಿ ಮಾಡಿದರು.
ಜನಪ್ರಿಯ ನಟನ ಅಕಾಲಿಕ ಮರಣಕ್ಕೆ ವೈದ್ಯಕೀಯ ವೃತ್ತಿಪರರ ಆರೈಕೆಯ ಕೊರತೆಯನ್ನು ದೂರುವ ದೃಶ್ಯ ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಗಳು, ಟಿವಿ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಲೇ ಇವೆ ಎಂದು ಪ್ರಸನ್ನ ಹೇಳಿದರು.
"ಈ ರೀತಿಯ ತೀರ್ಪಿನ ಮತ್ತು ಹೈಪರ್ ಕ್ರಿಟಿಕಲ್ ಮಾಧ್ಯಮದ ಉನ್ಮಾದವು ಸಮಾಜದಲ್ಲಿ ಅಪನಂಬಿಕೆ ಉಂಟುಮಾಡುತ್ತದೆ ಮತ್ತು ಸಾವನ್ನಪ್ಪಿದವರ ಮೂಲಕ ಸೇವೆ ಮಾಡಿದ ವೈದ್ಯಕೀಯ ವೃತ್ತಿಪರತೆಯನ್ನು ಅಪಾಯಕ್ಕೆ ತರುತ್ತಿದೆ" ಎಂದು ಅವರು ಹೇಳಿದರು.
ನಟ ಪುನೀತ್ ರಾಜ್ಕುಮಾರ್ ಅಕ್ಟೋಬರ್ 29ರಂದು ವಿಕ್ರಂ ಆಸ್ಪತ್ರೆಯಲ್ಲಿ ಮೃತರಾದರು. ಇವರ ಅಂತಿಮ ದರ್ಶನ ಪಡೆಯಲು ಜನಸಾಗರವೇ ಹರಿದು ಬಂದಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ