ಬಾಡಿಗೆ ನೀಡಿಲ್ಲ ಎಂದು ಯುವತಿಯರನ್ನು ಕೂಡಿ ಹಾಕಿದ ಪಿಜಿ ಮಾಲೀಕ

ಇಂದು ಬೆಳಗ್ಗೆ ಮೈಸೂರಿನಿಂದ ಟ್ಯಾಕ್ಸಿಯಲ್ಲಿ ಯುವತಿಯರು ಹಾಸನಕ್ಕೆ ಬಂದಿದ್ದಾರೆ.  ಈ ವೇಳೆ ಎರಡು ತಿಂಗಳ ಬಾಡಿಗೆ ಹಣ ನೀಡಲೇಬೇಕು ಎಂದು ಪಿಜಿ ಮಾಲೀಕ ಪಿಜಿಗೆ ಬೀಗ ಹಾಕಿ ಹೊರ ಹೋಗಿದ್ದಾರೆ. ಬೆಳಿಗ್ಗೆ 10 ಗಂಟೆಯಿಂದ ತಿಂಡಿಯಿಲ್ಲದೆ ಪಿಜಿಯಲ್ಲಿ ಮೈಸೂರಿನ ಇಬ್ಬರು ಯುವತಿಯರು ಲಾಕ್ ಆಗಿದ್ದರು

ಯುವತಿಯರನ್ನು ಪಿಜಿಯಲ್ಲಿ ಕೂಡಿ ಹಾಕಿರುವುದು.

ಯುವತಿಯರನ್ನು ಪಿಜಿಯಲ್ಲಿ ಕೂಡಿ ಹಾಕಿರುವುದು.

 • Share this:
  ಹಾಸನ: ಪಿಜಿ ಬಾಡಿಗೆ ನೀಡಿಲ್ಲ ಎಂದು ಪಿಜಿ ಮಾಲೀಕ ಯುವತಿಯರನ್ನು ಕೂಡಿ ಹಾಕಿದ ಘಟನೆ ಹಾಸನದ ಕುವೆಂಪುನಗರ ಬಡಾವಣೆಯಲ್ಲಿ ನಡೆದಿದೆ.

  ಎನ್.ಡಿ.ಆರ್.ಕೆ. ಕಾಲೇಜಿನಲ್ಲಿ ಯುವತಿಯರು ಬಿ ಫಾರ್ಮಸಿ ಓದುತ್ತಿದ್ದಾರೆ. ಯುಗಾದಿ ಹಬ್ಬಕ್ಕೆಂದು ಮೈಸೂರಿನಲ್ಲಿರುವ ಮನೆಗೆ ತೆರಳಿದ್ದರು. ನಂತರ ಲಾಕ್ ಡೌನ್ ಆದ ಹಿನ್ನೆಲೆಯಲ್ಲಿ ಎರಡು ತಿಂಗಳಿನಿಂದ ಪಿಜಿಗೆ ಬಂದಿರಲಿಲ್ಲ. ಇಂದು ಬಟ್ಟೆ, ಪುಸ್ತಕಗಳನ್ನು ತೆಗೆದುಕೊಂಡು ಹೋಗಲು ಪಿಜಿಗೆ ಬಂದಾಗ ಯುವತಿಯರನ್ನು ಪಿಜಿ ಮಾಲೀಕ ಕೂಡಿ ಹಾಕಿದ್ದಾರೆ.

  ಇಂದು ಬೆಳಗ್ಗೆ ಮೈಸೂರಿನಿಂದ ಟ್ಯಾಕ್ಸಿಯಲ್ಲಿ ಯುವತಿಯರು ಹಾಸನಕ್ಕೆ ಬಂದಿದ್ದಾರೆ.  ಈ ವೇಳೆ ಎರಡು ತಿಂಗಳ ಬಾಡಿಗೆ ಹಣ ನೀಡಲೇಬೇಕು ಎಂದು ಪಿಜಿ ಮಾಲೀಕ ಪಿಜಿಗೆ ಬೀಗ ಹಾಕಿ ಹೊರ ಹೋಗಿದ್ದಾರೆ. ಬೆಳಿಗ್ಗೆ 10 ಗಂಟೆಯಿಂದ ತಿಂಡಿಯಿಲ್ಲದೆ ಪಿಜಿಯಲ್ಲಿ ಮೈಸೂರಿನ ಇಬ್ಬರು ಯುವತಿಯರು ಲಾಕ್ ಆಗಿದ್ದರು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಯುವತಿಯರನ್ನು ರಕ್ಷಿಸಿದರು. ಮನೆ ಮಾಲೀಕನನ್ನು ಕರೆದು ವಿಚಾರಣೆ ನಡೆಸುತ್ತಿದ್ದಾರೆ.

  ಇದನ್ನು ಓದಿ: ಕರ್ನಾಟಕದಲ್ಲಿ ಕೋವಿಡ್​​-19: 24 ಗಂಟೆಯಲ್ಲಿ 116 ಕೇಸ್​ ಪತ್ತೆ; 1,578ಕ್ಕೇರಿದ ಸೋಂಕಿತರ ಸಂಖ್ಯೆ
  First published: