HOME » NEWS » State » PETROL RATE TODAY PETROL PRICE DIESEL RATE HIKED AGAIN BANGALORE PETROL RATE FUEL PRICE TODAY SCT

Petrol Rate Today: ಬೆಂಗಳೂರು, ಮುಂಬೈ ಸೇರಿ ಪ್ರಮುಖ ನಗರಗಳಲ್ಲಿ ಇಂದಿನ ಪೆಟ್ರೋಲ್, ಡೀಸೆಲ್ ಬೆಲೆಯೆಷ್ಟು?

Petrol Diesel Price: ಮುಂಬೈ, ಜೈಪುರದಲ್ಲಿ ಪೆಟ್ರೋಲ್ ದರ 1 ಲೀಟರ್​ಗೆ 90 ರೂ. ದಾಟಿದೆ. ಹಾಗೇ, ಬೆಂಗಳೂರು, ಚೆನ್ನೈ, ಪಾಟ್ನಾ, ಭುವನೇಶ್ವರದಲ್ಲಿ 1 ಲೀಟರ್ ಪೆಟ್ರೋಲ್ ಬೆಲೆ 87 ರೂ. ಆಸುಪಾಸಿನಲ್ಲಿದೆ.

news18-kannada
Updated:January 18, 2021, 6:17 PM IST
Petrol Rate Today: ಬೆಂಗಳೂರು, ಮುಂಬೈ ಸೇರಿ ಪ್ರಮುಖ ನಗರಗಳಲ್ಲಿ ಇಂದಿನ ಪೆಟ್ರೋಲ್, ಡೀಸೆಲ್ ಬೆಲೆಯೆಷ್ಟು?
ಸಾಂದರ್ಭಿಕ ಚಿತ್ರ
  • Share this:
ನವದೆಹಲಿ (ಜ. 18): ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಪ್ರತಿದಿನ ಏರಿಳಿತಗಳು ಉಂಟಾಗುತ್ತಲೇ ಇರುತ್ತವೆ. ಬೆಂಗಳೂರು, ದೆಹಲಿ, ಮುಂಬೈ ಸೇರಿದಂತೆ ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಪೆಟ್ರೋಲ್ ಮತ್ತು ಡೀಸೆಲ್ ದರವೆಷ್ಟು ಎಂಬ ಬಗ್ಗೆ ಇಲ್ಲಿದೆ ಮಾಹಿತಿ. ಮುಂಬೈ, ಜೈಪುರದಲ್ಲಿ ಪೆಟ್ರೋಲ್ ದರ 1 ಲೀಟರ್​ಗೆ 90 ರೂ. ದಾಟಿದೆ. ಹಾಗೇ, ಬೆಂಗಳೂರು, ಚೆನ್ನೈ, ಪಾಟ್ನಾ, ಭುವನೇಶ್ವರದಲ್ಲಿ 1 ಲೀಟರ್ ಪೆಟ್ರೋಲ್ ಬೆಲೆ 87 ರೂ. ಆಸುಪಾಸಿನಲ್ಲಿದೆ.

ಇಂದು ನವದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 84.95 ರೂ. ಇದೆ. ಮುಂಬೈನಲ್ಲಿ 91,56 ರೂ, ಜೈಪುರದಲ್ಲಿ 92.43 ರೂ, ಬೆಂಗಳೂರಿನಲ್ಲಿ 87.82 ರೂ ಹೈದರಾಬಾದ್​ನಲ್ಲಿ 88.37 ರೂ, ತಿರುವನಂತಪುರದಲ್ಲಿ 86.88 ರೂ, ಚೆನ್ನೈನಲ್ಲಿ 87.64 ರೂ, ಕೊಲ್ಕತ್ತಾದಲ್ಲಿ 86.39 ರೂ. ಇದೆ. ಬೆಂಗಳೂರಿನಲ್ಲಿ ಕಳೆದೊಂದು ವಾರದಿಂದ ಪೆಟ್ರೋಲ್ ಬೆಲೆ ಹೆಚ್ಚೂ ಕಡಿಮೆ ಒಂದೇ ರೀತಿಯಲ್ಲಿದೆ.

ವಿವಿಧ ನಗರಗಳಲ್ಲಿ ಇಂದಿನ ಡೀಸೆಲ್ ಬೆಲೆ ಹೀಗಿದೆ. ನವದೆಹಲಿಯಲ್ಲಿ ಇಂದು 1 ಲೀಟರ್ ಡೀಸೆಲ್​ಗೆ 75.13 ರೂ. ಇದೆ. ಚೆನ್ನೈನಲ್ಲಿ 80.44 ರೂ, ಮುಂಬೈನಲ್ಲಿ 81.87 ರೂ, ಬೆಂಗಳೂರಿನಲ್ಲಿ 79.67 ರೂ, ಹೈದರಾಬಾದ್​ನಲ್ಲಿ 81.99 ರೂ. ಇದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕ್ರೂಡ್ ಆಯಿಲ್ ದರ ಹೆಚ್ಚಳವಾದಾಗ ದೇಶಿಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಹೆಚ್ಚಿಸುವುದು, ಹಾಗೆಯೇ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕ್ರೂಡ್ ಆಯಿಲ್ ದರ ಕಡಿಮೆಯಾದಾಗ ದೇಶಿಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಇಳಿಸುವುದು ಸಾಮಾನ್ಯವಾದ ಸಂಗತಿ.

ಇದನ್ನೂ ಓದಿ: Bangalore Crime: ನೆಲಮಂಗಲ; ಅತ್ಯಾಚಾರಕ್ಕೆ ಯತ್ನಿಸಿದವನಿಗೆ ಮಚ್ಚಿನಿಂದ ಹೊಡೆದ ಮಹಿಳೆ

ಆದರೆ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕ್ರೂಡ್ ಆಯಿಲ್ ದರ ಗಣನೀಯವಾಗಿ ಏರಿಕೆ ಆಗದಿದ್ದರೂ ದೇಶೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ನಿರಂತರವಾಗಿ ಹೆಚ್ಚಳವಾಗುತ್ತಿದೆ. ನಿನ್ನೆಗಿಂತ ಇಂದು ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಮತ್ತೆ ಕೊಂಚ ಏರಿಕೆ ಕಂಡುಬಂದಿದೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆ ಕಡಿಮೆ ಆಗುತ್ತಿದ್ದರೂ, ಕೊರೊನಾ ಕಾರಣಗಳಿಂದ ಜನಸಾಮಾನ್ಯರು ಕಷ್ಟದಲ್ಲಿದ್ದರೂ, ಸಾರ್ವಜನಿಕರು ವ್ಯಾಪಕವಾದ ವಿರೋಧ ವ್ಯಕ್ತಪಡಿಸುತ್ತಿದ್ದರೂ ಇದ್ಯಾವುದನ್ನೂ ಲೆಕ್ಕಿಸದ ಸರ್ಕಾರಿ ಒಡೆತನದ ತೈಲ ಕಂಪನಿಗಳು ಸತತವಾಗಿ ಬೆಲೆ ಏರಿಕೆಯಲ್ಲಿ ನಿರತವಾಗಿವೆ.

ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಿಂದಾಗಿ ವಾಹನ ಸವಾರರು ತೊಂದರೆ ಅನುಭವಿಸುವಂತಾಗಿದೆ. ಇದೇ ರೀತಿ ಇಂಧನದ ಬೆಲೆ ಏರಿಕೆ ಮುಂದುವರೆದರೆ 1 ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಸೆಂಚುರಿ ಬಾರಿಸುವ ದಿನವೂ ದೂರವೇನಿಲ್ಲ!
Published by: Sushma Chakre
First published: January 18, 2021, 8:43 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories