Petrol and Diesel Prices - ಪೆಟ್ರೋಲ್ ಬೆಲೆ ತುಸು ಇಳಿಕೆ; ಡೀಸೆಲ್ ಹೆಚ್ಚಳ - ಜುಲೈ 25ರ ದರ

ಐಓಸಿಎಲ್ ಪ್ರಕಟಿಸಿದ ಇವತ್ತಿನ ದರದಲ್ಲಿ ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ 8 ಪೈಸೆ ಇಳಿಕೆಯಾಗಿದ್ದರೆ, ಡೀಸೆಲ್ ಬೆಲೆ 8 ಪೈಸೆ ಏರಿಕೆಯಾಗಿದೆ.

news18-kannada
Updated:July 25, 2020, 9:16 AM IST
Petrol and Diesel Prices - ಪೆಟ್ರೋಲ್ ಬೆಲೆ ತುಸು ಇಳಿಕೆ; ಡೀಸೆಲ್ ಹೆಚ್ಚಳ - ಜುಲೈ 25ರ ದರ
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು(ಜುಲೈ 25): ನಿನ್ನೆ ಎಂಟು ಪೈಸೆಯಷ್ಟು ಏರಿಕೆಯಾಗಿದ್ದ ಪೆಟ್ರೋಲ್ ಬೆಲೆ ಇವತ್ತು ಅಷ್ಟೇ ಮೊತ್ತದಷ್ಟು ಇಳಿಕೆಯಾಗಿದೆ. ಆದರೆ, ಡೀಸೆಲ್ ಬೆಲೆ ಸತತ ಎರಡನೇ ಬಾರಿ ಏರಿಕೆಯಾಗಿದೆ. ನಿನ್ನೆ 7 ಪೈಸೆ ಏರಿಕೆ ಡೀಸೆಲ್ ಬೆಲೆಯಲ್ಲಿ ಇವತ್ತು 8 ಪೈಸೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಈಗ ಪೆಟ್ರೋಲ್ ಬೆಲೆ ಲೀಟರ್​ಗೆ 83.04 ಇದೆ. ಡೀಸೆಲ್ ಬೆಲೆ 77.74 ಇದೆ.

ಪೆಟ್ರೋಲ್​ಗಿಂತ ಡೀಸೆಲ್ ಬೆಲೆ ಸತತವಾಗಿ ಏರಿಕೆಯಾಗುತ್ತಿದೆ. ಕಳೆದ 11 ದಿನಗಳ ಅವಧಿಯಲ್ಲಿ ಡೀಸೆಲ್ ಬೆಲೆ 6 ಬಾರಿ ಹೆಚ್ಚಳಗೊಂಡಿದೆ. ಜುಲೈ 15ರಂದು 77.15 ಇದ್ದ ಡೀಸೆಲ್ ಬೆಲೆ ಈಗ 77.74ಕ್ಕೆ ಬಂದಿದೆ. ಈ 11 ದಿನಗಳಲ್ಲಿ 59 ಪೈಸೆಯಷ್ಟು ದುಬಾರಿಯಾಗಿದೆ. ಇದು ಇಂಡಿಯನ್ ಆಯಿಲ್ ಸಂಸ್ಥೆಯ ಪೆಟ್ರೋಲ್ ದರವಾಗಿದೆ.

ಬೇರೆ ಕೆಲ ಪ್ರಮುಖ ನಗರಗಳಿಗೆ ಹೋಲಿಸಿದರೆ ಬೆಂಗಳೂರಿನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ತುಸು ಕಡಿಮೆ ಇದೆ. ಪ್ರಮುಖ ನಗರಗಳ ಪೈಕಿ ಕೋಲ್ಕತಾದಲ್ಲಿ ಮಾತ್ರ ಬೆಂಗಳೂರಿಗಿಂತ ಸ್ವಲ್ಪ ಕಡಿಮೆ ಬೆಲೆ ಇದೆ. ಮುಂಬೈನಲ್ಲಿ ಪೆಟ್ರೋಲ್ ಬೆಲೆ 87 ರೂ ಗಡಿ ದಾಟಿದೆ. ಇನ್ನು, ಡೀಸೆಲ್ ಬೆಲೆ ದೆಹಲಿಯಲ್ಲಿ 82 ರೂಪಾಯಿಗೆ ಸಮೀಪ ಬಂದಿದೆ. ಹೈದರಾಬಾದ್​ನಲ್ಲೂ ಡೀಸೆಲ್ ಬೆಲೆ 80 ರೂ ಗಡಿ ಮುಟ್ಟಿದೆ.

ಇದನ್ನೂ ಓದಿ: JioMart: ಕೆಲವೇ ದಿನಗಳಲ್ಲಿ ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ 10 ಲಕ್ಷ ಡೌನ್‌ಲೋಡ್‌ ದಾಟಿದ ಜಿಯೋ ಮಾರ್ಟ್‌

ಇನ್ನು, ಬೆಂಗಳೂರಿನಲ್ಲಿ ಶೆಲ್ ಪೆಟ್ರೋಲಿಯಂ ಸಂಸ್ಥೆಯ ಬಂಕ್​ಗಳಲ್ಲಿ ಪೆಟ್ರೋಲ್ ಬೆಲೆ ಲೀಟರ್​ಗೆ 87.15 ರೂ ಇದೆ. ಡೀಸೆಲ್ ಬೆಲೆ 78.35 ಇದೆ.

ಜುಲೈ 25ರಂದು ಬೇರೆ ಬೇರೆ ನಗರಗಳಲ್ಲಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ (IOC):
ಬೆಂಗಳೂರು: ಪೆಟ್ರೋಲ್ 83.04, ಡೀಸೆಲ್ 77.74ಮುಂಬೈ: ಪೆಟ್ರೋಲ್ 87.19, ಡೀಸೆಲ್ 79.97
ದೆಹಲಿ: ಪೆಟ್ರೋಲ್ 80.43, ಡೀಸೆಲ್ 81.79
ಚೆನ್ನೈ: ಪೆಟ್ರೋಲ್ 83.63, ಡೀಸೆಲ್ 78.73
ಕೋಲ್ಕತಾ: ಪೆಟ್ರೋಲ್ 82.10, ಡೀಸೆಲ್ 76.91
ಹೈದರಾಬಾದ್: ಪೆಟ್ರೋಲ್ 83.49, ಡೀಸೆಲ್ 80
Published by: Vijayasarthy SN
First published: July 25, 2020, 9:16 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading