ಪೆಟ್ರೋಲ್ ಬಂಕ್ ನಲ್ಲಿ ಮೋಸವಾಗುತ್ತಿದೆಯಾ? ಹಳ್ಳಿಹೈದ ತಯಾರಿಸಿದ ಈ ಮಷಿನ್ ಇದ್ರೆ ನೋ ಮೋಸಾ ಗ್ಯಾರಂಟಿ...!

news18
Updated:June 12, 2018, 3:44 PM IST
ಪೆಟ್ರೋಲ್ ಬಂಕ್ ನಲ್ಲಿ ಮೋಸವಾಗುತ್ತಿದೆಯಾ? ಹಳ್ಳಿಹೈದ ತಯಾರಿಸಿದ ಈ ಮಷಿನ್ ಇದ್ರೆ ನೋ ಮೋಸಾ ಗ್ಯಾರಂಟಿ...!
news18
Updated: June 12, 2018, 3:44 PM IST
-ಶರಣು ಹಂಪಿ, ನ್ಯೂಸ್ 18 ಕನ್ನಡ

ಬಳ್ಳಾರಿ (ಜೂ.12) :  ಇತ್ತೀಚೆಗೆ ಬಂಕ್​ಗಳಲ್ಲಿ ಪೆಟ್ರೋಲ್, ಡೀಸೆಲ್ ಹಾಕುವಾಗ ಮೋಸಕ್ಕೆ ಒಳಗಾಗುತ್ತಿರುವ ಪ್ರಕರಣ ಹೆಚ್ಚಾಗಿ ಕಂಡುಬರುತ್ತಿದೆ. ಗ್ರಾಹಕರಿಗೆ ಮೇಲಿಂದ ಮೇಲೆ ಈ ರೀತಿ ಅನ್ಯಾಯ ಪ್ರಕರಣಗಳಿಗೆ ಏನು ಮಾಡಬೇಕೋ ತೋಚದ ಪರಿಸ್ಥಿತಿಯಿದೆ. ಇದಕ್ಕೆ ಪರಿಹಾರವೊಂದನ್ನು ಗಣಿನಾಡು ಬಳ್ಳಾರಿಯ ಪದವೀಧರನೊಬ್ಬ ಕಂಡುಹಿಡಿದಿದ್ದಾನೆ. ಪೆಟ್ರೋಲ್ ಡೀಸೆಲ್ ರೀಡ್ ಮಾಡುವ ಹೊಸದೊಂದು ಯಂತ್ರವನ್ನು ಸಿದ್ಧಪಡಿಸಿ ಎಲ್ಲರ ಹುಬ್ಬೇರಿಸಿದ್ದಾನೆ.

ಈತನ ಹೆಸರು ಅಮೀರ್ ಖಾನ್. ಬಿ ಎ ಪದವೀಧರ. ಓದಿದ್ದು ಒಂದು. ಕೆಲಸ ಮಾಡುತ್ತಿರುವುದು ಮತ್ತೊಂದು ಅಂದರೆ ಫೋಟೋ ಸ್ಟುಡಿಯೋದಲ್ಲಿ ಕೆಲಸ. ಆದರೆ ಈತನ ಆಸಕ್ತಿ ಇರೋದು ವಿಜ್ಞಾನ ಕ್ಷೇತ್ರದ ಕಡೆ. ಬಳ್ಳಾರಿಯ ಪಿಡಿಹಳ್ಳಿ ಗ್ರಾಮದಲ್ಲಿ ಬಡತವನ್ನು ಹೊದ್ದುಕೊಂಡು ಹುಟ್ಟಿದ ಈತನಿಗೆ ಎಂಜಿನೀಯರಿಂಗ್ ಆಗಬೇಕೆಂಬ ಕನಸು ಈಡೇರಲೇ ಇಲ್ಲ. ಆದರೆ ಪ್ರತಿಭಾವಂತ ಅಮಿರ್ ಖಾನ್ ಪೆಟ್ರೋಲ್, ಡೀಸೆಲ್ ಮಾಪನ ಮಾಡುವ ಹೊಸದೊಂದು ಯಂತ್ರವನ್ನು ಕಂಡುಹಿಡಿದು ಎಲ್ಲರ ಗಮನ ಸೆಳೆದಿದ್ದಾನೆ. ಅಮೀರ್ ಖಾನ್ ಫೋಟೋ ಬಳ್ಳಾರಿಯ ಸ್ಟುಡಿಯೋದಲ್ಲಿ ಕೆಲಸ ಮಾಡುತ್ತಾ, ಬಿಡುವಿನ ವೇಳೆಯಲ್ಲಿ ಪೆಟ್ರೋಲ್ ರೀಡಿಂಗ್ ಯಂತ್ರವನ್ನು ಸಿದ್ಧಪಡಿಸಿದ್ದಾನೆ.

ಇಂತಹ ಯಂತ್ರವನ್ನು ಮ್ಯಾನುವಲ್ ಆಗಿ ಕೈಯಿಂದಲೇ ಸಿದ್ಧಪಡಿಸಿದ್ದು ಈತನ ಮತ್ತೊಂದು ವಿಶೇಷ. ಇತ್ತೀಚೆಗಂತೂ ಪೆಟ್ರೋಲ್ ಡೀಸೆಲ್ ಬಂಕ್​ಗಳ ಮೋಸದ ಪ್ರಕರಣಗಳು ಹೆಚ್ಚಾಗುತ್ತಿವೆ. ಲೀಟರ್ ಗಟ್ಟಲೆ ತೈಲ ಹಾಕದೆ ಮೋಸಕ್ಕೆ ಒಳಗಾದವರು ಇದ್ದಾರೆ. ಇಂತಹ ಸಂದರ್ಭದಲ್ಲಿ ಹೊಸದಾಗಿ ತಯಾರಿಸಿದ ಯಂತ್ರದ ಮೂಲಕ ಮೋಸ ಮಾಡಿರುವುದನ್ನು ಸುಲಭವಾಗಿ ಪತ್ತೆ ಹಚ್ಚಬಹುದು ಎನ್ನುತ್ತಾರೆ ಹೊಸ ಮಾಪನ ಯಂತ್ರ ಕಂಡುಹಿಡಿದ ಯುವಕ ಅಮೀರ್ ಖಾನ್ ತಮ್ಮ ಅಭಿಪ್ರಾಯ ಹಂಚಿಕೊಳ್ತಾರೆ.

ಪೆಟ್ರೋಲ್ ಬಂಕ್​ಲ್ಲಿ ತನ್ನ ಗಾಡಿಗೆ ಪೆಟ್ರೋಲ್ ಹಾಕಿಸುವಾಗ ಮೋಸ ಮಾಡಿರುವುದು ಕಂಡುಬಂತು. ಅನಗತ್ಯವಾಗಿ ಬಂಕನ್ನು ದೂಷಿಸುವುದಕ್ಕಿಂತ ಇದಕ್ಕೆ ನಾವೇ ಪರಿಹಾರ ಕಂಡುಕೊಳ್ಳ ಬೇಕೆಂದು ಅಮಿರ್ ಖಾನ್ ನಿರ್ಧರಿಸಿದ. ಗೇರ್ವೀಲ್ ಮತ್ತು ಮೀಟರ್ ಬಳಕೆ ಮಾಡಿ ಎರಡು ತಿಂಗಳ ಅವಧಿಯಲ್ಲಿ ಮೋಟಾರ್ ಬಳಸದೇ ಪಿಆರ್ಎಂ ಯಂತ್ರವನ್ನು ಸಿದ್ಧಪಡಿಸಿದ್ದಾನೆ. ಈಗ ಪ್ರಯೋಗಿಕವಾಗಿ ಸಿದ್ದಪಡಿಸಿರುವ ಪಿಆರ್​ಎಂ ಯಂತ್ರಕ್ಕೆ ಕೇವಲ ಇನ್ನೂರು ರೂಪಾಯಿ ಖರ್ಚಾಗಿದೆ. ಈ ಯಂತ್ರದ ಸಹಾಯದ ಮೂಲಕ ನಾವು ಬೈಕ್ ಟ್ಯಾಂಕ್​ಲ್ಲಿ ಎಷ್ಟು ಹಾಕಿಸಿಕೊಂಡಿದ್ದೇವೆ ಎಂಬುದನ್ನು ನಾವು ಪರೀಕ್ಷಿಸಬಹುದು.

ಯಂತ್ರದಲ್ಲಿ ಸಿದ್ದಪಡಿಸಿದ ಪೈಪ್​ನಿಂದ ಪೆಟ್ರೋಲ್ ಹಾಕಿದರೆ, ಮೀಟರ್ ಸುತ್ತುತ್ತ ಹೋಗುತ್ತದೆ. ಈಗ ಸಿದ್ಧಪಡಿಸಿದ ಯಂತ್ರದಲ್ಲಿ ೧೦ ಲೀಟರ್​ವರೆಗೆ ಲೆಕ್ಕ ಇಡುವ ಸಾಮರ್ಥ್ಯವನ್ನು ಹೊಂದಿದೆ. ಎಂಜಿನೀಯರಿಂಗ್ ಪದವಿ ಪಡೆಯದಿದ್ದರೂ, ಬಿಎ ಓದಿ ಯಂತ್ರವನ್ನು ಸಿದ್ದಪಡಿಸಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಈ ನೂತನ ಯಂತ್ರವನ್ನು ವೈಜ್ಞಾನಿಕವಾಗಿ ಸಿದ್ಧಪಡಿಸಿ ಮಾರುಕಟ್ಟೆಗೆ ತರಲು ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದಾನೆ. ಸರಕಾರದಿಂದ ಇಂತಹ ಯಂತ್ರ ತಯಾರಿಕೆಗೆ ಪರವಾನಿಗೆ ಪಡೆದು ಪಿಆರ್​ಎಂ ಯಂತ್ರವನ್ನು ತಯಾರಿಸಲು ಅಮೀರ್ ಖಾನ್ ಚಿಂತನೆಯಲ್ಲಿದ್ದಾನೆ. ಆಸಕ್ತಿ ಕಂಪನಿಯು ಯಂತ್ರದ ತಯಾರಿಕೆಗೆ ಸಹಕಾರ ನೀಡುವರೇ ಎಂಬ ನಿರೀಕ್ಷೆಯಲ್ಲಿಯೂ ಇದ್ದಾನೆ.
Loading...

ಸಂಪರ್ಕಕ್ಕೆ :  ಅಮೀರ್ ಖಾನ್ - 9980538352

 

 

 
First published:June 12, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ